Dinosaur On Moon: ಮಾನವನಿಗಿಂತ ಮೊದಲು ಚಂದ್ರನ ಅಂಗಳಕ್ಕೆ ತಲುಪಿದ ಡೈನೋಸಾರ್ ಗಳು

Dinosaur On Moon: ಚಂದ್ರನ ಮೇಲೆ ಮೊದಲ ಹೆಜ್ಜೆ ಇಟ್ಟ ಮಾನವ ಎಂದರೆ ಅದು ನೀಲ್ ಆರ್ಮ್ ಸ್ಟ್ರಾಂಗ್ ಎಂಬ ಸಂಗತಿ ನಿಮ್ಮಲ್ಲರಿಗೂ ಗೊತ್ತು. ಆದರೆ, ಮಾನವರಿಗಿಂತ ಮೊದಲು ಚಂದ್ರನ ಅಂಗಳಕ್ಕೆ ಪಾದಾರ್ಪಣೆ ಮಾಡಿದ್ದು, ಡೈನೋಸಾರ್ ಗಳು ಎಂದರೆ ನೀವು ನಂಬುತ್ತೀರಾ? 

Written by - Zee Kannada News Desk | Last Updated : Jan 24, 2021, 06:35 PM IST
  • ಮಾನವರಿಗಿಂತ ಮೊದಲು ಚಂದ್ರನ ಅಂಗಳಕ್ಕೆ ತಲುಪಿದ್ದವಂತೆ ಡೈನೋಸಾರ್ ಗಳು
  • ಕ್ಷುದ್ರಗ್ರಹದ ಅಪ್ಪಳಿಸುವಿಕೆಯಿಂದ ಚಂದ್ರನ ಮೇಲ್ಮೈ ತಲುಪಿದ ಅವಶೇಷಗಳು
  • ಅಸ್ಟ್ರಾಯಿಡ್ ಅಪ್ಪಲಿಸುವಿಕೆಯಿಂದ 120 ಮೈಲು ಆಳದ ಕುಳಿ ನಿರ್ಮಾಣ.
Dinosaur On Moon: ಮಾನವನಿಗಿಂತ ಮೊದಲು ಚಂದ್ರನ ಅಂಗಳಕ್ಕೆ ತಲುಪಿದ ಡೈನೋಸಾರ್ ಗಳು title=
Dinosaurs On Moon (File Photo)

Dinosaur On Moon - ನವದೆಹಲಿ: ಚಂದ್ರನ ಮೇಲೆ ಮೊದಲ ಹೆಜ್ಜೆ ಇಟ್ಟ ಮಾನವ ಎಂದರೆ ಅದು ನೀಲ್ ಆರ್ಮ್ ಸ್ಟ್ರಾಂಗ್ ಎಂಬ ಸಂಗತಿ ನಿಮ್ಮಲ್ಲರಿಗೂ ಗೊತ್ತು. ಆದರೆ, ಮಾನವರಿಗಿಂತ ಮೊದಲು ಚಂದ್ರನ ಅಂಗಳಕ್ಕೆ ಪಾದಾರ್ಪಣೆ ಮಾಡಿದ್ದು, ಡೈನೋಸಾರ್ ಗಳು ಎಂದರೆ ನೀವು ನಂಬುತ್ತೀರಾ? ಸುಮಾರು 6.6 ಕೋಟಿ ವರ್ಷಗಳ ಹಿಂದೆ ಡೈನೋಸಾರ್ ಗಳು ಚಂದ್ರನ ಮೇಲೆ ತಲುಪಿದ್ದವು . 2017ರಲ್ಲಿ ಪೀಟರ್ ಬ್ರೈನನ್ ಬಿಡುಗಡೆಗೊಳಿಸಿದ್ದ 'ದಿ ಎಂಡ್ಸ್ ಆಫ್ ವರ್ಲ್ಡ್ (The Ends Of World) ನಲ್ಲಿ ಚಂದ್ರನ ಮೇಲೆ ಡೈನೋಸಾರ್ ಗಳ ಪಳಿಯುಳಿಕೆಗಳು ಪತ್ತೆಯಾದ ಕುರಿತು ಉಲ್ಲೇಖವಿದೆ. 

ಸಾಮಾಜಿಕ ಮಾಧ್ಯಮಗಳಲ್ಲಿ ಇತ್ತೀಚೆಗೆ ಈ ಪುಸ್ತಕದ ಕುರಿತು ಭಾರಿ ಚರ್ಚೆಯಾಗುತ್ತಿದೆ. ಖ್ಯಾತ ಬ್ಲಾಗರ್ ಆಗಿರುವ ಮ್ಯಾಟ್ ಆಸ್ಟಿನ್ ಈ ಪುಸ್ತಕದ ಆಯ್ದ ಭಾಗಗಳನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಅಸ್ಟ್ರಾಯಿಡ್ ಗಳೊಂದಿಗೆ ಡಿಕ್ಕಿ ಹೊಡೆದ ಬಳಿಕ ಚಂದ್ರನ ಮೇಲ್ಮೈಗೆ ತಲುಪಿದ ಅವಶೇಷಗಳು

ಅಸ್ಟ್ರಾಯಿಡ್ ಗಳು ಭೂಮಿಗೆ ಅಪ್ಪಳಿಸಿದ ಬಳಿಕ ಅದರ ಅವಶೇಷಗಳು ಚಂದ್ರನ ಮೇಲ್ಮೈಗೆ ತಲುಪಿದವು ಮತ್ತು ಇದು ಮೌಂಟ್ ಎವರೆಸ್ಟ್ (Mount Everest)ಗೂ ವಿಶಾಲ ಕಾಯದ್ದಾಗಿವೆ ಎನ್ನಲಾಗುತ್ತದೆ. ಅಷ್ಟೇ ಅಲ್ಲ ಈ ಅವಶೇಷ ಶರವೇಗದಲ್ಲಿ ಭೂಮಿಯಿಂದ ಚಂದ್ರನತ್ತ ತಲುಪಿವೆ ಎಂದು ಪುಸ್ತಕದಲ್ಲಿ ನಮೂದಿಸಲಾಗಿದೆ.

