Harly Malware : ಮೇಕ್ ಯೂಸ್ ಆಫ್ ವರದಿಯ ಪ್ರಕಾರ, ಹಾರ್ಲೆ ಒಂದು ಹೊಸ ಮಾಲ್ ವೇರ್ ಆಗಿದ್ದು, Google Play ಇನ್ಸ್ಟಾಲ್ ಮೂಲಕ ಇದು ಡಿವೈಸ್ ಪ್ರವೇಶಿಸುತ್ತದೆ. DC ಕಾಮಿಕ್ಸ್ ಯೂನಿವರ್ಸ್ನ ಜೋಕರ್ನ ಗೆಳತಿ ಹಾರ್ಲೆ ಕ್ವಿನ್ ಹೆಸರನ್ನು ಈ ಮಾಲ್ವೇರ್ ಗೆ ಇಡಲಾಗಿದೆ. ಈ ಹಿಂದೆ, ಜೋಕರ್ ಮಾಲ್ವೇರ್ ಲಕ್ಷಾಂತರ ಜನರನ್ನು ವಂಚಿಸಿತ್ತು. ಈ ಎರಡು ಮಾಲ್ವೇರ್ಗಳ ನಡುವಿನ ವ್ಯತ್ಯಾಸವೇನೆಂದರೆ, ಜೋಕರ್ ಮಾಲ್ವೇರ್ಗೆ ಕಾನೂನುಬದ್ಧವಾಗಿ ಕಾಣುವ ಅಪ್ಲಿಕೇಶನ್ಗಳ ಮೂಲಕ ಸಾಧನ ಪ್ರವೇಶಿಸಿ, ನಂತರ ದುರುದ್ದೇಶಪೂರಿತ ಕೋಡ್ ಅನ್ನು ಡೌನ್ಲೋಡ್ ಮಾಡುವ ಅಗತ್ಯವಿತ್ತು. ಆದರೆ, ಹಾರ್ಲೆ ಮಾಲ್ವೇರ್ ದುರುದ್ದೇಶಪೂರಿತ ಕೋಡ್ ಅನ್ನು ತನ್ನೊಂದಿಗೆ ಕೊಂಡೊಯ್ಯುತ್ತದೆ.
ಈ ಮಾಲ್ವೇರ್ ಹೇಗೆ ಕೆಲಸ ಮಾಡುತ್ತದೆ? :
ಈ ಹಾರ್ಲೆ ಮಾಲ್ವೇರ್ ಬಳಕೆದಾರರ ಅರಿವಿಲ್ಲದೆ ಪೇಮೆಂಟ್ ಚಂದಾದಾರಿಕೆ ಸೇವೆಗಳಿಗೆ ಸೈನ್-ಅಪ್ ಮಾಡುತ್ತದೆ. ಒಮ್ಮೆ ಅದು ಡಿವೈಸ್ ಗೆ ಪ್ರವೇಶ ಪಡೆಯಿತು ಎಂದಾದರೆ ಮತ್ತೆ ನಿಮ್ಮ ಗಮನಕ್ಕೆ ಬಾರದೆಯೇ, ರಹಸ್ಯವಾಗಿ ದುಬಾರಿ ಚಂದಾದಾರಿಕೆ ಯೋಜನೆಗಳಿಗೆ ಸೈನ್ ಅಪ್ ಮಾಡುತ್ತದೆ. ಅದು ಅಂತಿಮವಾಗಿ ಬಳಕೆದಾರರ ಮಾಸಿಕ ಫೋನ್ ಬಿಲ್ಗೆ ಸೇರಿಕೊಳ್ಳುತ್ತದೆ. ವಿವಿಧ ಸೇವೆಗಳಿಗೆ ಚಂದಾದಾರಿಕೆಗಳನ್ನು ಸಕ್ರಿಯಗೊಳಿಸುವುದು ಮಾತ್ರವಲ್ಲದೆ, SMS ಅಥವಾ ಫೋನ್ ಕರೆ ಪರಿಶೀಲನೆಯ ಸಹಾಯದಿಂದ ಸೈನ್ ಅಪ್ ಮಾಡಿ, ಫೋನ್ ಕರೆಗಳನ್ನು ಸಹ ನಿರ್ವಹಿಸಬಹುದು.
