BharOS: ಅಂಡ್ರಾಯಿಡ್ ಗೆ ಸೆಡ್ಡು ಹೊಡೆಯಲು ಬಂತು ಮೇಡ್ ಇನ್ ಇಂಡಿಯಾ BharOS, ಕೇಂದ್ರ ಸರ್ಕಾರದಿಂದಲೂ ಸಿಕ್ತು ಗ್ರೀನ್ ಸಿಗ್ನಲ್

Made In India OS: ಸ್ವದೇಶಿ ಮೊಬೈಲ್ ಆಪರೇಟಿಂಗ್ ಸಿಸ್ಟಮ್ ಸಹಾಯದಿಂದ ಇದೀಗ ಭಾರತ ಅಂಡ್ರಾಯಿಡ್ ಹಾಗೂ ಐಓಎಸ್ ಗಳಿಗೆ ಸೆಡ್ಡು ಹೊಡೆಯಲು ಸಿದ್ಧವಾಗಿದೆ. ಐಐಟಿ ಮದ್ರಾಸ್ ಅಭಿವೃದ್ಧಿಪಡಿಸಿರುವ ಈ ಆಪರೇಟಿಂಗ್ ಸಿಸ್ಟಂಗೆ ಕೇಂದ್ರ ಸರ್ಕಾರದ ಹಸಿರು ನಿಶಾನೆ ದೊರೆತಿದೆ.  

Written by - Nitin Tabib | Last Updated : Jan 24, 2023, 05:19 PM IST
  • BharOS ಗೆ ನಿಗದಿತ ಕಾಲಾಂತರದಲ್ಲಿ ನೇಟಿವ್ 'ಓವರ್ ದಿ ಏರ್' ಅಪ್ಡೇಟ್ ಗಳು ಸಿಗಲಿವೆ.
  • ಅಂದರೆ, ಯಾವುದೇ ದೀರ್ಘ ಕಾಲದ ಪ್ರಕ್ರಿಯೆಯನ್ನು ಬಳಕೆದಾರರು ಅನುಸರಿಸಬೇಕಾದ ಅವಶ್ಯಕತೆ ಇಲ್ಲ.
  • ಅಂದರೆ, ಹೊಸ ಅಪ್ಡೇಟ್ ಗಳು ಖುದ್ದಾಗಿ ಇನ್ಸ್ಟಾಲ್ ಆಗಲಿವೆ.
BharOS: ಅಂಡ್ರಾಯಿಡ್ ಗೆ ಸೆಡ್ಡು ಹೊಡೆಯಲು ಬಂತು ಮೇಡ್ ಇನ್ ಇಂಡಿಯಾ BharOS, ಕೇಂದ್ರ ಸರ್ಕಾರದಿಂದಲೂ ಸಿಕ್ತು ಗ್ರೀನ್ ಸಿಗ್ನಲ್  title=
Photo Courtesy: Twitter

Made In India Mobile Operating System: ಕಳೆದ ಕೆಲ ವರ್ಷಗಳಿಂದ ಭಾರತ ಎಲ್ಲಾ ಕ್ಷೇತ್ರಗಳಲ್ಲಿಯೂ ಸ್ವಾವಲಂಭಿಯಾಗುವತ್ತ ದಾಪುಗಾಳನ್ನಿಟ್ಟಿದೆ. ಈ ನಿಟ್ಟಿನಲ್ಲಿ ಇದೀಗ ಭಾರತ ಮೇಡ್ ಇನ್ ಇಂಡಿಯಾ ಆಪರೇಟಿಂಗ್ ಸಿಸ್ಟಂಗೆ ಹಸಿರು ನಿಶಾನೆ ತೋರಿದೆ. ಅಂದರೆ, ಇನ್ಮುಂದೆ ಸ್ಮಾರ್ಟ್ ಫೋನ್ ಗಳಲ್ಲಿ ಅಂಡ್ರಾಯಿಡ್ ಹಾಗೂ ಐಓಎಸ್ ಗಳಂತಹ ಆಪರೇಟಿಂಗ್ ಬದಲಿಗೆ ಮೇಡ್ ಇನ್ ಇಂಡಿಯಾ ತತ್ರಾಂಶ ಬಳಕೆಯಾಗಲಿದೆ. ದೀರ್ಘ ಕಾಲದಿಂದ ಚರ್ಚೆಗೆ ಗ್ರಾಸವಾಗಿದ್ದ ಈ ಸಾಫ್ಟ್ವೇರ್ ಗೆ BharOS ಎಂಬ ಹೆಸರನ್ನಿಡಲಾಗಿದೆ.

