ಬಳಕೆದಾರರಿಗೆ Google ಶಾಕ್!: ಶೀಘ್ರವೇ ನಿಲ್ಲಲಿದೆ ಈ ಪ್ರಮುಖ ಸೇವೆ

ಫೆಬ್ರವರಿಯಲ್ಲಿ Google ಬಳಕೆದಾರರಿಗಾಗಿ Hangouts ಅಪ್ಲಿಕೇಶನ್ ಅನ್ನು ಹೊಸ Google Chat ನೊಂದಿಗೆ ಬದಲಾಯಿಸಿತು. ನವೆಂಬರ್ 2022ರಲ್ಲಿ Hangoutsನ್ನು ಸಂಪೂರ್ಣವಾಗಿ ಕ್ಲೋಸ್ ಮಾಡಲಾಗುವುದೆಂದು Google ಹೇಳಿಕೊಂಡಿದೆ.

Written by - Puttaraj K Alur | Last Updated : Jun 28, 2022, 05:29 PM IST
  • ಕೋಟ್ಯಂತರ ಬಳಕೆದಾರರಿಗೆ ಸಾಕಿಂಗ್ ನ್ಯೂಸ್ ನೀಡಿದ ಟೆಕ್ ದೈತ್ಯ ಗೂಗಲ್
  • ಶೀಘ್ರವೇ ಸಂಪೂರ್ಣವಾಗಿ ಕ್ಲೋಸ್ ಆಗಲಿದೆ ಗೂಗಲ್‍ನ ಈ ಪ್ರಮುಖ ಸೇವೆ
  • ಈ ವರ್ಷದ ಅಂತ್ಯದ ವೇಳೆಗೆ ಸ್ಥಗಿತಗೊಳ್ಳಲಿರುವ ಗೂಗಲ್ Hangouts
ಬಳಕೆದಾರರಿಗೆ Google ಶಾಕ್!: ಶೀಘ್ರವೇ ನಿಲ್ಲಲಿದೆ ಈ ಪ್ರಮುಖ ಸೇವೆ title=
ಸ್ಥಗಿತಗೊಳ್ಳಲಿರುವ ಗೂಗಲ್ Hangouts

ನವದೆಹಲಿ: ಫೆಬ್ರವರಿ ತಿಂಗಳಿನಲ್ಲಿ Google ಬಳಕೆದಾರರಿಗಾಗಿ Hangouts ಅಪ್ಲಿಕೇಶನ್ ಅನ್ನು ಹೊಸ Google Chatನೊಂದಿಗೆ ಬದಲಾಯಿಸಿತು. ಕಂಪನಿಯು ಈ ವರ್ಷದ ಅಂತ್ಯದ ವೇಳೆಗೆ ಹಳೆಯ Hangouts ಅನ್ನು ಸಂಪೂರ್ಣವಾಗಿ ಕ್ಲೋಸ್ ಮಾಡಲು ಸಿದ್ಧವಾಗಿದೆ. ಬಳಿಕ ಪ್ಲಾಟ್‌ಫಾರ್ಮ್‌ನ ಎಲ್ಲಾ ಬಳಕೆದಾರರನ್ನು Google Chatಗೆ ಕರೆದೊಯ್ಯುವುದು ಗೂಗಲ್‍ನ ಉದ್ದೇಶವಾಗಿದೆ. 2022ರ ನವೆಂಬರ್ ನಲ್ಲಿ Hangoutsನ್ನು ಸಂಪೂರ್ಣವಾಗಿ ಕ್ಲೋಸ್ ಮಾಡಲಾಗುವುದು. ಇದಕ್ಕೂ ಮೊದಲು ಡೆಸ್ಕ್‌ಟಾಪ್ ಮತ್ತು ಮೊಬೈಲ್‌ ಬಳಕೆದಾರರನ್ನು Google Chatಗೆ ಸ್ಥಳಾಂತರವಾಗುವಂತೆ ಕೋರಲಾಗುತ್ತದೆ ಎಂದು Google ಹೊಸ ಬ್ಲಾಗ್ ಪೋಸ್ಟ್‌ನಲ್ಲಿ ಬಹಿರಂಗಪಡಿಸಿದೆ.

ಡೇಟಾ ಡೌನ್‌ಲೋಡ್ ಮಾಡಬಹುದು

Hangouts ಪ್ಲಾಟ್‌ಫಾರ್ಮ್‌ನಿಂದ ಚಾಟ್ ಡೇಟಾವು Google Chatನಲ್ಲಿ ಸ್ವಯಂಚಾಲಿತವಾಗಿ ಲಭ್ಯವಿರುತ್ತದೆ. ಪ್ಲಾಟ್‌ಫಾರ್ಮ್ ಅವಧಿ ಮುಗಿಯುವ ಮೊದಲು ಬಳಕೆದಾರರು ತಮ್ಮ ಎಲ್ಲಾ Hangouts ಡೇಟಾವನ್ನು ಡೌನ್‌ಲೋಡ್ ಮಾಡುವ ಆಯ್ಕೆಯನ್ನು ಸಹ ಹೊಂದಿರುತ್ತಾರೆ.

