Flipkart Electronics Sale: 40-ಇಂಚಿನ ಸ್ಮಾರ್ಟ್ ಟಿವಿಯನ್ನು 5 ಸಾವಿರಕ್ಕಿಂತ ಕಡಿಮೆ ಬೆಲೆಗೆ ಖರೀದಿಸಿ

Flipkart Electronics Sale: ನೀವು 40-ಇಂಚಿನ ಸ್ಮಾರ್ಟ್ ಟಿವಿಯನ್ನು ಖರೀದಿಸಲು ಬಯಸಿದರೆ, ಕೊಡಾಕ್‌ನಿಂದ 40-ಇಂಚಿನ ಸ್ಮಾರ್ಟ್ ಟಿವಿಯನ್ನು ದೊಡ್ಡ ರಿಯಾಯಿತಿಯಲ್ಲಿ ಖರೀದಿಸಬಹುದು. ಈ ರೀತಿಯಾಗಿ ನೀವು 5 ಸಾವಿರ ರೂಪಾಯಿಗಳಿಗಿಂತ ಕಡಿಮೆ ಬೆಲೆಗೆ ಸ್ಮಾರ್ಟ್ ಟಿವಿಯನ್ನು ಖರೀದಿಸಬಹುದು.

Written by - Yashaswini V | Last Updated : Feb 25, 2022, 11:50 AM IST
  • ಫ್ಲಿಪ್‌ಕಾರ್ಟ್ ಎಲೆಕ್ಟ್ರಾನಿಕ್ಸ್ ಸೇಲ್ ನಡೆಯುತ್ತಿದೆ.
  • ಕೊಡಾಕ್‌ನ 40-ಇಂಚಿನ ಸ್ಮಾರ್ಟ್ ಟಿವಿಯನ್ನು ದೊಡ್ಡ ರಿಯಾಯಿತಿಯಲ್ಲಿ ಕಾಣಬಹುದು.
  • ನೀವು 5 ಸಾವಿರ ರೂಪಾಯಿಗಳಿಗಿಂತ ಕಡಿಮೆ ಬೆಲೆಗೆ ಸ್ಮಾರ್ಟ್ ಟಿವಿ ಖರೀದಿಸಬಹುದು.
Flipkart Electronics Sale: 40-ಇಂಚಿನ ಸ್ಮಾರ್ಟ್ ಟಿವಿಯನ್ನು 5 ಸಾವಿರಕ್ಕಿಂತ ಕಡಿಮೆ ಬೆಲೆಗೆ ಖರೀದಿಸಿ  title=
KODAK 7X Pro 40-inch LED Smart TV

Flipkart Electronics Sale: ಫ್ಲಿಪ್‌ಕಾರ್ಟ್ ಎಲೆಕ್ಟ್ರಾನಿಕ್ಸ್ ಸೇಲ್ (Flipkart Electronics Sale) ನಡೆಯುತ್ತಿದ್ದು, ಫೆಬ್ರವರಿ 28 ರವರೆಗೆ ಈ ಸೇಲ್ ನಡೆಯಲಿದೆ. ಮಾರಾಟದ ಸಮಯದಲ್ಲಿ, ಸ್ಮಾರ್ಟ್ ಟಿವಿಗಳು, ಕ್ಯಾಮೆರಾಗಳು ಮತ್ತು ಅನೇಕ ಎಲೆಕ್ಟ್ರಾನಿಕ್ಸ್‌ ವಸ್ತುಗಳ ಮೇಲೆ ಭಾರಿ ರಿಯಾಯಿತಿಗಳನ್ನು ಪಡೆಯಬಹುದಾಗಿದೆ.  ನೀವು ಕಡಿಮೆ ಬಜೆಟ್ ನಲ್ಲಿ ಸ್ಮಾರ್ಟ್ ಟಿವಿಯನ್ನು ಖರೀದಿಸಲು ಯೋಜಿಸುತ್ತಿದ್ದರೆ, ಫ್ಲಿಪ್‌ಕಾರ್ಟ್ ಎಲೆಕ್ಟ್ರಾನಿಕ್ಸ್ ಸೇಲ್  ನಿಮಗೆ ಸುವರ್ಣಾವಕಾಶವನ್ನು ಒದಗಿಸುತ್ತಿದೆ. ಅತ್ಯಂತ ದುಬಾರಿ ಸ್ಮಾರ್ಟ್ ಟಿವಿಗಳು ಇಲ್ಲಿ ಅತ್ಯಂತ ಅಗ್ಗದ ದರದಲ್ಲಿ ದೊರೆಯುತ್ತವೆ. 

ವಾಸ್ತವವಾಗಿ, ಇತ್ತೀಚಿನ ದಿನಗಳಲ್ಲಿ ಬಿಗ್ ಸ್ಕ್ರೀನ್ ಸ್ಮಾರ್ಟ್ ಟಿವಿಗಳ (Smart TV) ಕ್ರೇಜ್ ಹೆಚ್ಚುತ್ತಿದೆ. ನೀವು 40-ಇಂಚಿನ ಸ್ಮಾರ್ಟ್ ಟಿವಿಯನ್ನು ಖರೀದಿಸಲು ಬಯಸಿದರೆ, ಕೊಡಾಕ್‌ನಿಂದ 40-ಇಂಚಿನ ಸ್ಮಾರ್ಟ್ ಟಿವಿಯನ್ನು ದೊಡ್ಡ ರಿಯಾಯಿತಿಯಲ್ಲಿಪಡೆಯಬಹುದು. ನೀವು 5 ಸಾವಿರ ರೂಪಾಯಿಗಳಿಗಿಂತ ಕಡಿಮೆ ಬೆಲೆಗೆ ಸ್ಮಾರ್ಟ್ ಟಿವಿಯನ್ನು ಖರೀದಿಸಬಹುದು. 