ಈ ಕುರಿತು ಪುಸ್ತಕದಲ್ಲಿ ಉಲ್ಲೇಖ ಮಾಡಿರುವ ಜಿಯೋಫಿಸಿಸಿಸ್ಟ್ (Geophysicist) ಮಾರಿಯೋ ರೆಬೋಲೆಡೋ, ಈ ಅಸ್ಟ್ರಾಯಿಡ್ ನ ಅಟ್ಮೊಸ್ಫಿರಿಕ್ ಪ್ರೆಶರ್ ಎಷ್ಟೊಂದು ಹೆಚ್ಚಾಗಿತ್ತೆಂದರೆ, ಅದು ಭೂಮಿಗೆ ಡಿಕ್ಕಿಹೊಡೆಯುವುದಕ್ಕೂ ಮುನ್ನವೇ ಭೂಮಿಯಲ್ಲಿ ಮೊನಚು ಕಾಣಿಸಿಕೊಂಡಿತ್ತು ಎಂದು ಹೇಳುತ್ತಾರೆ.

ಇದನ್ನು ಓದಿ-Viral Video: ಬ್ರಹ್ಮಾಂಡದ ಧ್ವನಿ ಎಂದಾದರು ಕೇಳಿದ್ದೀರಾ? ಈ ವಿಡಿಯೋ ವೀಕ್ಷಿಸಿ

ಈ ಅಸ್ಟ್ರಾಯಿಡ್ ಭೂಮಿಗೆ ಅಪ್ಪಳಿಸಿದ ಬಳಿಕ ಸುಮಾರು 120 ಮೈಲುಗಳಷ್ಟು ಆಳದ ಕುಳಿ ಸೃಷ್ಟಿಯಾಗಿತ್ತು
ಪುಸ್ತಕದಲ್ಲಿ ಪ್ರಕಟಿಸಲಾಗಿರುವ ಮಾಹಿತಿ ಪ್ರಕಾರ, ಈ ಅಸ್ಟ್ರಾಯಿಡ್ ಗಾತ್ರ ಎಷ್ಟೊಂದು ವಿಶಾಲವಾಗಿತ್ತೆಂದರೆ, ಈ ಅಸ್ಟ್ರಾಯಿಡ್ ನಿಂದ ಉತ್ಪತ್ತಿಯಾದ ಒತ್ತಡದ ಕಾರಣ ಆಗಸದ ಮೇಲ್ಭಾಗದಲ್ಲಿ ನಿರ್ವಾತ (Vaccum) ಸೃಷ್ಟಿಯಾಗಿತ್ತು. ಹೀಗಾಗಿ ಡೈನೋಸಾರ್ ಗಳ ಪಳಿಯುಳಿಕೆಗಳು ಚಂದನ ಅಂಗಳಕ್ಕೆ ತಲುಪಿರಬಹುದು ಎಂಬ ವಾದ ಕೂಡ ಇದೆ.

ಇದನ್ನು ಓದಿ-Solar Storm ಎಚ್ಚರ..! ಅಪ್ಪಳಿಸಲಿದೆ ಪ್ರಚಂಡ ವೇಗದ ಸೂರ್ಯ ಸುಂಟರಗಾಳಿ, ಭೂಮಿ ಕಥೆ ಏನು.?

ಈ ಅಸ್ಟ್ರಾಯಿಡ್ ಅಪ್ಪಳಿಸುವಿಕೆಯಿಂದ ಭೂಮಿಯಲ್ಲಿ ಸುಮಾರು 120 ಮೈಲುಗಳಷ್ಟು ಆಳವಾದ ಕುಳಿ ನಿರ್ಮಾಣಗೊಂಡಿತ್ತು ಎಂದು ರಿಬೋಲೆಡೊ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ. ಇದರಿಂದ ಆಗಸದಲ್ಲಿ ಲಕ್ಷಾವಧಿ ಟನ್ ಸಲ್ಫರ್ ಹಾಗೂ ಕಾರ್ಬನ್ ಡೈಆಕ್ಸೈಡ್ ನಿರ್ಮಾಣಗೊಂಡಿತ್ತು ಎಂದು ಅವರು ಬರೆದಿದ್ದಾರೆ.

ಇದನ್ನು ಓದಿ-Antarctica ಶ್ವೇತ ಹಿಮಚಾದರದ ಮೇಲೆ ದಿಗ್ಭ್ರಮೆಗೊಳಿಸುವ ವಿಚಿತ್ರ ಆಕೃತಿ.! NASA ಪಂಡಿತರಿಗೂ ಸಿಗುತ್ತಿಲ್ಲ ಉತ್ತರ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News