ಇಸ್ರೋ/ಎನ್ಎಸ್ಐಎಲ್ ಮೂಲಕ 36 ಉಪಗ್ರಹಗಳ ಉಡಾವಣೆ ನಡೆಸಿದ ವನ್ ವೆಬ್: ಜಾಗತಿಕ ಸಂಪರ್ಕ ವ್ಯವಸ್ಥೆಯಲ್ಲಿ ಹೊಸ ಮೈಲಿಗಲ್ಲು

ವನ್ ವೆಬ್ ಸಂಸ್ಥೆ ನಡೆಸಿರುವ ಉಡಾವಣೆ ಜಾಗತಿಕ ಬ್ರಾಡ್‌ಬ್ಯಾಂಡ್ ಸೇವೆ ಒದಗಿಸಲು ನೆರವಾಗುತ್ತಿದೆ. ಆದರೆ ಇದರ ಪರಿಣಾಮವಾಗಿ, ಭೂಮಿಯನ್ನು ಸುತ್ತುವರಿಯುವ ಉದ್ದೇಶದಿಂದ, ವಿವಿಧ ಸಂಸ್ಥೆಗಳು ಸಾವಿರಾರು ಲೋ ಆಲ್ಟಿಟ್ಯೂಡ್ ಉಪಗ್ರಹಗಳನ್ನು ಉಡಾವಣೆಗೊಳಿಸುವ ಹೊಸ ಸ್ಪರ್ಧೆಗೂ ಇದು ಮುನ್ನುಡಿ ಬರೆಯಲಿದೆ. ಸ್ಪರ್ಧೆಯ ಕಾರಣದಿಂದ ಸಮಸ್ಯೆಗಳಾಗದಂತೆ ಈ ಕ್ಷೇತ್ರದಲ್ಲಿನ ಸಂಸ್ಥೆಗಳ ನಡುವೆ ಒಪ್ಪಂದವೂ ನಡೆಯುವ ಸಾಧ್ಯತೆಗಳಿವೆ.

Written by - Girish Linganna | Edited by - Yashaswini V | Last Updated : Mar 27, 2023, 12:06 PM IST
  • ವನ್ ವೆಬ್ ಸಂಸ್ಥೆ ಎರಡನೇ ಅತಿದೊಡ್ಡ ಲೋ ಅರ್ತ್ ಆರ್ಬಿಟ್ (ಎಲ್ಇಒ) ವ್ಯವಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಸ್ಟಾರ್ ಲಿಂಕ್ ಸಂಸ್ಥೆಯ ಜೊತೆ ಸ್ಪರ್ಧಿಸುತ್ತಿದೆ.
  • ಇಲಾನ್ ಮಸ್ಕ್ ಅವರ ಸ್ಪೇಸ್ ಎಕ್ಸ್‌ಪ್ಲೋರೇಶನ್ ಟೆಕ್ನಾಲಜೀಸ್‌ ಕಾರ್ಪ್ ಸಂಸ್ಥೆಯಿಂದ ನಿರ್ವಹಿಸಲ್ಪಡುತ್ತಿರುವ ಸ್ಟಾರ್ ಲಿಂಕ್, ಈಗಾಗಲೇ 3,000ಕ್ಕೂ ಹೆಚ್ಚು ಉಪಗ್ರಹಗಳನ್ನು ಕಕ್ಷೆಯಲ್ಲಿ ಹೊಂದಿದೆ.
  • ಅದರೊಡನೆ, ಅಮೇಜಾ಼ನ್ ಡಾಟ್ ಕಾಮ್ ಐಎನ್‌ಸಿ (ಎಎಂಜ಼ೆಡ್ಎನ್) ಸಹ ಪ್ರಾಜೆಕ್ಟ್ ಕುಯ್ಪರ್ ಎಂಬ ಹೆಸರಿನಲ್ಲಿ ತನ್ನದೇ ಆದ ಬೃಹತ್ ಉಪಗ್ರಹ ವ್ಯವಸ್ಥೆಯನ್ನು ಹೊಂದುವ ಗುರಿ ಹೊಂದಿದೆ.
ಇಸ್ರೋ/ಎನ್ಎಸ್ಐಎಲ್ ಮೂಲಕ 36 ಉಪಗ್ರಹಗಳ ಉಡಾವಣೆ ನಡೆಸಿದ ವನ್ ವೆಬ್: ಜಾಗತಿಕ ಸಂಪರ್ಕ ವ್ಯವಸ್ಥೆಯಲ್ಲಿ ಹೊಸ ಮೈಲಿಗಲ್ಲು title=

