Holi 2024 Tips: ಬಣ್ಣ ಆಡುವಾಗ ಫೋನ್ ಪೋರ್ಟ್ ಒಳಗೆ ಬಣ್ಣ ಸೇರಿದೆಯಾ? ನಿಮಿಷಾರ್ಧದಲ್ಲಿ ಈ ರೀತಿ ಸ್ವಚ್ಛ ಮಾಡಿ

Holi 2024 Smartphone Cleaning Tips: ಹೋಳಿ ಹಬ್ಬದಲ್ಲಿ ಬಣ್ಣ ಆಡುವಾಗ ನಾವು ಎಷ್ಟೇ ಪ್ರಯತ್ನ ಪಟ್ಟರೂ ನಮ್ಮ ಫೋನ್ ಗಳಲ್ಲಿರುವ ಚಾರ್ಜಿಂಗ್ ಅಥವಾ ಹೆಡ್ ಫೋನ್ ಪೋರ್ಟ್ ಗೆ ಬಣ್ಣ ಸೇರೆ ಸೇರುತ್ತದೆ. ಹೀಗಿರುವಾಗ ಚಿಂತೆ ಮಾಡುವ ಅವಶ್ಯಕತೆ ಇಲ್ಲ. ಏಕೆಂದರೆ ಯಾವ ಪರಿಕ್ಕರಗಳ ಸಹಾಯದಿಂದ ನೀವು ನಿಮ್ಮ ಫೋನ್ ಗೆ ಹೋಗಿರುವ ಬಣ್ಣಗಳನ್ನು ಸುಲಭವಾಗಿ ತೆರೆಯಬಹುದು ಎಂಬುದರ ಮಾಹಿತಿಯನ್ನು ಇಂದಿನ ಲೇಖನದಲ್ಲಿ ನಾವು ಹೇಳಿಕೊಡುತ್ತಿದ್ದೇವೆ. (Technology News In kananda)  

Written by - Nitin Tabib | Last Updated : Mar 25, 2024, 09:20 PM IST
  • ಮೃದುವಾದ ಬ್ರಷ್ ಅನ್ನು ಬಳಸಿ (ಉದಾಹರಣೆಗೆ ಹಲ್ಲುಜ್ಜುವ ಬ್ರಷ್).
  • ಪೋರ್ಟ್ ಗಳಿಂದ ಗುಲಾಲ್ ಅನ್ನು ನಿಧಾನವಾಗಿ ತೆಗೆದುಹಾಕಿ.
  • ತುಂಬಾ ಗಟ್ಟಿಯಾಗಿ ಉಜ್ಜಬೇಡಿ ಏಕೆಂದರೆ ಅದು ಪೋರ್ಟ್ ಗಳಿಗೆ ಹಾನಿ ಉಂಟು ಮಾಡಬಹುದು.
Holi 2024 Tips: ಬಣ್ಣ ಆಡುವಾಗ ಫೋನ್ ಪೋರ್ಟ್ ಒಳಗೆ ಬಣ್ಣ ಸೇರಿದೆಯಾ? ನಿಮಿಷಾರ್ಧದಲ್ಲಿ ಈ ರೀತಿ ಸ್ವಚ್ಛ ಮಾಡಿ title=

