ನವದೆಹಲಿ: Facebook New Feature - ಫೇಸ್‌ಬುಕ್ ತನ್ನ ಬಳಕೆದಾರರಿಗೆ ಅನುಕೂಲಕ್ಕಾಗಿ ತನ್ನ ಅಪ್ಲಿಕೇಶನ್ ಅನ್ನು ನವೀಕರಿಸುತ್ತಲೇ (Latest Update) ಇರುತ್ತದೆ. ಸದ್ಯ ಫೇಸ್ ಬುಕ್ ಹೊಸ ವೈಶಿಷ್ಟ್ಯವೊಂದರ (Facebook New Tool) ಮೇಲೆ ಕೆಲಸ ಮಾಡುತ್ತಿದ್ದು, ಈ ವೈಶಿಷ್ಟ್ಯವನ್ನು ಬಳಸಿ ಬಳಕೆದಾರರು ಅಪರಿಚಿತರಿಂದ ಬರುವ ಸಂದೇಶಗಳನ್ನು ಏಕಕಾಲಕ್ಕೆ ಹಾಗೂ ಅತ್ಯಂತ ಸುಲಭವಾಗಿ ಡಿಲೀಟ್ ಮಾಡಬಹುದು. ಇದರಿಂದ ಬಳಕೆದಾರರು ಅನುಮಾನಾಸ್ಪದ ಬಳಕೆದಾರರನ್ನು ಕೂಡ ನಿರ್ಬಂಧಿಸಲು ಸಾಧ್ಯವಾಗಲಿದೆ. ವರ್ತಮಾನದಲ್ಲಿ ಫೇಸ್ ಬುಕ್ ನಲ್ಲಿ ಯಾವುದೇ ಓರ್ವ ಬಳಕೆದಾರರನ್ನು ಬ್ಲಾಕ್ ಮಾಡಲು ಅಥವಾ ಅವರ ಮೆಸೇಜ್ ಗಳನ್ನೂ ಡಿಲೀಟ್ ಮಾಡಲು ಮ್ಯಾನುವಲ್ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಇದರಿಂದ ಒಂದೊಂದು ಮೆಸೇಜ್ ಗಳನ್ನು ಮಾತ್ರ ಡಿಲೀಟ್ ಮಾಡಬಹುದು. ಆನುಮಾನಾಸ್ಪದ ಬಳಕೆದಾರರನ್ನು ಕೂಡ ಒಂದೊಂದಾಗಿ ಆಯ್ಕೆ ಮಾಡಿ ನಂತರ ಬ್ಲಾಕ್ ಮಾಡಬಹುದು. ಆದರೆ, ಹೊಸ ವೈಶಿಷ್ಟ್ಯ (Facebook Features) ಬಂದ ಬಳಿಕ ಬಳಕೆದಾರರು ಏಕಕಾಲಕ್ಕೆ ಅನುಮಾನಾಸ್ಪದ ಬಳಕೆದಾರರ ಎಲ್ಲಾ ಮೆಸೇಜ್ ಗಳನ್ನು ಡಿಲೀಟ್ ಮಾಡಬಹುದು.
Engadget ನಲ್ಲಿ ಪ್ರಕಟಗೊಂಡ ವರದಿಯೊಂದರ ಪ್ರಕಾರ ಫೇಸ್ ಬುಕ್ (Facebook) ಬಳಿ ಈಗಾಗಲೇ ಪಾಪ್ ಅಪ್ ಫಿಶಿಂಗ್ ನೋಟಿಫಿಕೇಶನ್ ಹಾಗೂ ಬೇಡಾದ ಸಂದೇಶಗಳನ್ನು ನೋಡದೆ ಇರಲು ಸ್ವಯಂಚಾಲಿತ ಇಮೇಜ್ ಮಸುಕಾಗಿಸುವ ಟೂಲ್ ಇದೆ. ಇದಲ್ಲದೆ ಫೇಸ್ ಬುಕ್ ಚೈಲ್ಡ್ ಸೇಫ್ಟಿ ವೈಶಿಷ್ಟ್ಯದ ಮೇಲೂ ಕೂಡ ಕಾರ್ಯನಿರ್ವಹಿಸುತ್ತದೆ. ಇದಲ್ಲದೆ ದೊಡ್ಡ ಪ್ರಮಾಣದಲ್ಲಿ ಸಂದೇಶ ಕಳುಹಿಸುವ ಹಾಗೂ ಫ್ರೆಂಡ್ ರಿಕ್ವೆಸ್ಟ್ ಕಳುಹಿಸುವವರನ್ನು ಕೂಡ ಫೇಸ್ ಬುಕ್ ಗುರುತಿಸುತ್ತಿದೆ.
