Dish TV ಭರ್ಜರಿ ಆಫರ್..! ತಿಂಗಳು ಪೂರ್ತಿ ಸಿಗಲಿದೆ Free Entertainment

ಡಿಶ್ ಟಿವಿಯ ಅಧಿಕೃತ ವೆಬ್‌ಸೈಟ್ ಪ್ರಕಾರ, ಈಗ ಎಲ್ಲಾ ಗ್ರಾಹಕರಿಗೆ ಒಂದು ತಿಂಗಳ ಉಚಿತ ಚಂದಾದಾರಿಕೆಯನ್ನು ನೀಡಲಾಗುತ್ತಿದೆ. ಡಿಶ್ ಟಿವಿ ತನ್ನ ಗ್ರಾಹಕರಿಗೆ WATCHO ಅಪ್ಲಿಕೇಶನ್ ನ ಉಚಿತ ಚಂದಾದಾರಿಕೆಯನ್ನು ನೀಡುತ್ತಿದೆ. ಈ ಅಪ್ಲಿಕೇಶನ್‌ನ ವಿಶೇಷ ಲಕ್ಷಣವೆಂದರೆ ಈ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಅನೇಕ ಹೊಸ ವೆಬ್ ಸರಣಿಗಳು ಮತ್ತು ರಿಜಿನಲ್ ಗಳನ್ನು ಆನಂದಿಸಬಹುದು.

Written by - Ranjitha R K | Last Updated : Feb 25, 2021, 01:29 PM IST
  • ಡಿಶ್ ಟಿವಿ ನೀಡುತ್ತಿದೆ ಭರ್ಜರಿ ಆಫರ್
  • ಒಂದು ತಿಂಗಳು ಪೂರ್ತಿ ಸಿಗಲಿದೆ ಉಚಿತ ಮನರಂಜನೆ
  • ಈ ಲಾಭವನ್ನು ಪಡೆಯುವುದು ಹೇಗೆ ಎಂಬ ಮಾಹಿತಿ ತಿಳಿಯಿರಿ
Dish TV ಭರ್ಜರಿ ಆಫರ್..! ತಿಂಗಳು ಪೂರ್ತಿ ಸಿಗಲಿದೆ Free Entertainment title=
ಡಿಶ್ ಟಿವಿ ನೀಡುತ್ತಿದೆ ಭರ್ಜರಿ ಆಫರ್ (file photo)

ನವದೆಹಲಿ : ಡಿಶ್ ಟಿವಿ (Dish TV) ತನ್ನ ಗ್ರಾಹಕರಿಗೆ ಉತ್ತಮ ಯೋಜನೆಯನ್ನು ಹೊರ ತಂದಿದೆ. ಈಗ ಎಲ್ಲಾ ಹೊಸ ಮತ್ತು ಹಳೆಯ ಗ್ರಾಹಕರಿಗೆ ಒಂದು ತಿಂಗಳವರೆಗೆ ಉಚಿತ ಚಂದಾದಾರಿಕೆ ನೀಡಲಾಗುತ್ತಿದೆ. ಈ ಅವಕಾಶವನ್ನು ಹೇಗೆ ಬಳಸಿಕೊಳ್ಳಬೇಕು ಎಂಬ ಮಾಹಿತಿ ಇಲ್ಲಿದೆ. 

ಸಿಗಲಿದೆ ಒಂದು ತಿಂಗಳ ಉಚಿತ ಚಂದಾದಾರಿಕೆ: 
ಡಿಶ್ ಟಿವಿಯ  (Dish TV) ಅಧಿಕೃತ ವೆಬ್‌ಸೈಟ್ (Website) ಪ್ರಕಾರ, ಈಗ ಎಲ್ಲಾ ಗ್ರಾಹಕರಿಗೆ ಒಂದು ತಿಂಗಳ ಉಚಿತ ಚಂದಾದಾರಿಕೆಯನ್ನು ನೀಡಲಾಗುತ್ತಿದೆ. ಇದಕ್ಕಾಗಿ, ಬಳಕೆದಾರರು ಒಂದು ವರ್ಷದವರೆಗೆ ರೀಚಾರ್ಜ್ ಮಾಡಬೇಕಾಗುತ್ತದೆ. ಡಿಶ್ ಟಿವಿ 12 ತಿಂಗಳ ಚಂದಾದಾರಿಕೆಯನ್ನು ತೆಗೆದುಕೊಂಡ ನಂತರ ಒಂದು ತಿಂಗಳ ಉಚಿತ ಸೇವೆಯನ್ನು ಒದಗಿಸುತ್ತದೆ.