ನವದೆಹಲಿ: ವನ್ ವೆಬ್ ಲಿಮಿಟೆಡ್ ಎಂಬ ಸಂಸ್ಥೆ ತನ್ನ ಅಂತಿಮ ಹಂತದ 36 ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆಗೊಳಿಸುವ ಮೂಲಕ ತನ್ನ 616 ಉಪಗ್ರಹಗಳ ಪುಂಜವನ್ನು ಪೂರ್ಣಗೊಳಿಸಿತು. ಆ ಮೂಲಕ ವನ್ ವೆಬ್ ಇಲಾನ್ ಮಸ್ಕ್ ನೇತೃತ್ವದ ಸ್ಟಾರ್‌ಲಿಂಕ್ ಸಂಸ್ಥೆಯ ಸಮರ್ಥ ಎದುರಾಳಿಯಾಗಿ ಹೊರಹೊಮ್ಮಿದ್ದು, ಈ ವರ್ಷದಲ್ಲೇ ಜಾಗತಿಕ ಬ್ರಾಡ್‌ಬ್ಯಾಂಡ್ ಅಂತರ್ಜಾಲ ಸೇವೆಯನ್ನು ಒದಗಿಸಲು ಸನ್ನದ್ಧವಾಗಿದೆ.

"ಈ ಸಾಧನೆ ಒಂದು ಬೃಹತ್ ಪ್ರಯತ್ನದ ಫಲವಾಗಿದ್ದು, ಇದಕ್ಕಾಗಿ ನಾವು ಕಳೆದ ವರ್ಷಗಳಲ್ಲಿ ಹಲವು ಜಾಗತಿಕ ರಾಜಕಾರಣದ ಸವಾಲುಗಳನ್ನೂ ಎದುರಿಸಬೇಕಾಗಿ ಬಂದಿತ್ತು. ಇದೆಲ್ಲದರ ಹೊರತಾಗಿಯೂ, ನಮ್ಮ ತಂಡ ಅತ್ಯುತ್ತಮ ಸಾಮರ್ಥ್ಯವನ್ನು ಸಾಬೀತುಪಡಿಸಿ, ಈ ಯೋಜನೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ" ಎಂದು ಸಂಸ್ಥೆಯ ಸಿಇಓ ನೀಲ್ ಮಾಸ್ಟರ್‌ಸನ್ ಉಡಾವಣೆಯ ಪೂರ್ವಭಾವಿಯಾಗಿ ನೀಡಿದ ಸಂದರ್ಶನದಲ್ಲಿ ಹೇಳಿದ್ದರು. ಸಂಸ್ಥೆ ತನ್ನ ಉಡಾವಣೆಗಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಸೇವೆಗಳನ್ನು ಪಡೆದುಕೊಂಡಿತ್ತು.

ವನ್‌ವೆಬ್ ಸಂಸ್ಥೆ ಈಗ ಅತ್ಯಂತ ವೇಗವಾಗಿ ಚಲಿಸಬಲ್ಲ ಉಪಗ್ರಹಗಳನ್ನು ತನಗೆ ಬೇಕಾದಷ್ಟು ಸಂಖ್ಯೆಯಲ್ಲಿ ಉಡಾವಣೆಗೊಳಿಸಿದ್ದು, ಈ ವರ್ಷದ ಮೇ ತಿಂಗಳಿಂದ ಅಮೆರಿಕಾದ 48 ರಾಜ್ಯಗಳಲ್ಲಿ ವಾಣಿಜ್ಯಿಕ ಸಂಸ್ಥೆಗಳಿಗೆ ಮತ್ತು ಸರ್ಕಾರಿ ಗ್ರಾಹಕರಿಗೆ ಅಂತರ್ಜಾಲ ಸೇವೆಗಳನ್ನು ಪೂರೈಸಲಿದೆ. ನೀಲ್ ಮಾಸ್ಟರ್‌ಸನ್ 2023ರ ಅಂತ್ಯದ ವೇಳೆಗೆ ಜಾಗತಿಕ ಅಂತರ್ಜಾಲ ಸೇವೆಗಳನ್ನು ಒದಗಿಸಲಿದೆ ಎಂದಿದ್ದಾರೆ.

