Nothing ಹೊರ ತರುತ್ತಿದೆ ಅತ್ಯಂತ ಅಗ್ಗದ Smartphone! ಬ್ಯಾಟರಿ, ಕ್ಯಾಮರಾ ಎಲ್ಲವೂ ಸೂಪರ್ !

ನಥಿಂಗ್ ಫೋನ್ (2a) ನಂತರ, ಸಬ್ ಬ್ರಾಂಡ್ CMF ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಮೊದಲ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ.  

Written by - Ranjitha R K | Last Updated : May 8, 2024, 02:11 PM IST
  • CMF ಭಾರತೀಯ ಮಾರುಕಟ್ಟೆಯಲ್ಲಿ ಮೊದಲ ಸ್ಮಾರ್ಟ್‌ಫೋನ್
  • ಇದನ್ನು CMF ಫೋನ್ (1) ಎಂದು ಹೆಸರಿಸಲಾಗುವುದು.
  • CMF ಫೋನ್ 1 ಬೆಲೆ ಎಷ್ಟು?
Nothing ಹೊರ ತರುತ್ತಿದೆ ಅತ್ಯಂತ ಅಗ್ಗದ Smartphone! ಬ್ಯಾಟರಿ, ಕ್ಯಾಮರಾ ಎಲ್ಲವೂ ಸೂಪರ್ ! title=

New Smartphone :ನಥಿಂಗ್ ಫೋನ್ (2a) ನಂತರ, ಸಬ್ ಬ್ರಾಂಡ್ CMF ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಮೊದಲ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ. CMF ಇತ್ತೀಚೆಗೆ ಇಯರ್‌ಬಡ್‌ಗಳು ಮತ್ತು ಸ್ಮಾರ್ಟ್‌ವಾಚ್ ಅನ್ನು ಬಿಡುಗಡೆ ಮಾಡಿದೆ.ಇದಾದ ಬಳಿಕ ಈಗ ಸ್ಮಾರ್ಟ್‌ಫೋನ್ ನತ್ತ ಗಮನ ಹರಿಸಿದೆ. ಇದನ್ನು ಬಹುಶಃ CMF ಫೋನ್ (1) ಎಂದು ಹೆಸರಿಸಲಾಗುವುದು. ಇದು ಕೈಗೆಟುಕುವ ಸ್ಮಾರ್ಟ್‌ಫೋನ್ ಆಗಲಿದೆ ಎಂದು ನಿರೀಕ್ಷಿಸಲಾಗಿದೆ. 

CMF ಫೋನ್ 1 ಬೆಲೆ ಎಷ್ಟು?  :
ವರದಿಯೊಂದರ ಪ್ರಕಾರ, CMF ಫೋನ್ 1ರ ಬೆಲೆ ಸುಮಾರು 12,000 ರೂ ಆಗಿರಬಹುದು. ಇದು ನಥಿಂಗ್ ಫೋನ್ 2a ಗಿಂತ ಬಹಳಷ್ಟು ಅಗ್ಗವಾಗಿದೆ.  CMF ನ ಮೊದಲ ಫೋನ್ ನಥಿಂಗ್ ಫೋನ್‌ಗಿಂತ ಕಡಿಮೆ ಬೆಲೆಯಲ್ಲಿ ಲಭ್ಯವಿದ್ದು, ಉತ್ತಮ ಆಯ್ಕೆಯಾಗಿದೆ.

ಇದನ್ನೂ ಓದಿ : ಆಧುನಿಕ ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟ iVooMi ಎನರ್ಜಿ ಎಲೆಕ್ಟ್ರಿಕ್ ಸ್ಕೂಟರ್, ಬೆಲೆ ಕೂಡ ಕಡಿಮೆ

CMF ಫೋನ್ 1ನಲ್ಲಿರುವ ವಿಶೇಷತೆ :
ವರದಿಯ ಪ್ರಕಾರ, CMF ಫೋನ್ 1 ಪ್ಲಾಸ್ಟಿಕ್ ಬಾಡಿಯೊಂದಿಗೆ ಬರಬಹುದು.  ಇದರ ಸ್ಕ್ರೀನ್ ಕೆಲವು ರೀತಿಯ ಗೊರಿಲ್ಲಾ ಗ್ಲಾಸ್‌ನಿಂದ  ಪ್ರೊಟೆಕ್ಟ್ ಆಗಿರಬಹುದು. ಇನ್ನು ವಿನ್ಯಾಸದ ಬಗ್ಗೆ ಹೇಳುವುದಾದರೆ ಈ ಫೋನ್ ಕಿತ್ತಳೆ, ಬಿಳಿ ಮತ್ತು ಕಪ್ಪು ಹೀಗೆ ಮೂರು ಬಣ್ಣಗಳಲ್ಲಿ ಬರುವ ಸಾಧ್ಯತೆ ಹೆಚ್ಚಿದೆ.CMF ಫೋನ್ 1 6.5-ಇಂಚಿನ ಸ್ಕ್ರೀನ್ ಹೊಂದಿರಲಿದೆ.ಈ  ಪೋನ್ ನ ಕ್ಯಾಮೆರಾದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಸಿಕ್ಕಿಲ್ಲ. ಆದರೆ ಹಿಂಭಾಗದಲ್ಲಿ ಕೇವಲ ಒಂದು ಕ್ಯಾಮೆರಾ ಮಾತ್ರ ಇರಲಿದೆ ಎಂದು ಹೇಳಲಾಗುತ್ತಿದೆ. 

ಫೋನ್ ನಥಿಂಗ್ ಓಎಸ್‌ನಲ್ಲಿ ಕಾರ್ಯನಿರ್ವಹಿಸಬಹುದು. ಆದರೂ ಇದು ಎಲ್ಲಾ ವೈಶಿಷ್ಟ್ಯಗಳನ್ನು ಹೊಂದಿರುವುದಿಲ್ಲ.CMF ಕಂಪನಿಯು ಮೂರು ವರ್ಷಗಳವರೆಗೆ OS ಅಪ್ಡೇಟ್ ಅನ್ನು ಮತ್ತು ನಾಲ್ಕು ವರ್ಷಗಳವರೆಗೆ ಸೆಕ್ಯೂರಿಟಿ ಅಪ್ಡೇಟ್ ಅನ್ನು ಒದಗಿಸಬಹುದು. ಅಲ್ಲದೆ,ಈ ಫೋನ್ ಶಕ್ತಿಯುತ 5000mAh ಬ್ಯಾಟರಿಯನ್ನು ಹೊಂದಿದ್ದು, 33W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ ಎಂದು  ಹೇಳಲಾಗುತ್ತಿದೆ. 

ಇದನ್ನೂ ಓದಿ : 16 ಸಾವಿರ ರೂಪಾಯಿಗಳ ರಿಯಾಯಿತಿಯೊಂದಿಗೆ ಸಿಗುತ್ತಿದೆ ಸ್ಮಾರ್ಟ್ ಫೋನ್ ! Flipkartನಲ್ಲಿ ಭರ್ಜರಿ Offers

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News