ಮಳೆಗಾಲದಲ್ಲಿ ಫ್ರಿಡ್ಜ್ ವಿಷಯದಲ್ಲಿ ನೀವೂ ಈ ತಪ್ಪುಗಳನ್ನು ಮಾಡ್ತೀರಾ?

Fridge Useing Tips: ಮಾನ್ಸೂನ್ ಬಂತೆಂದರೆ ತುಂತುರು ಮಳೆ, ಚುಮು ಚುಮು ಚಳಿಯ ನಡುವೆ ಎಲೆಕ್ಟ್ರಾನಿಕ್ ಉಪಕರಣಗಳ ಬಳಕೆ ಕೊಂಚ ಕಡಿಮೆ ಆಗುತ್ತದೆ. ಆದರೆ, ಈ ಸಮಯದಲ್ಲಿ ನೀವು ನಿಮ್ಮ ಮನೆ ಇರಲಿ ಇಲ್ಲವೇ ಕಚೇರಿಯಲ್ಲಿರಲಿ  ಏರ್ ಕಂಡಿಷನರ್, ದೂರದರ್ಶನ ಅಥವಾ ರೆಫ್ರಿಜರೇಟರ್ ನಂತಹ ಉಪಕರಣಗಳನ್ನು ಬಹಳ ಎಚ್ಚರಿಕೆಯಿಂದ ಬಳಸಬೇಕು.   

Written by - Yashaswini V | Last Updated : Jul 12, 2023, 03:05 PM IST
  • ಇತ್ತೀಚಿನ ದಿನಗಳಲ್ಲಿ ಬಹುತೇಕ ಎಲ್ಲರ ಮನೆಯಲ್ಲೂ ಕೂಡ ಫ್ರೀಡ್ಜ್ ಇದ್ದೇ ಇರುತ್ತದೆ.
  • ಮಾನ್ಸೂನ್ ನಲ್ಲಿ ರೆಫ್ರಿಜರೇಟರ್ನ ಅತಿದೊಡ್ಡ ಶತ್ರು ಎಂದರೆ ಅತಿಯಾದ ಕೂಲಿಂಗ್, ಮತ್ತದರಿಂದ ಉಂಟಾಗುವ ಬ್ಯಾಕ್ಟೀರಿಯಾಗಳು.
  • ಬೇರೆ ಋತುಗಳಿಗೆ ಹೋಲಿಸಿದರೆ ಮಳೆಗಾಲದಲ್ಲಿ ಫ್ರೀಡ್ಜ್ ನಿಂದ ಒಂದು ವಿಚಿತ್ರ ವಾಸನೆ ಉತ್ಪತ್ತಿಯಾಗುತ್ತದೆ.
ಮಳೆಗಾಲದಲ್ಲಿ ಫ್ರಿಡ್ಜ್ ವಿಷಯದಲ್ಲಿ ನೀವೂ ಈ ತಪ್ಪುಗಳನ್ನು ಮಾಡ್ತೀರಾ?  title=

Fridge Useing Tips: ಸಾಮಾನ್ಯವಾಗಿ ಮಳೆಗಾಲದಲ್ಲಿ ನಾವು ನಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತೇವೆ. ಅಂತೆಯೇ, ನಮ್ಮ ಮನೆಯಲ್ಲಿರುವ ಎಲೆಕ್ಟ್ರಾನಿಕ್ ಸಾಧನಗಳ ಬಗ್ಗೆಯೂ ವಿಶೇಷ ಕಾಳಜಿ ಅಗತ್ಯವಿರುತ್ತದೆ. ವಾಸ್ತವವಾಗಿ, ಮಾನ್ಸೂನ್ ಬಂತೆಂದರೆ ತುಂತುರು ಮಳೆ, ಚುಮು ಚುಮು ಚಳಿಯ ನಡುವೆ ಎಲೆಕ್ಟ್ರಾನಿಕ್ ಉಪಕರಣಗಳ ಬಳಕೆ ಕೊಂಚ ಕಡಿಮೆ ಆಗುತ್ತದೆ. ಆದರೆ, ಈ ಸಮಯದಲ್ಲಿ ನೀವು ನಿಮ್ಮ ಮನೆ ಇರಲಿ ಇಲ್ಲವೇ ಕಚೇರಿಯಲ್ಲಿರಲಿ  ಏರ್ ಕಂಡಿಷನರ್, ದೂರದರ್ಶನ ಅಥವಾ ರೆಫ್ರಿಜರೇಟರ್ ನಂತಹ ಉಪಕರಣಗಳನ್ನು ಬಹಳ ಎಚ್ಚರಿಕೆಯಿಂದ ಬಳಸಬೇಕು.  

