Snow Volcano: ಐಸ್‌ ಉಗುಳುವ ಜ್ವಾಲಾಮುಖಿ..! ಇದು ಸೌರಮಂಡಲದ ಅಚ್ಚರಿ..!

2006ರಲ್ಲಿ ಗ್ರಹದ ಸ್ಥಾನಮಾನ ಕಳೆದುಕೊಂಡ 'ಪ್ಲೂಟೋ' (Pluto) ಇಂತಹ ವಿಚಿತ್ರ ವಿದ್ಯಮಾನಕ್ಕೆ ಸಾಕ್ಷಿಯಾಗಿದೆ. 'ಪ್ಲೂಟೋ' ಮೇಲ್ಮೈನಲ್ಲಿ ಹಿಮ ಉಗುಳುವ ಜ್ವಾಲಾಮುಖಿಯನ್ನು ನಾಸಾ (NASA) ವಿಜ್ಞಾನಿಗಳು ಗುರುತಿಸಿದ್ದಾರೆ. 

Written by - Malathesha M | Edited by - Yashaswini V | Last Updated : Mar 31, 2022, 12:36 PM IST
  • ಜೀವಂತ ಐಸ್‌ ವಾಲ್ಕೆನೋ ಪತ್ತೆ
  • ಭೂಮಿ ಮೇಲಿನ ಜ್ವಾಲಾಮುಖಿಗಳಿಗೆ ಹೋಲಿಕೆ ಮಾಡಿದರೆ ಈ ಜ್ವಾಲಾಮುಖಿ ತುಂಬಾ ವಿಚಿತ್ರವಾಗಿದೆ
  • ಇಂತಹ ರಚನೆಯನ್ನು ಸೌರಮಂಡಲದಲ್ಲಿ ಬೇರೆಲ್ಲೂ ಕಂಡಿಲ್ಲ
Snow Volcano: ಐಸ್‌ ಉಗುಳುವ ಜ್ವಾಲಾಮುಖಿ..! ಇದು ಸೌರಮಂಡಲದ ಅಚ್ಚರಿ..! title=
Ice Volcano

Volcano: ಸಾಮಾನ್ಯವಾಗಿ ಜ್ವಾಲಾಮುಖಿ (Volcano) ಎಂದರೆ ನಮ್ಮ ಕಣ್ಣೆದುರು ಬರುವುದು ಭಾರಿ ಪ್ರಮಾಣದಲ್ಲಿ ಬೆಂಕಿ ಉಗುಳುವ ನರಕದಂತಹ ರಂಧ್ರ. ಆದರೆ ಇಲ್ಲೊಂದು ವಾಲ್ಕೆನೋ ಅಂದರೆ ಜ್ವಾಲಾಮುಖಿ ಇದೆ. ಈ ಜ್ವಾಲಾಮುಖಿ ಬೆಂಕಿ ಬದಲು ತಣ್ಣಗಿನ ಹಿಮ ಹೊರಹಾಕುತ್ತಿದೆ. ಅಷ್ಟಕ್ಕೂ ಇಂತಹ ವಿಚಿತ್ರ ವಿದ್ಯಮಾನ ನಡೆಯುತ್ತಿರುವುದು ನಮ್ಮ ಸೌರಮಂಡಲದಲ್ಲಿ ಎಲ್ಲಿ..? ಯಾವ ಗ್ರಹದಲ್ಲಿ ಎಂಬುದನ್ನು ಮುಂದೆ ತಿಳಿಯಿರಿ.

