Covid-19 Vaccine Certificate ನಲ್ಲಿನ ತಪ್ಪಾಗಿರುವ ಮಾಹಿತಿ ಮನೆಯಿಂದಲೇ ಸರಿಪಡಿಸುವುದು ಹೇಗೆ?

Covid-19 Vaccine Certificate - ಭಾರತದಲ್ಲಿ ಕೊವಿಡ್-19 ವ್ಯಾಕ್ಸಿನ್ ನ  (Covid-19 Vaccine) ಎರಡೂ ಲಸಿಕೆಗಳನ್ನು ಪಡೆದ ಬಳಿಕ ಸರ್ಕಾರ ನಿಮಗೆ ವ್ಯಾಕ್ಸಿನ್ ಪ್ರಮಾಣಪತ್ರವನ್ನು ಜಾರಿಗೊಳಿಸುತ್ತದೆ. ಆದರೆ, ಇದೊಂದು ಅಧಿಕೃತ ದಾಖಲೆಯಾಗಿದೆ. 

Written by - Nitin Tabib | Last Updated : Jun 21, 2021, 08:51 PM IST
  • ಭಾರತದಲ್ಲಿ ಕೊವಿಡ್ -19 ಎರಡೂ ಲಸಿಕೆ ಹಾಕಿಸಿಕೊಂಡ ಬಳಿಕ ಸರ್ಟಿಫಿಕೆಟ್ ನೀಡಲಾಗುತ್ತದೆ.
  • ನಿಮಗೂ ಈ ಸರ್ಟಿಫಿಕೆಟ್ ದೊರೆತಿದ್ದು, ಅದರಲ್ಲಿ ತಪ್ಪುಗಳಿದ್ದರೆ,
  • ಮನೆಯಲ್ಲಿಯೇ ಕುಳಿತು ನೀವೂ ಕೂಡ ತಪ್ಪುಗಳನ್ನು ಸರಿಪಡಿಸಬಹುದು.
Covid-19 Vaccine Certificate ನಲ್ಲಿನ ತಪ್ಪಾಗಿರುವ ಮಾಹಿತಿ ಮನೆಯಿಂದಲೇ ಸರಿಪಡಿಸುವುದು ಹೇಗೆ? title=
Covid-19 Vaccine Certificate (File Photo)

ನವದೆಹಲಿ: Covid-19 Vaccine Certificate - ಭಾರತದಲ್ಲಿ ಕೊವಿಡ್-19 ವ್ಯಾಕ್ಸಿನ್ ನ  (Covid-19 Vaccine) ಎರಡೂ ಲಸಿಕೆಗಳನ್ನು ಪಡೆದ ಬಳಿಕ ಸರ್ಕಾರ ನಿಮಗೆ ವ್ಯಾಕ್ಸಿನ್ ಪ್ರಮಾಣಪತ್ರವನ್ನು ಜಾರಿಗೊಳಿಸುತ್ತದೆ. ಆದರೆ, ಇದೊಂದು ಅಧಿಕೃತ ದಾಖಲೆಯಾಗಿದೆ. ಹೀಗಾಗಿ ಒಂದು ವೇಳೆ ನೀವೂ ಕೂಡ ನಿಮ್ಮ ಲಸಿಕೆಯ ಎರಡು ಪ್ರಮಾಣಗಳನ್ನು ಹಾಕಿಸಿಕೊಂಡಿದ್ದರೆ, ನಿಮ್ಮ ವ್ಯಾಕ್ಸಿನೆಶನ್ ಸರ್ಟಿಫಿಕೆಟ್ ನ ವಿವರಗಳನ್ನೊಮ್ಮೆ ಗಮನವಿಟ್ಟು ಪರಿಶೀಲಿಸಿ. ಏಕೆಂದರೆ, ಇತ್ತೀಚಿಗೆ ವ್ಯಾಕ್ಸಿನೇಷನ್ ಸರ್ಟಿಫಿಕೆಟ್ ನಲ್ಲಿ ಹಲವು ತಪ್ಪುಗಳಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಇದನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ವ್ಯಾಕ್ಸಿನೆಶನ್ ಪ್ರಮಾಣ ಪತ್ರದಲ್ಲಿನ (Covid-19 Vaccine Certificate) ತಪ್ಪುಗಳನ್ನು ನಿಮ್ಮಷ್ಟಕ್ಕೆ ನೀವೇ ಸರಿಪಡಿಸಿಕೊಳ್ಳಲು ಅವಕಾಶ ಕಲ್ಪಿಸಿದೆ. ಈ ಕೆಲಸವನ್ನು ನೀವು Cowin Portal ಮೂಲಕ ಮಾಡಬಹುದಾಗಿದೆ. ಹಾಗಾದರೆ ಬನ್ನಿ ತಪ್ಪುಸರಿಪಡಿಸುವ ವಿಧಾನದ ಕುರಿತು ತಿಳಿದುಕೊಳ್ಳೋಣ .

