ಈ ಐದು 5G ಸ್ಮಾರ್ಟ್ ಫೋನ್ ಗಳಲ್ಲಿ ಕಾರ್ಯ ನಿರ್ವಹಿಸುವುದಿಲ್ಲ Jio 5G!ಫೋನ್ ಖರೀದಿಸುವ ಮುನ್ನ ನೆನಪಿರಲಿ ಈ ಮಾಹಿತಿ

ಜಿಯೋ 5G ಸ್ಟಾಂಡ್ ಅಲೋನ್ ನೆಟ್ವರ್ಕ್ ಆಗಿದೆ.  5G ಸ್ಟ್ಯಾಂಡ್‌ಲೋನ್ ಅನ್ನು   ಸಪೋರ್ಟ್ ಮಾಡದ ಅನೇಕ ಸ್ಮಾರ್ಟ್ ಫೋನ್ ಗಳು ಮಾರುಕಟ್ಟೆಯಲ್ಲಿವೆ. 

Written by - Ranjitha R K | Last Updated : Jan 19, 2023, 10:12 AM IST
  • ಜಿಯೋ 5G ಸ್ಟಾಂಡ್ ಅಲೋನ್ ನೆಟ್ವರ್ಕ್ ಆಗಿದೆ.
  • ಜಿಯೋ ಭಾರತದಲ್ಲಿ ಕೋಟ್ಯಂತರ ಗ್ರಾಹಕರನ್ನು ಹೊಂದಿದೆ.
  • ಈ ಸ್ಮಾರ್ಟ್‌ಫೋನ್‌ಗಳಲ್ಲಿ Jio 5G ಕಾರ್ಯನಿರ್ವಹಿಸುವುದಿಲ್ಲ
ಈ ಐದು 5G ಸ್ಮಾರ್ಟ್ ಫೋನ್ ಗಳಲ್ಲಿ ಕಾರ್ಯ ನಿರ್ವಹಿಸುವುದಿಲ್ಲ Jio 5G!ಫೋನ್ ಖರೀದಿಸುವ ಮುನ್ನ ನೆನಪಿರಲಿ ಈ ಮಾಹಿತಿ  title=

ಬೆಂಗಳೂರು : ಜಿಯೋ 5G ಸ್ಟಾಂಡ್ ಅಲೋನ್ ನೆಟ್ವರ್ಕ್ ಆಗಿದೆ. ಭಾರತದಲ್ಲಿನ ಸ್ಮಾರ್ಟ್‌ಫೋನ್  ಇಕೋ ಸಿಸ್ಟಮ್  5G ಸ್ಟಾಂಡ್ ಅಲೋನ್ ಗೆ ಸಿದ್ಧವಾಗಿರಲಿಲ್ಲ. ಆದರೆ ಇಲ್ಲಿ ಜಿಯೋದ 5G ಸ್ಟ್ಯಾಂಡ್‌ಅಲೋನ್ ಅನ್ನು ಬೆಂಬಲಿಸಲು 5G ಸಾಧನಗಳಿಗೆ ಓವರ್ ದಿ ಏರ್ ಅಪ್‌ಡೇಟ್‌ roll ಔಟ್ ಮಾಡುವ ಹೊರತು ಅನ್ಯ ಮಾರ್ಗವಿರಲಿಲ್ಲ. ಜಿಯೋ ಭಾರತದಲ್ಲಿ ಕೋಟ್ಯಂತರ ಗ್ರಾಹಕರನ್ನು ಹೊಂದಿದೆ. ಕೆಲವು ದುಬಾರಿ ಮತ್ತು ಕೆಲವು ಅಗ್ಗದ 5G ಫೋನ್‌ಗಳನ್ನು ಕೂಡಾ ಹೊರ ತಂದಿದೆ.  5G ಸ್ಟ್ಯಾಂಡ್‌ಲೋನ್ ಅನ್ನು   ಸಪೋರ್ಟ್ ಮಾಡದ ಅನೇಕ ಸ್ಮಾರ್ಟ್ ಫೋನ್ ಗಳು ಮಾರುಕಟ್ಟೆಯಲ್ಲಿವೆ. 

