Future Smartphone: ಮುಂಬರುವ ದಿನಗಳಲ್ಲಿ ಸ್ಮಾರ್ಟ್ ಫೋನ್ ಗಳು ಹೇಗಿರಲಿವೆ ಗೊತ್ತಾ? ವಿಡಿಯೋ ನೋಡಿ ಗೊತ್ತಾಗುತ್ತದೆ

Future Smartphone Design: ನೀವು ದಿನನಿತ್ಯ ಬಳಕೆ ಮಾಡುವ ಒಂದು ಸಾಧನ ಶತಮಾನಗಳ ಬಳಿಕ ಹೇಗೆ ಇರಲಿದೆ ಎಂಬುದನ್ನು ನೀವು ಎಂದಾದರೂ ಯೋಚಿಸಿದ್ದೀರಾ? ಉದಾಹರಣೆಗಾಗಿ ಫ್ಯೂಚರ್ ಸ್ಮಾರ್ಟ್ ಫೋನ್ ಹೇಗಿರುತ್ತದೆ, ಅದರ ವಿನ್ಯಾಸ ಹೇಗಿರುತ್ತದೆ? ಇತ್ಯಾದಿ, ಬನ್ನಿ ತಿಳಿದುಕೊಳ್ಳೋಣ.  

Written by - Nitin Tabib | Last Updated : Aug 9, 2022, 10:41 PM IST
  • ಇಂದಿನ ಸ್ಮಾರ್ಟ್ ಫೋನ್ ಗಳ ಯುಗದಲ್ಲಿ ಕೈಯಲ್ಲಿ ಸ್ಮಾರ್ಟ್‌ಫೋನ್ ಇಲ್ಲದೆ ಇರುವ ವ್ಯಕ್ತಿ ಸಿಗುವುದು ತುಂಬಾ ವಿರಳ.
  • ಅಂದರೆ, ಬಹುತೇಕ ಎಲ್ಲಾ ಸ್ಮಾರ್ಟ್‌ಫೋನ್ ಬಳಕೆದಾರರು ತಮ್ಮ ಮಲಗುವ ಸಮಯವನ್ನು ಹೊರತುಪಡಿಸಿ ತಮ್ಮ ಸ್ಮಾರ್ಟ್ ಫೋನ್‌ನಿಂದ ಎಂದಿಗೂ ದೂರವಿರುವುದಿಲ್ಲ.
Future Smartphone: ಮುಂಬರುವ ದಿನಗಳಲ್ಲಿ ಸ್ಮಾರ್ಟ್ ಫೋನ್ ಗಳು ಹೇಗಿರಲಿವೆ ಗೊತ್ತಾ? ವಿಡಿಯೋ ನೋಡಿ ಗೊತ್ತಾಗುತ್ತದೆ title=
Future Smartphone

Future Smartphone Design Concept Image: ಇಂದಿನ ಸ್ಮಾರ್ಟ್ ಫೋನ್ ಗಳ ಯುಗದಲ್ಲಿ  ಕೈಯಲ್ಲಿ ಸ್ಮಾರ್ಟ್‌ಫೋನ್ ಇಲ್ಲದೆ ಇರುವ ವ್ಯಕ್ತಿ ಸಿಗುವುದು ತುಂಬಾ ವಿರಳ. ಅಂದರೆ, ಬಹುತೇಕ ಎಲ್ಲಾ ಸ್ಮಾರ್ಟ್‌ಫೋನ್ ಬಳಕೆದಾರರು ತಮ್ಮ ಮಲಗುವ ಸಮಯವನ್ನು ಹೊರತುಪಡಿಸಿ ತಮ್ಮ ಸ್ಮಾರ್ಟ್ ಫೋನ್‌ನಿಂದ ಎಂದಿಗೂ ದೂರವಿರುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ಶತಮಾನಗಳ ಬಳಿಕ ಅಥವಾ ಭವಿಷ್ಯದಲ್ಲಿ ಸ್ಮಾರ್ಟ್ಫೋನ್ ಹೇಗಿರುತ್ತದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಪ್ರತಿ ವರ್ಷ ಸ್ಮಾರ್ಟ್‌ಫೋನ್‌ಗಳ ವಿನ್ಯಾಸ ಬದಲಾಗುತ್ತದೆ ಇದೆ, ಹಲವಾರು ವರ್ಷಗಳ ನಂತರ, ಸ್ಮಾರ್ಟ್‌ಫೋನ್ ಕೈಯಲ್ಲಿ ಹಿಡಿದರೆ ಅದು ಹೇಗೆ ಕಾಣಿಸಲಿದೆ? ಅಥವಾ ಸ್ಮಾರ್ಟ್‌ಫೋನ್ ಬಳಸುವ ಜನರ ಗ್ಯಾಜೆಟ್ ಹೇಗಿರುತ್ತದೆ? ಭವಿಷ್ಯದ ಸ್ಮಾರ್ಟ್‌ಫೋನ್ ಹೇಗಿರಲಿದೆ? ಈ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳೋಣ,