ಇದನ್ನು ಓದಿ- ಫೇಸ್‌ಬುಕ್‌ಗೆ TikTok ಜೊತೆಗೆ ಸ್ಪರ್ಧಿಸಲೂ ಸಾಧ್ಯವಾಗುತ್ತಿಲ್ಲ
ಫೇಸ್ ಬುಕ್ ಮೆಸೆಂಜರ್ ಹಾಗೂ ಇನ್ಸ್ಟಾಗ್ರಾಮ್ ಇಂಟಿಗ್ರೆಶನ್ ನಿಂದಾಗಿದೆ ಬಳಕೆದಾರರಿಗೆ ಲಾಭ
ಕಳೆದ ವರ್ಷ ಆಗಸ್ಟ್ ನಲ್ಲಿ ಫೇಸ್ ಬುಕ್ ಮೆಸ್ಸೆಂಜರ್ (Facebook Messenger) ಹಾಗೂ ಇನ್ಸ್ಟಾಗ್ರಾಮ್ ಚಾಟ್ ಗಳನ್ನು ಇಂಟಿಗ್ರೇಟ್ ಮಾಡಲಾಗಿತ್ತು. ಇದರಿಂದ ಬಳಕೆದಾರರು ತಮ್ಮ ಫೇಸ್ ಬುಕ್ ಮೆಸೆಂಜರ್ ಅನ್ನು ಬಳಸಿ ಇನ್ಸ್ಟಾಗ್ರಾಮ್ ಮೇಲೆ ಚಾಟ್ ಮಾಡಬಹುದು. ಇದಲ್ಲದೆ ಇನ್ಸ್ಟಾಗ್ರಾಮ್ ಮೂಲಕ ಮೆಸಿಂಜರ್ ಗೂ ಕೂಡ ಸಂದೇಶ ಕಳುಹಿಸಬಹುದು. ಇದಕ್ಕಾಗಿ ಫೇಸ್ ಬುಕ್ ತನ್ನ ಇನ್ಸ್ಟಾಗ್ರಾಮ್ DM ಅನ್ನು ಫೇಸ್ ಬುಕ್ ಮೆಸೆಂಜರ್ ವೇದಿಕೆಗೆ ಜೋಡಿಸಿದೆ.
ಇದನ್ನು ಓದಿ- WhatsApp-Signal ಹಿಂದಿಕ್ಕಿ ನಂಬರ್ 1 ಸ್ಥಾನ ಪಡೆದ Telegram App
ಇದಾದ ಬಳಿಕ ನವೆಂಬರ್ 2020 ರಲ್ಲಿ ಸಾಮಾಜಿಕ ಮಾಧ್ಯಮದ ಕ್ಷೇತ್ರದ ದೈತ್ಯ ಕಂಪನಿಯಾಗಿರುವ ಫೇಸ್ ಬುಕ್ ತನ್ನ ಮೆಸೆಂಜರ್ ಆಪ್ ನಲ್ಲಿ ವ್ಯಾನಿಶ್ ಮೋಡ್ ಪರಿಚಯಿಸಿತ್ತು. ಈ ವೈಶಿಷ್ಟ್ಯ ಸಕ್ರೀಯಗೊಳಿಸಲು ಬಳಕೆದಾರರು ಸೆಟ್ಟಿಂಗ್ಸ್ ವಿಭಾಗಕ್ಕೆ ಭೇಟಿ ನೀಡಬೇಕು. ಅಲ್ಲಿ ಈ ಆಪ್ಶನ್ ಬಳಕೆದಾರರಿಗೆ ಕಾಣಿಸಲಿದೆ. ಬಳಕೆದಾರರು ತಮ್ಮ ಅನುಕೂಲಕ್ಕೆ ತಕ್ಕಂತೆ ಇದನ್ನು ON ಅಥವಾ OFF ಮಾಡಬಹುದು.
ಇದನ್ನು ಓದಿ-Physical Safety Keyಯಿಂದ ನಿಮ್ಮ Facebook ಮಾಹಿತಿ ಇನ್ನಷ್ಟು ಸುರಕ್ಷಿತವಾಗಲಿದೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.