Free 20GB Data by Jio Check Best Opportunity: ಭಾರತದಲ್ಲಿ ಮುಖ್ಯವಾಗಿ ಮೂರು ಖಾಸಗಿ ಟೆಲಿಕಾಂ ಕಂಪನಿಗಳಿವೆ, ಈ ಕಂಪನಿಗಳಲ್ಲಿ ರಿಲಯನ್ಸ್ ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾಗಿಂತ ಹೊಸ ಕಂಪನಿಯಾಗಿದ್ದು, ಕೆಲವೇ ವರ್ಷಗಳಲ್ಲಿ, ಜಿಯೋ ದೇಶದ ನಂಬರ್ ಒನ್ ಟೆಲಿಕಾಂ ಕಂಪನಿಯಾಗಿ ಹೊರಹೊಮ್ಮಿದ್ದು, ಅದರ ಗ್ರಾಹಕರ ಸಂಖ್ಯೆ ಪ್ರತಿ ವರ್ಷಕ್ಕೂ ಹೆಚ್ಚಾಗುತ್ತಿದ್ದಾರೆ. ತನ್ನ ಗ್ರಾಹಕರಿಗೆ ಕೈಗೆಟುಕುವ ಯೋಜನೆಗಳನ್ನು ನೀಡುವುದರ ಜೊತೆಗೆ, ಜಿಯೋ ಇನ್ನೂ ಅನೇಕ ಅದ್ಭುತ ಕೊಡುಗೆಗಳು ಮತ್ತು ಪ್ರಯೋಜನಗಳನ್ನು ನೀಡುತ್ತದೆ. ಇಂದು ನಾವು ನಿಮಗೆ Jio ನ ಇತ್ತೀಚಿನ ಕೊಡುಗೆಯ ಬಗ್ಗೆ ಮಾಹಿತಿಯನ್ನು ನೀಡಲಿದ್ದೇವೆ, ಈ ಕೊಡುಗೆಯ ಅಡಿ ನೀವು ಉಚಿತ 20GB ಡೇಟಾವನ್ನು ಪಡೆಯಬಹುದು. ಈ ಆಫರ್ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.
20GB ಹೈ-ಸ್ಪೀಡ್ ಡೇಟಾವನ್ನು ಉಚಿತವಾಗಿ ಪಡೆಯಿರಿ!
ಜಿಯೋದಿಂದ ಈ ಉಚಿತ ಇಂಟರ್ನೆಟ್ ಅನ್ನು ಹೇಗೆ ಪಡೆಯಬಹುದು ಎಂದು ನೀವೂ ಕೂಡ ಆಲೋಚಿಸುತ್ತಿದ್ದರೆ, ಇಲ್ಲಿದೆ ವಿಧಾನ. Jio ನಿಂದ 20GB ಉಚಿತ ಡೇಟಾಗಾಗಿ, ನೀವು ಯಾವುದೇ ರೀಚಾರ್ಜ್ ಯೋಜನೆಯನ್ನು ಖರೀದಿಸಬೇಕಾಗಿಲ್ಲ ಅಥವಾ ನೀವು ಯಾವುದೇ ಹೆಚ್ಚುವರಿ ಕೊಡುಗೆಯ ಭಾಗವಾಗಿರುವುದಿಲ್ಲ. ಜಿಯೋದ ಈ ಅವಕಾಶವನ್ನು ಬಳಸಿಕೊಳ್ಳಲು, ನೀವು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ Jio ನ ಅಧಿಕೃತ ಅಪ್ಲಿಕೇಶನ್, My Jio ಅಪ್ಲಿಕೇಶನ್ ಅನ್ನು ಬಳಸಬೇಕು, ಅಲ್ಲಿ ನೀವು ಈ ಕೊಡುಗೆಯನ್ನು ಕಾಣಬಹುದು.
