Flipkart Big Bachat Dhamaal Sale: 43-ಇಂಚಿನ ಸ್ಮಾರ್ಟ್ ಟಿವಿಯನ್ನು ಅರ್ಧಕ್ಕಿಂತ ಕಡಿಮೆ ಬೆಲೆಗೆ ಮನೆಗೆ ತನ್ನಿ, ಇಲ್ಲಿದೆ ಅದ್ಭುತ ಡೀಲ್‌

Flipkart Big Bachat Dhamaal Sale: ಫ್ಲಿಪ್‌ಕಾರ್ಟ್‌ನಲ್ಲಿ ಫೆಬ್ರವರಿ 3 ರಿಂದ  ಬಿಗ್ ಬಚತ್ ಧಮಾಲ್ ಮಾರಾಟ ನಡೆಯುತ್ತಿದೆ. ಇದರಲ್ಲಿ ಅನೇಕ ಉತ್ಪನ್ನಗಳನ್ನು ಅಗ್ಗವಾಗಿ ಖರೀದಿಸಬಹುದು. 

Written by - Yashaswini V | Last Updated : Feb 4, 2022, 10:24 AM IST
  • ಫ್ಲಿಪ್‌ಕಾರ್ಟ್‌ನಲ್ಲಿ ಬಿಗ್ ಬಚತ್ ಧಮಾಲ್ ಸೇಲ್
  • 43-ಇಂಚಿನ ಸ್ಮಾರ್ಟ್ ಟಿವಿಯನ್ನು ಅರ್ಧಕ್ಕಿಂತ ಕಡಿಮೆ ಬೆಲೆಗೆ ಖರೀದಿಸಿ
  • ಫೆಬ್ರವರಿ 5 ಮಾರಾಟದ ಕೊನೆಯ ದಿನವಾಗಿದೆ
Flipkart Big Bachat Dhamaal Sale: 43-ಇಂಚಿನ ಸ್ಮಾರ್ಟ್ ಟಿವಿಯನ್ನು ಅರ್ಧಕ್ಕಿಂತ ಕಡಿಮೆ ಬೆಲೆಗೆ ಮನೆಗೆ ತನ್ನಿ, ಇಲ್ಲಿದೆ ಅದ್ಭುತ ಡೀಲ್‌  title=
lipkart Big Bachat Dhamaal Sale

Flipkart Big Bachat Dhamaal Sale: ಫ್ಲಿಪ್‌ಕಾರ್ಟ್‌ನಲ್ಲಿ ಫೆಬ್ರವರಿ 3 ರಿಂದ  ಬಿಗ್ ಬಚತ್ ಧಮಾಲ್ ಮಾರಾಟ ನಡೆಯುತ್ತಿದೆ. ಇದರಲ್ಲಿ ನಿಮಗೆ ಬಟ್ಟೆ, ಎಲೆಕ್ಟ್ರಾನಿಕ್ ವಸ್ತುಗಳು ಮತ್ತು ಸ್ಮಾರ್ಟ್‌ಫೋನ್‌ಗಳಂತಹ ಅನೇಕ ಉತ್ಪನ್ನಗಳ ಮೇಲೆ ರಿಯಾಯಿತಿಗಳನ್ನು ನೀಡಲಾಗುತ್ತಿದೆ. ಇದಲ್ಲದೆ 43-ಇಂಚಿನ ಸ್ಮಾರ್ಟ್ ಟಿವಿಯ ಮೇಲೂ ಭರ್ಜರಿ ಕೊಡುಗೆ ಲಭ್ಯವಾಗುತ್ತಿದೆ. ಇಂದು ನಾವು Blaupunkt ನ 43-ಇಂಚಿನ ಉತ್ತಮ ಸ್ಮಾರ್ಟ್ ಟಿವಿಯಲ್ಲಿ ಲಭ್ಯವಿರುವ ಕೊಡುಗೆಗಳ ಕುರಿತು ಮಾಹಿತಿ ನೀಡುತ್ತಿದ್ದೇವೆ. ನೀವು ಈ ಟಿವಿಯನ್ನು ಮಾರುಕಟ್ಟೆ ಬೆಲೆಗಿಂತ (ರೂ.41,999) ಅರ್ಧಕ್ಕಿಂತ ಕಡಿಮೆ ಬೆಲೆಗೆ ಖರೀದಿಸಬಹುದು.

