ಈ ಒಂದು ಕೆಲಸ ಮಾಡಿದರೆ ಸಾಕು ಪ್ರತಿ ತಿಂಗಳು ಕೈ ಸೇರುತ್ತದೆ 20 ಸಾವಿರ ರೂಪಾಯಿ.! ಜಿಯೋ ನೀಡುತ್ತಿದೆ ಭಾರೀ ಆಫರ್

ರಿಲಯನ್ಸ್ ಜಿಯೋದ JioPOS ಲೈಟ್ ಅಪ್ಲಿಕೇಶನ್ ಬಳಕೆದಾರರಿಗೆ ಹಣ ಗಳಿಸುವ ಅವಕಾಶವನ್ನು ನೀಡುತ್ತದೆ. ಇದನ್ನು ಜಿಯೋ ಪಾಲುದಾರ ಕಾರ್ಯಕ್ರಮದ ಅಡಿಯಲ್ಲಿ ಪರಿಚಯಿಸಲಾಗಿದೆ. ಈ ಯೋಜನೆ ಮೂಲಕ ಹಣ ಗಳಿಸುವುದು ಹೇಗೆ  ತಿಳಿಯೋಣ...

Written by - Ranjitha R K | Last Updated : Aug 22, 2022, 03:10 PM IST
  • ತನ್ನ ಗ್ರಾಹಕರಿಗೆ ಜಿಯೋ ನೀಡಿದೆ ಭರ್ಜರಿ ಆಫರ್
  • ಪ್ರತಿ ತಿಂಗಳು 20 ಸಾವಿರ ಗಳಿಸುವ ಅವಕಾಶ
  • ನಿತ್ಯ ಕೆಲಸದ ಜೊತೆಗೆ ಹೆಚ್ಚುವರಿ ಸಂಪಾದನೆ ಸಾಧ್ಯ
ಈ  ಒಂದು ಕೆಲಸ ಮಾಡಿದರೆ  ಸಾಕು ಪ್ರತಿ ತಿಂಗಳು ಕೈ ಸೇರುತ್ತದೆ 20 ಸಾವಿರ ರೂಪಾಯಿ.! ಜಿಯೋ ನೀಡುತ್ತಿದೆ ಭಾರೀ ಆಫರ್  title=
jio pos lite app (file photo)

ಬೆಂಗಳೂರು : ಹಣದುಬ್ಬರದ ಯುಗದಲ್ಲಿ, ಪ್ರತಿಯೊಬ್ಬರೂ ಉದ್ಯೋಗದೊಂದಿಗೆ ಸ್ವಲ್ಪ ಹೆಚ್ಚುವರಿ ಹಣವನ್ನು ಗಳಿಸಲು ಪ್ರಯತ್ನಿಸುತ್ತಾರೆ. ಸಂಬಳದ ಜೊತೆಗೆ ಪಾಕೆಟ್ ಖರ್ಚಿಗೂ ಒಂದಿಷ್ಟು ಹಣ ಸಿಕ್ಕರೆ ಯಾರಿಗೆ ತಾನೇ ಬೇಡ ? ಜಿಯೋ ಇಂತಹದೊಂದು ಆಫರ್ ತಂದಿದ್ದು, ಇದರಿಂದ ಪ್ರತಿ ತಿಂಗಳು 20 ಸಾವಿರ ರೂಪಾಯಿ ಗಳಿಸಬಹುದು. ಇದಕ್ಕಾಗಿ ನೀವು ನಿಮ್ಮ ಕೆಲಸವನ್ನು ಬಿಡುವ ಅಗತ್ಯವಿಲ್ಲ. ನಿಮ್ಮ ಬಿಡುವಿನ ವೇಳೆಯಲ್ಲಿ ಹೆಚ್ಚುವರಿ ಹಣ ಗಳಿಕೆಗೆ ಇದೊಂದು ಅವಕಾಶ. ರಿಲಯನ್ಸ್ ಜಿಯೋದ JioPOS Lite ಅಪ್ಲಿಕೇಶನ್ ಬಳಕೆದಾರರಿಗೆ ಹಣ ಗಳಿಸುವ ಅವಕಾಶವನ್ನು ನೀಡುತ್ತದೆ. ಇದನ್ನು ಜಿಯೋ ಪಾಲುದಾರ ಕಾರ್ಯಕ್ರಮದ ಅಡಿಯಲ್ಲಿ ಪರಿಚಯಿಸಲಾಗಿದೆ. 

JioPOS Lite ಅಪ್ಲಿಕೇಶನ್‌ನಲ್ಲಿ, ಬಳಕೆದಾರರು  ಪ್ರಿಪೇಯ್ಡ್ ರೀಚಾರ್ಜ್‌ನಲ್ಲಿ ಕಮಿಷನ್ ಪಡೆಯಬಹುದು. ಈ ಆಪ್   ಗೂಗಲ್ ಪ್ಲೇ  ಸ್ಟೋರ್ ನಲ್ಲಿ ಲಭ್ಯವಿದೆ.   ಗೂಗಲ್ ಪ್ಲೇ  ಸ್ಟೋರ್ ನಿಂದ ಈ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಬೇಕು. ಈ ಅಪ್ಲಿಕೇಶನ್‌ನೊಂದಿಗೆ, ಬಳಕೆದಾರರು ಜಿಯೋ ಪಾಲುದಾರರಾಗುವ ಮೂಲಕ ಮತ್ತು ಜಿಯೋ ಗ್ರಾಹಕರಿಗೆ ಪ್ರಿಪೇಯ್ಡ್ ರೀಚಾರ್ಜ್ ಮಾಡುವ ಮೂಲಕ ಹಣವನ್ನು ಗಳಿಸಬಹುದು. 

