Google Safe Browsing page: ಆಂಡ್ರಾಯ್ಡ್ ಬಳಕೆದಾರರಿಗೆ ಗುಡ್ ನ್ಯೂಸ್: ಈಗ ಮೊದಲಿಗಿಂತಲೂ ಸ್ಟ್ರಾಂಗ್ ಆಗಿರಲಿದೆ ಭದ್ರತೆ

Google Android Safe Browsing: ಗೂಗಲ್ ಆಂಡ್ರಾಯ್ಡ್ ಬಳಕೆದಾರರಿಗಾಗಿ ಸೇಫ್ ಬ್ರೌಸಿಂಗ್ ಪುಟವನ್ನು ಹೊರತರಲು ಪ್ರಾರಂಭಿಸಿದೆ.  ಲಭ್ಯವಿರುವ ಮಾಹಿತಿಗಳ ಪ್ರಕಾರ, ಗೂಗಲ್ ಪಿಕ್ಸೆಲ್ ಮತ್ತು ಸ್ಯಾಮ್‌ಸಂಗ್ ಗ್ಯಾಲಕ್ಸಿ ಸ್ಮಾರ್ಟ್‌ಫೋನ್‌ಗಳಲ್ಲಿ ಈ ವೈಶಿಷ್ಟ್ಯವನ್ನು ಗುರುತಿಸಲಾಗಿದೆ. 

Written by - Yashaswini V | Last Updated : Feb 15, 2024, 01:38 PM IST
  • ಆಂಡ್ರಾಯ್ಡ್ ಸೇಫ್ ಬ್ರೌಸಿಂಗ್ ಪೇಜ್ ಉದ್ದೇಶವು ಬಳಕೆದಾರರಿಗೆ ಸುರಕ್ಷಿತ ಬ್ರೌಸಿಂಗ್ ಅನುಭವವನ್ನು ಒದಗಿಸುವುದು.
  • ಈ ಪುಟವು ಭದ್ರತಾ ಬೆದರಿಕೆಗಳು, ಹಾನಿಕಾರಕ ಲಿಂಕ್‌ಗಳು ಮತ್ತು ವೆಬ್‌ಪುಟಗಳು ಇತ್ಯಾದಿಗಳಿಂದ ಬಳಕೆದಾರರನ್ನು ರಕ್ಷಿಸುತ್ತದೆ.
Google Safe Browsing page: ಆಂಡ್ರಾಯ್ಡ್ ಬಳಕೆದಾರರಿಗೆ ಗುಡ್ ನ್ಯೂಸ್: ಈಗ ಮೊದಲಿಗಿಂತಲೂ ಸ್ಟ್ರಾಂಗ್ ಆಗಿರಲಿದೆ ಭದ್ರತೆ  title=

Google Safe Browsing page For Android: ಆಂಡ್ರಾಯ್ಡ್ ಬಳಕೆದಾರರಿಗಾಗಿ ಗೂಗಲ್ 'ಆಂಡ್ರಾಯ್ಡ್ ಸೇಫ್ ಬ್ರೌಸಿಂಗ್' ಹೆಸರಿನ ಹೊಸ ಸುರಕ್ಷತಾ ಪುಟವನ್ನು ಪರಿಚಯಿಸಿದೆ. ಈ ಪುಟದಲ್ಲಿನ ಮಾಹಿತಿಯು ಇತ್ತೀಚಿನ ಸೋರಿಕೆಯ ಮೂಲಕ ಬೆಳಕಿಗೆ ಬಂದಿದೆ.