43-ಇಂಚಿನ ಸ್ಮಾರ್ಟ್ ಟಿವಿಗಳ ಮೇಲೆ ಭಾರಿ ರಿಯಾಯಿತಿಗಳು:
ಫ್ಲಿಪ್‌ಕಾರ್ಟ್‌ನ ಬಿಗ್ ಬಚತ್ ಧಮಾಲ್ ಮಾರಾಟ (Flipkart Big Bachat Dhamaal Sale) ದಲ್ಲಿ  Blaupunkt Cybersound 108 cm (43 inch) Ultra HD (4K) LED Smart Android TV ಅನ್ನು ಅಗ್ಗದ ದರದಲ್ಲಿ ಖರೀದಿಸಬಹುದು. ವಾಸ್ತವವಾಗಿ, ಈ ಟಿವಿಯ ಮಾರುಕಟ್ಟೆಯ ಬೆಲೆ  41,999 ರೂ. ಆಗಿದೆ. ಬಿಗ್ ಬಚತ್ ಧಮಾಲ್ ಮಾರಾಟದಲ್ಲಿ , ಈ ಸ್ಮಾರ್ಟ್ ಟಿವಿಯನ್ನು 30% ರಿಯಾಯಿತಿಯ ನಂತರ 28,999 ರೂ.ಗಳಿಗೆ ಮಾರಾಟ ಮಾಡಲಾಗುತ್ತಿದೆ. ಈ ಟಿವಿಯನ್ನು ಖರೀದಿಸುವಾಗ ನೀವು ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಅನ್ನು ಬಳಸಿದರೆ, ನೀವು 5% ಅಂದರೆ 1,450 ರೂ.ಗಳ ಕ್ಯಾಶ್‌ಬ್ಯಾಕ್ ಅನ್ನು ಸಹ ಪಡೆಯುತ್ತೀರಿ, ಇದು ಟಿವಿಯ ಬೆಲೆಯನ್ನು ರೂ. 27,549 ಕ್ಕೆ ಇಳಿಸುತ್ತದೆ.

