ಅನೇಕ ಎಲೆಕ್ಟ್ರಾನಿಕ್ ಸಾಧನಗಳಿಗೆ ಒಂದೇ ಒಂದು ಸಾಮಾನ್ಯ ಚಾರ್ಜರ್ ಬಳಸಬಹುದು!

ನಾವು ಎಲ್ಲಾದರೂ ಹೋಗಬೇಕು ಎಂದು ಪ್ಲಾನ್ ಮಾಡಿದರೆ ಮೊದಲೆಲ್ಲಾ ಬಟ್ಟೆ ಪ್ಯಾಕ್ ಮಾಡುವುದೇ ಕಷ್ಟ ಎಂದೆನಿಸುತ್ತಿತ್ತು. ಆದರೀಗ ಈ ತಂತ್ರಜ್ಞಾನ ಯುಗದಲ್ಲಿ  ಎಲೆಕ್ಟ್ರಾನಿಕ್ ವಸ್ತುಗಳೇ ನಮ್ಮ ಇತರ ಸಾಮಾಗ್ರಿಗಳಿಗಿಂತ ಹೆಚ್ಚಿರುತ್ತವೆ. ಇಂತಹ ಸಂದರ್ಭದಲ್ಲಿ ಅವುಗಳ ಒಂದು ಚಾರ್ಜರ್ ಮರೆತರೂ ನಾವು ಆ ಸಾಧನವನ್ನು ಕೊಂಡೊಯ್ದರೂ ವ್ಯರ್ಥ ಎಂಬಂತಾಗುತ್ತದೆ. 

Written by - Yashaswini V | Last Updated : Aug 11, 2022, 07:09 AM IST
  • ಸ್ಮಾರ್ಟ್‌ಫೋನ್‌ಗಳು ಮತ್ತು ಟ್ಯಾಬ್ಲೆಟ್‌ಗಳಂತಹ ಪೋರ್ಟಬಲ್ ಎಲೆಕ್ಟ್ರಾನಿಕ್ ಸಾಧನಗಳು ಸಾಮಾನ್ಯ ಚಾರ್ಜರ್ ಅನ್ನು ಹೊಂದಿರಬೇಕು.
  • ವಿವಿಧ ಎಲೆಕ್ಟ್ರಾನಿಕ್ ಸಾಧನಗಳಿಗೆ ವಿಭಿನ್ನ ಚಾರ್ಜರ್‌ಗಳ ಅಗತ್ಯವನ್ನು ತೊಡೆದುಹಾಕಲು ಒಂದೇ ಚಾರ್ಜರ್ ಅನ್ನು ತರುವ ಸಾಧ್ಯತೆಯನ್ನು ಅನ್ವೇಷಿಸಲಾಗುವುದು
  • ಇದರಿಂದ ಗ್ರಾಹಕರಿಗೆ ಆರ್ಥಿಕ ಹೊರೆ ಕಡಿಮೆಯಾಗುವುದಲ್ಲದೆ ಇ-ತ್ಯಾಜ್ಯವನ್ನು ಕಡಿಮೆ ಮಾಡಲು ಸಹಕಾರಿಯಾಗಲಿದೆ ಎಂದರು.
ಅನೇಕ ಎಲೆಕ್ಟ್ರಾನಿಕ್ ಸಾಧನಗಳಿಗೆ ಒಂದೇ ಒಂದು ಸಾಮಾನ್ಯ ಚಾರ್ಜರ್  ಬಳಸಬಹುದು! title=
Common charger

