Apple, Realme, Samsung, Xiaomi ಫೋನ್‌ಗಳ ಮೇಲೆ ಫ್ಲಿಪ್‌ಕಾರ್ಟ್‌ ನೀಡುತ್ತಿದೆ ಭರ್ಜರಿ ಡಿಸ್ಕೌಂಟ್

Flipkart Big Saving Days: ನೀವು ಅಗ್ಗದ ದರದಲ್ಲಿ ಸ್ಮಾರ್ಟ್‌ಫೋನ್ ಖರೀದಿಸಲು ಬಯಸುತ್ತಿದ್ದರೆ ಮತ್ತು ಕೊಡುಗೆಗಾಗಿ ಕಾಯುತ್ತಿದ್ದರೆ, ಈಗ ಕಾಯುವಿಕೆ ಕೊನೆಗೊಂಡಿದೆ... ಆನ್‌ಲೈನ್ ಶಾಪಿಂಗ್ ಸೈಟ್ ಫ್ಲಿಪ್‌ಕಾರ್ಟ್ ಹೋಳಿ ವಿಶೇಷ ಸಂದರ್ಭಕ್ಕಾಗಿ ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್ ಅನ್ನು ಪ್ರಸ್ತುತಪಡಿಸುತ್ತಿದೆ. ಈ ಸೇಲ್ ಇಂದಿನಿಂದ ಅಂದರೆ ಮಾರ್ಚ್ 12 ರಿಂದ ಪ್ರಾರಂಭವಾಗಿದ್ದು, ಇದು ಮಾರ್ಚ್ 16 ರವರೆಗೆ ಇರುತ್ತದೆ. ಈ ಸೇಲ್‌ನಲ್ಲಿ, ಗ್ರಾಹಕರು Apple iPhone, Samsung, Realme ಮತ್ತು Xiaomi ನಂತಹ ಕಂಪನಿಗಳಿಂದ ಸ್ಮಾರ್ಟ್‌ಫೋನ್‌ಗಳನ್ನು  ಅಗ್ಗದ ದರದಲ್ಲಿ ಖರೀದಿಸಬಹುದು.

Written by - Yashaswini V | Last Updated : Mar 12, 2022, 02:28 PM IST
  • ಫ್ಲಿಪ್‌ಕಾರ್ಟ್ ಹೋಳಿ ವಿಶೇಷ ಸಂದರ್ಭದಲ್ಲಿ ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್ ಅನ್ನು ಪ್ರಸ್ತುತಪಡಿಸುತ್ತಿದೆ.
  • ಈ ಸೇಲ್ ಇಂದಿನಿಂದ ಅಂದರೆ ಮಾರ್ಚ್ 12 ರಿಂದ ಪ್ರಾರಂಭವಾಗಿದೆ.
  • ಈ ಸೇಲ್‌ನಲ್ಲಿ, ಗ್ರಾಹಕರು Apple iPhone, Samsung, Realme ಮತ್ತು Xiaomi ಕಂಪನಿಗಳ ಸ್ಮಾರ್ಟ್‌ಫೋನ್‌ಗಳನ್ನು ಅಗ್ಗದ ದರದಲ್ಲಿ ಖರೀದಿಸಬಹುದು.
Apple, Realme, Samsung, Xiaomi ಫೋನ್‌ಗಳ ಮೇಲೆ ಫ್ಲಿಪ್‌ಕಾರ್ಟ್‌ ನೀಡುತ್ತಿದೆ ಭರ್ಜರಿ ಡಿಸ್ಕೌಂಟ್  title=
Flipkart Big Saving Days : From 12th - 16th March 2022

Flipkart Big Saving Days: ನೀವೂ ಸಹ ಕಡಿಮೆ ಬೆಲೆಯಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಲು ಯೋಜಿಸುತ್ತಿದ್ದರೆ ಫ್ಲಿಪ್‌ಕಾರ್ಟ್‌ನಲ್ಲಿ  ಸುವರ್ಣಾವಕಾಶವಿದೆ. ಹೋಳಿ ವಿಶೇಷ ಸಂದರ್ಭಕ್ಕಾಗಿ, ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್ ಅನ್ನು ಪರಿಚಯಿಸಿದೆ. ಈ ಸೇಲ್ ಇಂದಿನಿಂದ ಅಂದರೆ ಮಾರ್ಚ್ 12 ರಿಂದ ಪ್ರಾರಂಭವಾಗಿದ್ದು, ಇದು ಮಾರ್ಚ್ 16 ರವರೆಗೆ ಇರುತ್ತದೆ.  ಈ ಸೇಲ್‌ನಲ್ಲಿ, ಗ್ರಾಹಕರು Apple iPhone, Samsung, Realme ಮತ್ತು Xiaomi ನಂತಹ ಕಂಪನಿಗಳಿಂದ ಸ್ಮಾರ್ಟ್‌ಫೋನ್‌ಗಳನ್ನು ಅಗ್ಗದ ದರದಲ್ಲಿ ಖರೀದಿಸಲು ಸಾಧ್ಯವಾಗುತ್ತದೆ.  SBI ಕಾರ್ಡ್‌ನೊಂದಿಗೆ ಫೋನ್ ಖರೀದಿಸಿದರೆ 10 ಪ್ರತಿಶತದಷ್ಟು ತ್ವರಿತ ರಿಯಾಯಿತಿ ಸಿಗುತ್ತದೆ. ಅಲ್ಲದೆ ಇನ್ನೂ ಹಲವು ಆಫರ್ ಗಳನ್ನು ನೀಡಲಾಗುತ್ತಿದೆ. 

