Nanoಗಿಂತಲೂ ಪುಟ್ಟ ಕಾರು ಇದು! ವಿನ್ಯಾಸ ನೋಡಿ ಮನಸೋತ ಗ್ರಾಹಕರು

ವೀಡಿಯೋ-ಶೇರಿಂಗ್ ಪ್ಲಾಟ್‌ಫಾರ್ಮ್ ಯೂಟ್ಯೂಬ್‌ನಲ್ಲಿ ಈ ಕಾರಿನ ವೀಡಿಯೊವನ್ನು ಹೆಚ್ಚು  ಲೈಕ್ ಮಾಡಲಾಗುತ್ತಿದೆ. ಈ ಎರಡು ಬಾಗಿಲಿನ ಟಾಟಾ ಇಂಡಿಕಾದ ವಿಡಿಯೋವನ್ನು ವಾಸಿಂ ಕ್ರಿಯೇಷನ್ಸ್ ಹೆಸರಿನ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. 

Written by - Ranjitha R K | Last Updated : Mar 6, 2023, 11:49 AM IST
  • ಭಾರತದಲ್ಲಿ ಕ್ರಿಯೇಟಿವಿಟಿಗೆ ಕೊರತೆಯೇನಿಲ್ಲ
  • ರಿಯೇಟಿವಿಟಿ ಎಂದರೆ ಭಾರತೀಯರದ್ದು ಎತ್ತಿದ ಕೈ
  • ಕಾರಿನ ವೀಡಿಯೊವನ್ನು ಹೆಚ್ಚು ಲೈಕ್ ಮಾಡಲಾಗುತ್ತಿದೆ.
Nanoಗಿಂತಲೂ ಪುಟ್ಟ ಕಾರು ಇದು!  ವಿನ್ಯಾಸ ನೋಡಿ ಮನಸೋತ ಗ್ರಾಹಕರು title=

ಬೆಂಗಳೂರು : ಭಾರತದಲ್ಲಿ ಕ್ರಿಯೇಟಿವಿಟಿಗೆ ಕೊರತೆಯೇನಿಲ್ಲ. ಇದು ಯಾವ ವಿಷಯದಲ್ಲೇ ಆಗಲಿ.  ರಿಯೇಟಿವಿಟಿ ಎಂದರೆ ಭಾರತೀಯರದ್ದು ಎತ್ತಿದ ಕೈ. ಈ ಕ್ರಿಯೇಟಿವಿಟಿಗೆ ಉದಾಹರಣೆ ಇತ್ತೀಚೆಗಷ್ಟೇ ಕಾಣಿಸಿಕೊಂಡಿರುವ ಈ ಕಾರು. ಹೌದು, ಟಾಟಾ ಇಂಡಿಕಾ ಕಾರನ್ನು ಮಾರ್ಪಾಡು ಮಾಡಿ ದೇಶವಷ್ಟೇ ಅಲ್ಲ ವಿಶ್ವದ ಅತಿ ಚಿಕ್ಕ  ಕಾರನ್ನಾಗಿ ಮಾಡಲಾಗಿದೆ. ವೀಡಿಯೋ-ಶೇರಿಂಗ್ ಪ್ಲಾಟ್‌ಫಾರ್ಮ್ ಯೂಟ್ಯೂಬ್‌ನಲ್ಲಿ ಈ ಕಾರಿನ ವೀಡಿಯೊವನ್ನು ಹೆಚ್ಚು  ಲೈಕ್ ಮಾಡಲಾಗುತ್ತಿದೆ. 

ಈ ಎರಡು ಬಾಗಿಲಿನ ಟಾಟಾ ಇಂಡಿಕಾದ ವಿಡಿಯೋವನ್ನು ವಾಸಿಂ ಕ್ರಿಯೇಷನ್ಸ್ ಹೆಸರಿನ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಕಾರಿನ ಸಂಪೂರ್ಣ ಮಾರ್ಪಾಡು ಪ್ರಕ್ರಿಯೆಯನ್ನು ಈ ವೀಡಿಯೊದಲ್ಲಿ ತೋರಿಸಲಾಗಿದೆ. ಆರಂಭದಲ್ಲಿ ಈ ಕಾರು 5 ಆಸನಗಳ ಟಾಟಾ ಇಂಡಿಕಾ ಆಗಿತ್ತು. ನಂತರ, ಕಾರನ್ನು ಕತ್ತರಿಸಿ ಬೆಸುಗೆ ಹಾಕಲಾಗುತ್ತದೆ. ಮಾರ್ಪಡಿಸಿದ ನಂತರ ಕಾರಿನ ಉದ್ದವು 8 ಅಡಿಗಳ ಷ್ಟಾಗಿದೆ. ಅಂದರೆ ಮೂಲ  ಗ್ರಾತಕ್ಕಿಂತ 3.5 ಅಡಿಯಷ್ಟು ಈ ಕಾರು ಚಿಕ್ಕದಾಗಿದೆ.

