ಅತಿ ಹೆಚ್ಚು ಮಾರಾಟವಾಗುತ್ತಿರುವ 7 ಸೀಟರ್ ಇದುವೇ! ಇದರ ಬೆಲೆ ಕೇವಲ 5.26 ಲಕ್ಷ

Best Selling 7 Seater:7 ಸೀಟರ್ ಕಾರುಗಳನ್ನು   ಖರೀದಿ ಹೆಚ್ಚುತ್ತಿದೆ.  ಈ ಬಾರಿ ದುಬಾರಿ ಕಾರುಗಕನ್ನು ಹಿಂದಿಕ್ಕಿ ಈ ಅಗ್ಗದ 7 ಸೀಟರ್ ಮಾರಾಟದ ಅಂಕಿ ಅಂಶದಲ್ಲಿ ಮೊದಲ ಸ್ಥಾನಕ್ಕೆ ಏರಿದೆ.   

Written by - Ranjitha R K | Last Updated : Apr 12, 2023, 10:22 AM IST
  • ದೇಶದಲ್ಲಿ 7 ಸೀಟರ್ ಕಾರುಗಳ ಬೇಡಿಕೆ ಹೆಚ್ಚುತ್ತಿದೆ.
  • ಹೊರ ಬಿದ್ದಿದೆ ಮಾರ್ಚ್ ತಿಂಗಳ ಕಾರುಗಳ ಮಾರಾಟದ ಅಂಕಿಅಂಶ
  • ಹೆಚ್ಚು ಮಾರಾಟವಾಗುವ 7 ಸೀಟರ್ ಇದುವೇ
ಅತಿ ಹೆಚ್ಚು ಮಾರಾಟವಾಗುತ್ತಿರುವ 7 ಸೀಟರ್ ಇದುವೇ! ಇದರ ಬೆಲೆ ಕೇವಲ 5.26 ಲಕ್ಷ  title=

Best Selling 7 Seater : ದೇಶದಲ್ಲಿ 7  ಸೀಟರ್ ಕಾರುಗಳ ಬೇಡಿಕೆ ಹೆಚ್ಚುತ್ತಿದೆ. ಮಾರ್ಚ್ ತಿಂಗಳ ಕಾರುಗಳ ಮಾರಾಟದ ಅಂಕಿಅಂಶಗಳು ಹೊರ ಬಂದಿವೆ. ಸಾಮಾನ್ಯವಾಗಿ ಮಾರುತಿ ಎರ್ಟಿಗಾ ಮತ್ತು ಟೊಯೊಟಾ ಇನ್ನೋವಾ ಅತ್ಯಂತ ಜನಪ್ರಿಯ 7 ಸೀಟರ್ MPV ಗಳೆಂದು ಖ್ಯಾತಿ ಪಡೆದಿವೆ. ಆದರೆ, ಈ ಬಾರಿ ಅಗ್ಗದ ಬೆಲೆಯ 7  ಸೀಟರ್ ಈ ಎರಡನ್ನೂ ಹಿಂದಿಕ್ಕಿದೆ.  ವಿಶೇಷವೆಂದರೆ ಈ ಕಾರಿನ ಬೆಲೆ ಕೇವಲ 5.26 ಲಕ್ಷ ರೂಪಾಯಿಗಳು. ಮಾತ್ರವಲ್ಲ ಕೊಡುವ ಮೈಲೇಜ್ ಕೂಡಾ ಅದ್ಭುತ.  

ಹೆಚ್ಚು ಮಾರಾಟವಾಗುವ 7 ಸೀಟರ್ : 
ಮಾರುತಿ ಸುಜುಕಿಯ 7 ಸೀಟರ್ Eecoವನ್ನು  ಮಾರ್ಚ್ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಕಾರು ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.  ಮಾರ್ಚ್ 2023 ರಲ್ಲಿ, Eeco ಮಾರಾಟದಲ್ಲಿ ಮಾರುತಿ ಎರ್ಟಿಗಾ ಮತ್ತು ಟೊಯೋಟಾ ಇನ್ನೋವಾವನ್ನು ಹಿಂದಿಕ್ಕಿದೆ. Eeco ಜನಪ್ರಿಯತೆಯ ಹಿಂದಿನ ರಹಸ್ಯ ಅದರ ಕೈಗೆಟುಕುವ ಬೆಲೆ ಮತ್ತು  ಮೈಲೇಜ್. 

