Jio AirFiber Dhan Dhana Dhan offer:ಐಪಿಎಲ್ 2024ಕ್ಕೂ ಮೊದಲು, ಜಿಯೋ ತನ್ನ ಏರ್ಫೈಬರ್ ಬಳಕೆದಾರರಿಗೆ ಸಿಹಿ ಸುದ್ದಿ ನೀಡಿದೆ. ಜಿಯೋ ತನ್ನ ಏರ್ಫೈಬರ್ ಪ್ಲಸ್ ಬಳಕೆದಾರರಿಗೆ ಅತ್ಯಾಕರ್ಷಕ ಆಫರ್ ಅನ್ನು ಘೋಷಿಸಿದೆ.ಈ ಆಫರ್ ಅಡಿಯಲ್ಲಿ, ಹೊಸ ಮತ್ತು ಹಳೆಯ ಬಳಕೆದಾರರು ಮುಂದಿನ 60 ದಿನಗಳವರೆಗೆ ಮೂರು ಪಟ್ಟು ಇಂಟರ್ನೆಟ್ ಸ್ಪೀಡ್ ಅನ್ನು ಉಚಿತವಾಗಿ ಪಡೆಯುತ್ತಾರೆ.IPL 2024 ಪಂದ್ಯಾವಳಿಗೆ ಕೆಲವೇ ದಿನಗಳ ಮೊದಲು ಈ ವಿಶೇಷ ಆಫರ್ ಬಿಡಲಾಗಿದೆ.
ಜಿಯೋ ಏರ್ಫೈಬರ್ ಆಫರ್ನಲ್ಲಿ ವಿಶೇಷತೆ ಏನು? :
ಈ ಆಫರ್ ಅಡಿಯಲ್ಲಿ, ಮುಂದಿನ 60 ದಿನಗಳವರೆಗೆ ಮೂರು ಪಟ್ಟು ಇಂಟರ್ನೆಟ್ ಸ್ಪೀಡ್ ಅನ್ನು ಸಂಪೂರ್ಣವಾಗಿ ಉಚಿತವಾಗಿ ಪಡೆಯಬಹುದು. ಈ ಕೊಡುಗೆಯು ದೇಶಾದ್ಯಂತ ಹೊಸ ಮತ್ತು ಹಳೆಯ ಜಿಯೋ ಏರ್ಫೈಬರ್ ಪ್ಲಸ್ ಬಳಕೆದಾರರಿಗೆ ಅನ್ವಯವಾಗಲಿದೆ. ಈ ಆಫರ್ ಮಾರ್ಚ್ 16 ರಿಂದ ಪ್ರಾರಂಭವಾಗಿದೆ.
ಇದನ್ನೂ ಓದಿ : Online Fraud: ಮಕ್ಕಳಿಗೆ ಫೋನ್ ಕೊಡುವ ಮುನ್ನ ಎಚ್ಚರ, ಎಚ್ಚರ! ಖಾಲಿಯಾದೀತು ಖಾತೆ!
ಯಾರಿಗೆ ಸಿಗಲಿದೆ ಈ ಲಾಭ :
ನೀವು ಜಿಯೋ ಏರ್ಫೈಬರ್ ಪ್ಲಸ್ನ ಹೊಸ ಸಂಪರ್ಕವನ್ನು ತೆಗೆದುಕೊಂಡರೆ, ರೀಚಾರ್ಜ್ನಲ್ಲಿ ನಿಮ್ಮ ಪ್ಲಾನ್ ಸ್ಪೀಡ್ ಗಿಂತ ಮೂರು ಪಟ್ಟು ಹೆಚ್ಚು ವೇಗವನ್ನು ಪಡೆಯಬಹುದು. ಹಳೆಯ Jio AirFiber Plus ಬಳಕೆದಾರರು ಈ ಬಗ್ಗೆ ಇಮೇಲ್ ಮತ್ತು SMS ಅನ್ನು ಸ್ವೀಕರಿಸುತ್ತಾರೆ. ಈ ಆಫರ್ ಕೇವಲ 6 ತಿಂಗಳು ಅಥವಾ 12 ತಿಂಗಳ Jio AirFiber Plus ಪ್ಲಾನ್ ಹೊಂದಿರುವ ಬಳಕೆದಾರರಿಗೆ ಮಾತ್ರ ಲಭ್ಯವಿದೆ.
Jio Fiber FTTH ಬಳಕೆದಾರರಿಗೂ ಇಲ್ಲ ಈ ಆಫರ್ :
ಈ ವಿಶೇಷ ಆಫರ್ 5G FWA ತಂತ್ರಜ್ಞಾನವನ್ನು ಬಳಸುವ Jio AirFiber Plus ಬಳಕೆದಾರರಿಗೆ ಮಾತ್ರ ಸಿಗಲಿದೆ. ಈ ಆಫರ್ನಲ್ಲಿ Jio 5G ಸಿಮ್ ಕಾರ್ಡ್ ಅನ್ನು ಸೇರಿಸಲಾಗಿಲ್ಲ. ಅಲ್ಲದೆ, ಈ ಆಫರ್ Jio Fiber FTTH (Fiber To The Home) ಬಳಕೆದಾರರಿಗೂ ಈ ಆಫರ್ ಇರುವುದಿಲ್ಲ. JioCinemaದಲ್ಲಿ ನೀವು ಎಲ್ಲಾ IPL 2024 ಪಂದ್ಯಗಳನ್ನು 4K ರೆಸಲ್ಯೂಶನ್ನಲ್ಲಿ ಉಚಿತವಾಗಿ ವೀಕ್ಷಿಸಬಹುದು.
ಇದನ್ನೂ ಓದಿ : Pan Card ಅನ್ನು ಸುಲಭವಾಗಿ ಆನ್ಲೈನ್ ಮೂಲಕವೇ ಅಪ್ಡೇಟ್ ಮಾಡಿಕೊಳ್ಳಿ!ಇಲ್ಲಿದೆ ಹಂತ ಹಂತದ ಪ್ರಕ್ರಿಯೆ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