Realme 5G Smartphone: ಕಡಿಮೆ ಬೆಲೆಯಲ್ಲಿ ಖರೀದಿಸಿ Realme 5G ಸ್ಮಾರ್ಟ್‌ಫೋನ್, ಭರ್ಜರಿ ಆಫರ್ ಲಭ್ಯ

5G ಸೇವೆಗಳನ್ನು ಹೊಂದಿರುವ ಈ ಸ್ಮಾರ್ಟ್‌ಫೋನ್ 6GB RAM ಮತ್ತು 128GB ಆಂತರಿಕ ಸ್ಟೋರೇಜ್ ನೊಂದಿಗೆ ಬರುತ್ತದೆ.

Written by - Puttaraj K Alur | Last Updated : Nov 21, 2021, 12:18 PM IST
  • ಫ್ಲಿಪ್‌ಕಾರ್ಟ್ ವಿಶೇಷ ಮೊಬೈಲ್ಸ್ ಬೊನಾನ್ಜಾ ಸೇಲ್ ನಲ್ಲಿ ಸಿಗುತ್ತಿದೆ ಭರ್ಜರಿ ಆಫರ್
  • ಅತ್ಯಂತ ಕಡಿಮೆ ಬೆಲೆಗೆ Realme 5G Smartphone ಖರೀದಿಸುವ ಸುವರ್ಣಾವಕಾಶ
  • ಅದ್ಭುತ ವೈಶಿಷ್ಟ್ಯಗಳನ್ನು ಹೊಂದಿರುವ ಸ್ಮಾರ್ಟ್‌ಫೋನ್ ಗಳ ಮೇಲೆ ಸಖತ್ ಡಿಸ್ಕೌಟ್ ಲಭ್ಯ
Realme 5G Smartphone: ಕಡಿಮೆ ಬೆಲೆಯಲ್ಲಿ ಖರೀದಿಸಿ Realme 5G ಸ್ಮಾರ್ಟ್‌ಫೋನ್, ಭರ್ಜರಿ ಆಫರ್ ಲಭ್ಯ  title=
Realme 8s 5G ನೂತನ ಸ್ಮಾರ್ಟ್‌ಫೋನ್

ನವದೆಹಲಿ: ಖ್ಯಾತ ಇ-ಕಾಮರ್ಸ್ ವೆಬ್‌ಸೈಟ್ ಫ್ಲಿಪ್‌ಕಾರ್ಟ್(Flipkart) ತನ್ನ ಬಳಕೆದಾರರಿಗೆ ಕಾಲಕಾಲಕ್ಕೆ ಅನೇಕ ಕೊಡುಗೆಗಳನ್ನು ನೀಡುತ್ತಲೇ ಬರುತ್ತಿದೆ. ಅಕ್ಟೋಬರ್‌ನಿಂದ ಫ್ಲಿಪ್‌ಕಾರ್ಟ್‌ನಲ್ಲಿ ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ಭರ್ಜರಿ ಆಫರ್ ಸಿಗುತ್ತಿದೆ. ಬಿಗ್ ಬಿಲಿಯನ್ ಡೇಸ್, ದೀಪಾವಳಿ ಹಬ್ಬದ ಆಫರ್ ಬಳಿಕ ಇದೀಗ ಮತ್ತೆ ಫ್ಲಿಪ್‌ಕಾರ್ಟ್ ವಿಶೇಷ ಮೊಬೈಲ್ಸ್ ಬೊನಾನ್ಜಾ ಸೇಲ್‌(Flipkart Mobile Bonanza) ಬಂದಿದೆ. ಇದರಲ್ಲಿ ನೀವು Realmeನ ಇತ್ತೀಚಿನ 5G ಸ್ಮಾರ್ಟ್‌ಫೋನ್ ಅನ್ನು ಅತ್ಯಂತ ಅಗ್ಗವಾಗಿ ಖರೀದಿಸಬಹುದು.

Realme 8s 5G ಅನ್ನು ಅತ್ಯಂತ ಕಡಿಮೆ ಬೆಲೆಗೆ ಖರೀದಿಸಿ

Realme 8s 5G ನೂತನ ಸ್ಮಾರ್ಟ್‌ಫೋನ್(Flipkart Realme 8s 5G) ಅನ್ನು ಕೆಲವು ತಿಂಗಳ ಹಿಂದಷ್ಟೇ ಬಿಡುಗಡೆ ಮಾಡಲಾಗಿತ್ತು. ಮಾರುಕಟ್ಟೆಯಲ್ಲಿ ಇದರ ಬೆಲೆ 20,999 ರೂ. ಇದೆ. ನೀವು ಈ 5G ಸ್ಮಾರ್ಟ್‌ಫೋನ್ ಅನ್ನು ಫ್ಲಿಪ್‌ಕಾರ್ಟ್‌ನ ಮೊಬೈಲ್ ಬೊನಾಂಜಾದಲ್ಲಿ ಶೇ.14ರಷ್ಟು ರಿಯಾಯಿತಿಯ ಬಳಿಕ ಕೇವಲ 17,999 ರೂ.ಗೆ ಖರೀದಿಸಬಹುದು. ಆಫರ್ ಇಲ್ಲಿಗೆ ಮುಗಿಯುವುದಿಲ್ಲ ಈ ಡೀಲ್‌ನಲ್ಲಿ ನೀವು ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಕೆಯ ಮೇಲೆ ಶೇ.5ರಷ್ಟು ಕ್ಯಾಶ್‌ಬ್ಯಾಕ್ ಅಂದರೆ 900 ರೂ.ಗಳ ರಿಯಾಯಿತಿ ಪಡೆಯುತ್ತೀರಿ.

