Electric Bill Reduce : ಮನೆಯ ವಿದ್ಯುತ್ ಬಿಲ್ ಅರ್ಧದಷ್ಟು ಕಡಿಮೆ ಮಾಡಲು, ಇಂದೇ ಈ ಕೆಲಸ ಮಾಡಿ!

Reduce Electric Bill  : ಚಳಿಗಾಲದಲ್ಲಿ ಹೆಚ್ಚಿದ ವಿದ್ಯುತ್ ಬಿಲ್‌ ಅನ್ನು ಅರ್ಧಕ್ಕೆ ತರಲು ನಾವು ಇಂದು ಸರಳ ಉಪಾಯಗಳನ್ನು ನಿಮಗಾಗಿ ತಂದಿದ್ದೇವೆ. ಈ ಕೆಳಗಿವೆ ಓದಿ...

Written by - Channabasava A Kashinakunti | Last Updated : Dec 31, 2022, 02:35 PM IST
  • ಚಳಿಗಾಲದಲ್ಲಿ ಹೆಚ್ಚು ವಿದ್ಯುತ್ ಬಳಕೆಯಿಂದಾಗಿ ಸಿಕ್ಕಾಪಟ್ಟೆ ಬಿಲ್
  • ಹೆಚ್ಚಿದ ವಿದ್ಯುತ್ ಬಿಲ್‌ ಅನ್ನು ಅರ್ಧಕ್ಕೆ ತರಲು ಸರಳ ಉಪಾಯ
  • ಡಿಮೆ ವಿದ್ಯುತ್ ಬಳಕೆಯ ಎಲೆಕ್ಟ್ರಿಕ್ ಬ್ಲೋವರ್‌ಗಳು
Electric Bill Reduce : ಮನೆಯ ವಿದ್ಯುತ್ ಬಿಲ್ ಅರ್ಧದಷ್ಟು ಕಡಿಮೆ ಮಾಡಲು, ಇಂದೇ ಈ ಕೆಲಸ ಮಾಡಿ! title=

Reduce Electric Bill : ಚಳಿಗಾಲದಲ್ಲಿ ಹೆಚ್ಚು ವಿದ್ಯುತ್ ಬಳಕೆಯಿಂದಾಗಿ ಸಿಕ್ಕಾಪಟ್ಟೆ ಬಿಲ್ ಬರುತ್ತದೆ. ಯಾಕೆ ಅಂದರೆ ಚಳಿಗಾಲದಲ್ಲಿ ರೂಮ್ ಹಿಟರ್, ವಾಟರ್ ಹಿಟರ್ ಹೀಗೆ ಎಲೆಕ್ಟ್ರಾನಿಕ್ ವಸ್ತುಗಳ ಬಳಕೆಯಿಂದಾಗಿ ವಿದ್ಯುತ್ ಬಿಲ್ ಹೆಚ್ಚಿ ಬರುತ್ತದೆ. ಚಳಿಗಾಲದಲ್ಲಿ ಹೆಚ್ಚಿದ ವಿದ್ಯುತ್ ಬಿಲ್‌ ಅನ್ನು ಅರ್ಧಕ್ಕೆ ತರಲು ನಾವು ಇಂದು ಸರಳ ಉಪಾಯಗಳನ್ನು ನಿಮಗಾಗಿ ತಂದಿದ್ದೇವೆ. ಈ ಕೆಳಗಿವೆ ಓದಿ...

ನೀವು ಚಳಿಗಾಲದಲ್ಲಿ ಬೆಚ್ಚಗಿನ ಗಾಳಿಗಾಗಿ ಹವಾನಿಯಂತ್ರಣವನ್ನು(ಹಿಟರ್) ಬಳಸುತ್ತಿದ್ದರೆ, ಅದನ್ನ ಈಗಲೇ ಬಂದ್ ಮಾಡಿ ಮೂಲೆಗೆ ಎಸೆಯಿರಿ. ಇದರ ಬದಲಿಗೆ ನೀವು ಗ್ಯಾಸ್ ಹೀಟರ್ ಅನ್ನು ಬಳಸಬೇಕು.

