Cheapest Recharge Plan: ಟೆಲಿಕಾಂ ಮಾರುಕಟ್ಟೆಯಲ್ಲಿ ದೂಳೆಬ್ಬಿಸಿದ BSNL ಪ್ಲಾನ್! ಕೇವಲ 75 ರೂ.ಗಳಲ್ಲಿ 30 ದಿನಗಳ ವ್ಯಾಲಿಡಿಟಿ ಜೊತೆಗೆ...?

Cheapest Recharge Plans: BSNL 30 ದಿನಗಳ ಮಾನ್ಯತೆಯೊಂದಿಗೆ ಅನೇಕ ಯೋಜನೆಗಳನ್ನು ಹೊಂದಿದೆ. ಇಂದು ನಾವು ನಿಮಗೆ BSNL ನ ಮೂರು ಅಗ್ಗದ ಯೋಜನೆಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ, ಇದರಲ್ಲಿ ಡೇಟಾ, ಕರೆ ಮತ್ತು ಅನೇಕ ಪ್ರಯೋಜನಗಳು ಸಿಗುತ್ತವೆ.  

Written by - Nitin Tabib | Last Updated : Apr 10, 2022, 03:32 PM IST
  • BSNL ಬಳಿ 30 ದಿನಗಳ ವ್ಯಾಲಿಡಿಟಿ ಹೊಂದಿರುವ ಹಲವು ಪ್ಲಾನ್ ಗಳಿವೆ
  • BSNLನ ರೂ.75ರ ಯೋಜನೆಯಲ್ಲಿ 2ಜಿಬಿ ಡೇಟಾ ಸಿಗುತ್ತದೆ.
  • 102ರೂ.ಬೆಲೆಯ ಯೋಜನೆಯಲ್ಲಿ ಡೇಟಾ, ಕಾಲಿಂಗ್ ಜೊತೆಗೆ ಉಚಿತ SMS ಸೌಲಭ್ಯ ಕೂಡ ಸಿಗುತ್ತವೆ.
Cheapest Recharge Plan: ಟೆಲಿಕಾಂ ಮಾರುಕಟ್ಟೆಯಲ್ಲಿ ದೂಳೆಬ್ಬಿಸಿದ BSNL ಪ್ಲಾನ್! ಕೇವಲ 75 ರೂ.ಗಳಲ್ಲಿ 30 ದಿನಗಳ ವ್ಯಾಲಿಡಿಟಿ ಜೊತೆಗೆ...? title=
BSNL Cheapest Recharge Plan

ನವದೆಹಲಿ: BSNL Cheapest Recharge Plans - Jio, Airtel ಮತ್ತು Vodafone Idea ಇತ್ತೀಚೆಗೆ 30 ದಿನಗಳ ವ್ಯಾಲಿಡಿಟಿ ಯೋಜನೆಗಳನ್ನು ಪರಿಚಯಿಸಿವೆ. ಜಿಯೋ ರೂ 256 ರ ಯೋಜನೆಯನ್ನು ಪರಿಚಯಿಸಿದರೆ, ಏರ್‌ಟೆಲ್ ಮತ್ತು Vi 2 ಪ್ಲಾನ್‌ಗಳನ್ನು ಸಹ ಬಿಡುಗಡೆ ಮಾಡಿವೆ, ಅವುಗಳ ಬೆಲೆ ರೂ 300 ಕ್ಕಿಂತ ಕಡಿಮೆಯಾಗಿದೆ. BSNL ಈಗಾಗಲೇ 30 ದಿನಗಳ ವ್ಯಾಲಿಡಿಟಿ ಇರುವ ಅನೇಕ ಯೋಜನೆಗಳನ್ನು ಹೊಂದಿದೆ. ಈ ಯೋಜನೆಗಳ ಬೆಲೆ 75, 24 ಮತ್ತು 102 ರೂ. ಈ ಮೂರು ಯೋಜನೆಗಳ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ,

