Star Engulfs Planet: ಗುರು ಗ್ರಹದಂತಹ ದೊಡ್ಡ ಗ್ರಹವನ್ನೇ ನುಂಗಿ ಹಾಕಿದ ನಕ್ಷತ್ರ, ಭೂಮಿಯ ಗತಿ ಏನು? ವಿಡಿಯೋ ನೋಡಿ..!

Star Engulfs Planet: ವಿಜ್ಞಾನಿಗಳು ಹೇಳುವ ಪ್ರಕಾರ ಯಾವುದೇ ಒಂದು ನಕ್ಷತ್ರದ ವಯಸ್ಸು ಹೆಚ್ಚಾದಾಗ ಅದರ ವ್ಯಾಸ ಹಲವಾರು ಪಟ್ಟು ಹೆಚ್ಚಾಗುತ್ತದೆ. ಅಂದರ ಅದು ಅದರ ನಿಜವಾದ ಗಾತ್ರಕ್ಕಿಂತ ಹಲವು ಪಟ್ಟು ದೊಡ್ಡದಾಗುತ್ತದೆ. ಈ ಬೆಳವಣಿಗೆಯ ಪ್ರಕ್ರಿಯೆಯಲ್ಲಿ, ಅದರೊಳಗೆ ಇರುವ ಹೈಡ್ರೋಜನ್ ಪ್ರಮಾಣವು ಕಡಿಮೆಯಾಗುತ್ತದೆ ಮತ್ತು ಅದರ ತನ್ನ ಸುತ್ತಲಿನ ಇತರ ಗ್ರಹಗಳು ಮತ್ತು ನಕ್ಷತ್ರಗಳನ್ನು ತನ್ನ ವ್ಯಾಪ್ತಿಯ ಒಳಗೆ ತೆಗೆದುಕೊಳ್ಳುತ್ತದೆ.   

Written by - Nitin Tabib | Last Updated : May 5, 2023, 01:34 PM IST
  • ಇಂದಿನಿಂದ ಸುಮಾರು ಐದು ಶತಕೋಟಿ ವರ್ಷಗಳ ನಂತರ, ಸೂರ್ಯನು ಕೆಂಪು ದೈತ್ಯನಾಗಿ ಬದಲಾಗುತ್ತಾನೆ ಎಂದು ವಿಜ್ಞಾನಿಗಳು ಭವಿಷ್ಯ ನುಡಿದಿದ್ದಾರೆ,
  • ಆಗ ನಮ್ಮ ಸೌರವ್ಯೂಹದ ಹತ್ತಿರದ ಗ್ರಹಗಳಾದ ಬುಧ, ಶುಕ್ರ ಮತ್ತು ಭೂಮಿಗೂ ಕೂಡ ಇದೇ ಗತಿ ಬರಲಿದೆ ಅವರು ಹೇಳಿದ್ದಾರೆ.
  • ಈ ಕೆಂಪು ದೈತ್ಯ ನಕ್ಷತ್ರದ ಬಳಿ ವಿಜ್ಞಾನಿಗಳು ಬೇರೆ ಯಾವುದೇ ಗ್ರಹವನ್ನು ನೋಡಿಲ್ಲ, ಆದರೆ ಅವರು ಅದನ್ನು ತಳ್ಳಿಯೂ ಹಾಕುತ್ತಿಲ್ಲ.
  • ಭವಿಷ್ಯದಲ್ಲಿ, ಈ ನಕ್ಷತ್ರವು ಇತರ ಗ್ರಹಗಳನ್ನು ಸಹ ನುಂಗುವ ಸಾಧ್ಯತೆಯನ್ನು ಅವರು ವ್ಯಕ್ತಪಡಿಸಿದ್ದಾರೆ.
Star Engulfs Planet: ಗುರು ಗ್ರಹದಂತಹ ದೊಡ್ಡ ಗ್ರಹವನ್ನೇ ನುಂಗಿ ಹಾಕಿದ ನಕ್ಷತ್ರ, ಭೂಮಿಯ ಗತಿ ಏನು? ವಿಡಿಯೋ ನೋಡಿ..! title=
ದೈತ್ಯಾಕಾರದ ಗ್ರಹವನ್ನೇ ನುಂಗಿ ಹಾಕಿದ ನಕ್ಷತ್ರ!