ಇದನ್ನೂ ಓದಿ : WhatsApp ನಲ್ಲಿ ನಿಮಗೂ ಸ್ಟೇಟಸ್ ಬಳಸುವ ಅಥವಾ ನೋಡುವ ಅಭ್ಯಾಸವಿದೆಯಾ? ಹಾಗಾದರೆ ಈ ಸಂತಸದ ಸುದ್ದಿ ನಿಮಗಾಗಿ

JioPOS ಲೈಟ್ ಅಪ್ಲಿಕೇಶನ್ : 
JioPOS Lite ಅಪ್ಲಿಕೇಶನ್ ರೀಚಾರ್ಜ್ ಮಾಡಲು ಇರುವ ಒಂದು ವೇದಿಕೆಯಾಗಿದೆ. ಇದು ಮೈ ಜಿಯೋ ಅಪ್ಲಿಕೇಶನ್ ಅನ್ನು ಹೋಲುತ್ತದೆ. JioPOS Lite ಅಪ್ಲಿಕೇಶನ್ ರೀಚಾರ್ಜ್ ಮೇಲೆ ಕಮಿಷನ್ ನೀಡುತ್ತದೆ. ಇದರ ನೋಂದಣಿ ಪ್ರಕ್ರಿಯೆಯು ತುಂಬಾ ಸುಲಭವಾಗಿದೆ. ಇದಕ್ಕಾಗಿ ಯಾವುದೇ ಭೌತಿಕ ದಾಖಲೆಗಳ ಅಗತ್ಯವಿಲ್ಲ. ನಿಮ್ಮ ಬಳಿ ಜಿಯೋ ಸಂಖ್ಯೆ  ಇದ್ದಾರೆ ಸಾಕು. 

ರೀಚಾರ್ಜ್ ಮೂಲಕ ಹಣ ಸಂಪಾದನೆ : 
ನೀವು JioPOS Lite ಅಪ್ಲಿಕೇಶನ್‌ನೊಂದಿಗೆ ರೀಚಾರ್ಜ್ ಮಾಡಿದರೆ, ಪ್ರತಿ ರೀಚಾರ್ಜ್‌ ಮೇಲೆ  4.16% ಕಮಿಷನ್ ಪಡೆಯಬಹುದು. ಅಂದರೆ ಸಾವಿರ ರೂಪಾಯಿ ರೀಚಾರ್ಜ್ ಮಾಡಿದರೆ 41.6 ರೂಪಾಯಿ ಕಮಿಷನ್ ಸಿಗುತ್ತದೆ. 

ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡುವುದು  ಮತ್ತು ಹಣ ಗಳಿಸುವುದು ಹೇಗೆ ?
1. ಮೊದಲನೆಯದಾಗಿ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು. Google Play Store ನಲ್ಲಿ JioPOS Lite ಅಪ್ಲಿಕೇಶನ್ ಅನ್ನು  ಸರ್ಚ್ ಮಾಡಿ ಇನ್ಸ್ಟಾಲ್ ಮಾಡಿ. 
2. ನಂತರ, ನಿಮ್ಮ ಸ್ಕ್ರೀನ್ ಮೇಲೆ ಕೆಲವು  ಅಕ್ಸೆಸ್ ಗಾಗಿ ಮೆಸೇಜ್ ಬ್ಲಿಂಕ್ ಆಗುತ್ತದೆ.   ಅದನ್ನು OK ಮಾಡಿ. ನಂತರ ಜಿಯೋ ಪಾಲುದಾರರಾಗಲು ನಿಮ್ಮ ಜಿಯೋ ಸಂಖ್ಯೆ ಮತ್ತು ಇಮೇಲ್ ಐಡಿಯೊಂದಿಗೆ ಲಾಗಿನ್ ಮಾಡಿ.
3. ಲಾಗಿನ್ ಆದ ನಂತರ, ಅಪ್ಲಿಕೇಶನ್‌ನ ವ್ಯಾಲೆಟ್‌ಗೆ 500, 1000 ಅಥವಾ 2000 ರೂಪಾಯಿಗಳನ್ನು ಸೇರಿಸಬೇಕಾಗುತ್ತದೆ.
4. ಇದರ ನಂತರ, ನೀವು ರೀಚಾರ್ಜ್ ಮಾಡಿದರೆ, ಅದರಲ್ಲಿ 4.16 ಪ್ರತಿಶತವು ಹಿಂತಿರುಗುತ್ತದೆ.
5. ಈ ಅಪ್ಲಿಕೇಶನ್‌ನಲ್ಲಿ ಬ್ಯಾಂಕ್ ವಿವರಗಳನ್ನು ಕೇಳಲಾಗುವುದಿಲ್ಲ. ಮರಳಿ ಬರುವ ಹಣವನ್ನು ವಾಲೆಟ್‌ಗೆ ಸೇರಿಸಲಾಗುತ್ತದೆ. ಉಳಿದ ರೀಚಾರ್ಜ್‌ಗೂ ನೀವು ಇದನ್ನು ಬಳಸಬಹುದು. 

ಇದನ್ನೂ ಓದಿ : Smartphone Tips: ನಿಮ್ಮ ಸ್ಮಾರ್ಟ್ ಫೋನಗೂ ವೈರಸ್ ಸೇರಿಕೊಂಡಿದೆಯಾ? ಈ ಸುಲಭ ವಿಧಾನದಿಂದ ಪತ್ತೆಹಚ್ಚಿ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News