Google To Shut Down Important Service: 16 ವರ್ಷಗಳ ಬಳಿಕ Googleನ ಈ ವಿಶೇಷ ಸೇವೆ ಸ್ಥಗಿತಗೊಳ್ಳುತ್ತಿದೆ, ಸೆ. 30ರೊಳಗೆ ಸುರಕ್ಷಿತವಾಗಿಸಿ ನಿಮ್ಮ ಡೇಟಾ

Google To Shut Down Important Service - Google ಬಳಕೆದಾರರಿಗೊಂದು ಮಹತ್ವದ ಸುದ್ದಿ ಪ್ರಕಟವಾಗಿದೆ. ವಾಸ್ತವದಲ್ಲಿ Google, 16 ವರ್ಷಗಳ ಬಳಿಕ ತನ್ನ ಸೇವೆಯೊಂದನ್ನು ಸ್ಥಗಿತಗೊಳಿಸುತ್ತಿದೆ. ಹೌದು, ಗೂಗಲ್ ತನ್ನ Google Bookmark ಸೇವೆಯನ್ನು ಸ್ಥಗಿತಗೊಳಿಸುವ ನಿರ್ಧಾರ ಕೈಗೊಂಡಿದೆ. 

Written by - Nitin Tabib | Last Updated : Jul 21, 2021, 06:24 PM IST
  • 16 ವರ್ಷಗಳ ಬಳಿಕ ಗೂಗಲ್ ತನ್ನ ಈ ಸೇವೆಯನ್ನು ಸ್ಥಗಿತಗೊಳಿಸುತ್ತಿದೆ.
  • ಸೆಪ್ಟೆಂಬರ್ 30ರ ಬಳಿಕೆ ಗೂಗಲ್ ನ ಈ ಸೇವೆ ಇರುವುದಿಲ್ಲ.
  • ಹೀಗಾಗಿ ಬಳಕೆದಾರರು ಸೆಪ್ಟೆಂಬರ್ 30ರೊಳಗೆ ತಮ್ಮ ಡೇಟಾ ಸುರಕ್ಷಿತವಾಗಿಸಬೇಕಾಗಲಿದೆ.
Google To Shut Down Important Service: 16 ವರ್ಷಗಳ ಬಳಿಕ Googleನ ಈ ವಿಶೇಷ ಸೇವೆ ಸ್ಥಗಿತಗೊಳ್ಳುತ್ತಿದೆ, ಸೆ. 30ರೊಳಗೆ ಸುರಕ್ಷಿತವಾಗಿಸಿ ನಿಮ್ಮ ಡೇಟಾ title=
Google To Shut Down Important Service (File Photo)

Google To Shut Down Important Service - Google ಬಳಕೆದಾರರಿಗೊಂದು ಮಹತ್ವದ ಸುದ್ದಿ ಪ್ರಕಟವಾಗಿದೆ. ವಾಸ್ತವದಲ್ಲಿ Google, 16 ವರ್ಷಗಳ ಬಳಿಕ ತನ್ನ ಸೇವೆಯೊಂದನ್ನು ಸ್ಥಗಿತಗೊಳಿಸುತ್ತಿದೆ. ಹೌದು, ಗೂಗಲ್ ತನ್ನ Google Bookmark ಸೇವೆಯನ್ನು ಸ್ಥಗಿತಗೊಳಿಸುವ ನಿರ್ಧಾರ ಕೈಗೊಂಡಿದೆ. ಹೀಗಿರುವಾಗ Google Chrome ಮೇಲೆ ಸಿಗುವ ಈ ಸೇವೆ 30 ಸೆಪ್ಟೆಂಬರ್ 2021ರಿಂದ ಸಂಪೂರ್ಣ ಸ್ಥಗಿತಗೊಳ್ಳಲಿದೆ. ಇದೆ ಕಾರಣದಿಂದ ಗೂಗಲ್ ಕ್ರೋಮ್ ಬಳಕೆದಾರರು ತಾವು ಬುಕ್ ಮಾರ್ಕ್ ರೂಪದಲ್ಲಿ ಸಂಗ್ರಹಿಸಿಟ್ಟುಕೊಂಡ ದತ್ತಾಂಶವನ್ನು ಬೇರೆಡೆಗೆ ಸುರಕ್ಷಿತವಾಗಿರಿಸಬೇಕಾಗಲಿದೆ. ಒಂದು ವೇಳೆ ಇದನ್ನು ನೀವು ಮಾಡದೆ ಹೋದಲ್ಲೆ ಸೆಪ್ಟೆಂಬರ್ 30ರ ಬಳಿಕ Google Bookmarks ಡೇಟಾ ಡಿಲೀಟ್ ಆಗಲಿದೆ. ಈ ಕುರಿತು ಘೋಷಿಸಿರುವ ಗೂಗಲ್ ಸೆಪ್ಟೆಂಬರ್ 30ರ ಬಳಿಕ Google Bookmarks ಪೇಜ್ ಸಪೋರ್ಟ್ ಸಂಪೂರ್ಣ ಸ್ಥಗಿತಗೊಳ್ಳಲಿದೆ.