ರಿಲಯನ್ಸ್ ಜಿಯೋದ ಉತ್ತಮ ಅವಕಾಶವನ್ನು ಕಳೆದುಕೊಳ್ಳಬೇಡಿ
ಈಗ ರಿಲಯನ್ಸ್ ಜಿಯೋನ ಯಾವ ಕೊಡುಗೆಯ ಅಡಿ ನೀವು 20GB ಡೇಟಾವನ್ನು ಉಚಿತವಾಗಿ ಆನಂದಿಸಬಹುದು ತಿಲಿದುಕೊಲ್ಲಿನ. ಜಿಯೋ ಲಕ್ಕಿ ಡ್ರಾವೊಂದನ್ನು ಆಯೋಜಿಸಿದೆ, ಇದರಲ್ಲಿ ಭಾಗವಹಿಸುವ ಮೂಲಕ ನೀವು 20GB ಇಂಟರ್ನೆಟ್ ಅನ್ನು ಉಚಿತವಾಗಿ ಪಡೆಯಬಹುದು. ಜುಲೈ 8 ರವರೆಗೆ ನೀವು ಈ ಲಕ್ಕಿ ಡ್ರಾದಲ್ಲಿ ಭಾಗವಹಿಸಬಹುದು.
ಇದನ್ನೂ ಓದಿ-BSNL ಭರ್ಜರಿ ಯೋಜನೆ: ಕೇವಲ 5 ರೂ.ಗೆ ಸಿಗುತ್ತೆ ಪ್ರತಿದಿನ 2ಜಿಬಿ ಡೇಟಾ
ಈ ಲಕ್ಕಿ ಡ್ರಾದಲ್ಲಿ ಐದು ಜನರು 20GB ಡೇಟಾವನ್ನು ಗೆಲ್ಲುವ ಅವಕಾಶವನ್ನು ಪಡೆಯಲಿದ್ದಾರೆ
ಜಿಯೋದ ಈ ಉಚಿತ 20GB ಡೇಟಾವನ್ನು ಹೇಗೆ ಪಡೆಯುವುದು ಎಂಬುದನ್ನು ಈಗ ತಿಳಿದುಕೊಳ್ಳೋಣ. ನೀವು ಮೊದಲು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ My Jio ಅಪ್ಲಿಕೇಶನ್ ಅನ್ನು ತೆರೆಯಬೇಕು, ನೀವು ಹೋಮ್ ಸ್ಕ್ರೀನ್‌ನಲ್ಲಿಯೇ ಸ್ವಲ್ಪ ಸ್ಕ್ರಾಲ್ ಮಾಡಿದಾಗ, ನಿಮಗೆ 'ಪ್ಲೇ ಅಂಡ್ ವಿನ್' ಕಾಲಮ್ ಕಾಣಿಸಲಿದೆ. ಇದರಲ್ಲಿ ಮೊದಲ ಆಯ್ಕೆಯು ಈ 20GB ಡೇಟಾದೊಂದಿಗೆ ಲಕ್ಕಿ ಡ್ರಾ ಆಗಿರುತ್ತದೆ. ನೀವು ಈ ಆಯ್ಕೆಯನ್ನು ಕ್ಲಿಕ್ ಮಾಡಿದ ತಕ್ಷಣ, ನಿಮಗೆ 'ಈಗ ಭಾಗವಹಿಸಿ' ಎಂಬ ಆಯ್ಕೆ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿದ ನಂತರ, ನೀವು ಸರಳವಾದ ಪ್ರಶ್ನೆಗೆ ಸರಿಯಾಗಿ ಉತ್ತರಿಸಬೇಕಾಗುತ್ತದೆ, ಅದರ ನಂತರ ನಿಮ್ಮ ಹೆಸರು ಈ ಲಕ್ಕಿ ಡ್ರಾಗೆ ನೋಂದಣಿಯಾಗುತ್ತದೆ.
ಇದನ್ನೂ ಓದಿ-Electricity Bill Savings Tips: ಮೀಟರ್ ಬಳಿ ಈ ಡಿವೈಸ್ ಅಳವಡಿಸಿ ಕರೆಂಟ್ ಬಿಲ್ ಟೆನ್ಶನ್ ಬಿಟ್ಹಾಕಿ
ಈ ಲಕ್ಕಿ ಡ್ರಾ ಫಲಿತಾಂಶ ಜುಲೈ 8 ರಂದು ಪ್ರಕಟವಾಗಲಿದೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