ಇದನ್ನೂ ಓದಿ : YouTubeನಲ್ಲಿ ಅತಿ ಹೆಚ್ಚು ವೀಕ್ಷಣೆಗೆ ಒಳಗಾದ ವಿಡಿಯೋ ಯಾವುದು? ಉತ್ತರ ನಿಬ್ಬೇರಗಾಗಿಸಲಿದೆ

ನಿಮ್ಮ ಮನೆಯಲ್ಲಿ ಬೇಯಿಸಲು ನೀವು ಏರ್ ಫ್ರೈಯರ್ ಅನ್ನು ಬಳಸುತ್ತಿದ್ದರೆ, ಅದು ಖಂಡಿತವಾಗಿಯೂ ಆರೋಗ್ಯಕರ ಅಡುಗೆಯಲ್ಲಿ ಕೆಲಸ ಮಾಡುತ್ತದೆ ಆದರೆ ಹೆಚ್ಚು ವಿದ್ಯುತ್ ಸೆಳೆಯುತ್ತದೆ, ನೀವು ಆಹಾರವನ್ನು ಮತ್ತೆ ಒಲೆಯಲ್ಲಿ ಬೇಯಿಸುವುದರಿಂದ ವಿದ್ಯುತ್ ಉಳಿತಾಯವಾಗಲಿದೆ.

ನೀವು ನಿಮ್ಮ ಮನೆಯಲ್ಲಿ ದೊಡ್ಡ ಹೈ ಪವರ್ ಹೀಟರ್ ಅನ್ನು ಸಹ ಬಳಸುತ್ತಿದ್ದರೆ, ಅದನ್ನ ಇಂದೇ ಮೂಲೆಗಿಡಿ, ಈಗ ಮಾರುಕಟ್ಟೆಯಲ್ಲಿ ಕಡಿಮೆ ವಿದ್ಯುತ್ ಬಳಕೆಯ ಎಲೆಕ್ಟ್ರಿಕ್ ಬ್ಲೋವರ್‌ಗಳು ಗಾತ್ರದಲ್ಲಿ ಚಿಕ್ಕದಾಗಿರುತ್ತವೆ ಮತ್ತು ಕಡಿಮೆ ಶಕ್ತಿಯನ್ನು ಬಳಸುತ್ತವೆ. ಇದರಿಂದ ವಿದ್ಯುತ್ ಬಿಲ್ ಕಡಿಮೆ ಬರುತ್ತದೆ.

ನಿಮ್ಮ ಮನೆಯಲ್ಲಿ ಹಳೆಯ 100 ವ್ಯಾಟ್ ಬಲ್ಬ್‌ಗಳನ್ನು ಇನ್ನೂ ಬಳಸುತ್ತಿದ್ದರೆ, ಅವುಗಳನ್ನು ಮಾರುಕಟ್ಟೆಯಲ್ಲಿ ಎಲ್‌ಇಡಿ ಬಲ್ಬ್‌ಗಳು ಅಥವಾ ಟ್ಯೂಬ್‌ಲೈಟ್‌ಗಳೊಂದಿಗೆ ಬದಲಾಯಿಸುವ ಮೂಲಕ, ನೀವು ವಿದ್ಯುತ್ ಬಿಲ್ ಅನ್ನು ಅರ್ಧದಷ್ಟು ಕಡಿಮೆ ಮಾಡಬಹುದು ಏಕೆಂದರೆ ಹಳೆಯ ಬಲ್ಬ್‌ಗಳು ಹೆಚ್ಚು ವಿದ್ಯುತ್ ಸೆಳೆಯುತ್ತವೆ.

ನಿಮ್ಮ ಮನೆಯಲ್ಲಿ ಎಲೆಕ್ಟ್ರಿಕ್ ಗೀಸರ್ ಬಳಸಿದರೆ, ಚಳಿಗಾಲದಲ್ಲಿ ವಿದ್ಯುತ್ ಬಿಲ್ ಹೆಚ್ಚಾಗುವುದು ಸಾಮಾನ್ಯ, ಇದರ ಬದಲು ನೀವು ಗ್ಯಾಸ್ ಗೀಸರ್ ಬಳಿಸಿದರೆ,  ವಿದ್ಯುತ್ ಬಿಲ್ ಅರ್ಧದಷ್ಟು ಬರುತ್ತದೆ, ಗ್ಯಾಸ್ ಗೀಸರ್ ಸುಲಭವಾಗಿ ಮಾರುಕಟ್ಟೆಯಲ್ಲಿ ಲಭ್ಯವಿದೆ ಮತ್ತು ಸಾಮಾನ್ಯ ಗೀಸರ್‌ನಂತೆ ಕಾರ್ಯನಿರ್ವಹಿಸುತ್ತದೆ ಮತ್ತು ನಿಮಿಷಗಳಲ್ಲಿ ನೀರನ್ನು ಬಿಸಿ ಮಾಡುತ್ತದೆ.

ಇದನ್ನೂ ಓದಿ : New Rules: ನಾಳೆಯಿಂದ ಬೆಂಗಳೂರು ಸೇರಿದಂತೆ 3 ವಿಮಾನ ನಿಲ್ದಾಣಗಳಲ್ಲಿ ನಿಮ್ಮ ಮುಖವೇ ನಿಮ್ಮ ಗುರುತು

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News