Holi 2024 Gadgets Protection Tips: ಹೋಳಿ ಹಬ್ಬದ ಬಣ್ಣದೋಕುಳಿಯ ಸಂದರ್ಭದಲ್ಲಿ ನಾವು ಎಷ್ಟೇ ಪ್ರಯತ್ನಪಟ್ಟರೂ ನಮ್ಮ ಸ್ಮಾರ್ಟ್ ಫೋನ್ ಗಳ ಪೋರ್ಟ್ ಗಳಲ್ಲಿ ಸ್ವಲ್ಪವಾದರೂ ಬಣ್ಣ ಸೇರೆ ಸೇರಿಕೊಳ್ಳುತ್ತದೆ. ಹೇಗಿರುವಾಗ ನೀವು ಇನ್ನು ಚಿಂತಿಸಬೇಕಾಗಿಲ್ಲ (how to clean smartphone after playing holi). ಏಕೆಂದರೆ ನಿಮ್ಮ ಫೋನ್‌ನಿಂದ ಗುಲಾಲ್ ಅನ್ನು ನೀವು ಯಾವ ಸಾಧನಗಳನ್ನು ಬಳಸಿ ಸುಲಭವಾಗಿ ತೆಗೆದುಹಾಕಬಹುದು ಎಂಬುದರ ಕುರಿತು ಮಾಹಿತಿಯನ್ನು ನಾವು ನೀಡುತ್ತಿದ್ದೇವೆ (Technology News In Kannada).

1. ಬ್ರಷ್
ಮೃದುವಾದ ಬ್ರಷ್ ಅನ್ನು ಬಳಸಿ (ಉದಾಹರಣೆಗೆ ಹಲ್ಲುಜ್ಜುವ ಬ್ರಷ್). ಪೋರ್ಟ್ ಗಳಿಂದ ಗುಲಾಲ್ ಅನ್ನು ನಿಧಾನವಾಗಿ ತೆಗೆದುಹಾಕಿ. ತುಂಬಾ ಗಟ್ಟಿಯಾಗಿ ಉಜ್ಜಬೇಡಿ ಏಕೆಂದರೆ ಅದು ಪೋರ್ಟ್ ಗಳಿಗೆ ಹಾನಿ ಉಂಟು ಮಾಡಬಹುದು.

2. ವ್ಯಾಕ್ಯೂಮ್ ಕ್ಲೀನರ್
ಕಡಿಮೆ ಶಕ್ತಿಯಲ್ಲಿ ವ್ಯಾಕ್ಯೂಮ್ ಕ್ಲೀನರ್ ಚಲಾಯಿಸಿ ಸ್ವಚ್ಛಗೊಳಿಸಬಹುದು. ಪೋರ್ಟ್‌ಗಳ ಬಳಿ ವ್ಯಾಕ್ಯೂಮ್ ಕ್ಲೀನರ್ ಅನ್ನು ತಂದು ಗುಲಾಲ್ ತೆಗೆದುಹಾಕಿ. ಆದರೆ, ವ್ಯಾಕ್ಯೂಮ್ ಕ್ಲೀನರ್ ನೀರನ್ನು ಹೀರದಂತೆ ಕಾಳಜಿವಹಿಸಿ..

3. ಹೇರ್ ಡ್ರೈಯರ್
ತಂಪಾದ ಗಾಳಿಯಲ್ಲಿ ಹೇರ್ ಡ್ರೈಯರ್ ಅನ್ನು ಹೊಂದಿಸಿ ಗುಲಾಲ್ ತೆಗೆದು ಹಾಕಬಹುದು. ಹೇರ್ ಡ್ರೈಯರ್ ಗಾಳಿಯನ್ನು ಪೋರ್ಟ್‌ಗಳಲ್ಲಿ ಬ್ಲೋ ಮಾಡಿ. ಗುಲಾಲ್ ಗಾಳಿಗೆ ಹಾರಿಹೋಗುತ್ತದೆ.

4. ಬ್ಲೋವರ್
ರಬ್ಬರ್ ಬ್ಲೋವರ್ ಬಳಸಿ ಕೂಡ ನೀವು ಬಣ್ಣವನ್ನು ಪೋರ್ಟ್ ನಿಂದ ತೆಗೆದು ಹಾಕಬಹುದು. ಬ್ಲೋವರ್ ನಿಂದ ಪೋರ್ಟ್ ಗಳಿಗೆ ಗಾಳಿಯನ್ನು ಸೇರಿಸಿ.  ಗುಲಾಲ್ ಆ ಗಾಳಿಗೆ ಹಾರಿಹೋಗುತ್ತದೆ.