ಇದನ್ನೂ ಓದಿ: Knowledge Story: ಬಾವಿ ವೃತ್ತಾಕಾರದಲ್ಲಿಯೇ ಏಕೆ ಇರುತ್ತದೆ, ಇದರ ಹಿಂದಿನ ವಿಜ್ಞಾನ ನಿಮಗೆ ಗೊತ್ತೇ?

ಎಕ್ಸ್‌ ಚೇಂಜ್ ಆಫರ್‌ನೊಂದಿಗೆ ಹೆಚ್ಚುವರಿ ರಿಯಾಯಿತಿ

ನಿಮ್ಮ ಹಳೆಯ ಸ್ಮಾರ್ಟ್‌ಫೋನ್‌ಗೆ ಬದಲಾಗಿ ನೀವು Realme 8s 5G ಅನ್ನು ಖರೀದಿಸಿದರೆ ಈ ಡೀಲ್‌ನಲ್ಲಿ ಲಭ್ಯವಿರುವ ಎಕ್ಸ್‌ ಚೇಂಜ್ ಆಫರ್‌ನಿಂದ ನೀವು 14,250 ರೂ.ವರೆಗೆ ರಿಯಾಯಿತಿ ಪಡೆಯಬಹುದು. ಈ ಎಕ್ಸ್‌ ಚೇಂಜ್ ಆಫರ್‌ನ ಸಂಪೂರ್ಣ ಪ್ರಯೋಜನ ಪಡೆದರೆ ಒಟ್ಟಾರೆ ಈ ಫೋನ್‌ ನಿಮಗೆ 18,150 ರೂ. ಸಿಗುತ್ತದೆ. ಆಗ ಈ ಸ್ಮಾರ್ಟ್‌ಫೋನ್‌ಗೆ ನೀವು ಕೇವಲ 2,849 ರೂ. ಪಾವತಿಸಬೇಕಾಗುತ್ತದೆ.   

ಈ ಫೋನ್‌ನ ವೈಶಿಷ್ಟ್ಯತೆಗಳು ಏನು..?

5G ಸೇವೆಗಳನ್ನು ಹೊಂದಿರುವ ಈ ಸ್ಮಾರ್ಟ್‌ಫೋನ್ 6GB RAM ಮತ್ತು 128GB ಆಂತರಿಕ ಸ್ಟೋರೇಜ್ ನೊಂದಿಗೆ ಬರುತ್ತದೆ. MediaTek Dimensity 810 5G ಚಿಪ್‌ಸೆಟ್‌ನಲ್ಲಿ ರನ್ ಆಗುವ ಈ ಫೋನ್ 6.5-ಇಂಚಿನ Full HD + LCD ಇನ್-ಸೆಲ್ ಡಿಸ್ಪ್ಲೇ, 5,000mAh ಬ್ಯಾಟರಿ ಮತ್ತು 33W ಡ್ಯಾಶ್ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ. 64MP ಮುಖ್ಯ ಸೇನ್ಸಾರ್ ನೊಂದಿಗೆ ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಮತ್ತು 16MP ಫ್ರಂಟ್ ಕ್ಯಾಮೆರಾ ಸಹ ಇದೆ. ಇದು ಡ್ಯುಯಲ್ ಸಿಮ್ ಸ್ಮಾರ್ಟ್‌ಫೋನ್ ಆಗಿದ್ದು, ಇದು ಆಂಡ್ರಾಯ್ಡ್ 11ರಲ್ಲಿ ಕಾರ್ಯನಿರ್ವಹಿಸುತ್ತದೆ. ಫ್ಲಿಪ್‌ಕಾರ್ಟ್‌ನ ಮೊಬೈಲ್ ಬೊನಾನ್ಜಾದಲ್ಲಿ ನೀವು ಇಂತಹ ಅನೇಕ ಡೀಲ್‌ಗಳನ್ನು ಆನಂದಿಸಬಹುದು. ನೀವು ಪ್ರತಿಯೊಂದು ಟಾಪ್ ಬ್ರಾಂಡ್ ಸ್ಮಾರ್ಟ್‌ಫೋನ್‌ಗಳಲ್ಲಿ ಭರ್ಜರಿ ರಿಯಾಯಿತಿಗಳನ್ನು ಕೂಡ ಪಡೆಯಬಹುದಾಗಿದೆ.  

ಇದನ್ನೂ ಓದಿ: Amazon offer : 63 ಸಾವಿರ ರೂಪಾಯಿಗಳ ರಿಯಾಯಿತಿ ಬೆಲೆಯಲ್ಲಿ ಖರೀದಿಸಿ Lenovo Laptop

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News