BSNL ನ ರೂ.75ರ ಯೋಜನೆ
BSNL ನ ಈ ಪ್ಲಾನ್‌ನ ವಿಶೇಷತೆ ಏನೆಂದರೆ ಇದರಲ್ಲಿ ಡೇಟಾ, ಕರೆ ಮತ್ತು ಇತರ ಪ್ರಯೋಜನಗಳನ್ನು ನೀಡಲಾಗಿದೆ. ಯೋಜನೆಯಲ್ಲಿ 30 ದಿನಗಳ ವ್ಯಾಲಿಡಿಟಿ ಲಭ್ಯವಿದೆ. ಇದರೊಂದಿಗೆ, ಧ್ವನಿ ಕರೆಗಾಗಿ 200 ನಿಮಿಷಗಳು ಮತ್ತು 2 GB ಡೇಟಾವನ್ನು ನೀಡಲಾಗುತ್ತಿದೆ. ಇದಲ್ಲದೇ, ಉಚಿತ ಕಾಲರ್‌ಟ್ಯೂನ್‌ಗಳ ಪ್ರಯೋಜನವೂ ಲಭ್ಯವಿದೆ.

ಇದನ್ನೂ ಓದಿ-Dangerous Anti-Virus Apps: ನಿಮ್ಮ ಮೊಬೈಲ್ ನಲ್ಲಿಯೂ ಕೂಡ ಈ Anti-Virus ಆಪ್ ಗಳಿವೆಯಾ? ಈಗಲೇ ಎಚ್ಚೆತ್ತುಕೊಳ್ಳಿ!

BSNL ನ 24 ರೂ,ಗಳ ಯೋಜನೆ
ರೂ 24 ರ ಈ ಯೋಜನೆಯ ಮಾನ್ಯತೆ ಕೂಡ 30 ದಿನಗಳು. ಇದು ಕಾಲಿಂಗ್ ವೋಚರ್ ಆಗಿದ್ದು, ಇದರಲ್ಲಿ ಡೇಟಾ ಅಥವಾ ಸಂದೇಶ ಸೌಲಭ್ಯ ನೀಡಲಾಗಿಲ್ಲ. ಈ ಯೋಜನೆಯಲ್ಲಿ ಧ್ವನಿ ಕರೆಗೆ ನಿಮಿಷಕ್ಕೆ 20 ಪೈಸೆ ವಿಧಿಸಲಾಗುತ್ತದೆ.

ಇದನ್ನೂ ಓದಿ-Good News: ಮೊದಲಿಗೆ ಈ ಸ್ಮಾರ್ಟ್ ಫೋನ್ ಗಳಲ್ಲಿ ಬರಲಿದೆ Android 13! ಈ ಪಟ್ಟಿಯನ್ನೊಮ್ಮೆ ಪರಿಶೀಲಿಸಿ

BSNL ರೂ 102 ರ ಯೋಜನೆ
BSNL ನ 102 ರೂ ಯೋಜನೆಯಲ್ಲಿ ಡೇಟಾ, ಕರೆ ಮತ್ತು ಸಂದೇಶ ಸೌಲಭ್ಯಗಳು ಸಿಗುತ್ತಿವೆ. 30 ದಿನಗಳ ವ್ಯಾಲಿಡಿಟಿ ಹೊಂದಿರುವ ಈ ಯೋಜನೆಯಲ್ಲಿ 1 ಜಿಬಿ ಡೇಟಾ, 6 ಸಾವಿರ ಧ್ವನಿ ಸೆಕೆಂಡುಗಳು ಮತ್ತು 100 ಎಸ್‌ಎಂಎಸ್‌ಗಳನ್ನು ನೀಡಲಾಗುತ್ತಿದೆ. ನಿಮಗೆ ಡೇಟಾ ಅಗತ್ಯವಿಲ್ಲದಿದ್ದರೆ ಮತ್ತು ಕರೆ ಮಾಡುವ ಯೋಜನೆಯನ್ನು ಹುಡುಕುತ್ತಿದ್ದರೆ, ಈ ಯೋಜನೆಯು ನಿಮ್ಮ ಪಾಲಿಗೆ ಸೂಕ್ತವಾಗಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News