Star Engulfs Planet: ಕಾಲಕಾಲಕ್ಕೆ, ಬ್ರಹ್ಮಾಂಡ ಅಲೌಕಿಕ ಮತ್ತು ವಿಚಿತ್ರ ಘಟನೆಗಳು ಸಂಭವಿಸುತ್ತಲೇ ಇರುತ್ತವೆ ಇತ್ತೀಚೆಗೆ ಬಾಹ್ಯಾಕಾಶದಲ್ಲಿ ನಡೆದ ಒಂದು ಘಟನೆ ವಿಜ್ಞಾನಿಗಳನ್ನು ಬೆಚ್ಚಿಬೀಳಿಸುವುದರ ಜೊತೆಗೆ ಅಚ್ಚರಿಗೆ ಕಾರಣವಾಗಿದೆ. ವಿಷಯ ಏನು ಅಂದ್ರೆ, ನಕ್ಷತ್ರವೊಂದು ಗುರುಗ್ರಹದಂತಹ ದೊಡ್ಡ ಗಾತ್ರದ ಗ್ರಹವನ್ನೇ ನುಂಗಿಹಾಕಿದೆ. ಗ್ರಹವನ್ನು ನುಂಗುವ ಈ ನಕ್ಷತ್ರವು ಸೂರ್ಯನಷ್ಟು ದೊಡ್ಡ ಗಾತ್ರದ ನಕ್ಷತ್ರವಾಗಿದೆ. CNN ನಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ, ಈ ಅದ್ಭುತ ಖಗೋಳ ವಿದ್ಯಮಾನವನ್ನು ಹಾರ್ವರ್ಡ್ ವಿಶ್ವವಿದ್ಯಾಲಯದ ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಕ್ಯಾಲಿಫೋರ್ನಿಯಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವಿಜ್ಞಾನಿಗಳು ನೋಡಿದ್ದಾರೆ.

ಒಂದು ನಕ್ಷತ್ರವು ಮೊದಲ ಬಾರಿಗೆ ಗ್ರಹವನ್ನೇ ನುಂಗಿದೆ
ಖಗೋಳದಲ್ಲಿ ನಡೆದ ಈ ವಿದ್ಯಮಾನವು ಒಂದು ಪ್ರಮುಖ ವಿದ್ಯಮಾನವಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಏಕೆಂದರೆ ಒಂದು ಹಂತದಲ್ಲಿ ಸೂರ್ಯನ ಮಂಡಲ ಕೂಡ ದೈತ್ಯರೂಪ ಪಡೆದುಕೊಂಡು ರೆಡ್ ಈವಿಲ್ ಪ್ಲಾನೆಟ್ ಆದಾಗ, ನಮ್ಮ ಭೂಮಿಗೂ ಕೂಡ ಇದೆ ರೀತಿಯ ಗತಿ ಬರಲಿದೆ ಅಂದು ಅವರು ಹೇಳುತ್ತಾರೆ.  ಅಂದರೆ ಸೂರ್ಯ ಭೂಮಿಯನ್ನು ನುಂಗಿ ಹಾಕಲಿದೆ. ಹೀಗಾಗಿ ನಕ್ಷತ್ರವೊಂದು ಭೂಮಿಯನ್ನು ನುಂಗಿ ಹಾಕುವ ಈ ಘಟನೆ ತುಂಬಾ ಪ್ರಮುಖವಾಗಿದೆ ಮತ್ತು ವಿಚಿತ್ರವಾಗಿದೆ ಏಕೆಂದರೆ ಖಗೋಳಶಾಸ್ತ್ರಜ್ಞರ ಪ್ರಕಾರ ನಕ್ಷತ್ರಗಳು ಪರಸ್ಪರ ನುಂಗುವುದನ್ನು ಇದುವರೆಗೆ ಗಮನಿಸಲಾಗಿದೆ. ಆದರೆ, ನಕ್ಷತ್ರವೊಂದು ಗ್ರಹವನ್ನು ನುಂಗುವುದು ಇದೆ ಮೊದಲ ಘಟನೆಯಾಗಿದೆ. 

ಕೆಂಪು ದೈತ್ಯ ನಕ್ಷತ್ರ ಎಂದರೇನು
ನಕ್ಷತ್ರದ ವಯಸ್ಸು ಹೆಚ್ಚಾದಾಗ ಅದರ ವ್ಯಾಸವು ಹಲವು ಪಟ್ಟು ದೊಡ್ಡದಾಗುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಇದು ಅದರ ನಿಜವಾದ ಗಾತ್ರಕ್ಕಿಂತ ಹಲವು ಪಟ್ಟು ದೊಡ್ಡದಾಗುತ್ತದೆ. ಈ ಬೆಳವಣಿಗೆಯ ಪ್ರಕ್ರಿಯೆಯಲ್ಲಿ, ಅದರೊಳಗೆ ಇರುವ ಹೈಡ್ರೋಜನ್ ಪ್ರಮಾಣ ಮುಗಿದುಹೋಗುತ್ತದೆ ಮತ್ತು ಅದು ತನ್ನ ಸುತ್ತಲಿನ ಇತರ ಗ್ರಹಗಳು ಮತ್ತು ನಕ್ಷತ್ರಗಳನ್ನು ತನ್ನ ವ್ಯಾಪ್ತಿಗೆ ತೆಗೆದುಕೊಳ್ಳಲಾರಂಭಿಸುತ್ತದೆ. ಖಗೋಳಶಾಸ್ತ್ರದ ಭಾಷೆಯಲ್ಲಿ, ಅಂತಹ ನಕ್ಷತ್ರಗಳನ್ನು ಕೆಂಪು ದೈತ್ಯ ನಕ್ಷತ್ರ ಎಂದು ಕರೆಯಲಾಗುತ್ತದೆ.