ಇದನ್ನೂ ಓದಿ-Reliance Jio ಅತ್ಯಂತ ಅಗ್ಗದ ಪ್ಲಾನ್, ಕೇವಲ 200 ರೂ.ಗಳಿಗೆ 1000GB ಡೇಟಾ, ಅನಿಯಮಿತ ಕರೆ

Google Bookmarks ದತ್ತಾಂಶ ಈ ರೀತಿ ಸುರಕ್ಷಿತವಾಗಿರಿಸಿ
>> Google Bookmarks ಬಳಕೆ ಮಾಡುವ ಬಳಕೆದಾರರು Google.com/bookmarks ಲಿಂಕ್ ಮೇಲೆ ಕ್ಲಿಕ್ಕಿಸಬೇಕು.
>> ಇಲ್ಲಿ ನಿಮಗೆ Export Bookmarks ಆಯ್ಕೆ ಕಾಣಿಸಲಿದೆ, ಅದರ ಮೇಲೆ ಕ್ಲಿಕ್ಕಿಸಿ.
>> ಈಗ ನಿಮ್ಮ Google Bookamrks ದತ್ತಾಂಶದ ಕಾಪಿ ರೆಡಿಯಾಗಲಿದೆ. ಇದನ್ನು ನೀವು ಬೇರೆಡೆ ಸಂಗ್ರಹಿಸಿಟ್ಟುಕೊಳ್ಳಬಹುದು.

ಇದನ್ನೂ ಓದಿ-whatsapp photoಗಳಿಂದ ತುಂಬಿ ಹೋಗಿದೆಯಾ ನಿಮ್ಮ ಫೋನ್ ? ಹಾಗಿದ್ದರೆ ಈ ಟ್ರಿಕ್ ಬಳಸಿ

Google Bookmarks ಸೇವೆ ಸ್ಥಗಿತಗೊಳ್ಳುವ ಕಾರಣ
9to5Google ವರದಿಯ ಪ್ರಕಾರ, Google ತನ್ನ Google Bookmarks ಸೇವೆ ಸ್ಥಗಿತಗೊಳಿಸುವ ನಿರ್ಣಯ ಕೈಗೊಳ್ಳಲಾಗಿದೆ ಎನ್ನಲಾಗಿದೆ. ಈ ಸೇವೆ ಹೆಚ್ಚು ಪಾಪ್ಯೂಲರ್ ಆಗದೆ ಇರುವ ಕಾರಣ ಇದನ್ನು ಸ್ಥಗಿತಗೊಳಿಸಲಾಗುತ್ತಿದೆ ಎನ್ನಲಾಗಿದೆ. ಗೂಗಲ್ ನ ಈ ಸೇವೆ ಸ್ಥಗಿತಗೊಲ್ಲುವುದರಿಂದ Googleನ ಇತರೆ ಸೇವೆಗಳಾಗಿರುವ Google Maps ಪ್ರಭಾವಕ್ಕೆ ಒಳಗಾಗಲಿದೆ. Google Maps ಬಳಕೆದಾರರ ಸೇವ್ ಲೊಕೇಶನ್ ಕೂಡ Google Bookmarks ಸೇವೆ ಸ್ಥಗಿತಗೊಳ್ಳುವುದರಿಂದ ಡಿಲೀಟ್ ಆಗಲಿದೆ. ಏಕೆಂದರೆ ಈ ಎರಡೂ ಆಪ್ ಗಳ ದತ್ತಾಂಶ ಒಂದೇ ಜಾಗದಲ್ಲಿ ಸಂಗ್ರಹವಾಗುತ್ತದೆ. Google Mapsನ ಲೋಕೇಶನ್ ಸೇವ್ ಆಗುವುದರಿಂದ ಬಳಕೆದಾರರಿಗೆ ನಿರ್ಧಿಷ್ಟ ಜಾಗದ ಹುಡುಕಾಟಕ್ಕೆ ಅನುಕೂಲವಾಗಲಿದೆ.

ಇದನ್ನೂ ಓದಿ-WhatsApp- ನಿಮ್ಮ ಫೋನ್ ಕಳುವಾಗಿದೆಯೇ? ಈ ಟ್ರಿಕ್‌ನೊಂದಿಗೆ ನಿಮ್ಮ ವಾಟ್ಸಾಪ್ ಖಾತೆಯನ್ನು ರಕ್ಷಿಸಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News