ಭವಿಷ್ಯದ ಸ್ಮಾರ್ಟ್ಫೋನ್ ಈ ರೀತಿ ಕಾಣಿಸಲಿದೆ
ಫ್ಯೂಚರ ಸ್ಮಾರ್ಟ್‌ಫೋನ್‌ನ ವಿನ್ಯಾಸ ಹೇಗಿರುತ್ತದೆ ಎಂಬ ಕುತೂಹಲ ನಿಮಗೂ ಇದ್ದರೆ, ಪ್ರಸ್ತುತ ದೊರೆತಿರುವ ಮಾಹಿತಿಯ ಪ್ರಕಾರ, ಜನರು ಭವಿಷ್ಯದಲ್ಲಿ ಪಾರದರ್ಶಕ ಸ್ಮಾರ್ಟ್‌ಫೋನ್ ಅನ್ನು ಬಳಸುತ್ತಾರೆ ಎಂದು ಹೇಳಿದರೆ ತಪ್ಪಾಗಲಾರದು. ಅವರ ಸ್ಮಾರ್ಟ್‌ಫೋನ್, ಅಂದರೆ ಭವಿಷ್ಯದ ಸ್ಮಾರ್ಟ್‌ಫೋನ್, ಅದರ ಮೇಲೆ ಅನೇಕ ಅಪ್ಲಿಕೇಶನ್‌ಗಳ ಐಕಾನ್‌ಗಳೊಂದಿಗೆ ಗಾಜಿನ ಒಂದು ಪಟ್ಟಿಯಂತೆ ಅದು ಕಂಗೊಲ್ಸಲಿದೆ. ಅದರ ವಿನ್ಯಾಸ ಎಂದಿಗೂ ನೋಡದ ಅಥವಾ ಕಲ್ಪಿಸಿಕೊಳ್ಳದ ರೀತಿಯಲ್ಲಿ ಸಾಕಷ್ಟು ವಿಶಿಷ್ಟವಾಗಿರಲಿದೆ.

ಇದನ್ನೂ ಓದಿ-ತಕ್ಷಣ WhatsApp update ಮಾಡಿಕೊಳ್ಳಿ, ಬಂದಿದೆ ಬಹು ನಿರೀಕ್ಷಿತ ವೈಶಿಷ್ಟ್ಯ

ವೈರಲ್ ಆಗುತ್ತಿದೆ ಈ ವಿಡಿಯೋ
ಭವಿಷ್ಯದ ಈ ಸ್ಮಾರ್ಟ್‌ಫೋನ್ ಬಗೆಗಿನ ಈ ಮಾಹಿತಿಯನ್ನು ವೈಜ್ಞಾನಿಕವಾಗಿ ಇದುವರೆಗೆ ಬಹಿರಂಗಪಡಿಸಲಾಗಿಲ್ಲ. ಆದರೆ ಟ್ವಿಟರ್‌ನಲ್ಲಿ ವೈರಲ್ ಆಗುತ್ತಿರುವ ವಿಡಿಯೋವೊಂದು ಇದನ್ನು ಬಹಿರಂಗಪಡಿಸಿದೆ. ವಾಲಾ ಅಫ್ಶರ್ ಎಂಬ ಬಳಕೆದಾರರು ಟ್ವಿಟರ್‌ನಲ್ಲಿ ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ, ಇದರಲ್ಲಿ ಅವರು ಮುಂಬರುವ ಸ್ಮಾರ್ಟ್‌ಫೋನ್‌ನ ಪರಿಕಲ್ಪನೆಯ ವಿನ್ಯಾಸವನ್ನು ತೋರಿಸಿದ್ದಾರೆ. ಈ ವಿಡಿಯೋಗೆ ಸಾಕಷ್ಟು ಲೈಕ್ ಗಳು ಸಿಗುತ್ತಿವೆ ಮತ್ತು  ಹಲವರು ಶೇರ್ ಕೂಡ ಮಾಡುತ್ತಿದ್ದಾರೆ. ಈ ವಿನ್ಯಾಸವನ್ನು ಈಗಾಗಲೇ ಅನೇಕ ಟಿಕ್‌ಟಾಕ್ ವೀಡಿಯೊಗಳಲ್ಲಿ ನೋಡಲಾಗಿದೆ.

ಇದನ್ನೂ ಓದಿ-ವಿದ್ಯುತ್ ಇಲ್ಲದೆ ಮನೆಯನ್ನು ಕೂಲ್ ಮಾಡಲು ಇಲ್ಲಿದೆ ಅಗ್ಗದ ಎಸಿ

ಈ ವಿನ್ಯಾಸವು ಭವಿಷ್ಯದ ಸ್ಮಾರ್ಟ್‌ಫೋನ್ ಆಗಿರುತ್ತದೆಯೇ ಅಥವಾ ಇಲ್ಲವೇ ಎಂಬುದರ ಕುರಿತು ಯಾವುದೇ ಭರವಸೆ ಇಲ್ಲ, ಆದರೆ ಈ ಸಮಯದಲ್ಲಿ, ಬಳಕೆದಾರರು ಅದನ್ನು ನೋಡುವ ಮೂಲಕ ಸಾಕಷ್ಟು ಆನಂದಿಸುತ್ತಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News