ಇದನ್ನೂ ಓದಿ-Ola Electric Update: ತನ್ನ ಗ್ರಾಹಕರಿಗೆ ಭರ್ಜರಿ ಉಡುಗೊರೆ ನೀಡಲು ಮುಂದಾದ ಓಲಾ ಎಲೆಕ್ಟ್ರಿಕ್!

ಈ ನಕ್ಷತ್ರವು ಮಿಲ್ಕಿ ವೇ ಗ್ಯಾಲಕ್ಸಿಯಲ್ಲಿದೆ
ನಕ್ಷತ್ರವು ಗ್ರಹವನ್ನು ನುಂಗುವ ಈ ಘಟನೆಯು 2020 ರಲ್ಲಿ ಭೂಮಿಯಿಂದ ಸುಮಾರು 12,000 ಪ್ರಕಾಶ ವರ್ಷಗಳಷ್ಟು ದೂರದಲ್ಲಿ ನಡೆದಿದೆ. ಈ ಕುರಿತು ಹೇಳುವ MIT ಸಂಶೋಧಕ ಮತ್ತು ಲೇಖನದ ಲೇಖಕರಾದ ಕಿಶ್ಲೇ ಡೇ, ಈ ವಿದ್ಯಮಾನವನ್ನು ಅರ್ಥಮಾಡಿಕೊಳ್ಳಲು ತಮ್ಮ ತಂಡಕ್ಕೆ ಒಂದು ವರ್ಷ ಬೇಕಾಯಿತು ಎಂದು ಹೇಳುತ್ತಾರೆ. ಮಿಲ್ಕೀ ವೇ ಗ್ಯಾಲಕ್ಸಿಯಲ್ಲಿ ಕೆಂಪು ದೈತ್ಯ ರೂಪ ಪಡೆದುಕೊಂಡ ಈ ನಕ್ಷತ್ರವು ಸುಮಾರು 10 ಶತಕೋಟಿ ವರ್ಷಗಳಷ್ಟು ಹಳೆಯದಾಗಿದೆ ಮತ್ತು ಅದರ ವಯಸ್ಸು ಸೂರ್ಯನಿಗಿಂತ ಎರಡು ಪಟ್ಟು ಹೆಚ್ಚಾಗಿದೆ.

ಇದನ್ನೂ ಓದಿ-Twitter Update: ನ್ಯೂಸ್ ಲಿಂಕ್ ಮೇಲೆ ಕ್ಲಿಕ್ಕಿಸಿದರೆ ಖಾತೆಯಿಂದ ಹಣ ಕಡಿತ, ಬಳಕೆದಾರರಿಗೆ ಮತ್ತೊಂದು ಶಾಕ್ ನೀಡಿದ ಎಲಾನ್ ಮಸ್ಕ್!

ಭೂಮಿಗೂ ಇದೇ ಗತಿ ಬರಲಿದೆ - ವಿಜ್ಞಾನಿ
ಇಂದಿನಿಂದ ಸುಮಾರು ಐದು ಶತಕೋಟಿ ವರ್ಷಗಳ ನಂತರ, ಸೂರ್ಯನು ಕೆಂಪು ದೈತ್ಯನಾಗಿ ಬದಲಾಗುತ್ತಾನೆ ಎಂದು ವಿಜ್ಞಾನಿಗಳು ಭವಿಷ್ಯ ನುಡಿದಿದ್ದಾರೆ, ಆಗ ನಮ್ಮ ಸೌರವ್ಯೂಹದ ಹತ್ತಿರದ ಗ್ರಹಗಳಾದ ಬುಧ, ಶುಕ್ರ ಮತ್ತು ಭೂಮಿಗೂ ಕೂಡ ಇದೇ ಗತಿ ಬರಲಿದೆ ಅವರು ಹೇಳಿದ್ದಾರೆ. ಈ ಕೆಂಪು ದೈತ್ಯ ನಕ್ಷತ್ರದ ಬಳಿ ವಿಜ್ಞಾನಿಗಳು ಬೇರೆ ಯಾವುದೇ ಗ್ರಹವನ್ನು ನೋಡಿಲ್ಲ, ಆದರೆ ಅವರು ಅದನ್ನು ತಳ್ಳಿಯೂ ಹಾಕುತ್ತಿಲ್ಲ. ಭವಿಷ್ಯದಲ್ಲಿ, ಈ ನಕ್ಷತ್ರವು ಇತರ ಗ್ರಹಗಳನ್ನು ಸಹ ನುಂಗುವ ಸಾಧ್ಯತೆಯನ್ನು ಅವರು ವ್ಯಕ್ತಪಡಿಸಿದ್ದಾರೆ. 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News