ಇದನ್ನೂ ಓದಿ- iPhone ಮೇಲೆ ಭಾರೀ ಡಿಸ್ಕೌಂಟ್ , ಕೇವಲ 13 ಸಾವಿರ ರೂಪಾಯಿಗೆ ಸಿಗಲಿದೆ ದುಬಾರಿ ಫೋನ್

ಫ್ಲಿಪ್‌ಕಾರ್ಟ್ ಎಲೆಕ್ಟ್ರಾನಿಕ್ಸ್ ಮಾರಾಟ: KODAK 7X Pro 40-ಇಂಚಿನ LED ಸ್ಮಾರ್ಟ್ ಟಿವಿ ಕೊಡುಗೆಗಳು ಮತ್ತು ರಿಯಾಯಿತಿಗಳು:
KODAK 7X Pro 40-ಇಂಚಿನ LED ಸ್ಮಾರ್ಟ್ ಟಿವಿಯ ಬಿಡುಗಡೆ ಬೆಲೆ 20,999ರೂ.  ಆಗಿದೆ. ಆದರೆ,  ಫ್ಲಿಪ್‌ಕಾರ್ಟ್ ಎಲೆಕ್ಟ್ರಾನಿಕ್ಸ್  ಸೇಲ್ (Flipkart Electronics Sale) ನಲ್ಲಿ  ನೀವು ಈ ಸ್ಮಾರ್ಟ್ ಟಿವಿಯನ್ನು 17,999 ರೂ.ಗೆ ಖರೀದಿಸಬಹುದು. ಆದರೆ ಟಿವಿಯಲ್ಲಿ ಶೇ.13ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಅದರ ನಂತರ ಅನೇಕ ಬ್ಯಾಂಕ್ ಮತ್ತು ವಿನಿಮಯ ಕೊಡುಗೆಗಳು ಸಹ ಇದರಲ್ಲಿ ಲಭ್ಯವಿದೆ. 

ಫ್ಲಿಪ್‌ಕಾರ್ಟ್ ಎಲೆಕ್ಟ್ರಾನಿಕ್ಸ್ ಮಾರಾಟ: KODAK 7X Pro 40-ಇಂಚಿನ LED ಸ್ಮಾರ್ಟ್ ಟಿವಿ ಬ್ಯಾಂಕ್ ಆಫರ್:
ನೀವು IDFC ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿದರೆ, ನೀವು 1,500 ರೂಪಾಯಿಗಳ ತ್ವರಿತ ರಿಯಾಯಿತಿಯನ್ನು ಪಡೆಯುತ್ತೀರಿ. ಇದರೊಂದಿಗೆ ಹೆಚ್ಚುವರಿಯಾಗಿ 900 ರೂ. ರಿಯಾಯಿತಿ ಕೋಅ ಲಭ್ಯವಾಗಲಿದೆ. ಅಂದರೆ, ಟಿವಿಯ ಬೆಲೆ 15,599 ರೂ. ಆಗಿದೆ.

ಇದನ್ನೂ ಓದಿ- Reliance Jio: ಬ್ಯಾಂಗ್ ಯೋಜನೆ ಪ್ರಾರಂಭಿಸಿದ ಜಿಯೋ, ಅಗ್ಗದ ದರದಲ್ಲಿ ಸಿಗುತ್ತೆ ಹಲವು ಲಾಭ

ಫ್ಲಿಪ್‌ಕಾರ್ಟ್ ಎಲೆಕ್ಟ್ರಾನಿಕ್ಸ್ ಮಾರಾಟ: KODAK 7X Pro 40-ಇಂಚಿನ LED ಸ್ಮಾರ್ಟ್ ಟಿವಿ ಎಕ್ಸ್‌ಚೇಂಜ್ ಆಫರ್:
ಕೊಡಾಕ್ 7ಎಕ್ಸ್ ಪ್ರೊ 40 ಇಂಚಿನ ಎಲ್ ಇಡಿ ಸ್ಮಾರ್ಟ್ ಟಿವಿಯಲ್ಲಿ ರೂ.11 ಸಾವಿರ ಎಕ್ಸ್ ಚೇಂಜ್ ಆಫರ್ ಇದೆ. ನೀವು ಹಳೆಯ ಟಿವಿಯನ್ನು ವಿನಿಮಯ ಮಾಡಿಕೊಂಡರೆ, ನೀವು ಇಷ್ಟು ರಿಯಾಯಿತಿ ಪಡೆಯಬಹುದು. ಆದರೆ ನಿಮ್ಮ ಹಳೆಯ ಟಿವಿಯ ಸ್ಥಿತಿ ಉತ್ತಮವಾಗಿದ್ದರೆ ಮತ್ತು ಮಾಡೆಲ್ ಇತ್ತೀಚಿನದಾಗಿದ್ದರೆ ಮಾತ್ರ 11 ಸಾವಿರ ರೂಪಾಯಿಗಳ ರಿಯಾಯಿತಿ ಲಭ್ಯವಿರುತ್ತದೆ. ನೀವು ಈ ಎಲ್ಲಾ ಕೊಡುಗೆಯ ಸಂಪೂರ್ಣ ಲಾಭವನ್ನು ಪಡೆಯಲು ಸಾಧ್ಯವಾದರೆ 40-ಇಂಚಿನ ಸ್ಮಾರ್ಟ್ ಟಿವಿಯನ್ನು  4,599 ರೂ.ಗಳಿಗೆ ಖರೀದಿಸಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News