ಈ  ಸ್ಮಾರ್ಟ್‌ಫೋನ್‌ಗಳಲ್ಲಿ Jio 5G ಕಾರ್ಯನಿರ್ವಹಿಸುವುದಿಲ್ಲ :
Xiaomi ಭಾರತದಲ್ಲಿ ಲಕ್ಷಾಂತರ 5G ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆಯು ಮಾಡಿದೆ, ಮಾರಾಟ ಕೂಡ ಮಾಡಿದೆ. ಅವುಗಳಲ್ಲಿ ಹೆಚ್ಚಿನವು 5G ಸ್ಟ್ಯಾಂಡ್‌ಲೋನ್ ಅನ್ನು ಬೆಂಬಲಿಸುವುದಿಲ್ಲ. ಈ ಫೋನ್ ಗಳನ್ನು  5G ಫೋನ್ ಎಂದು ಹೇಳಿಕೊಳ್ಳಲಾಗುತ್ತದೆಯಾದರೂ, Jio 5Gಯನ್ನು ಈ ಫೋನ್ ಗಳು ಸಪೋರ್ಟ್ ಮಾಡುವುದಿಲ್ಲ. ಯಾಕೆಂದರೆ ಮೊದಲೇ ಹೇಳಿದ ಹಾಗೆ  Jio 5G ಸ್ಟ್ಯಾಂಡ್‌ಲೋನ್ ನೆಟ್ ವರ್ಕ್ ಆಗಿದೆ.  ಈ ಕಾರಣದಿಂದಾಗಿ  Xiaomi Mi 10 ಮತ್ತು Xiaomi Mi 10i ಎರಡೂ ಫೋನ್‌ಗಳಲ್ಲಿ ಜಿಯೋ 5G ಕಾರ್ಯ ನಿರ್ವಹಿಸುವುದಿಲ್ಲ. 

ಇದನ್ನೂ ಓದಿ : Instagram ಮೂಲಕ ಪ್ರತಿ ತಿಂಗಳು ಗಳಿಸಬಹುದು 30 ಸಾವಿರ ರೂಪಾಯಿ.!

ಇವೆರಡೂ ದುಬಾರಿ ಫೋನ್ ಗಳು : 
ಎರಡೂ ಫೋನ್‌ಗಳ ಬೆಲೆಯನ್ನು ನೋಡುವುದಾದರೆ ಎರಡೂ ಫೋನ್ ಗಳು ದುಬಾರಿಯೇ. ಎರಡೂ ಫೋನ್‌ಗಳ ಬೆಲೆ 20 ಸಾವಿರ ರೂಪಾಯಿಗಿಂತ ಹೆಚ್ಚಿದೆ. ಈ ಫೋನ್ ಹೊಂದಿರುವ ಜಿಯೋ ಬಳಕೆದಾರರು ಜಿಯೋ  5Gಯನ್ನು ಬಳಸಲು ಸಾಧ್ಯವಾಗುವುದಿಲ್ಲ. ಇವರ ಮುಂದಿರುವ ಆಯ್ಕೆ ಏರ್ಟೆಲ್ ಮಾತ್ರ. ಮಾರುಕಟ್ಟೆಯಲ್ಲಿರುವ ಬಹುತೇಕ ಸ್ಮಾರ್ಟ್‌ಫೋನ್‌ಗಳು ಏರ್‌ಟೆಲ್‌ನ 5Gಯನ್ನು ಬೆಂಬಲಿಸುತ್ತವೆ. ಏಕೆಂದರೆ ಏರ್‌ಟೆಲ್ 5G  ನಾನ್ ಸ್ಟಾಂಡ್ ಅಲೋನ್ ನೆಟ್ವರ್ಕ್ ಆಗಿದೆ. 

ಇದನ್ನೂ ಓದಿ : Yamaha: ಈ ಅಗ್ಗದ ಸ್ಕೂಟರ್ ರಹಸ್ಯವಾಗಿ ಬಿಡುಗಡೆ ಮಾಡಿದ ಯಮಹಾ: ಹೋಂಡಾ ಆಕ್ಟಿವಾಗೆ ಭಾರೀ ಪೆಟ್ಟು!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News