ಲಭ್ಯವಿರುವ ಮಾಹಿತಿಗಳ ಪ್ರಕಾರ, ಆಂಡ್ರಾಯ್ಡ್ ಸೇಫ್ ಬ್ರೌಸಿಂಗ್ ಪೇಜ್, Android ಬಳಕೆದಾರರಿಗೆ Google ನಲ್ಲಿ ಸುರಕ್ಷಿತ ಬ್ರೌಸಿಂಗ್ ಅನುಭವವನ್ನು ಒದಗಿಸುತ್ತದೆ. ಇದಲ್ಲದೆ, ಈ ವೈಶಿಷ್ಟ್ಯವು ನಕಲಿ ಮತ್ತು ದುರುದ್ದೇಶಪೂರಿತ ಲಿಂಕ್‌ಗಳ ಬಗ್ಗೆ ಅವರಿಗೆ ಎಚ್ಚರಿಕೆ ನೀಡುತ್ತದೆ ಎಂದು ತಿಳಿದುಬಂದಿದೆ. 

ಪ್ರಸ್ತುತ, ಈ ಗೂಗಲ್ ಪರಿಚಯಿಸಿರುವ ಈ ಹೊಸ ವೈಶಿಷ್ಟ್ಯವು ಗೂಗಲ್ ಪಿಕ್ಸೆಲ್ ಮತ್ತು ಸ್ಯಾಮ್‌ಸಂಗ್ ಗ್ಯಾಲಕ್ಸಿ ಸ್ಮಾರ್ಟ್‌ಫೋನ್‌ಗಳಲ್ಲಿ ಕಂಡು ಬಂದಿದೆ. ಮುಂಬರುವ ಸಮಯದಲ್ಲಿ ಇತರ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಿಗೂ ಈ ವೈಶಿಷ್ಟ್ಯವನ್ನು ಹೊರತರಲಾಗುವುದು ಎಂದು ನಂಬಲಾಗಿದೆ.  

ಇದನ್ನೂ ಓದಿ- ಥ್ರೇಡ್ಸ್ ನಿಂದ ಇನ್ಸ್ಟಾ ರೀತಿಯಲ್ಲಿಯೇ ಪೋಸ್ಟಗಳನ್ನು ಸೇವ್ ಮಾಡುವ ಹೊಸ ವೈಶಿಷ್ಟ್ಯದ ಪರೀಕ್ಷೆ

@MishalRahman ಎಂಬ ಬಳಕೆದಾರರು X (Twitter) ಮೂಲಕ 'Android ಸೇಫ್ ಬ್ರೌಸಿಂಗ್' ಪುಟದ ಬಗ್ಗೆ ಮಾಹಿತಿ ನೀಡಿದ್ದಾರೆ. ಗೂಗಲ್ 'ಆಂಡ್ರಾಯ್ಡ್ ಸೇಫ್ ಬ್ರೌಸಿಂಗ್' ಪುಟವನ್ನು ಹೊರತರಲು ಪ್ರಾರಂಭಿಸಿದೆ. ಅಲ್ಲದೆ, ಈ ವೈಶಿಷ್ಟ್ಯವನ್ನು ಗೂಗಲ್ ಪಿಕ್ಸೆಲ್ ಮತ್ತು ಸ್ಯಾಮ್‌ಸಂಗ್ ಗ್ಯಾಲಕ್ಸಿ ಸ್ಮಾರ್ಟ್‌ಫೋನ್‌ಗಳಲ್ಲಿ ಗುರುತಿಸಲಾಗಿದೆ  ಎಂದು ಬಳಕೆದಾರರು ಎಕ್ಸ್ ಪೋಸ್ಟ್ ನಲ್ಲಿ ಉಲ್ಲೇಖಿಸಿದ್ದಾರೆ. 

ಏನಿದು ಆಂಡ್ರಾಯ್ಡ್ ಸೇಫ್ ಬ್ರೌಸಿಂಗ್ ಪೇಜ್: 
ಆಂಡ್ರಾಯ್ಡ್ ಸೇಫ್ ಬ್ರೌಸಿಂಗ್ ಪೇಜ್ ಉದ್ದೇಶವು ಬಳಕೆದಾರರಿಗೆ ಸುರಕ್ಷಿತ ಬ್ರೌಸಿಂಗ್ ಅನುಭವವನ್ನು ಒದಗಿಸುವುದು. ಈ ಪುಟವು ಭದ್ರತಾ ಬೆದರಿಕೆಗಳು, ಹಾನಿಕಾರಕ ಲಿಂಕ್‌ಗಳು ಮತ್ತು ವೆಬ್‌ಪುಟಗಳು ಇತ್ಯಾದಿಗಳಿಂದ ಬಳಕೆದಾರರನ್ನು ರಕ್ಷಿಸುತ್ತದೆ. 