ಇದನ್ನೂ ಓದಿ-  ನಿಮ್ಮ ಮೊಬೈಲ್ ಫೋನ್‌ಗಳಲ್ಲಿವೆ ಆರು ವಿಧದ ಖನಿಜ ಮತ್ತು ಲೋಹಗಳು!

ಈ 36 ಉಪಗ್ರಹಗಳ ಉಡಾವಣೆಯನ್ನು ಆಂಧ್ರ ಪ್ರದೇಶದ ಶ್ರೀಹರಿಕೋಟಾದಿಂದ ನೆರವೇರಿಸುವ ಮೂಲಕ ಯೋಜನೆಯ ಪ್ರಕ್ಷುಬ್ಧ ಅವಧಿ ಕೊನೆಗೊಂಡಿತು. ಈ ಯೋಜನೆಯನ್ನು ಬಾಹ್ಯಾಕಾಶ ಉದ್ಯಮಿ ಗ್ರೆಗ್ ವೈಲರ್ ಅವರು ಹತ್ತು ವರ್ಷಗಳ ಹಿಂದೆ ಆರಂಭಿಸಿದ್ದರು.

ಆದರೆ ಮಾರ್ಚ್ 2020ರಲ್ಲಿ, ಕೋವಿಡ್-19 ಸಾಂಕ್ರಾಮಿಕದ ಪರಿಣಾಮವಾಗಿ ಇದಕ್ಕೆ ಆರ್ಥಿಕ ಸಮಸ್ಯೆಗಳು ಎದುರಾದವು. ಆರ್ಥಿಕ ಸಂಕಷ್ಟದ ಮಧ್ಯೆ ಸಾಲದ ಲಭ್ಯತೆಯೂ ಇಲ್ಲದ ಕಾರಣ ಸಂಸ್ಥೆ ತನ್ನನ್ನು ದಿವಾಳಿ ಎಂದು ಘೋಷಿಸಿಕೊಂಡಿತು. ಆ ಸಂದರ್ಭದಲ್ಲಿ, ಯುಕೆ ಸರ್ಕಾರ ಮತ್ತು ಭಾರತೀಯ ಟೆಲಿಕಾಂ ದೈತ್ಯ ಸುನಿಲ್ ಮಿತ್ತಲ್ ಅವರ ಭಾರ್ತಿ ಗ್ರೂಪ್ ವನ್‌ವೆಬ್ ರಕ್ಷಣೆಗೆ ಬಂದವು. ಈ ಕ್ರಮದಿಂದ ಸಂಸ್ಥೆಗೆ ಸಾಫ್ಟ್ ಬ್ಯಾಂಕ್ ಗ್ರೂಪ್ ಕಾರ್ಪ್ (9984), ಸೌತ್ ಕೊರಿಯನ್ ಕಾರ್ಪೋರೇಷನ್ ಹಾನ್‌ವ್ಹಾ ಸಿಸ್ಟಮ್ಸ್ ಕೋ (272210), ಹಾಗೂ ಅಮೆರಿಕನ್ ಸಂಸ್ಥೆಯಾದ ಹ್ಯೂಸ್ ಸ್ಯಾಟಲೈಟ್ ಸಿಸ್ಟಮ್ಸ್ ಕಾರ್ಪ್‌ಗಳಿಂದ ಹೂಡಿಕೆ ಲಭಿಸಿತು.

ವನ್ ವೆಬ್ ಸಂಸ್ಥೆಯ ಪ್ರಮುಖ ಷೇರುದಾರ, ಫ್ರೆಂಚ್ ಸ್ಯಾಟಲೈಟ್ ಕಂಪನಿಯಾದ ಯೂಟೆಲ್‌ಸ್ಯಾಟ್ ಎಸ್ಎ ಕಳೆದ ವರ್ಷ ಹೂಡಿಕೆದಾರರ ಮತದಾನ ನಡೆಸಿ, ಅದರ ಪ್ರಕಾರ ಎರಡೂ ಸಂಸ್ಥೆಗಳ ವಿಲೀನಕ್ಕೆ ಒಪ್ಪಿಗೆ ಸೂಚಿಸಿತು. ಈ ಸಮೂಹ ಸಂಸ್ಥೆ ಯೂರೋಪಿಯನ್ ಯೂನಿಯನ್ ನೇತೃತ್ವದಲ್ಲಿ ಮಲ್ಟಿ ಬಿಲಿಯನ್ ಯೂರೋ ಐಆರ್‌ಐಎಸ್ ಉಪಗ್ರಹ ಯೋಜನೆಯಾಗುವ ಉದ್ದೇಶವನ್ನೂ ಹಾಕಿಕೊಂಡಿತು.