ಇದನ್ನೂ ಓದಿ : Vivo T2 5G Launch: ಅತ್ಯಂತ ಕಡಿಮೆ ಬೆಲೆಗೆ ಅದ್ಭುತ ವೈಶಿಷ್ಟ್ಯವಿರುವ ಸ್ಮಾರ್ಟ್‍ಫೋನ್!

ಮಾರುತಿ ಸುಜುಕಿ ತನ್ನ ಮಾರ್ಚ್ 2023 ರ ಮಾರಾಟದ ಅಂಕಿಅಂಶಗಳನ್ನು ಬಿಡುಗಡೆ ಮಾಡಿದೆ.  ಈ ಅಂಕಿ ಅಂಶದ ಪ್ರಕಾರ  Eecoದ   11,995  ಯೂನಿಟ್ ಗಳು ಮಾರಾಟವಾಗಿವೆ. ಎರ್ಟಿಗಾ 9,028 ಯುನಿಟ್‌ಗಳ ಮಾರಾಟದೊಂದಿಗೆ  ಎರಡನೇ ಸ್ಥಾನದಲ್ಲಿದ್ದರೆ, ಟೊಯೊಟಾ ಇನ್ನೋವಾ 8,075 ಯುನಿಟ್‌ಗಳ ಮಾರಾಟ ಅಂಕಿಅಂಶಗಳೊಂದಿಗೆ ನಂತರದ ಸ್ಥಾನದಲ್ಲಿದೆ. 

ಮಾರುತಿ ಇಕೋ ಬೆಲೆ  :
ಮಾರುತಿ ಇಕೋ ಬೆಲೆ  5.26 ಲಕ್ಷದಿಂದ ಪ್ರಾರಂಭವಾಗಿ 6.53 ಲಕ್ಷದವರೆಗೆ ಏರುತ್ತದೆ. ಮಾರುತಿ ಇದನ್ನು ನಾಲ್ಕು ರೂಪಾಂತರಗಳಲ್ಲಿ  ಬಿಡುಗಡೆ ಮಾಡಿದೆ.  ಫೈವ್ ಸೀಟರ್ ಸ್ಟ್ಯಾಂಡರ್ಡ್ (0), ಫೈವ್ ಸೀಟರ್  AC (0), ಫೈವ್ ಸೀಟರ್  AC CNG (0) ಮತ್ತು  ಸೆವೆನ್ ಸೀಟರ್ ಸ್ಟ್ಯಾಂಡರ್ಡ್ (0). ಇದು 1.2-ಲೀಟರ್ ಪೆಟ್ರೋಲ್ ಎಂಜಿನ್‌ನಿಂದ (81PS/ 104.4Nm) ಪವರ್ ಪಡೆಯುತ್ತದೆ.

ಇದನ್ನೂ ಓದಿ : ಈ ಆರು ಕಾರುಗಳ ದರ ಏರಿಸಿದ ಮಾರುತಿ! ಇಲ್ಲಿದೆ ಹೊಸ ರೇಟ್ ಲಿಸ್ಟ್

ಮಾರುತಿ ಇಕೋ  ವೈಶಿಷ್ಟ್ಯ :
ಇದು ಡಿಜಿಟಲ್ ಸ್ಪೀಡೋಮೀಟರ್, AC ಗಾಗಿ ರೋಟರಿ ಡಯಲ್, ರಿಕ್ಲೈನಿಂಗ್ ಫ್ರಂಟ್ ಸೀಟುಗಳು, ಮ್ಯಾನುವಲ್ AC ಮತ್ತು 12V ಚಾರ್ಜಿಂಗ್ ಸಾಕೆಟ್ ಅನ್ನು ಪಡೆಯುತ್ತದೆ. ಸುರಕ್ಷತೆಗಾಗಿ,  ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ಫ್ರಂಟ್ ಸೀಟ್‌ಬೆಲ್ಟ್  ರಿಮೈಂಡರ್, ಸ್ಪೀಡ್ ಅಲರ್ಟ್ ಮತ್ತು ರಿಯರ್ ಪಾರ್ಕಿಂಗ್ ಸೆನ್ಸಾರ್ ನೊಂದಿಗೆ ಬರುತ್ತದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News