Good News: ವಾಹನ ಪ್ರಿಯರಿಗೆ ಭಾರಿ ಸಂತಸದ ಸುದ್ದಿ ಪ್ರಕಟಿಸಿದ ಕೇಂದ್ರ ಸರ್ಕಾರ!

New Car Tracking System: ದೇಶಾದ್ಯಂತ ವಾರ್ಷಿಕ ವಾಹನ ಕಳ್ಳತನದ ಸಂಖ್ಯೆ 2.5 ಲಕ್ಷಕ್ಕೆ ತಲುಪಿದೆ. ಇಂತಹ ಪರಿಸ್ಥಿತಿಯಲ್ಲಿ, ಸರ್ಕಾರವು ಹೊಸ ಟ್ರ್ಯಾಕಿಂಗ್ ಸಿಸ್ಟಮ್ ಮೇಲೆ ಕಾರ್ಯನಿರ್ವಹಿಸುತ್ತಿದೆ, ಇದರ  ಸಹಾಯದಿಂದ ಕಾರನ್ನು ಕಂಡುಹಿಡಿಯುವುದು ಭಾರಿ ಸುಲಭವಾಗಲಿದೆ ಎನ್ನಲಾಗಿದೆ.   

Written by - Nitin Tabib | Last Updated : Apr 5, 2023, 07:56 PM IST
  • ಪ್ರತಿ ವರ್ಷ ಸರಾಸರಿ ವಾಹನ ಕಳ್ಳತನ ಪ್ರಕರಣಗಳು 3 ದೊಡ್ಡ ರಾಜ್ಯಗಳಿಂದ ವರದಿಯಾಗುತ್ತವೆ.
  • ದೆಹಲಿಯಲ್ಲಿ ಸುಮಾರು 38 ಸಾವಿರ, ಉತ್ತರ ಪ್ರದೇಶದಲ್ಲಿ 34 ಸಾವಿರ,
  • ಮಹಾರಾಷ್ಟ್ರದಲ್ಲಿ ಸುಮಾರು 22 ಸಾವಿರ ವಾಹನಗಳನ್ನು ಕಳವು ಮಾಡಲಾಗಿದೆ.
  • ಈ ಪೈಕಿ ಸುಮಾರು 400 ವಾಹನಗಳನ್ನು ಮಾತ್ರ ಪೊಲೀಸರು ಪತ್ತೆ ಹಚ್ಚಿದ್ದಾರೆ.
Good News: ವಾಹನ ಪ್ರಿಯರಿಗೆ ಭಾರಿ ಸಂತಸದ ಸುದ್ದಿ ಪ್ರಕಟಿಸಿದ ಕೇಂದ್ರ ಸರ್ಕಾರ! title=
ಕಳೆದು ಹೋದ ವಾಹನ ಪತ್ತೆಗೆ ಹೊಸ ಕರಡು ನೀತಿ!

Stolen Car Tracking System: ವಾಹನ ಪ್ರಿಯರಿಗೊಂದು ಸಂತಸದ ಸುದ್ದಿ ಪ್ರಕಟವಾಗಿದೆ. ಇದರಿಂದ ನಿಮ್ಮ 4 ಚಕ್ರದ ಕಾರು ಕಳ್ಳತನವಾದರೆ, ಅದನ್ನು ನೀವು ಇನ್ಮುಂದೆ ಸುಲಭವಾಗಿ ಮರಳಿ ಪಡೆಯಬಹುದು. ಅದೂ ಕೂಡ ಕೇವಲ ಒಂದೇ ಒಂದು ತಂತ್ರಜ್ಞಾನದಿಂದ. ಕೇಂದ್ರ ಸರ್ಕಾರವು ಅಂತಹ ಒಂದು ಟ್ರ್ಯಾಕಿಂಗ್ ವ್ಯವಸ್ಥೆಯ ಮೇಲೆ ಕಾರ್ಯನಿರ್ವಹಿಸುತ್ತಿದೆ, ಇದರ ಸಹಾಯದಿಂದ ನಿಮಗೆ ಕಳ್ಳತನವಾದ ನಿಮ್ಮ ವಾಹನವನ್ನು ಕಂಡುಹಿಡಿಯುವುದು ತುಂಬಾ ಸುಲಭವಾಗಲಿದೆ. ಇದಕ್ಕಾಗಿ ಟೆಲಿಕಾಂ ಸಚಿವಾಲಯ ಕರಡು ಅಧಿಸೂಚನೆಯನ್ನು ಹೊರಡಿಸಿದೆ. ವಾಸ್ತವದಲ್ಲಿ, ಪ್ರತಿ ವರ್ಷ, ವಾಹನ ಕಳ್ಳತನದ ಸರಾಸರಿ ಪ್ರಕರಣಗಳು 3 ದೊಡ್ಡ ರಾಜ್ಯಗಳಿಂದ ಮುಂಚೂಣಿಗೆ ಬರುತ್ತಿವೆ. ದೇಶದಲ್ಲಿ ವಾರ್ಷಿಕ ಸುಮಾರು 2.5 ಲಕ್ಷ ವಾಹನಗಳು ಕಳ್ಳತನವಾಗುತ್ತಿವೆ. ಬನ್ನಿ ಈ ಕುರಿತಾದ ಹೆಚ್ಚಿನ ವಿವರ ತಿಳಿದುಕೊಳ್ಳೋಣ, 