ಇದನ್ನೂ ಓದಿ- E-Passport: ಏನಿದು ಇ-ಪಾಸ್ಪೋರ್ಟ್? ಅದು ಹೇಗೆ ಕೆಲಸ ಮಾಡುತ್ತೆ? ಇಲ್ಲಿದೆ ವಿವರ

ಅರ್ಧಕ್ಕಿಂತ ಕಡಿಮೆ ಬೆಲೆಗೆ ಸ್ಮಾರ್ಟ್ ಟಿವಿಯನ್ನು ಈ ರೀತಿಯಲ್ಲಿ ಖರೀದಿಸಿ:
Blaupunkt Cybersound 108 cm (43 inch) Ultra HD (4K) LED Smart Android TV ಅನ್ನು ಅರ್ಧಕ್ಕಿಂತ ಕಡಿಮೆ ಬೆಲೆಗೆ ಹೇಗೆ ಖರೀದಿಸುವುದು ಎಂದು ನೀವು ಆಶ್ಚರ್ಯ ಪಡುತ್ತಿದ್ದರೆ, ಈ ಡೀಲ್‌ನ ಕೊಡುಗೆಗಳು ಇನ್ನೂ ಮುಗಿದಿಲ್ಲ. ಈ ಡೀಲ್‌ನಲ್ಲಿ, ಫ್ಲಿಪ್‌ಕಾರ್ಟ್ ಎಕ್ಸ್‌ಚೇಂಜ್ ಆಫರ್ ಅನ್ನು ಸಹ ನೀಡುತ್ತಿದೆ. ಇದರಲ್ಲಿ ನಿಮ್ಮ ಹಳೆಯ ಟಿವಿಗೆ ಬದಲಾಗಿ ಈ ಸ್ಮಾರ್ಟ್ ಟಿವಿಯನ್ನು ಖರೀದಿಸುವ ಮೂಲಕ ನೀವು 11,000 ರೂ.ವರೆಗೆ ಉಳಿಸಬಹುದು. ಈ ಎಕ್ಸ್‌ಚೇಂಜ್ ಆಫರ್‌ನ ಸಂಪೂರ್ಣ ಪ್ರಯೋಜನವನ್ನು ನೀವು ಪಡೆದರೆ, ನಿಮಗಾಗಿ ಈ ಸ್ಮಾರ್ಟ್ ಟಿವಿಯ ಬೆಲೆಯು ರೂ. 27,549 ರಿಂದ ರೂ 16,549 ಕ್ಕೆ ಇಳಿಯುತ್ತದೆ.

ಈ ಸ್ಮಾರ್ಟ್ ಟಿವಿಯ ವೈಶಿಷ್ಟ್ಯಗಳು:
Blaupunkt Cybersound 108 cm (43 inch) Ultra HD (4K) LED Smart Android TV Android ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ನೀವು ಅದರಲ್ಲಿ Google Assistant ಮತ್ತು Chromecast ಇನ್ ಬಿಲ್ಟ್ ಅನ್ನು ಪಡೆಯುತ್ತೀರಿ. ಈ ಸ್ಮಾರ್ಟ್ ಟಿವಿ ಅಲ್ಟ್ರಾ HD (4K) ಡಿಸ್ಪ್ಲೇ ಮತ್ತು 3,840 x 2,160 ಪಿಕ್ಸೆಲ್‌ಗಳ ರೆಸಲ್ಯೂಶನ್‌ನೊಂದಿಗೆ ಬರುತ್ತದೆ. 50W ನ ಧ್ವನಿ ಔಟ್‌ಪುಟ್ ಮತ್ತು 60Hz ನ ರಿಫ್ರೆಶ್ ದರದೊಂದಿಗೆ, ನೀವು ಅದರಲ್ಲಿ ಹಲವು ಆಸಕ್ತಿದಾಯಕ ವೈಶಿಷ್ಟ್ಯಗಳನ್ನು ಪಡೆಯುತ್ತೀರಿ. Blaupunkt ನ ಈ ಸ್ಮಾರ್ಟ್ ಟಿವಿ Netflix, Amazon Prime Video ಮತ್ತು YouTube ನಂತಹ ಎಲ್ಲಾ ಅಪ್ಲಿಕೇಶನ್‌ಗಳನ್ನು ಸಹ ಬೆಂಬಲಿಸುತ್ತದೆ.

ಇದನ್ನೂ ಓದಿ- Airtelನ ಅತ್ಯಂತ ಅಗ್ಗದ ಯೋಜನೆ, ಕೇವಲ 59 ರೂ.ಗೆ ಸಿಗಲಿದೆ 3GB ಹೈ ಸ್ಪೀಡ್ ಡೇಟಾ

ಫ್ಲಿಪ್‌ಕಾರ್ಟ್‌ನ ಈ ಬಿಗ್ ಬಚತ್ ಧಮಾಲ್ ಮಾರಾಟವು ತುಂಬಾ ಚಿಕ್ಕದಾಗಿದೆ ಮತ್ತು ನಾಳೆ ಅಂದರೆ ಫೆಬ್ರವರಿ 5 ಈ ಮಾರಾಟದ ಕೊನೆಯ ದಿನವಾಗಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News