ಇದನ್ನೂ ಓದಿ : ಕೇವಲ ರೂ.649ಕ್ಕೆ ಮಾರಾಟವಾಗುತ್ತಿದೆ ರಿಯಲ್ ಮೀ ಕಂಪನಿಯ ಈ 5ಜಿ ಸ್ಮಾರ್ಟ್ ಫೋನ್!

ಹಿಂಬದಿಯ ಬಾಗಿಲನ್ನು ತೆಗೆದು ಕಾರಿನ ಬಿ ಪಿಲ್ಲರ್‌ಗೆ ಹಿಂಬದಿಯ ಭಾಗವನ್ನು ವೆಲ್ಡ್ ಮಾಡಿ ಕಾರನ್ನು ಚಿಕ್ಕದಾಗಿಸಿರುವುದನ್ನು ವಿಡಿಯೋದಲ್ಲಿ ನೋಡಬಹುದು. ವಿಶೇಷವೆಂದರೆ ಬಂಪರ್ ಗಳನ್ನು ಬದಲಾಯಿಸದೆ, ದುರಸ್ತಿಗೊಳಿಸಿ ಮರು ಅಳವಡಿಸಲಾಗಿದೆ. ನಂತರ ಕಾರನ್ನು ಸಿದ್ಧಪಡಿಸಿದ ಬಾಡಿವರ್ಕ್‌ನೊಂದಿಗೆ ತೋರಿಸಲಾಗುತ್ತದೆ. ಕಾರ್ ಸೈಡ್ ಫ್ಲೇರ್‌ಗಳು ಮತ್ತು ಮುಂಭಾಗ ಮತ್ತು ಹಿಂಭಾಗದ ಬಂಪರ್‌ಗಳಿಗೆ ಮ್ಯಾಟ್ ಬ್ಲಾಕ್  ಬಣ್ಣವನ್ನು ನೀಡಲಾಗಿದೆ.  

 

ಮುಂಭಾಗದಲ್ಲಿರುವ ಎರಡೂ ಹೆಡ್‌ಲೈಟ್‌ಗಳು ಹೊಚ್ಚ ಹೊಸದಾಗಿವೆ. ಸೈಡ್ ಪ್ರೊಫೈಲ್‌ಗೆ ಹೊಸ  ವ್ಹೀಲ್ ಕವರ್‌ಗಳನ್ನು ಸೇರಿಸಲಾಗಿದೆ. ಕಾರಿನ ಮುಂಭಾಗ ಮತ್ತು ಹಿಂಭಾಗದ ಬಾಗಿಲುಗಳನ್ನು ಸಂಯೋಜಿಸಿ ಮಾಡಿದ ಕಸ್ಟಮ್ ಬಾಗಿಲನ್ನು ಸಹ ವೀಡಿಯೊದಲ್ಲಿ ಕಾಣಬಹುದು. ಕಾರಿನ ಡ್ಯಾಶ್‌ಬೋರ್ಡ್‌ಗೆ ಬಾಹ್ಯ ಥೀಮ್‌ಗೆ ಹೊಂದಿಕೆಯಾಗುವಂತೆ ಕಪ್ಪು ಮತ್ತು ಸಿಲ್ವರ್ ಕಲರ್ ನೀಡಲಾಗಿದೆ. 

ಇದನ್ನೂ ಓದಿ : Women's Day: ಉಡುಗೊರೆಯಾಗಿ ಕೊಡಲು ಇಲ್ಲಿವೆ 5 ಬೆಸ್ಟ್ ಸ್ಮಾರ್ಟ್ ಫೋನ್ ಗಳು, 2023 ರಲ್ಲಿ ಬಂಪರ್ ಬಿಕರಿಯಾಗಿವೆ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News