ಕೇಂದ್ರ ಐಟಿ ಸಚಿವ ಅಶ್ವಿನಿ ವೈಷ್ಣವ್ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೆಂದ್ರ ಪ್ರಧಾನ ಅವರು ಈ ಸ್ವದೇಶಿ ನಿರ್ಮಿತ ಆಪರೇಟಿಂಗ್ ಸಿಸ್ಟಂ BharOSನ ಪರೀಕ್ಷೆಯ ಸಂದರ್ಭದಲ್ಲಿ ವಿಡಿಯೋ ಕಾಲನಲ್ಲಿ ಪಾಲ್ಗೊಳ್ಳುವ ಮೂಲಕ ಅದಕ್ಕೆ ಹಸಿರು ನಿಶಾನೆ ತೋರಿದ್ದಾರೆ. ಐಐಟಿ ಮದ್ರಾಸ್ ಗೆ ಸಂಬಂಧಿಸಿದ ಸಂಸ್ಥೆಯೊಂದು ಈ ಆಪರೇಟಿಂಗ್ ಸಿಸ್ಟಂ ಅನ್ನು ಸಿದ್ಧಪಡಿಸಿದ್ದು. ಇದನ್ನು ಒರಿಜಿನಲ್ ಇಕ್ವಿಪ್ಮೆಂಟ್ ಮ್ಯಾನುಫ್ರ್ಯಾಕ್ಚರರ್ (ಓಇಎಂ) ವತಿಯಿಂದ ಯಾವುದೇ ಮೊಬೈಲ್ ಉಪಕರಣದ ಭಾಗವಾಗಿಸಬಹುದು.

ಈ ಕಂಪನಿ BharOS ಅನ್ನು ಅಭಿವೃದ್ಧಿಪಡಿಸಿದೆ
ಹೊಸ ಮೊಬೈಲ್ ಆಪರೇಟಿಂಗ್ ಸಿಸ್ಟಂ BharOS ಅನ್ನು ಐಐಟಿ ಮದ್ರಾಸ್ ಜೊತೆಗೂಡಿ JandK ಆಪರೆಶನ್ಸ್ ಪ್ರೈವೇಟ್ ಲಿಮಿಟೆಡ್ ಸಿದ್ಧಪಡಿಸಿದೆ. ಇದನ್ನು ಯಾವುದೇ ವಾಣಿಜ್ಯ ಹ್ಯಾಂಡ್ ಸೆಟ್ ಗಳಲ್ಲಿ ಸುಲಭವಾಗಿ ಬಳಸಬಹುದು ಎಂದು ಕಂಪನಿ ಹಕ್ಕನ್ನು ಮಂಡಿಸಿದೆ. ಈ ಆಪರೇಟಿಂಗ್ ಸಿಸ್ಟಂ ಅನ್ನು ಬಳಸುವಾಗ, ಬಳಕೆದಾರರು ಅತ್ಯುತ್ತಮ ಖಾಸಗಿತನ ಹಾಗೂ ಸುರಕ್ಷೆಯ ಅನುಭವ ಪಡೆಯಬಹುದು ಎಂದು ಅಭಿವೃದ್ಧಿಪಡಿಸಿದ ಕಂಪನಿ ಹೇಳಿಕೊಂಡಿದೆ. ವೈಶಿಷ್ಟ್ಯಗಳ ವಿಷಯದಲ್ಲಿ ಇದು ಅಂಡ್ರಾಯಿಡ್ ಆಪರೇಟಿಂಗ್ ಸಿಸ್ಟಂಗೆ ನೆರೆ ಪ್ರತಿಸ್ಪರ್ಧೆ ಒಡ್ಡಲಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ-ಮುಪ್ಪಾವಸ್ಥೆಯಿಂದ ಯೌವ್ವನಾವಸ್ಥೆಗೆ ಮರಳಲಿದೆ ಜಗತ್ತು, ಸಿಕ್ಕೆ ಬಿಟ್ತು ಹೊಸ ಫಾರ್ಮುಲಾ!