ಇದನ್ನೂ ಓದಿ : ಬಾಂಬ್ನಂತೆ ಸ್ಫೋಟಗೊಂಡ ಆ್ಯಪಲ್ ವಾಚ್! ಮುಂದೇನಾಯ್ತು ಗೊತ್ತಾ..?
ಈ ವೈರಸ್ ಎಲ್ಲಿ ಸಕ್ರಿಯವಾಗಿದೆ :
Wi-Fi ಸಂಪರ್ಕ ಕಡಿತಗೊಳಿಸಿದ ನಂತರ ಬಳಕೆದಾರರ ಮೊಬೈಲ್ ಡೇಟಾ ಮೂಲಕ ಹಾರ್ಲೆ ಎಲ್ಲ ಕೆಲಸಗಳನ್ನು ಮಾಡುವುದು ಸಾಧ್ಯವಾಗುತ್ತದೆ. ಕ್ಯಾಸ್ಪರ್ಸ್ಕಿ ಪ್ರಕಾರ, ಸುಮಾರು 190 ವಿಭಿನ್ನ ಆಂಡ್ರಾಯ್ಡ್ ಅಪ್ಲಿಕೇಶನ್ಗಳು ಹಾರ್ಲಿ ಮಾಲ್ವೇರ್ ಅನ್ನು ಒಳಗೊಂಡಿರುವುದು ಕಂಡುಬಂದಿದೆ. ಈ ಅಪ್ಲಿಕೇಶನ್ಗಳು ಅಂದಾಜು 4.8 ಮಿಲಿಯನ್ ಡೌನ್ಲೋಡ್ಗಳಿವೆ.
ಹಾರ್ಲೆ ಮಾಲ್ವೇರ್ನಿಂದ ಸುರಕ್ಷಿತವಾಗಿರುವುದು ಹೇಗೆ ? :
ಹಂತ 1: Play Store ನಿಂದ ಅಪ್ಲಿಕೇಶನ್ಗಳನ್ನು ಡೌನ್ಲೋಡ್ ಮಾಡುವ ಮೊದಲು ವಿಮರ್ಶೆಗಳನ್ನು ಪರಿಶೀಲಿಸಿ. ಅಪ್ಲಿಕೇಶನ್ ವಂಚನೆಯಾಗಿದ್ದರೆ, ಅದನ್ನು ಮೊದಲು ಇನ್ಸ್ಟಾಲ್ ಮಾಡಿ ಅಪಾಯಕ್ಕೆ ಸಿಲುಕಿದ ಜನರು ಸಾಮಾನ್ಯವಾಗಿ ವಿಮರ್ಶೆಗಳಲ್ಲಿ ಕಡಿಮೆ ರೇಟಿಂಗ್ ನೀಡಿರುತ್ತಾರೆ.
ಹಂತ 2: ನಿಮ್ಮ ಸಾಧನವು ಸೋಂಕಿಗೆ ಒಳಗಾಗುವ ಅಪಾಯವನ್ನು ಕಡಿಮೆ ಮಾಡಲು ಅಗತ್ಯವಿಲ್ಲದ ಅಪ್ಲಿಕೇಶನ್ಗಳನ್ನು ಇನ್ಸ್ಟಾಲ್ ಮಾಡಬೇಡಿ.
ಹಂತ 3 : ಪೈಡ್ ಆಂಟಿವೈರಸ್ ಸೊಲ್ಯೂಶನ್ ಮೂಲಕ ಡಿವೈಸ್ ಅನ್ನು ಸುರಕ್ಷಿತವಾಗಿರಿಸಿ.
ಇದನ್ನೂ ಓದಿ : Free 5G Sim Card : 'ಉಚಿತ 5G ಸಿಮ್ ಕಾರ್ಡ್' : ಅದು ಕೂಡ ಉಚಿತ ಹೋಮ್ ಡೆಲಿವರಿ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.