ವರ್ಷಕ್ಕೆ ಎಷ್ಟೋ ವಾಹನಗಳು ಕಳ್ಳತನವಾಗುತ್ತಿವೆ
ಪ್ರತಿ ವರ್ಷ ಸರಾಸರಿ ವಾಹನ ಕಳ್ಳತನ ಪ್ರಕರಣಗಳು 3 ದೊಡ್ಡ ರಾಜ್ಯಗಳಿಂದ ವರದಿಯಾಗುತ್ತವೆ. ದೆಹಲಿಯಲ್ಲಿ ಸುಮಾರು 38 ಸಾವಿರ, ಉತ್ತರ ಪ್ರದೇಶದಲ್ಲಿ 34 ಸಾವಿರ, ಮಹಾರಾಷ್ಟ್ರದಲ್ಲಿ ಸುಮಾರು 22 ಸಾವಿರ ವಾಹನಗಳನ್ನು ಕಳವು ಮಾಡಲಾಗಿದೆ. ಈ ಪೈಕಿ ಸುಮಾರು 400 ವಾಹನಗಳನ್ನು ಮಾತ್ರ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಸರ್ಕಾರ ಅತ್ಯಾಧುನಿಕ ತಂತ್ರಜ್ಞಾನವನ್ನು ತರುತ್ತಿದೆ
ದೇಶಾದ್ಯಂತ ವಾರ್ಷಿಕ ವಾಹನ ಕಳ್ಳತನದ ದಾಖಲೆ ಸುಮಾರು 2.5 ಲಕ್ಷಗಳಷ್ಟಾಗಿದೆ. ಹೈ ಸೆಕ್ಯುರಿಟಿ ನಂಬರ್ ಪ್ಲೇಟ್ ಗಳು, ಕಳ್ಳತನ ತಡೆ ಸಾಧನಗಳು ಎಷ್ಟೇ ಪ್ರಯತ್ನ ಪಟ್ಟರೂ ವಾಹನ ಕಳ್ಳತನದ ಘಟನೆಗಳು ನಿಯಂತ್ರಣಕ್ಕೆ ಬರುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಹೊಸ ಮತ್ತು ಸುಧಾರಿತ ತಂತ್ರಜ್ಞಾನವನ್ನು ತರಲು ಸರ್ಕಾರ ಸಿದ್ಧತೆ ನಡೆಸಿದೆ. ಇದಕ್ಕಾಗಿ ಸರ್ಕಾರ ವಾಹನಗಳಿಗೆ ಹೊಸ ಟ್ರ್ಯಾಕಿಂಗ್ ವ್ಯವಸ್ಥೆಯನ್ನು ಸಿದ್ಧಪಡಿಸುತ್ತಿದ್ದು, ಇದರ ನೆರವಿನಿಂದ ಕದ್ದ ವಾಹನವನ್ನು ಪತ್ತೆ ಹಚ್ಚುವುದು ಸುಲಭವಾಗಲಿದ್ದು, ಕಳ್ಳರು ಪೊಲೀಸರ ಕೈಗೆ ಸಿಕ್ಕಿಬೀಳಲಿದ್ದಾರೆ.

ಮಧ್ಯಸ್ಥಗಾರರಿಂದ ಉತ್ತರಗಳನ್ನು ಕೇಳಲಾಗುವುದು
ನ್ಯಾಷನಲ್ ಸೆಂಟರ್ ಫಾರ್ ಕಮ್ಯುನಿಕೇಷನ್ ಸೆಕ್ಯುರಿಟಿ (NCCS) ವಾಹನ ಟ್ರ್ಯಾಕಿಂಗ್ ಸಾಧನಕ್ಕಾಗಿ ಭಾರತೀಯ ದೂರಸಂಪರ್ಕ ಭದ್ರತಾ ಭರವಸೆಯ (ITSAR) ಕರಡನ್ನು ಬಿಡುಗಡೆ ಮಾಡಿದೆ. ಏಪ್ರಿಲ್ 21 ರವರೆಗೆ ಎಲ್ಲಾ ಮಧ್ಯಸ್ಥಗಾರರಿಂದ ಇದಕ್ಕಾಗಿ ಸಲಹೆಗಳನ್ನು ಕೋರಲಾಗಿದೆ. ಸಾಧನ ತಯಾರಕರು, ಅಪ್ಲಿಕೇಶನ್ ಸೇವಾ ಪೂರೈಕೆದಾರರು, ಉದ್ಯಮ ಸಂಸ್ಥೆಗಳು ಮತ್ತು ತಜ್ಞರು ಸೇರಿದಂತೆ ಎಲ್ಲಾ ಮಧ್ಯಸ್ಥಗಾರರಿಂದ ಸಲಹೆಗಳನ್ನು ಪಡೆಯಲಾಗುತ್ತಿದೆ ಎನ್ನಲಾಗಿದೆ.