ಇದನ್ನೂ ಓದಿ- ಕ್ಯಾನ್ಸಲ್ ಮಾಡಿದ ರೈಲು ಟಿಕೆಟ್ ಗೆ ಇನ್ಮುಂದೆ ತಕ್ಷಣ ರಿಫಂಡ್ ಪಡೆಯಿರಿ, ಹೇಗೆ ಅಂತಿರಾ? ಈ ಸುದ್ದಿ

ಈ ರೀತಿ ಪ್ರಮಾಣಪತ್ರದಲ್ಲಿನ ತಪ್ಪು ಸರಿಪಡಿಸಿ
>> ಇದಕ್ಕಾಗಿ ಮೊದಲು ನೀವು www.cowin.gov.in ಪೋರ್ಟಲ್ ಗೆ ಭೇಟಿ ನೀಡಬೇಕು.
>> ನಿಮ್ಮ 10 ಅಂಕಗಳ ಮೊಬೈಲ್ ಸಂಖ್ಯೆ ಬಳಸಿ ಲಾಗಿನ್ ಆಗಿ.
>> ಒಂದು ವೇಳೆ ನಿಮಗೆ ವ್ಯಾಕ್ಸಿನ್ ನ ಒಂದೇ ಪ್ರಮಾಣ ದೊರೆತಿದ್ದರೆ, ಅಲ್ಲಿ ನಿಮಗೆ  Raise an Issue ಬಟನ್ ಕಾಣಿಸಲಲಿದೆ. ಅದರ ಮೇಲೆ ಕ್ಲಿಕ್ಕಿಸಿ.
>> ಬಳಿಕ Correction In Certificate ಮೇಲೆ ಕ್ಲಿಕ್ಕಿಸಿ.
>> ನಂತರ ಕೆಳಗೆ ನೀಡಲಾಗಿರುವ ಮಾಹಿತಿಯಲ್ಲಿ ತಪ್ಪಾಗಿರುವ ಪ್ರತಿಯೊಂದು ಮಾಹಿತಿಯ ಮೇಲೆ ಅವುಗಳನ್ನು ಸರಿಪಡಿಸಿ. ಹೆಸರು, ಜನ್ಮ ತಿಥಿ, ವರ್ಷ ಹಾಗೂ ಜೆಂಡರ್ ನಲ್ಲಿನ ಕೇವಲ ಎರಡು ಮಾಹಿತಿಗಳನ್ನು ನೀವು ಸರಿಪಡಿಸಬಹುದು ಹಾಗೂ ಕೇವಲ ಒಂದು ಬಾರಿಗೆ ಮಾತ್ರ ಅವುಗಳನ್ನು ಬದಲಾಯಿಸಲು ಅವಕಾಶ ನೀಡಲಾಗಿದೆ. ಹೀಗಾಗಿ ಬದಲಾವಣೆ ಮಾಡುವ ಮುನ್ನ ಎಲ್ಲ ಮಾಹಿತಿಯನ್ನು ಕೂಲಂಕುಷವಾಗಿ ಪರಿಶೀಲಿಸಿದ ಬಳಿಕ ಮಾತ್ರವೇ ಭರ್ತಿ ಮಾಡಿ.
>> ಆ ಬಳಿಕ Continue ಮೇಲೆ ಕ್ಲಿಕ್ಕಿಸಿ.
>> ಇದಾದ ಬಳಿಕ ನೀಡಲಾಗಿರುವ ಸ್ಟೆಪ್ಸ್ ಅನುಸರಿಸಿ ಹಾಗೂ ನಿಮ್ಮ ಮಾಹಿತಿ ಅಪ್ಡೇಟ್ ಆಗಲಿದೆ ಮತ್ತು ಆ ಮಾಹಿತಿ ಫೈನಲ್ ಸರ್ಟಿಫಿಕೆಟ್ ನಲ್ಲಿ ಕಾಣಿಸಲಿದೆ.

ಇದನ್ನೂ ಓದಿ-Amarnath Yatra 2021: ಅಮರನಾಥ್ ದರ್ಶನಾರ್ಥಿಗಳಿಗೊಂದು ಕಹಿ ಸುದ್ದಿ, ಸತತ ಎರಡನೇ ವರ್ಷ ಕೂಡ ಯಾತ್ರೆ ರದ್ದು

ಈ ಸರ್ಟಿಫಿಕೆಟ್ ಅನ್ನು ನೀವು Cowinವೆಬ್ಸೈಟ್ ಅಥವಾ ಆರೋಗ್ಯ ಸೇತು ಆಪ್ (Aarogya Setu App) ಮೂಲಕ ಕೂಡ ಡೌನ್ಲೋಡ್ ಮಾಡಬಹುದಾಗಿದೆ. ಈ ಸರ್ಟಿಫಿಕೆಟ್ ನಲ್ಲಿ 13 ಅಂಕಗಳ ಲಾಭಾರ್ಥಿ ಐಡಿ ನೀಡಲಾಗಿರುತ್ತದೆ. ಇದರಿಂದ ನಿಮ್ಮ ವ್ಯಾಕ್ಸಿನೇಷನ್ ಗೆ ಸಂಬಂಧಿಸಿದ ಮಾಹಿತಿ ದೊರೆಯುತ್ತದೆ. ಉದಾಹರಣೆಗಾಗಿ ನಿಮಗೆ ಯಾವಾಗ ವ್ಯಾಕ್ಸಿನ್ ಪ್ರಮಾಣ ಹಾಕಲಾಗಿದೆ, ಯಾವ ಆರೋಗ್ಯ ಅಧಿಕಾರಿ ನಿಮಗೆ ಲಸಿಕೆ (Corona Vaccine) ಹಾಕಿದ್ದಾರೆ ಹಾಗೂ ಯಾವ ಕೇಂದ್ರದಲ್ಲಿ ನಿಮಗೆ ವ್ಯಾಕ್ಸಿನ್ ಹಾಕಲಾಗಿದೆ ಇತ್ಯಾದಿ.

ಇದನ್ನೂ ಓದಿ- International Yoga Day 2021: PM Modiಯಿಂದ mYoga App ಬಿಡುಗಡೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News