ಈ ಎಲ್ಲ ಹಂತಗಳ ಮೂಲಕ, ವನ್‌ವೆಬ್ ಸಂಸ್ಥೆ 2025ರ ವೇಳೆಗೆ 900 ಮಿಲಿಯನ್ ಸುರಕ್ಷಿತ ಆದಾಯ ಸಂಪಾದಿಸುವ ಮೂಲಕ, ನಷ್ಟದಿಂದ ಹೊರಬರಲಿದೆ ಎಂದು ಮಾಸ್ಟರ್‌ಸನ್ ಅಭಿಪ್ರಾಯ ಪಡುತ್ತಾರೆ. ಲಂಡನ್ ಮೂಲದ ಈ ಸಂಸ್ಥೆ, ಮುಂದಿನ ಹಂತದಲ್ಲಿ ಈಗ ಉಡಾವಣೆಗೊಳಿಸಿರುವ ಉಪಗ್ರಹಗಳಿಗೆ ಪೂರಕವಾಗಿ, 2028ರ ವೇಳೆಗೆ ಅತ್ಯಾಧುನಿಕವಾದ ನೂರಾರು ಉಪಗ್ರಹಗಳನ್ನು 4 ಬಿಲಿಯನ್ ಡಾಲರ್ ವೆಚ್ಚದಲ್ಲಿ ಉಡಾವಣೆಗೊಳಿಸಲು ಸಿದ್ಧತೆ ನಡೆಸಿಕೊಳ್ಳುತ್ತಿದೆ.

ಇದನ್ನೂ ಓದಿ- ಭಾರತದ ಪ್ರಯಾಣಿಕ ಸಾರಿಗೆ ದೈತ್ಯರಾದ ಓಲಾ ಊಬರ್ ಗಳನ್ನು ನಡುಗಿಸಿದ ಒಎನ್‌ಡಿಸಿಯ ಶೂನ್ಯ ಕಮಿಷನ್ ಸೇವೆ

ಬಾಹ್ಯಾಕಾಶದ ಸ್ಪರ್ಧೆ: 
ವನ್ ವೆಬ್ ಸಂಸ್ಥೆ ನಡೆಸಿರುವ ಉಡಾವಣೆ ಜಾಗತಿಕ ಬ್ರಾಡ್‌ಬ್ಯಾಂಡ್ ಸೇವೆ ಒದಗಿಸಲು ನೆರವಾಗುತ್ತಿದೆ. ಆದರೆ ಇದರ ಪರಿಣಾಮವಾಗಿ, ಭೂಮಿಯನ್ನು ಸುತ್ತುವರಿಯುವ ಉದ್ದೇಶದಿಂದ, ವಿವಿಧ ಸಂಸ್ಥೆಗಳು ಸಾವಿರಾರು ಲೋ ಆಲ್ಟಿಟ್ಯೂಡ್ ಉಪಗ್ರಹಗಳನ್ನು ಉಡಾವಣೆಗೊಳಿಸುವ ಹೊಸ ಸ್ಪರ್ಧೆಗೂ ಇದು ಮುನ್ನುಡಿ ಬರೆಯಲಿದೆ. ಸ್ಪರ್ಧೆಯ ಕಾರಣದಿಂದ ಸಮಸ್ಯೆಗಳಾಗದಂತೆ ಈ ಕ್ಷೇತ್ರದಲ್ಲಿನ ಸಂಸ್ಥೆಗಳ ನಡುವೆ ಒಪ್ಪಂದವೂ ನಡೆಯುವ ಸಾಧ್ಯತೆಗಳಿವೆ.

