Male Pregnancy: ಇನ್ಮುಂದೆ ಪುರುಷರೂ ಕೂಡ ಗರ್ಭಧರಿಸಬಹುದಂತೆ, ತಲೆಕೆಟ್ಟ ಚೀನಾ ವಿಜ್ಞಾನಿಗಳಿಂದ ವಿಲಕ್ಷಣ ಆವಿಷ್ಕಾರ

Male Pregnancy - ವಿಶ್ವಾದ್ಯಂತ ಮಾರಕ ಕೊರೊನಾ ರೋಗ ಹರಡಿರುವ ಚೀನಾ ದೇಶದ ವಿಜ್ಞಾನಿಗಳು ಇದೀಗ ಒಂದು ಭಯಾನಕ ಮತ್ತು ವಿಲಕ್ಷಣ ಆವಿಷ್ಕಾರ (Freeking Chinese Experiment) ನಡೆಸಿರುವುದಾಗಿ ಹೇಳಿಕೊಂಡಿದ್ದಾರೆ. ತಮ್ಮ ಈ ಹೊಸ ಆವಿಷ್ಕಾರದ ಮೂಲಕ ಪುರುಷರು ಕೂಡ ಗರ್ಭ ಧರಿಸಿ, ಮಕ್ಕಳಿಗೆ ಜನ್ಮ ನೀಡಬಹುದು (Male Pregnancy) ಎಂದು ವಿಜ್ಞಾನಿಗಳು ಹೇಳಿದ್ದಾರೆ.  ಈ ಹೊಸ ಆವಿಷ್ಕಾರದಲ್ಲಿ, ವಿಜ್ಞಾನಿಗಳು ಸಿಸೇರಿಯನ್ ಮೂಲಕ ಪುರುಷರಲ್ಲಿ ಗರ್ಭಾಶಯವನ್ನು ಅಳವಡಿಸುವ ಮೂಲಕ ಗರ್ಭಧಾರಣೆಯ ಸಾಧನೆ ಮಾಡಿದ್ದಾರೆ.

Written by - Nitin Tabib | Last Updated : Jun 18, 2021, 02:06 PM IST
  • ತಲೆಕೆಟ್ಟ ಚೀನಾ ವಿಜ್ಞಾನಿಗಳ ವಿಲಕ್ಷಣ ಪ್ರಯೋಗ.
  • ಗಂಡು ಇಲಿಯನ್ನು ಗರ್ಭಿಣಿಯನ್ನಾಗಿಸಿ ಹೊಸ ಸಾಧನೆ ಎಂದ ಚೀನಾ.
  • ಇನ್ಮುಂದೆ ಪುರುಷರ ಮೇಲೆಯೂ ಕೂಡ ನಡೆಯಲಿದೆ ಈ ಪ್ರಯೋಗ.
Male Pregnancy: ಇನ್ಮುಂದೆ ಪುರುಷರೂ ಕೂಡ ಗರ್ಭಧರಿಸಬಹುದಂತೆ, ತಲೆಕೆಟ್ಟ ಚೀನಾ ವಿಜ್ಞಾನಿಗಳಿಂದ ವಿಲಕ್ಷಣ ಆವಿಷ್ಕಾರ title=
Freaking Chinese Experiment (Photo Courtesy: Daily Mail)

ಬಿಜಿಂಗ್: Freeking Chines Experiment - ಚೀನೀ (China) ವಿಜ್ಞಾನಿಗಳು ವಿಚಿತ್ರ, ಕೇಳಲು ಭಯಾನಕ ಹಾಗೂ ವಿಲಕ್ಷಣ ಪ್ರಯೋಗವೊಂದನ್ನು (Weired Experiment) ನಡೆಸುತ್ತಿದ್ದಾರೆ. ಇತ್ತೀಚೆಗೆ, ಚೀನಾದ ವುಹಾನ್ ಲ್ಯಾಬ್‌ನಿಂದ (Wuhan Lab) ಹೊರಬಂದ ವಿಜ್ಞಾನಿಯೊಬ್ಬರು ಚೀನಾ ಚಿತ್ರ ವಿಚಿತ್ರ ಸಂಶೋಧನೆ ನಡೆಸುತ್ತಿರುತ್ತದೆ ಎಂದು ಹೇಳಿದ್ದಾರೆ. ಚೀನಾದಲ್ಲಿ ನಡೆಸಲಾಗುವ ಇಂತಹ ಹಲವು ಸಂಶೋಧನೆಗಳನ್ನು ಸಾಮಾನ್ಯವಾಗಿ ಇತರ ದೇಶಗಳಲ್ಲಿ ನಿಷೇಧಿಸಲಾಗಿದೆ. ಏತನ್ಮಧ್ಯೆ  ಚೀನಾದ ವಿಜ್ಞಾನಿಗಳು ಪುರುಷರನ್ನು ಗರ್ಭಿಣಿಯನ್ನಾಗಿಸುವ ಪವಾಡದಲ್ಲಿ ಯಶಸ್ವಿಯಗಿರುವುದಾಗಿ ಹೇಳಿಕೊಂಡಿದ್ದಾರೆ. ಇದಕ್ಕಾಗಿ ಅವರು ಹಲವು ವರ್ಷಗಳಿಂದ ಸಂಶೋಧನೆ ನಡೆಸುತ್ತಿದ್ದರು ಇನ್ನಲಾಗಿದ್ದು, ಈ ಪ್ರಯೋಗ ಇದೀಗ ಯಶಸ್ವಿಯಾಗಿದೆ ಎನ್ನಲಾಗಿದೆ.

