ನವದೆಹಲಿ : CoWin Portal : ಕರೋನಾ ಕಾಲದಲ್ಲಿ ಲಸಿಕೆ ಪಡೆಯಲು ಜನರು ತಮ್ಮನ್ನು ಕೋವಿನ್ ಪೋರ್ಟಲ್‌ನಲ್ಲಿ (CoWin Portal) ನೋಂದಾಯಿಸಿಕೊಳ್ಳುವುದು ಅಗತ್ಯವಾಗಿದೆ. ಕೋವಿನ್ ಪೋರ್ಟಲ್ ನಲ್ಲಿ ನೋಂದಾಯಿಸಿಕೊಂಡ ನಂತರವೇ ಕೋವಿಡ್ ಲಸಿಕೆ (COVID Vaccine) ಪಡೆಯುವುದು ಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ವ್ಯಾಕ್ಸಿನೆಷನ್ ಸ್ಲಾಟ್ ಗಾಗಿ ಜನ ಸರ್ಚ್ ಮಾಡುತ್ತಲೇ ಇರುತ್ತಾರೆ. ಆದರೆ ಇಲ್ಲಿಯವರೆಗೆ ನಿರಂತರವಾಗಿ ಸರ್ಚ್ ಮಾಡುವ ಯಾವ ಬಳಕೆದಾರರ ವಿರುದ್ಧವೂ ಕ್ರಮ ಕೈಗೊಂಡಿಲ್ಲ. ಆದರೆ ಇನ್ನು ಹಾಗಾಗುವುದಿಲ್ಲ. ಲಸಿಕೆ ಸ್ಲಾಟ್‌ಗಾಗಿ (Vaccination slot) 1,000 ಕ್ಕೂ ಹೆಚ್ಚು ಸರ್ಚ್ ಮಾಡುವವರು ಮತ್ತು 24 ಗಂಟೆಗಳ ಒಳಗೆ 50 ಒಟಿಪಿಗಳನ್ನು (OTP) ಜನರೇಟ್ ಮಾಡುವವರನ್ನು ನಿರ್ಬಂಧಿಸಲಾಗುತ್ತದೆ. ಹೊಸ ವ್ಯವಸ್ಥೆಯಡಿಯಲ್ಲಿ, ಬಳಕೆದಾರರು 15 ನಿಮಿಷಗಳಲ್ಲಿ 20 ಕ್ಕೂ ಹೆಚ್ಚು ಬಾರಿ ಸರ್ಚ್ ಮಾಡಿದರೆ ಅಂಥವರನ್ನು ಕೋವಿನ್ ಪೋರ್ಟಲ್‌ನಿಂದ ಲಾಗ್ ಔಟ್ ಮಾಡಲಾಗುತ್ತದೆ.
ಕೋವಿನ್ ಪೋರ್ಟಲ್‌ನಲ್ಲಿ (CoWin Portal) ಇಲ್ಲಿವರೆಗೆ ಸುಮಾರು 6 ಸಾವಿರ ಬಳಕೆದಾರರನ್ನು ಬ್ಲಾಕ್ ಮಾಡಲಾಗಿದೆ ಎಂದು ಕೇಂದ್ರ ಅಧಿಕಾರಿ ತಿಳಿಸಿದ್ದಾರೆ. ಕೋವಿನ್ ಪೋರ್ಟಲ್ ನಲ್ಲಿ ಬಳಕೆದಾರರನ್ನು ಟ್ರ್ಯಾಕ್ ಮಾಡಲಾಗುವುದು, ಅನುಮಾನಾಸ್ಪದವಾಗಿ ಕಂಡು ಬಂದ ಬಳಕೆದಾರರನ್ನು ಟ್ರ್ಯಾಕ್ ಮಾಡಿ ಬ್ಲಾಕ್ ಮಾಡಲಾಗುವುದು ಎಂದು ಅಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ : Corona Vaccine: ಲಸಿಕೆ ಪ್ರಮಾಣಪತ್ರದಲ್ಲಿ ಹೆಸರು, ಜನ್ಮ ದಿನಾಂಕ, ಲಿಂಗ ತಪ್ಪಿದ್ದರೆ ಅದನ್ನು ಈ ರೀತಿ ಸರಿಪಡಿಸಿ
ಕೋವಿನ್ ಪೋರ್ಟಲ್‌ನಿಂದ logout ಆದ ಬಳಕೆದಾರನಿಗೆ ತನ್ನ ಖಾತೆಯ ಅಸಾಮಾನ್ಯ ಚಟುವಟಿಕೆಗಳ ಬಗ್ಗೆ ಎಚ್ಚರಿಸಲು ಕೋವಿನ್ ಸಪೋರ್ಟ್ ನಿಂದ (CoWin support) ಕರೆ ಬರುತ್ತದೆ. ಪೋರ್ಟಲ್‌ನಲ್ಲಿನ ಹೊಸ ಸೇವಾ ನಿಯಮಗಳ ಸ್ಲಾಟ್‌ಗಳನ್ನು ಕಾಯ್ದಿರಿಸಲು ಸ್ವಯಂಚಾಲಿತ ಸ್ಕ್ರಿಪ್ಟ್‌ಗಳನ್ನು ಬಳಸುವುದನ್ನು ನಿಷೇಧಿಸಲಾಗಿದೆ. ಅಂತಹ ಅಕ್ರಮ ಬಳಕೆದಾರರ ಮೊಬೈಲ್ ಸಂಖ್ಯೆಗಳು (Mobile number) ನಮ್ಮ ರಾಡಾರ್‌ನಲ್ಲಿರುತ್ತವೆ ಮತ್ತು ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ : CoWIN ಅಪ್ಲಿಕೇಶನ್‌ನಲ್ಲಿ ನೋಂದಣಿ ಇನ್ನಷ್ಟು ಸುಲಭ, ಶೀಘ್ರದಲ್ಲೇ ಸಿಗಲಿದೆ ಈ ಸೌಲಭ್ಯ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.