ಐಫೋನ್ SE:
ಕಡಿಮೆ ಬೆಲೆಯಲ್ಲಿ ಐಫೋನ್‌ ಖರೀದಿಸಲು ನೀವು ಕಾಯುತ್ತಿದ್ದರೆ, ನೀವು 128 GB ಮಾದರಿಯ iPhone SE (2020) ಅನ್ನು ರೂ. 29,999 ಕ್ಕೆ ಖರೀದಿಸಬಹುದು. ಐಫೋನ್ SE (2022) ಮಾದರಿಯನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಗಿದೆ. ಅಂದಹಾಗೆ, Apple Store ನಲ್ಲಿ iPhone SE (2020) ಮಾರಾಟವನ್ನು ನಿಲ್ಲಿಸಲಾಗಿದೆ. ಆದರೆ ನೀವು ಫ್ಲಿಪ್‌ಕಾರ್ಟ್‌ನಿಂದ 29,999 ರೂ.ಗೆ ಫೋನ್ ಖರೀದಿಸಲು ಸಾಧ್ಯವಾಗುತ್ತದೆ. 

Realme Narzo 30:
Realme Narzo 30 ಸ್ಮಾರ್ಟ್‌ಫೋನ್ (Smartphone) 2,500 ರೂಪಾಯಿಗಳ ರಿಯಾಯಿತಿಯಲ್ಲಿ 11,499 ರೂಪಾಯಿಗಳಿಗೆ ಲಭ್ಯವಿದೆ. MediaTek Helio G95 ಚಿಪ್‌ಸೆಟ್ ಬೆಂಬಲದೊಂದಿಗೆ ಫೋನ್ ಅನ್ನು ಪರಿಚಯಿಸಲಾಗಿದೆ. ಫೋನ್ 30W ಡಾರ್ಟ್ ಚಾರ್ಜ್ ಬೆಂಬಲದೊಂದಿಗೆ ಬರುತ್ತದೆ. 

ಇದನ್ನೂ ಓದಿ - Airtel ಗ್ರಾಹಕರಿಗೆ ಸಿಹಿ ಸುದ್ದಿ : ₹209 ಗೆ ಡೈಲಿ ಡೇಟಾ ಜೊತೆಗೆ Amazon Prime ಚಂದಾದಾರಿಕೆ!

ಮೋಟೋರೋಲ್ ಎಡ್ಜ್ 20 ಫ್ಯೂಷನ್:
ಈ 108 ಮೆಗಾಪಿಕ್ಸೆಲ್ ಫೋನ್ ಖರೀದಿಗೆ 4000 ರೂಪಾಯಿ ರಿಯಾಯಿತಿ ನೀಡಲಾಗುತ್ತಿದೆ. ಅಂತಹ ಪರಿಸ್ಥಿತಿಯಲ್ಲಿ,  90Hz ಸ್ಕ್ರೀನ್ ರಿಫ್ರೆಶ್ ರೇಟ್ ಬೆಂಬಲದೊಂದಿಗೆ ಬರುವ ಈ ಫೋನ್ ಅನ್ನು ಫೋನ್ ಅನ್ನು ರೂ. 20,999 ಗೆ ಖರೀದಿಸಬಹುದು.

Xiaomi 11i ಹೈಪರ್ಚಾರ್ಜ್:
Xiaomi 11i ಹೈಪರ್‌ಚಾರ್ಜ್ ಸ್ಮಾರ್ಟ್‌ಫೋನ್ 15 ನಿಮಿಷಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಆಗುತ್ತದೆ. ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್  ಸೇಲ್‌ನಲ್ಲಿ (Flipkart Big Saving Days Sale) ಈ ಫೋನ್ ಅನ್ನು 22,499 ರೂ.ಗೆ ಪರಿಚಯಿಸಲಾಗಿದೆ. ಬ್ಯಾಂಕ್ ಕೊಡುಗೆಯೊಂದಿಗೆ, ಫೋನ್ ಅನ್ನು ರೂ. 21,499 ಗೆ ಖರೀದಿಸಬಹುದು.

ಇದನ್ನೂ ಓದಿ- Flipkart Big Saving Days: 8 ಸಾವಿರದೊಳಗೆ ಖರೀದಿಸಿ 42 ಇಂಚಿನ ಸ್ಮಾರ್ಟ್ ಟಿವಿ

Vivo V23 5G:
Vivo V23 5G ಬಣ್ಣ ಬದಲಾಯಿಸುವ ಸ್ಮಾರ್ಟ್‌ಫೋನ್ ಆಗಿದೆ. ಅಲ್ಲದೆ, ಇದು ಭಾರತದ ಮೊದಲ 50MP ಡ್ಯುಯಲ್ ಸೆಲ್ಫಿ ಕ್ಯಾಮೆರಾ ಫೋನ್ ಆಗಿದೆ. ಫೋನ್‌ನ ಬೆಲೆ 29,990 ರೂ. ಆದರೆ ಬ್ಯಾಂಕ್ ಆಫರ್‌ನಲ್ಲಿ ಫೋನ್ ಅನ್ನು 29,240 ರೂ.ಗೆ ಖರೀದಿಸಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News