ಲಭ್ಯವಿರುವ ಮಾಹಿತಿಗಳ ಪ್ರಕಾರ, ಆಂಡ್ರಾಯ್ಡ್ ಸೇಫ್ ಬ್ರೌಸಿಂಗ್ ಪೇಜ್ ಬಳಕೆದಾರರಿಗೆ ನಕಲಿ ಮತ್ತು ಫಿಶಿಂಗ್ ಲಿಂಕ್‌ಗಳಿಗೆ ಕರೆದೊಯ್ಯುವ ಅಪ್ಲಿಕೇಶನ್‌ಗಳ ಕುರಿತು ಎಚ್ಚರಿಕೆಯನ್ನು ನೀಡುತ್ತದೆ. ಉದಾಹರಣೆಗೆ, ನೀವು ಸುದ್ದಿ ಅಪ್ಲಿಕೇಶನ್‌ನಲ್ಲಿರುವ ಲಿಂಕ್ ಅನ್ನು ಕ್ಲಿಕ್ ಮಾಡಿದರೆ, ಅದು ನಿಮ್ಮನ್ನು ನಕಲಿ ವೆಬ್‌ಸೈಟ್‌ಗೆ ಕರೆದೊಯ್ಯುತ್ತದೆ... ನಂತರ ಲಿಂಕ್ ಅನ್ನು ಕ್ಲಿಕ್ ಮಾಡುವ ಮೊದಲು Google ನ ಈ ಪುಟವು ನಿಮ್ಮನ್ನು ಎಚ್ಚರಿಸುತ್ತದೆ.

ಇದನ್ನೂ ಓದಿ- Google Chrome ಬಳಕೆದಾರರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ ಭಾರತ ಸರ್ಕಾರ!

ಮೊದಲೇ ತಿಳಿಸಿದಂತೆ ಗೂಗಲ್ ಪಿಕ್ಸೆಲ್ ಮತ್ತು ಸ್ಯಾಮ್‌ಸಂಗ್ ಗ್ಯಾಲಕ್ಸಿ ಸ್ಮಾರ್ಟ್‌ಫೋನ್‌ಗಳಲ್ಲಿ  ಈ ವೈಶಿಷ್ಟ್ಯವನ್ನು ಗುರುತಿಸಲಾಗಿದೆ. ನೀವು ಎರಡು ಬ್ರಾಂಡ್‌ಗಳಲ್ಲಿ ಯಾವುದಾದರೂ ಸ್ಮಾರ್ಟ್‌ಫೋನ್ ಹೊಂದಿದ್ದರೆ, ನೀವು ಈ ಹೊಸ ಸುರಕ್ಷತಾ ಪುಟವನ್ನು ಬಳಸಬಹುದಾಗಿದೆ. ಇದಕ್ಕಾಗಿ ನೀವು ಸೆಟ್ಟಿಂಗ್‌ಗಳಲ್ಲಿ ಭದ್ರತೆ ಮತ್ತು ಗೌಪ್ಯತೆ ಎಂಬ ಆಯ್ಕೆಗೆ ಹೋಗಿ, ಇದರ ನಂತರ, ಹೆಚ್ಚಿನ ಭದ್ರತೆ ಮತ್ತು ಗೌಪ್ಯತೆಗೆ ಹೋದರೆ ಇಲ್ಲಿ ನೀವು Android ಸುರಕ್ಷಿತ ಬ್ರೌಸಿಂಗ್ ಪುಟವನ್ನು ಕಾಣಬಹುದಾಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News