ಇದನ್ನೂ ಓದಿ: ನೋಕಿಯಾಗೆ ಟಕ್ಕರ್ ನೀಡಿದ ಕ್ಯೂಬಾಟ್ ಪಾಕೆಟ್ ಮಿನಿ- ಇದರ ಬೆಲೆ, ವೈಶಿಷ್ಟ್ಯ

ಗೂಗಲ್ ಪೋಸ್ಟ್ ನಲ್ಲಿ ಏನಿದೆ..?

ಗೂಗಲ್ ಮಾಡಿರುವ ಪೋಸ್ಟ್‌ನಲ್ಲಿ, ‘ಇಂದಿನಿಂದ ಮೊಬೈಲ್‌ನಲ್ಲಿ ಹ್ಯಾಂಗ್‌ಔಟ್‌ಗಳನ್ನು ಬಳಸುವ ಜನರು ಚಾಟ್‌ಗೆ ಹೋಗಲು ಅಥವಾ ಜಿಮೇಲ್‌ನಲ್ಲಿರುವ ಚಾಟ್ ಅಪ್ಲಿಕೇಶನ್‌ಗೆ ಹೋಗಲು in-app screenನ್ನು ಕಾಣುತ್ತಾರೆ. ಅಂತೆಯೇ Hangouts Chrome ವಿಸ್ತರಣೆಯನ್ನು ಬಳಸುವ ಜನರನ್ನು ವೆಬ್‌ನಲ್ಲಿ ಚಾಟ್ ನಮೂದಿಸಲು ಅಥವಾ ಚಾಟ್ ವೆಬ್ ಅಪ್ಲಿಕೇಶನ್ ಅನ್ನು ಸ್ಥಾಪಿಸಲು ಕೇಳಲಾಗುತ್ತದೆ. ಜುಲೈನಲ್ಲಿ ವೆಬ್‌ನ Gmailನಲ್ಲಿ Hangouts ಬಳಸುವ ಜನರನ್ನು Gmailನ Chatಗೆ ಅಪ್‌ಗ್ರೇಡ್ ಮಾಡಲಾಗುತ್ತದೆ ಎಂದು ಗೂಗಲ್ ತನ್ನ ಪೋಸ್ಟ್ ನಲ್ಲಿ ಹೇಳಿಕೊಂಡಿದೆ.

Google Chatನ್ನು ವೆಬ್‌ಗೆ ಮರುನಿರ್ದೇಶಿಸಲಾಗುತ್ತದೆ

Hangouts ಬಳಕೆದಾರರು Hangouts ವೆಬ್ ಅನ್ನು ತೆಗೆದುಹಾಕುವ ಕನಿಷ್ಠ 1 ತಿಂಗಳ ಮೊದಲು ಉತ್ಪನ್ನದಲ್ಲಿನ ಸೂಚನೆಯನ್ನು ಸಹ ನೋಡುತ್ತಾರೆ. ಇದರ ನಂತರ Hangouts ವೆಬ್ ಸ್ವಯಂಚಾಲಿತವಾಗಿ Google Chat ವೆಬ್‌ಗೆ ಸಂದರ್ಶಕರನ್ನು ಮರುನಿರ್ದೇಶಿಸಲು ಪ್ರಾರಂಭಿಸುತ್ತದೆ.

ಇದನ್ನೂ ಓದಿ: ಹಳೆ ಎಸಿ ಕೊಟ್ಟು ಹೊಸದನ್ನು ಪಡೆಯಿರಿ .! ಈ ವಿದ್ಯುಚ್ಛಕ್ತಿ ಕಂಪನಿಯು ನೀಡುತ್ತಿದೆ ಭಾರೀ ಆಫರ್

2013ರಲ್ಲಿ Hangouts ಪರಿಚಯಿಸಿದ್ದ ಗೂಗಲ್

2013ರಲ್ಲಿ ಗೂಗಲ್ Hangoutsನ್ನು ಬಳಕೆದಾರರಿಗೆ ಪರಿಚಯಿಸಿತ್ತು. ಇದನ್ನು GChatನ ಬದಲಿ ಉತ್ಪನ್ನವಾಗಿ ಗೂಗಲ್ ಪರಿಚಯಿಸಿತ್ತು. ಮೂಲ GChat ಅಥವಾ Google Talkನ್ನು ಈ ತಿಂಗಳ ಆರಂಭದಲ್ಲಿ ಕ್ಲೋಸ್ ಮಾಡಲಾಗಿತ್ತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News