ಇದನ್ನೂ ಓದಿ  : Netflix ಕಾರ್ಯಕ್ರಮ ವೀಕ್ಷಿಸಲು ಇಂಟರ್ ನೆಟ್ ಬೇಕಿಲ್ಲ, ಬಂದಿದೆ ಹೊಸ ಫೀಚರ್

ಇನ್ನೂ ಹಲವು ಕೊಡುಗೆಗಳಿವೆ : 
ಇದಲ್ಲದೆ, ಬಳಕೆದಾರರು 6 ತಿಂಗಳಿಗಿಂತ ಹೆಚ್ಚು ಕಾಲದವರೆಗಿನ  ರೀಚಾರ್ಜ್ (Recharge) ಮಾಡಿದರೆ, 15 ದಿನಗಳ ಉಚಿತ ಸೇವೆಯನ್ನು ನೀಡಲಾಗುತ್ತಿದೆ. ಅಲ್ಲದೆ ಮೂರರಿಂದ 5 ತಿಂಗಳ ಅಧಿಗೆ ರೀಚಾರ್ಜ್ ಮಾಡಿದ್ದಲ್ಲಿ 7 ದಿನಗಳ ಫ್ರೀ subscription ಸಿಗಲಿದೆ. 

WATCHO ಗೂ  ಫ್ರೀ ಸಬ್ಸ್ಕ್ರಿಪ್ಶನ್ : 
ಡಿಶ್ ಟಿವಿ ತನ್ನ ಗ್ರಾಹಕರಿಗೆ   WATCHO ಅಪ್ಲಿಕೇಶನ್ ಉಚಿತ ಚಂದಾದಾರಿಕೆಯನ್ನು (Free Subscription) ಕೂಡಾ ನೀಡುತ್ತಿದೆ. ಈ ಅಪ್ಲಿಕೇಶನ್‌ನ ವಿಶೇಷ ಲಕ್ಷಣವೆಂದರೆ ಈ ಒಟಿಟಿ (OTT) ಪ್ಲಾಟ್‌ಫಾರ್ಮ್‌ನಲ್ಲಿ ಹೊಸ ವೆಬ್ ಸರಣಿ ಮತ್ತು ಒರಿಜಿನಲ್ ಗಳನ್ನು ವೀಕ್ಷಿಸಬಹುದಾಗಿದೆ.  ಡಿಶ್ ಟಿವಿಯ ಅಧಿಕೃತ ವೆಬ್‌ಸೈಟ್ ಪ್ರಕಾರ, ಅಸ್ತಿತ್ವದಲ್ಲಿರುವ ಗ್ರಾಹಕರು 6 ತಿಂಗಳವರೆಗೆ ಅನಿಯಮಿತವಾಗಿ WATCHOವನ್ನು  ಆನಂದಿಸಬಹುದು. ಇದಕ್ಕಾಗಿ ಬಳಕೆದಾರರು ಯಾವುದೇ ಹಣವನ್ನು ಪಾವತಿಸಬೇಕಾಗಿಲ್ಲ.  

ಡಿ 2 ಹೆಚ್ ಗ್ರಾಹಕರಿಗೆ 5 ವರ್ಷಗಳ ವಾರೆಂಟಿ : 
ಡಿಶ್ ಟಿವಿ ತನ್ನ D2H ಗ್ರಾಹಕರಿಗೆ ವಿಶೇಷ ಯೋಜನೆಯನ್ನು ತಂದಿದೆ. ಕಂಪನಿಯ ಪ್ರಕಾರ, ಡಿ 2 ಹೆಚ್ ಗ್ರಾಹಕರಿಗೆ ಈಗ ಐದು ವರ್ಷಗಳ ಕಾಲ ಸೆಟ್-ಟಾಪ್ ಬಾಕ್ಸ್ ಗಳ  ಖಾತರಿ ನೀಡಲಾಗುವುದು.  ಇದಕ್ಕೂ ಮೊದಲು ಸೆಟ್ ಆಫ್ ಬಾಕ್ಸ್ ಮೇಲೆ 3 ವರ್ಷಗಳ ವಾರೆಮಟಿ ಮಾತ್ರ ಸಿಗುತ್ತಿತ್ತು.  

ಇದನ್ನೂ ಓದಿ  : Google Latest Updates - Google ನ ಈ ಅದ್ಭುತ ವೈಶಿಷ್ಟ್ಯಗಳಿಂದ ನಿಮ್ಮ ಫೋನ್ ಇನ್ನಷ್ಟು ಸ್ಮಾರ್ಟ್ ಆಗಲಿದೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News