ದೇಶದಲ್ಲಿ 5G ನೆಟ್‌ವರ್ಕ್ ಕುರಿತು ಬಹಳ ಸಮಯದಿಂದ ಚರ್ಚೆಗಳು ನಡೆಯುತ್ತಿವೆ. ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬ ವ್ಯಕ್ತಿಯು ವೇಗದ ಸಂಪರ್ಕದೊಂದಿಗೆ 5G ಸೌಲಭ್ಯವನ್ನು ಪಡೆಯಲು ಕಾತರದಿಂದ ಕಾಯುತ್ತಿದ್ದಾನೆ. ಮತ್ತೊಂದೆಡೆ, ದೇಶದ ಎಲ್ಲಾ ಪ್ರಮುಖ ಟೆಲಿಕಾಂ ಕಂಪನಿಗಳು 5G ಬಿಡುಗಡೆಗೆ ಸಿದ್ಧವಾಗಿವೆ. ಅದರಲ್ಲಿ ಜಿಯೋ, VI ಅಥವಾ ಏರ್‌ಟೆಲ್ ಈಗಾಗಲೇ 5G ಸೇವೆಯ ಪ್ರಯೋಗವನ್ನು ಪೂರ್ಣಗೊಳಿಸಿವೆ.
ಇದೀಗ ಅದನ್ನು ಪ್ರಾರಂಭಿಸುವ ಸಮಯ ಬಂದಿದೆ. 5ಜಿ ಫೋನ್ ಬಿಡುಗಡೆಗೆ ಸಂಬಂಧಿಸಿದ ಇತ್ತೀಚಿನ ಮಹತ್ವದ ಸುದ್ದಿ ಎಂದರೆ ಕಂಪನಿಯು ತನ್ನ ಜಿಯೋ ಫೋನ್ 5G ಅನ್ನು ಶೀಘ್ರದಲ್ಲೇ ಪ್ರಾರಂಭಿಸುತ್ತದೆ. ಆಗಸ್ಟ್ 15ರ ಸಂದರ್ಭದಲ್ಲಿ 5G ಫೋನ್ ಬಿಡುಗಡೆಯಾಗಬಹುದು ಎಂದು ಜಿಯೋ ತಿಳಿಸಿದೆ.
ಇದನ್ನೂ ಓದಿ: Excellent Offer: 599 ರೂ.ಗಳ ಪ್ಲಾನ್ ರೂ.275ಕ್ಕೆ, 75 ದಿನಗಳ ಮಾನ್ಯತೆಯೊಂದಿಗೆ 3300 ಜಿಬಿ ಡೇಟಾ
ಈ ವರ್ಷದ ಅಂತ್ಯದ ವೇಳೆಗೆ ಈ ಫೋನ್ ಬಿಡುಗಡೆಯಾಗಲಿದೆ ಎಂದು ಈಗಾಗಲೇ ಜಿಯೋ ಫೋನ್ 5G ಬಗ್ಗೆ ಹೇಳಲಾಗುತ್ತಿದೆ. ಜಿಯೋ ಫೋನ್ 5G ಬೆಲೆ ಸುಮಾರು 12,000 ರೂ. ಆದಾಗ್ಯೂ, ಮತ್ತೊಂದು ವರದಿಯಲ್ಲಿ, ಜಿಯೋ ಫೋನ್ 5G ಬೆಲೆ ಕೇವಲ 2,500 ರೂಪಾಯಿಗಳು ಎಂದು ಹೇಳಲಾಗುತ್ತಿದೆ. ಒಂದು ವೇಳೆ ಅದು ನಿಜವಾದರೆ ದೇಶದ ಅತ್ಯಂತ ಅಗ್ಗದ ಫೋನ್ ಎಂಬ ಖ್ಯಾತಿಯನ್ನು ಪಡೆಯಲಿದೆ. ಈಗ ಬೆಲೆ ತುಂಬಾ ಕಡಿಮೆ ಇರುತ್ತದೆ. ಜಿಯೋ ಫೋನ್ 5G ಫೀಚರ್ ಫೋನ್ ಆಗಿರಬಹುದು ಎಂದು ಊಹಿಸಲಾಗಿದೆ. ಜೊತೆಗೆ, ಫೋನ್ ಖರೀದಿಸಬೇಕಾದರೆ 2,500 ರೂಗಳ ಡೌನ್ ಪೇಮೆಂಟ್ ಮಾಡಬೇಕು. ಬಳಿಕ EMI ನಲ್ಲಿ ಪಾವತಿಸಬೇಕಾಗುತ್ತದೆ ಎಂದು ಕೆಲವು ವರದಿಗಳಲ್ಲಿ ಹೇಳಲಾಗುತ್ತಿದೆ.
ಜಿಯೋ ಫೋನ್ 5G ಯ ಕ್ಯಾಮೆರಾದ ಬಗ್ಗೆ ಮಾತನಾಡುವುದಾದರೆ, ಇದರಲ್ಲಿ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಕಾಣಬಹುದು. ಇದರಲ್ಲಿ ಪ್ರೈಮರಿ ಲೆನ್ಸ್ 13 ಮೆಗಾಪಿಕ್ಸೆಲ್ ಆಗಿರುತ್ತದೆ. ಆದರೆ ಎರಡನೇ ಲೆನ್ಸ್ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಆಗಿರುತ್ತದೆ. ಅಂತೆಯೇ, ಮುಂಭಾಗದಲ್ಲಿ 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಕಾಣಬಹುದು. ಜಿಯೋ ಫೋನ್ ನೆಕ್ಸ್ಟ್‌ನಲ್ಲಿ ಈಗಾಗಲೇ ಇರುವ ಪ್ರೊಸೆಸ್ ಓಎಸ್ ಅನ್ನು ಜಿಯೋ ಫೋನ್ 5 ಜಿ ಯಲ್ಲಿಯೂ ಕಾಣಬಹುದು.
ಇದನ್ನೂ ಓದಿ: Jio ಭರ್ಜರಿ ಆಫರ್: 15 ದಿನಗಳವರೆಗೆ ಉಚಿತ ಇಂಟರ್ನೆಟ್
ಇನ್ನುಳಿದಂತೆ ಇದು 6.5-ಇಂಚಿನ HD + IPS LCD ಡಿಸ್ಪ್ಲೇಯನ್ನು ಹೊಂದಿದೆ. ಇದು 1600x720 ಪಿಕ್ಸೆಲ್ಗಳ ರೆಸಲ್ಯೂಶನ್ ಅನ್ನು ಹೊಂದಿರುತ್ತದೆ. ಈ ಫೋನ್ 32 ಜಿಬಿ ಸ್ಟೋರೇಜ್ ನ ಸ್ನಾಪ್‌ಡ್ರಾಗನ್ 480 5 ಜಿ ಪ್ರೊಸೆಸರ್ ಮತ್ತು 4 ಜಿಬಿ RAM ನೊಂದಿಗೆ ಲಭ್ಯವಿರುತ್ತದೆ ಎಂದು ಹೇಳಲಾಗುತ್ತಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.