2006ರಲ್ಲಿ ಗ್ರಹದ ಸ್ಥಾನಮಾನ ಕಳೆದುಕೊಂಡ 'ಪ್ಲೂಟೋ' (Pluto) ಇಂತಹ ವಿಚಿತ್ರ ವಿದ್ಯಮಾನಕ್ಕೆ ಸಾಕ್ಷಿಯಾಗಿದೆ. 'ಪ್ಲೂಟೋ' ಮೇಲ್ಮೈನಲ್ಲಿ ಹಿಮ ಉಗುಳುವ ಜ್ವಾಲಾಮುಖಿಯನ್ನು ನಾಸಾ (NASA) ವಿಜ್ಞಾನಿಗಳು ಗುರುತಿಸಿದ್ದಾರೆ. ಗ್ರಹಕ್ಕೆ ಇರಬೇಕಾದ ಅರ್ಹತೆ ಇಲ್ಲವೆಂಬ ಕಾರಣ ನೀಡಿ, 'ಪ್ಲೂಟೋ'ಗೆ ನೀಡಿದ್ದ ಗ್ರಹದ ಸ್ಥಾನಮಾನವನ್ನು 2006ರಲ್ಲಿ ಹಿಂದಕ್ಕೆ ಪಡೆಯಲಾಗಿತ್ತು. ಆದರೂ ವಿಜ್ಞಾನಿಗಳು 'ಪ್ಲೂಟೋ' ಬಗ್ಗೆ ಕುತೂಹಲದಿಂದ ಅಧ್ಯಯನ ಮುಂದುವರಿಸಿದ್ದರು.

ಇದನ್ನೂ ಓದಿ- ವಿಶ್ವದ ಮೊದಲ ಹಾರುವ ಬೈಕ್‌.. ಬೆಲೆ ಮತ್ತು ವೇಗ ತಿಳಿಯಿರಿ, ಈಗಲೇ ಬುಕ್ ಮಾಡಿ

'ಹಿಮ' ಜ್ವಾಲಾಮುಖಿ..! ('Snow' Volcano)
ಹೀಗೆ 2015 ರಲ್ಲಿ 'ಪ್ಲೂಟೋ' ಸಮೀಪ ಹಾರಿ ಹೋಗಿದ್ದ 'ನ್ಯೂ ಹಾರಿಜೋನ್' ನಾಸಾ ನೌಕೆ, ಹಲವು ಫೋಟೋಗಳನ್ನು ಸೆರೆ ಹಿಡಿದಿತ್ತು. ಈ ಫೋಟೋಗಳ ಅಧ್ಯಯನದಿಂದ 'ಪ್ಲೂಟೋ' ಮೇಲೆ ಜೀವಂತ ಐಸ್‌ ವಾಲ್ಕೆನೋ (Snow Volcano) ಇರುವುದು ಪತ್ತೆಯಾಗಿದೆ. ಸುಮಾರು 180,000 ಚದರ ಕಿಲೋಮೀಟರ್, ಅಂದರೆ ನಮ್ಮ ಕರ್ನಾಟಕದಷ್ಟು ವ್ಯಾಪ್ತಿಯ ಜಾಗದಲ್ಲಿ ಜ್ವಾಲಾಮುಖಿ ಉಗುಳಿರುವ ಹಿಮ ಹರಡಿದೆ ಎನ್ನಲಾಗಿದೆ. 

ಇದನ್ನೂ ಓದಿ- The Largest Comet: Manhattan ಗಾತ್ರಕ್ಕಿಂತ 7 ಪಟ್ಟು ದೊಡ್ಡ ಮತ್ತು 137 ಕಿ.ಮೀ ಉದ್ದದ ಧೂಮಕೇತು ಪತ್ತೆ

ಭೂಮಿ ಮೇಲಿನ ಜ್ವಾಲಾಮುಖಿಗಳಿಗೆ ಹೋಲಿಕೆ ಮಾಡಿದರೆ 'ಪ್ಲೂಟೋ' ಮೇಲಿನ ಜ್ವಾಲಾಮುಖಿ ತುಂಬಾ ವಿಚಿತ್ರವಾಗಿದೆ. ಇಂತಹ ರಚನೆಯನ್ನು ಸೌರಮಂಡಲದಲ್ಲಿ ಬೇರೆಲ್ಲೂ ಕಂಡಿಲ್ಲ. ಹೀಗಾಗಿ ಹೆಚ್ಚಿನ ಅಧ್ಯಯನ ನಡೆಸುತ್ತಿದ್ದೇವೆ ಎಂದು ನಾಸಾ ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News