ಹೋಳಿಯಲ್ಲಿ ಕಡಿಮೆ ಬೆಲೆಯಲ್ಲಿ ಐಫೋನ್ ಖರೀದಿಸಲು ಸುವರ್ಣಾವಕಾಶ

ನೀವು ಕೂಡ ಐಫೋನ್ ಖರೀದಿಸಲು ಯೋಚಿಸುತ್ತಿದ್ದರೆ ಈ ಅವಕಾಶವನ್ನು ಕಳೆದುಕೊಳ್ಳಬೇಡಿ. ಹೋಳಿಯಲ್ಲಿ ಐಫೋನ್ ಖರೀದಿಯ ಮೇಲೆ ಇಕಾಮರ್ಸ್ ವೆಬ್ಸೈಟ್ ಫ್ಲಿಪ್ಕಾರ್ಟ್ ಬಂಪರ್ ಡಿಸ್ಕೌಂಟ್ ನೀಡುತ್ತಿದೆ.

Written by - Yashaswini V | Last Updated : Mar 2, 2023, 03:12 PM IST
  • ಇ-ಕಾಮರ್ಸ್ ವೆಬ್ಸೈಟ್ ಫ್ಲಿಪ್ಕಾರ್ಟ್ ಹೋಳಿ ಹಬ್ಬದ ಸಂದರ್ಭದಲ್ಲಿ ಹೋಳಿ ಆಫರ್ ಅನ್ನು ನೀಡುತ್ತಿದೆ.
  • ಈ ಹೋಳಿ ಕೊಡುಗೆಯಲ್ಲಿ ನೀವು ಆಂಡ್ರಾಯ್ಡ್ ಫೋನ್ ಬೆಲೆಯಲ್ಲಿ ಐಫೋನ್ ಖರೀದಿಸಲು ಇಲ್ಲಿದೆ ಸುವರ್ಣಾವಕಾಶವಿದೆ.
  • ಈ ಎಲ್ಲಾ ಕೊಡುಗೆಗಳ ಲಾಭವನ್ನು ಪಡೆಯುವ ಮೂಲಕ 30 ಸಾವಿರ ರೂಪಾಯಿಗಿಂತ ಕಡಿಮೆ ಬೆಲೆಯಲ್ಲಿ ಐಫೋನ್ 11ಅನ್ನು ಖರೀದಿಸಬಹುದಾಗಿದೆ.
ಹೋಳಿಯಲ್ಲಿ ಕಡಿಮೆ ಬೆಲೆಯಲ್ಲಿ ಐಫೋನ್ ಖರೀದಿಸಲು ಸುವರ್ಣಾವಕಾಶ title=
Holi iPhone Offer

ನವದೆಹಲಿ: ಬಣ್ಣಗಳ ಹಬ್ಬ ಹೋಳಿಯಲ್ಲಿ ಇಕಾಮರ್ಸ್ ವೆಬ್ಸೈಟ್ ಫ್ಲಿಪ್ಕಾರ್ಟ್ ನಲ್ಲಿ ಭರ್ಜರಿ ರಿಯಾಯಿತಿಯನ್ನು ನೀಡುತ್ತಿದೆ. ಈ ಮಾರಾಟದಲ್ಲಿ ನೀವು ಐಫೋನ್ 11ಅನ್ನು 30,000 ರೂಪಾಯಿಗಳಿಗಿಂತ ಕಡಿಮೆ ಬೆಲೆಯಲ್ಲಿ ಖರೀದಿಸಬಹುದು. ಫ್ಲಿಪ್ಕಾರ್ಟ್ ಹೋಳಿ ಆಫರ್ ಕೊಡುಗೆಯ ಲಾಭವನ್ನು ಬಳಸಿಕೊಂಡು ನೀವು 128ಜಿಬಿ ರೂಪಾಂತರದ ಐಫೋನ್ 11ಅನ್ನು ಕೈಗೆಟುಕುವ ದರದಲ್ಲಿ ನಿಮ್ಮದಾಗಿಸಬಹುದು. 