ಚೀನಾದ (China) ವಿಜ್ಞಾನಿಗಳು ನಡೆಸಿದ ಈ ಸಂಶೋಧನೆಯಲ್ಲಿ ಗಂಡು ಇಲಿಗಳ ದೇಹದ ಮೇಲೆ ಪ್ರಯೋಗಗಳನ್ನು ನಡೆಸಲಾಗಿದೆ. ಇದರಲ್ಲಿ, ಶಸ್ತ್ರಚಿಕಿತ್ಸೆಯ ಮೂಲಕ ಹೆಣ್ಣು ಇಲಿಯ ದೇಹದಿಂದ ತೆಗೆದ ಗರ್ಭಾಶಯವನ್ನು ಗಂಡು ಇಲಿಯ ದೇಹದಲ್ಲಿ ಅಳವಡಿಸಲಾಗಿದೆ (Uterus Transplant). ಇದರ ನಂತರ, ಗಂಡು ಇಲಿಯನ್ನು ಗರ್ಭಿಣಿಯನ್ನಾಗಿಸಿ, ಸಿಜೇರಿಯನ್ ಮೂಲಕ ಮರಿ ಇಲಿಗಳನ್ನು ಹೊರತೆರೆಯಲಾಗಿದೆ. ಈ ಸಂಶೋಧನೆಯ ನಂತರ, ಇದೀಗ ಭವಿಷ್ಯದಲ್ಲಿ ಪುರುಷರು ಗರ್ಭಿಣಿಯಾಗುವ ಸಾಧ್ಯತೆಗಳು ಹೆಚ್ಚಿವೆ. ಇನ್ಫೋವರ್ಸ್ ವರದಿಯ ಪ್ರಕಾರ, ಈ ಸಂಶೋಧನೆಯ ನಂತರ, ಮಕ್ಕಳನ್ನು ಹೊಂದಲು ಬಯಸುವ ಟ್ರಾನ್ಸ್ಜೆಂಡರ್ಗಳಿಗೆ ಇದರಿಂದ ಸಹಾಯ ಸಿಗಲಿದೆ ಎನ್ನಲಾಗಿದೆ.

ಇದನ್ನೂ ಓದಿ- Lambda COVID-19 New Variant: 29 ದೇಶಗಳಲ್ಲಿ ದೊರೆತೆ ಕೊವಿಡ್-19 ಲ್ಯಾಮ್ದಾ ರೂಪಾಂತರಿ, WHO ಹೇಳಿದ್ದೇನು?