ಫಾಸ್ಟ್ ಟ್ರ್ಯಾಕಿಂಗ್ ಸಿಸ್ಟಮ್ ಏಕೆ ಬೇಕು?
ಪೊಲೀಸರು ವರದಿ ದಾಖಲಿಸಿಕೊಂಡು ಕದ್ದ ವಾಹನಗಳ ಪತ್ತೆ ಕಾರ್ಯ ಆರಂಭಿಸುವಷ್ಟರಲ್ಲಿ  ವಾಹನದ ಭಾಗಗಳನ್ನು ಕಳ್ಳರು ಮಾರಾಟ ಮಾಡುತ್ತಿದ್ದಾರೆ. NCCS ನ ಪ್ರಸ್ತಾವಿತ ಕರಡು ಪ್ರಕಾರ, ಹೊಸ ವಾಹನ ಟ್ರ್ಯಾಕಿಂಗ್ ಸಾಧನವು ಗ್ಲೋಬಲ್ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಮ್ (GNSS) ಅನ್ನು ಬಳಸುತ್ತದೆ ಮತ್ತು ಡಿಜಿಟಲ್ ನಕ್ಷೆಯೊಂದಿಗೆ ಎಲ್ಲಾ ಸಮಯದಲ್ಲೂ ವಾಹನದ ಸ್ಥಳದ ಬಗ್ಗೆ ನೈಜ-ಸಮಯದ ಮಾಹಿತಿಯನ್ನು ಒದಗಿಸುತ್ತದೆ.

ಸುಧಾರಿತ ತಂತ್ರಜ್ಞಾನ ಬೇಕೇ?
ಈ ತಂತ್ರಜ್ಞಾನವು ಖಾಸಗಿ ಮತ್ತು ಸಾರ್ವಜನಿಕ ವಾಹನಗಳಿಗೆ ಹೆಚ್ಚು ಉಪಯುಕ್ತವಾಗಲಿದೆ.

ಇದನ್ನೂ ಓದಿ-Kia EV6: 708 ಕಿ.ಮೀ ರೇಂಜ್ ಇರುವ ಇಲೆಕ್ಟ್ರಿಕ್ ಕಾರು ಖರೀದಿಸಬೇಕೆ? ಈ ದಿನದಿಂದ ಆರಂಭವಾಗಲಿದೆ ಬುಕಿಂಗ್!

ಪ್ರಸ್ತುತ ಕ್ರಮಗಳು ಸಾಕಾಗುವುದಿಲ್ಲ
>> ಹೊಸ ವ್ಯವಸ್ಥೆಯು ಸ್ವಯಂಚಾಲಿತ ಟ್ರ್ಯಾಕಿಂಗ್ ಸಾಧನ ಸಂಯೋಜಿತ ತುರ್ತು ವ್ಯವಸ್ಥೆಯನ್ನು ಹೊಂದಿರುತ್ತದೆ.
>> ಇದು ನೆಟ್‌ವರ್ಕ್ ಸಂವಹನ ಕೇಂದ್ರಕ್ಕೆ ಸಂಪರ್ಕಗೊಂಡಿರುವ ವಾಹನದಲ್ಲಿ ಸಾಧನವನ್ನು ಸ್ಥಾಪಿಸುತ್ತದೆ
>> ಕೇಂದ್ರವು ನೈಜ ಸಮಯದ ಆಧಾರದ ಮೇಲೆ ವಾಹನದ ಸ್ಥಾನ, ಅದರ ದಿಕ್ಕಿನ ಬಗ್ಗೆ ಮಾಹಿತಿಯನ್ನು ಪೇದುಕೊಳ್ಳಲಿದೆ.
>> ವಾಹನ ಕಳವಾದ ನಂತರ ಕಳ್ಳರು ಯಾವ ದಿಕ್ಕಿನಲ್ಲಿ ತೆಗೆದುಕೊಂಡು ಹೋಗುತ್ತಿದ್ದಾರೆ, ಎಲ್ಲಿ ಕದ್ದು ಬಚ್ಚಿಟ್ಟಿದ್ದಾರೆ ಎಂಬೆಲ್ಲ ಮಾಹಿತಿ ಇದರಿಂದ ಸಿಗಲಿದೆ.
>> ಸಾಧನಕ್ಕೆ ಸಂಪರ್ಕಗೊಂಡಿರುವ ಅಪ್ಲಿಕೇಶನ್‌ನಲ್ಲಿ ತುರ್ತು ಬಟನ್ ಸಹ ಇರಲಿದೆ, ಅದನ್ನು ಒತ್ತಿದಾಗ, ವಾಹನದ ಸ್ಥಿತಿಯ ಕುರಿತು ರಾಷ್ಟ್ರೀಯ ನೆಟ್‌ವರ್ಕ್ ಸಂವಹನ ಕೇಂದ್ರಕ್ಕೆ ಎಚ್ಚರಿಕೆಯನ್ನು ಕಳುಹಿಸಲಾಗುತ್ತದೆ.
>> ಅಸ್ತಿತ್ವದಲ್ಲಿರುವ ವಾಹನ ಟ್ರ್ಯಾಕಿಂಗ್ ಸಾಧನಗಳು ವಾಹನದ ಸ್ಥಾನವನ್ನು ನೈಜ ಸಮಯದಲ್ಲಿ ಟ್ರ್ಯಾಕ್ ಮಾಡಲು ಸಾಧ್ಯವಾಗುತ್ತದೆ, ಆದರೆ ಮಾಹಿತಿಯು ವಾಹನ ಮಾಲೀಕರಿಗೆ ಸೀಮಿತವಾಗಿರುತ್ತದೆ.
>> ಉದ್ದೇಶಿತ ಟ್ರ್ಯಾಕಿಂಗ್ ವ್ಯವಸ್ಥೆಯನ್ನು ರಾಷ್ಟ್ರೀಯ ಸಂವಹನ ಕೇಂದ್ರಕ್ಕೆ ಸಂಪರ್ಕಿಸಲಾಗುತ್ತದೆ.