ವಾಸ್ತವವಾಗಿ, ಇ-ಕಾಮರ್ಸ್ ವೆಬ್ಸೈಟ್ ಫ್ಲಿಪ್ಕಾರ್ಟ್ ಹೋಳಿ ಹಬ್ಬದ ಸಂದರ್ಭದಲ್ಲಿ ಹೋಳಿ ಆಫರ್ ಅನ್ನು ನೀಡುತ್ತಿದೆ. ಈ ಹೋಳಿ ಕೊಡುಗೆಯಲ್ಲಿ ನೀವು ಆಂಡ್ರಾಯ್ಡ್ ಫೋನ್ ಬೆಲೆಯಲ್ಲಿ ಐಫೋನ್ ಖರೀದಿಸಲು ಇಲ್ಲಿದೆ ಸುವರ್ಣಾವಕಾಶವಿದೆ.

ಇದನ್ನೂ ಓದಿ- OMG! ಮುಂದಿನ 12 ವರ್ಷಗಳಲ್ಲಿ ಮನುಷ್ಯ ತನ್ನ ಯೋಚನೆ ಮತ್ತು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಕಳೆದುಕೊಳ್ಳುತ್ತಾನಂತೆ!

ಏನಿದು ಕೊಡುಗೆ:
ಫ್ಲಿಪ್ಕಾರ್ಟ್ ಹೋಳಿ ಕೊಡುಗೆಯಲ್ಲಿ 2901 ರೂ.ಗಳ ಫ್ಲಾಟ್  ಡಿಸ್ಕೌಂಟ್ ನೀಡಲಾಗುತ್ತದೆ. ಇದರಿಂದ ಐಫೋನ್ 11ರ ಬೆಲೆ 45,999ರೂ. ಆಗಿರುತ್ತದೆ. ಆದರೆ, ಈ ಕೊಡುಗೆಯಲ್ಲಿ ಲಭ್ಯವಿರುವ ಇನ್ನೂ ಕೆಲವು ಆಫರ್ ಗಳ ಪ್ರಯೋಜನಗಳನ್ನು ಪಡೆಯುವ ಮೂಲಕ ಫೋನ್ ಬೆಲೆ ಮತ್ತಷ್ಟು ಕಡಿಮೆ ಆಗಲಿದೆ. 

ಇದನ್ನೂ ಓದಿ- ನಿಮ್ಮ ಮೊಬೈಲ್ ಡೇಟಾ ಕೂಡ ಬೇಗ ಖಾಲಿಯಾಗುತ್ತಾ? ಮೊದಲು ಈ ಸೆಟ್ಟಿಂಗ್ ಆಫ್ ಮಾಡಿ

ಎಕ್ಸ್ಚೇಂಜ್ ಆಫರ್:
ಫ್ಲಿಪ್ಕಾರ್ಟ್ ಫ್ಲಾಟ್ ಡಿಸ್ಕೌಂಟ್ ಜೊತೆಗೆ ಎಕ್ಸ್ಚೇಂಜ್ ಆಫರ್ ಅನ್ನು ಕೂಡ ನೀಡುತ್ತಿದೆ. ಫ್ಲಿಪ್ಕಾರ್ಟ್ನಲ್ಲಿ 20,000 ರೂಪಾಯಿಗಳ ವಿನಿಮಯ ಕೊಡುಗೆಯನ್ನು ನೀಡಲಾಗುತ್ತಿದೆ. ಆದಾಗ್ಯೂ, ಇದು ನಿಮ್ಮ ಹಳೆಯ ಫೋನಿನ ಸ್ಥಿತಿಯನ್ನು ಅವಲಂಬಿಸಿರುತ್ತದೆ. 

ಬ್ಯಾಂಕ್ ಕೊಡುಗೆ:
ಫ್ಲಿಪ್ಕಾರ್ಟ್ ಐಫೋನ್ ಖರೀದಿಯಲ್ಲಿ ಕೆಲವು ಬ್ಯಾಂಕ್ ಕೊಡುಗೆಗಳನ್ನು ಕೂಡ ನೀಡುತ್ತಿದೆ. ನೀವು ಈ ಎಲ್ಲಾ ಕೊಡುಗೆಗಳ ಲಾಭವನ್ನು ಪಡೆಯುವ ಮೂಲಕ 30 ಸಾವಿರ ರೂಪಾಯಿಗಿಂತ ಕಡಿಮೆ ಬೆಲೆಯಲ್ಲಿ ಐಫೋನ್ 11ಅನ್ನು ಖರೀದಿಸಬಹುದಾಗಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News