ಯಾವುದೇ ಋತುಮಾನವಿರಲಿ ಋತುಮಾನಕ್ಕೆ ತಕ್ಕಂತೆ ನಾವು ನಮ್ಮ ಆರೋಗ್ಯದ ವಿಷಯದಲ್ಲಿ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ  ಎಲೆಕ್ಟ್ರಾನಿಕ್ ಸಾಧನಗಳ ಬಗ್ಗೆಯೂ ಕಾಳಜಿ ಬೇಕಾಗುತ್ತದೆ. ಅದು ಏರ್ ಕಂಡಿಷನರ್, ಟೆಲಿವಿಷನ್ ಅಥವಾ ರೆಫ್ರಿಜರೇಟರ್ ಆಗಿರಲಿ, ಅವುಗಳನ್ನು ಸರಿಯಾಗಿ ನಿರ್ವಹಿಸದಿದ್ದರೆ ಅವುಗಳ ಜೀವಿತಾವಧಿ ಕಡಿಮೆ ಆಗುತ್ತದೆ. ಇಂದು ನಾವು ಮಾನ್ಸೂನ್, ಮಳೆಗಾಲದಲ್ಲಿ ಫ್ರೀಡ್ಜ್ ವಿಷಯದಲ್ಲಿ ಮಾಡುವ ಕೆಲವು ಸಾಮಾನ್ಯ ತಪ್ಪುಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ. 

ಇತ್ತೀಚಿನ ದಿನಗಳಲ್ಲಿ ಬಹುತೇಕ ಎಲ್ಲರ ಮನೆಯಲ್ಲೂ ಕೂಡ ಫ್ರೀಡ್ಜ್ ಇದ್ದೇ ಇರುತ್ತದೆ. ಮಾನ್ಸೂನ್ ನಲ್ಲಿ ರೆಫ್ರಿಜರೇಟರ್ನ ಅತಿದೊಡ್ಡ ಶತ್ರು ಎಂದರೆ ಅತಿಯಾದ ಕೂಲಿಂಗ್, ಮತ್ತದರಿಂದ ಉಂಟಾಗುವ ಬ್ಯಾಕ್ಟೀರಿಯಾಗಳು. ಬೇರೆ ಋತುಗಳಿಗೆ ಹೋಲಿಸಿದರೆ ಮಳೆಗಾಲದಲ್ಲಿ ಫ್ರೀಡ್ಜ್ ನಿಂದ ಒಂದು ವಿಚಿತ್ರ ವಾಸನೆ ಉತ್ಪತ್ತಿಯಾಗುತ್ತದೆ. ಆದರೆ, ನೀವು ಇದನ್ನು ನಿರ್ಲಕ್ಷಿಸಿದರೆ ಫ್ರೀಡ್ಜ್ನಲ್ಲಿ ಸಂಗ್ರಹಿಸಿಟ್ಟ ಆಹಾರ ಪದಾರ್ಥಗಳಲ್ಲಿ ರೋಗಾಣುಗಳ ಸಮಸ್ಯೆ ಕಾಣಿಸಿಕೊಳ್ಳಬಹುದು.  ಇದನ್ನು ತಪ್ಪಿಸಲು ಮಳೆಗಾಲದಲ್ಲಿ ಫ್ರಿಡ್ಜ್ ವಿಷಯದಲ್ಲಿ ಕೆಲವು ತಪ್ಪುಗಳಾಗದಂತೆ ಎಚ್ಚರಿಕೆ ವ್ಹಿಸುವುದು ತುಂಬಾ ಅಗತ್ಯ. 