5. ಸೇಲ್ಲೋ  ಟೇಪ್
ಸೆಲ್ಲೋ ಟೇಪ್ ಅಥವಾ ಡಕ್ಟ್ ಟೇಪ್ ಬಳಸಿ. ಅವುಗಳನ್ನು ಪೋರ್ಟ್‌ಗಳು ಇರುವ ಜಾಗದಲ್ಲಿ ಅಂಟಿಸಿ ಮತ್ತು ಬಣ್ಣ ಆಡಿದ ಬಳಿಕ ತೆಗೆದು ಹಾಕಿ. ಟೇಪ್ ಬಣ್ಣ ಪೋರ್ಟ್ ಗಳಿಗೆ ಸೇರದಂತೆ ತಡೆಯುತ್ತದೆ

ಇದನ್ನೂ ಓದಿ-Zomato Feature: ಶಾಕಾಹಾರಿಗಳಿಗೊಂದು ಸಂತಸದ ಸುದ್ದಿ ಪ್ರಕಟಿಸಿದ Zomato, ಬಿಡುಗಡೆಯಾಗಿದೆ ಹೊಸ ವೈಶಿಷ್ಟ್ಯ!

ಮುನ್ನಚ್ಚರಿಕೆಗಳು (Gadgets Precautions In Holi)
>> ಸ್ವಚ್ಛಗೊಳಿಸಲು ನೀರು ಅಥವಾ ಇತರ ರಾಸಾಯನಿಕ ದ್ರವಗಳನ್ನು ಬಳಸಬೇಡಿ. 
>> ಲೋಹ ಅಥವಾ ಚೂಪಾದ ವಸ್ತುಗಳನ್ನು ಬಳಸಬೇಡಿ.
>> ಹೆಚ್ಚು ಬಲವನ್ನು ಅನ್ವಯಿಸಬೇಡಿ.

ಇದನ್ನೂ ಓದಿ-WhatsApp New Feature: ಶೀಘ್ರದಲ್ಲೇ ಸ್ಟೇಟಸ್ ನಲ್ಲಿ ನೀವು ಈ ಕೆಲಸ ಮಾಡಬಹುದು! ಸಿಗಲಿದೆ ಜಬರ್ದಸ್ತ್ ವೈಶಿಷ್ಟ್ಯ!

ಹೆಚ್ಚುವರಿ ಸಲಹೆಗಳು
>> ಫೋನ್ ಸ್ವಿಚ್ ಆಫ್ ಮಾಡಿ ಮತ್ತು ಸಿಮ್ ಕಾರ್ಡ್ ಮತ್ತು ಮೆಮೊರಿ ಕಾರ್ಡ್ ತೆಗೆದು ಇಟ್ಟುಕೊಳ್ಳಿ.
>> ಪೋರ್ಟ್‌ಗಳನ್ನು ಸ್ವಚ್ಛಗೊಳಿಸಿದ ನಂತರ, ಏರ್ ಕಾನ್‌ನಿಂದ ಪೋರ್ಟ್‌ಗಳನ್ನು ಸ್ವಚ್ಛಗೊಳಿಸಿ.
>> ಫೋನ್ ಅನ್ನು ಧೂಳು ಮತ್ತು ಕೊಳೆಯಿಂದ ರಕ್ಷಿಸಲು ಕವರ್ ಬಳಸಿ.
>> ಈ ಸಲಹೆಗಳನ್ನು ಅನುಸರಿಸಿ ನೀವು ಕೆಲವೇ ನಿಮಿಷಗಳಲ್ಲಿ ಗುಲಾಲ್ ಅನ್ನು ನಿಮ್ಮ ಸ್ಮಾರ್ಟ್ ಫೋನ್ ನಿಂದ ಸುಲಭವಾಗಿ ತೆಗೆದು ಹಾಕಬಹುದು. 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News