ಇದನ್ನೂ ಓದಿ-Romance In Space: ಬಾಹ್ಯಾಕಾಶದಲ್ಲಿ ಸೆಕ್ಸ್! ಟಿಕೆಟ್ ಬುಕ್ಕಿಂಗ್ ಆರಂಭ.. ಟಿಕೆಟ್ ಬೆಲೆ ಎಷ್ಟು ಗೊತ್ತಾ?

ಟ್ರ್ಯಾಕಿಂಗ್ ವ್ಯವಸ್ಥೆಯು ಈ ವೈಶಿಷ್ಟ್ಯಗಳೊಂದಿಗೆ ಸುಸಜ್ಜಿತವಾಗಿರುತ್ತದೆ
ಉದ್ದೇಶಿತ ಸಾಧನದಲ್ಲಿ ಟ್ರ್ಯಾಕಿಂಗ್ ಮಾಹಿತಿಯನ್ನು ಸ್ವಲ್ಪ ಸಮಯದವರೆಗೆ ಸಂಗ್ರಹಿಸಬಹುದು, ಅದನ್ನು ಭವಿಷ್ಯದಲ್ಲಿ ಡೌನ್‌ಲೋಡ್ ಮಾಡಬಹುದು. ಅದು ವಿಶ್ಲೇಷಣೆಗೆ ಸಹಾಯ ಮಾಡುತ್ತದೆ.ಟ್ರ್ಯಾಕಿಂಗ್ ಸಾಧನವು ವಾಹನದ ಸ್ಥಾನ, ಇಂಧನ ಮಟ್ಟ, ವೇಗ ಇತ್ಯಾದಿಗಳನ್ನು ಟ್ರ್ಯಾಕ್ ಮಾಡುತ್ತದೆ. ಇದು GPS ಅಂದರೆ ಗ್ಲೋಬಲ್ ಪೊಸಿಷನಿಂಗ್ ಸಿಸ್ಟಮ್ ಅನ್ನು ಬಳಸುತ್ತದೆ ಮತ್ತು ಸೆಲ್ಯುಲಾರ್ ನೆಟ್‌ವರ್ಕ್ ಅಥವಾ ವೈರ್‌ಲೆಸ್ ಮೂಲಕ ಡೇಟಾವನ್ನು ಸಂಗ್ರಹಿಸುತ್ತದೆ ಮತ್ತು ರವಾನಿಸುತ್ತದೆ. ನೆಟ್‌ವರ್ಕ್ ಪೂರೈಕೆದಾರರ ಮೂಲಕ, ಡೇಟಾವು ಸರ್ವರ್‌ಗೆ ಹೋಗುತ್ತದೆ ಮತ್ತು ವಾಹನ ಮಾಲೀಕರು ಸೇರಿದಂತೆ, ಈ ಮಾಹಿತಿಯು ರಾಷ್ಟ್ರೀಯ ಸಂವಹನ ಕೇಂದ್ರಕ್ಕೂ ತಲುಪಲಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News