ಇದನ್ನೂ ಓದಿ- Rain Update: ಬೆಟ್ಟಗಳಿಂದ ಹಿಡಿದು ಮೈದಾನಗಳವರೆಗೆ ಎಲ್ಲಿ ನೋಡಿದರು ಜಲಪ್ರಳಯ... ಇಲ್ಲಿದೆ ಮಳೆಯ ತಾಂಡವದ ಚಿತ್ರಣ

ಮಾನ್ಸೂನ್ ನಲ್ಲಿ ಫ್ರಿಡ್ಜ್ ಗೆ ಸಂಬಂಧಿಸಿದಂತೆ ಇಂತಹ ತಪ್ಪುಗಳನ್ನು ಮಾಡಲೇಬೇಡಿ: 
ಫ್ರಿಡ್ಜ್ ಡೋರ್ ಅನ್ನು ದೀರ್ಘಕಾಲ ತೆರೆದಿಡುವುದು: 

ಕೆಲವೊಮ್ಮೆ ನಮಗೆ ಗೊತ್ತೋ ಗೊತ್ತಿಲ್ಲದೆಯೋ ಫ್ರಿಡ್ಜ್ ಬಾಗಿಲುಗಳನ್ನು ದೀರ್ಘಕಾಲದವರೆಗೆ ತೆರೆದು ಹಾಗೆಯೇ ಇಡುತ್ತೇವೆ. ಆದರೆ, ಮಳೆಗಾಲದಲ್ಲಿ ಇಂತಹ ತಪ್ಪನ್ನು  ಮಾಡದಿರುವುದು ಒಳಿತು. 

ಫ್ರಿಡ್ಜ್ ಸ್ವಚ್ಛಗೊಳಿಸದೇ ಇರುವುದು: 
ಫ್ರಿಡ್ಜ್ ಅನ್ನು ತಂಗಳ ಪೆಟ್ಟಿಗೆ ಎನ್ನುತ್ತಾರೆ. ನಿಜಕ್ಕೂ ಸಿಕ್ಕ ಸಿಕ್ಕದ್ದನ್ನೆಲ್ಲಾ ಅದರೊಳಗೆ ತುಂಬಿ ಕೆಲವರು ಫ್ರಿಡ್ಜ್ ಅನ್ನು ಕಸದ ಡಬ್ಬಿಯೇ ಮಾಡಿರುತ್ತಾರೆ. ಆದರೆ, ಈ ರೀತಿ ಮಾಡುವುದರಿಂದ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತವೆ. ಇದನ್ನು ತಪ್ಪಿಸಲು ಅಗತ್ಯಕ್ಕೆ ಅನುಗುಣವಾಗಿಯಷ್ಟೆ ಫ್ರಿಡ್ಜ್ ಬಳಕೆ ಮಾಡಿರಿ. ಮಾತ್ರವಲ್ಲ, ಆಗಾಗ್ಗೆ ಅದನ್ನು ಸ್ವಚ್ಛಗೊಳಿಸಿ. ಆಗಷ್ಟೇ ಫ್ರಿಡ್ಜ್ ನಲ್ಲಿ ಇರಿಸಲಾದ ಆಹಾರ ಪದಾರ್ಥಗಳು ಸಂರಕ್ಷಿಸಲ್ಪಡುತ್ತವೆ. ಇದು ನಿಮ್ಮ ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದು. 

ಇದನ್ನೂ ಓದಿ- ವೇದಾಂತಾ ಜೊತೆಗಿನ ಸೆಮಿಕಂಡಕ್ಟರ್ ಜಂಟಿ ಉದ್ಯಮದಿಂದ ಹಿಂದಕ್ಕೆ ಸರಿದ ಫಾಕ್ಸ್ ಕಾನ್, ಸರ್ಕಾರ ಹೇಳಿದ್ದೇನು?

ಕೂಲಿಂಗ್ ಸೆಟ್ ಮಾಡದಿರುವುದು: 
ನಮ್ಮಲ್ಲಿ ಕೆಲವರು ರುತುಮಾನಕ್ಕೆ ತಕ್ಕಂತೆ ಫ್ರಿಡ್ಜ್ ಕೂಲಿಂಗ್ ಅನ್ನು ಬದಲಾಯಿಸುವುದಿಲ್ಲ. ವರ್ಷವಿಡೀ ಒಂದೇ ಕೂಲಿಂಗ್ ನಲ್ಲಿ ಫ್ರಿಡ್ಜ್ ಚಲಾಯಿಸುತ್ತಾರೆ. ಆದರೆ, ಫ್ರಿಡ್ಜ್ ನಲ್ಲಿರುವ ಕೂಲಿಂಗ್ ಆಯ್ಕೆಯನ್ನು ಬಳಸಿ, ಋತುಮಾನಕ್ಕೆ ತಕ್ಕಂತೆ ಅದನ್ನು ಹೊಂದಿಸಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/38l6m8543Vk?feature=share

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News