ಯಾವುದೇ ಪ್ರೀ ಇನ್ಸ್ಟಾಲ್ಡ್ ಆಪ್ ಗಳು ಇರುವುದಿಲ್ಲ
ಹೊಸ ಆಪರೇಟಿಂಗ್ ಸಿಸ್ಟಂನ ವಿಶೇಷತೆ ಎಂದರೆ ಇದರ 'ನೋ ಡಿಫಾಲ್ಟ್ ಆಪ್ ಬಿಹೇವಿಯರ್' ಎನ್ನಲಾಗುತ್ತಿದೆ. ಇದರರ್ಥ ಅಂಡ್ರಾಯಿಡ್ ಹೋಲಿಕೆಯಲ್ಲಿ ಇದರಲ್ಲಿ ಹೆಚ್ಚು ಸ್ಟೋರೇಜ್ ನಿಮಗೆ ಸಿಗಲಿದ್ದು, ಇದರಲ್ಲಿ ಮೊದಲಿನಂತೆ ಯಾವುದೇ ಪ್ರೀ ಇನ್ಸ್ಟಾಲ್ಡ್ ಆಪ್ ಗಳು ಇರುವುದಿಲ್ಲ. ಅಂದರೆ, ಬಳಕೆದಾರರಿಗೆ ಬೇಡಾದ ಯಾವುದೇ ಆಪ್ ಅನ್ನು ಬಲವಂತವಾಗಿ ಬಳಸಲು ಒತ್ತಾಯಿಸಲಾಗುವುದಿಲ್ಲ ಎಂದರ್ಥ. ಆದರೆ, ಇದಕ್ಕೆ ವಿಪರೀತ ಎಂಬಂತೆ ಅಂಡ್ರಾಯಿಡ್ ನಲ್ಲಿ ಹಲವು ಪ್ರೀಇನ್ಸ್ಟಾಲ್ಡ್ ಆಪ್ ಗಳಿರುತ್ತವೆ ಎಂಬುದು ಇಲ್ಲಿ ಗಮನಾರ್ಹ.

ಇದನ್ನೂ ಓದಿ-ಹೀರೋ-ಟಿವಿಎಸ್ ಟೆನ್ಶನ್ ಹೆಚ್ಚಿಸಲು ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ ಹೊಂಡಾ ಕಂಪನಿಯ ಹೊಸ ಸ್ಕೂಟರ್ !

ನಿಗದಿತ ಅವಧಿಯಲ್ಲಿ ಅಪ್ಡೇಟ್ ಗಳು ಸಿಗುತ್ತಲೇ ಇರಲಿವೆ
ಈ ಆಪರೇಟಿಂಗ್ ಸಿಸ್ಟಂ ಅನ್ನು ಅಭಿವೃದ್ಧಿಪಡಿಸಿದವರು ಈ ಕುರಿತು ಮಾಹಿತಿ ನೀಡಿದ್ದು . BharOS ಗೆ ನಿಗದಿತ ಕಾಲಾಂತರದಲ್ಲಿ ನೇಟಿವ್ 'ಓವರ್ ದಿ ಏರ್' ಅಪ್ಡೇಟ್ ಗಳು ಸಿಗಲಿವೆ. ಅಂದರೆ, ಯಾವುದೇ ದೀರ್ಘ ಕಾಲದ ಪ್ರಕ್ರಿಯೆಯನ್ನು ಬಳಕೆದಾರರು ಅನುಸರಿಸಬೇಕಾದ ಅವಶ್ಯಕತೆ ಇಲ್ಲ. ಅಂದರೆ, ಹೊಸ ಅಪ್ಡೇಟ್ ಗಳು ಖುದ್ದಾಗಿ ಇನ್ಸ್ಟಾಲ್ ಆಗಲಿವೆ. ಈ ಆಪರೇಟಿಂಗ್ ಸಿಸ್ಟಂನಲ್ಲಿ ನೀವು ಪ್ರೈವೇಟ್ ಆಪ್ ಸ್ಟೋರ್ ಸರ್ವಿಸೆಸ್ (PASS) ಜೊತೆಗೆ ಸುರಕ್ಷಿತ ಆಪ್ ಗಳನ್ನು ಇನ್ಸ್ಟಾಲ್ ಮಾಡಬಹುದು. ಇದು ಆಪ್ ಗಳ ಸುರಕ್ಷತೆ ಮತ್ತು ಬಳಕೆ ಯೋಗ್ಯತೆಯ ಕುರಿತು ಪರಿಶೀಲನೆ ನಡೆಸಲಿದೆ. ಆದರೆ, ಪ್ರಸ್ತುತ ಅತ್ಯುತ್ತಮ ಸುರಕ್ಷತೆ ಮತ್ತು ಪ್ರೈವೆಸಿ ಅವಶ್ಯಕತೆ ಇರುವ ಸಂಸ್ಥೆಗಳಿಗೆ ಮಾತ್ರ ಈ ಆಪರೇಟಿಂಗ್ ಸಿಸ್ಟಂ ಬಳಸಲು ಅನುಮತಿ ನೀಡಲಾಗುತ್ತಿದೆ ಎಂಬುದು ಇಲ್ಲಿ ಉಲ್ಲೇಖನೀಯ. 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News