ಈ ಪ್ರಯೋಗ ಹೇಗೆ ನಡೆಸಲಾಗಿದೆ?
ಈ ಪ್ರಯೋಗವನ್ನು ಶಾಂಘೈನ ನೌಕಾ ವೈದ್ಯಕೀಯ ವಿಶ್ವವಿದ್ಯಾಲಯ  (Naval Medical University) ಮಾಡಿದೆ. ಇದರಲ್ಲಿ, ಸಂಶೋಧಕರು ಮೊದಲು ಹೆಣ್ಣು ಇಲಿಗಳ ದೇಹದಿಂದ ಗರ್ಭಾಶಯವನ್ನು ಹೊರತೆಗೆದು, ನಂತರ ಅದನ್ನು ಗಂಡು ಇಲಿಯ ದೇಹದಲ್ಲಿ ಶಸ್ತ್ರಚಿಕಿತ್ಸೆ ನಡೆಸಿ ಅಳವಡಿಸಿದ್ದಾರೆ. ಈ ಗರ್ಭಾಶಯದ ಕಸಿ ನಂತರ, ಗಂಡು ಇಲಿ ಗರ್ಭಿಣಿಯಾಗಿದ್ದು, ಸಿಸೇರಿಯನ್ ಮೂಲಕ ಹೆರಿಗೆ ಹೆರಿಗೆ ಪ್ರಕ್ರಿಯೆ ಮಾಡಲಾಗಿದೆ. ಈ ಸಂಶೋಧನೆಯನ್ನು ಒಟ್ಟು ನಾಲ್ಕು ಹಂತಗಳಲ್ಲಿ ಪೂರ್ಣಗೊಳಿಸಲಾಗಿದೆ. ಇದನ್ನು ಇಲಿ ಮಾದರಿ ಎಂದು ಕರೆಯಲಾಗುತ್ತಿದೆ. ಆದರೆ ಇದುವರೆಗೆ ಈ  ಪ್ರಯೋಗದ ರ ಯಶಸ್ಸಿನ ಪ್ರಮಾಣ ಕೇವಲ ಶೇ.3.68 ರಷ್ಟು ಮಾತ್ರ ಇದೆ ಎಂದು ವರದಿಯಾಗಿದೆ. ಗಂಡು ಇಲಿಯಲ್ಲಿ ಈ ಪ್ರಯೋಗ ಯಶಸ್ವಿಯಾಯಿತು ಮತ್ತು ಗಂಡು ಇಲಿ 10 ಮಕ್ಕಳಿಗೆ ಜನ್ಮ ನೀಡಿದೆ.

ಇದನ್ನೂ ಓದಿ-Coronasomia: Covid-19 ಮಹಾಮಾರಿಯ ನಡುವೆಯೇ ಹೆಚ್ಚಾಗುತ್ತಿದೆ ಈ ನಿಗೂಢ ಕಾಯಿಲೆಯ ಅಪಾಯ!

ಇನ್ಮುಂದೆ ಮನುಷ್ಯರ ಮೇಲೆ ಇದರ ಪ್ರಯೋಗ
ಚೀನಾದ ವಿದ್ಯಾನಿಗಳು ಇದೀಗ ಈ Rat Model ಪ್ರಯೋಗವನ್ನು ಮನುಷ್ಯರ ಮೇಲೆ ನಡೆಸಲು ಮುಂದಾಗಿದ್ದಾರೆ. ಗಂಡು ಪ್ರಾಣಿಯನ್ನು ಗರ್ಭಿಣಿಯನ್ನಾಗಿಸಿದ ಮೊದಲ ಪ್ರಕರಣ ಇದಾಗಿದೆ. ಸಸ್ತನಿಗಳಲ್ಲಾದ ಈ ಪ್ರಯೋಗದಿಂದ ಇದೀಗ ಮಾನವರ ಮೇಲೆ ಈ ಪ್ರಯೋಗ ಯಶಸ್ವಿಯಾಗುವ ಸಾಧ್ಯತೆಗಳು ಹೆಚ್ಚಾಗತೊಡಗಿವೆ. ಇದಕ್ಕೂ ಮೊದಲು NYU ಸ್ಕೂಲ್ ಆಫ್ ಮೆಡಿಸಿನ್ ಕೂಡ ಟ್ರಾನ್ಸ್ ಜೆಂಡರ್ಸ್ ಗಳ ಮೇಲೆ ಈ ಪ್ರಯೋಗ ನಡೆಸಿತ್ತು. ಇದರಲ್ಲಿ ಗರ್ಭಿಣಿಯಾಗಬಯಸುವ ಟ್ರಾನ್ಸ್ ಜೆಂಡರ್ ಗಳು ಯುಟೆರಸ್ ಶಸ್ತ್ರಚಿಕಿತ್ಸೆಗೆ ಒಳಗಾಗುವುದಿಲ್ಲ ಹಾಗೂ ಪುರುಷರ ಶರೀರದಲ್ಲಿಯೇ ಗರ್ಭ ಧರಿಸುತ್ತಾರೆ.

ಇದನ್ನೂ ಓದಿ-Corona Vaccine For Children: ಸಿದ್ಧಗೊಂಡಿದೆ ಮಕ್ಕಳ 'ಸುರಕ್ಷಾ ಕವಚ'! ಕೋತಿಗಳ ಮೇಲಿನ ಆರಂಭಿಕ ಪರೀಕ್ಷೆ ಯಶಸ್ವಿ !

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News