ವನ್ ವೆಬ್ ಸಂಸ್ಥೆ ಎರಡನೇ ಅತಿದೊಡ್ಡ ಲೋ ಅರ್ತ್ ಆರ್ಬಿಟ್ (ಎಲ್ಇಒ) ವ್ಯವಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಸ್ಟಾರ್ ಲಿಂಕ್ ಸಂಸ್ಥೆಯ ಜೊತೆ ಸ್ಪರ್ಧಿಸುತ್ತಿದೆ. ಇಲಾನ್ ಮಸ್ಕ್ ಅವರ ಸ್ಪೇಸ್ ಎಕ್ಸ್‌ಪ್ಲೋರೇಶನ್ ಟೆಕ್ನಾಲಜೀಸ್‌ ಕಾರ್ಪ್ ಸಂಸ್ಥೆಯಿಂದ ನಿರ್ವಹಿಸಲ್ಪಡುತ್ತಿರುವ ಸ್ಟಾರ್ ಲಿಂಕ್, ಈಗಾಗಲೇ 3,000ಕ್ಕೂ ಹೆಚ್ಚು ಉಪಗ್ರಹಗಳನ್ನು ಕಕ್ಷೆಯಲ್ಲಿ ಹೊಂದಿದೆ. ಅದರೊಡನೆ, ಅಮೇಜಾ಼ನ್ ಡಾಟ್ ಕಾಮ್ ಐಎನ್‌ಸಿ (ಎಎಂಜ಼ೆಡ್ಎನ್) ಸಹ ಪ್ರಾಜೆಕ್ಟ್ ಕುಯ್ಪರ್ ಎಂಬ ಹೆಸರಿನಲ್ಲಿ ತನ್ನದೇ ಆದ ಬೃಹತ್ ಉಪಗ್ರಹ ವ್ಯವಸ್ಥೆಯನ್ನು ಹೊಂದುವ ಗುರಿ ಹೊಂದಿದೆ.

ಆದರೆ ಈ ರೀತಿಯ ಸ್ಪರ್ಧೆಯ ಸಾಧ್ಯತೆಗಳು ಕಡಿಮೆ ಎನ್ನುವ ಮಾಸ್ಟರ್‌ಸನ್, ಇಲಾನ್ ಮಸ್ಕ್ ಅವರ ಸ್ಪೇಸ್ ಎಕ್ಸ್ ಸಂಸ್ಥೆ ವೈಯಕ್ತಿಕ ಗ್ರಾಹಕರ ಕಡೆಗೆ ಹೆಚ್ಚಿನ ಗಮನ ನೀಡುತ್ತಿದ್ದರೆ, ವನ್ ವೆಬ್ ಸರ್ಕಾರಿ ಸಂಸ್ಥೆಗಳಿಗೆ ಸೇವೆ ಒದಗಿಸುವ ಉದ್ದೇಶ ಹೊಂದಿದೆ ಎಂದಿದ್ದರು. ಅದಕ್ಕೆ ಪೂರಕವಾಗಿ, ವನ್ ವೆಬ್ ಸಂಸ್ಥೆ ಫ್ರಾನ್ಸ್‌ನ ಏರಿಯಾನೆಸ್ಪೇಸ್ ಎಸ್ ಎ ಮೂಲಕ ತನ್ನ ಉಪಗ್ರಹಗಳ ಉಡಾವಣೆ ನಡೆಸಬೇಕು ಎಂದುಕೊಂಡಿತ್ತು. ಆದರೆ ಉಕ್ರೇನಿನ ಮೇಲೆ ರಷ್ಯಾ ನಡೆಸಿದ ದಾಳಿಯ ಪರಿಣಾಮವಾಗಿ ಈ ಉಡಾವಣೆ ಸಾಧ್ಯವಾಗಲಿಲ್ಲ. ಆದ್ದರಿಂದ ವನ್ ವೆಬ್ ಸಂಸ್ಥೆಯೂ ಸ್ಪೇಸ್ ಎಕ್ಸ್ ಸಂಸ್ಥೆಯ ಗ್ರಾಹಕನಾಗಿ, ಆ ಸಂಸ್ಥೆಯ ರಾಕೆಟ್‌ಗಳ ಮೂಲಕ ತನ್ನ ಉಪಗ್ರಹಗಳನ್ನು ಉಡಾವಣೆಗೊಳಿಸಿತ್ತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News