ಎಲ್ಲಾ ಎಲೆಕ್ಟ್ರಾನಿಕ್ ಸಾಧನಗಳಿಗೆ ಒಂದೇ ಚಾರ್ಜರ್: ಮುಂಬರುವ ದಿನಗಳಲ್ಲಿ ಸ್ಮಾರ್ಟ್‌ಫೋನ್‌ಗಳು, ಟ್ಯಾಬ್ಲೆಟ್‌ಗಳು, ಲ್ಯಾಪ್‌ಟಾಪ್‌ಗಳಂತಹ ಎಲೆಕ್ಟ್ರಾನಿಕ್ ಸಾಧನಗಳನ್ನು ನಿಮ್ಮೊಂದಿಗೆ ಕೊಂಡೊಯ್ಯುತ್ತಿದ್ದರೆ, ನಿಮಗೆ ಎಲ್ಲಾ ಸಾಧನಗಳಿಗೆ ಪ್ರತ್ಯೇಕ ಚಾರ್ಜರ್‌ಗಳ ಅಗತ್ಯವಿಲ್ಲ. ಬದಲಿಗೆ, ಎಲ್ಲಾ ಕೆಲಸಗಳನ್ನು ಒಂದೇ ಸಾಮಾನ್ಯ ಚಾರ್ಜರ್‌ನೊಂದಿಗೆ ಮಾಡಬಹುದಾಗಿದೆ. ಸ್ಮಾರ್ಟ್‌ಫೋನ್‌ಗಳು ಮತ್ತು ಟ್ಯಾಬ್ಲೆಟ್‌ಗಳಂತಹ ಎಲೆಕ್ಟ್ರಾನಿಕ್ ಸಾಧನಗಳಿಗೆ ಒಂದೇ ಚಾರ್ಜರ್ ಅನ್ನು ತರುವ ಸಾಧ್ಯತೆಯನ್ನು ಸರ್ಕಾರ ಅನ್ವೇಷಿಸುತ್ತಿದೆ. ಸಾಮಾನ್ಯ ಚಾರ್ಜರ್ ಸಾಧ್ಯತೆಯನ್ನು ಅನ್ವೇಷಿಸಲು ಮೊಬೈಲ್ ಫೋನ್ ತಯಾರಕರು ಮತ್ತು ಸಲಕರಣೆ ತಯಾರಕರನ್ನು ಆಗಸ್ಟ್ 17 ರಂದು ಸಭೆಗೆ ಕರೆಯಲಾಗಿದೆ.

ಈ ಕುರಿತಂತೆ ಮಂಗಳವಾರ (ಆಗಸ್ಟ್ 09) ದಂದು  ಗ್ರಾಹಕ ವ್ಯವಹಾರಗಳ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು, ವಿವಿಧ ಎಲೆಕ್ಟ್ರಾನಿಕ್ ಸಾಧನಗಳಿಗೆ ವಿಭಿನ್ನ ಚಾರ್ಜರ್‌ಗಳ ಅಗತ್ಯವನ್ನು ತೊಡೆದುಹಾಕಲು ಒಂದೇ ಚಾರ್ಜರ್ ಅನ್ನು ತರುವ ಸಾಧ್ಯತೆಯನ್ನು ಅನ್ವೇಷಿಸಲಾಗುವುದು. ಇದರಿಂದ ಗ್ರಾಹಕರಿಗೆ ಆರ್ಥಿಕ ಹೊರೆ ಕಡಿಮೆಯಾಗುವುದಲ್ಲದೆ ಇ-ತ್ಯಾಜ್ಯವನ್ನು ಕಡಿಮೆ ಮಾಡಲು ಸಹಕಾರಿಯಾಗಲಿದೆ ಎಂದರು.

ಇದನ್ನೂ ಓದಿ-  ಮಳೆಗೆ ಸೊಳ್ಳೆ, ನೊಣಗಳ ಕಾಟ ಹೆಚ್ಚಾಗಿದೆಯೇ! ಸ್ಮಾರ್ಟ್‌ಫೋನ್‌ನಲ್ಲಿ ಈ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿ

ಇತ್ತೀಚೆಗೆ, ಯುರೋಪಿಯನ್ ಯೂನಿಯನ್ 2024 ರ ವೇಳೆಗೆ ಸಣ್ಣ ಎಲೆಕ್ಟ್ರಾನಿಕ್ ಸಾಧನಗಳಿಗೆ ಯುಎಸ್‌ಬಿ-ಸಿ ಪೋರ್ಟ್ ಸಾಮಾನ್ಯ ಚಾರ್ಜಿಂಗ್ ಮಾನದಂಡವನ್ನು ಅಳವಡಿಸಿಕೊಳ್ಳುವುದಾಗಿ ಘೋಷಿಸಿತು. ಯುಎಸ್‌ನಲ್ಲಿಯೂ ಇದೇ ರೀತಿಯ ಬೇಡಿಕೆಯಿದೆ.

ಯುರೋಪ್ ಮತ್ತು ಯುಎಸ್ ಮಾರುಕಟ್ಟೆಗಳಲ್ಲಿ ಮೊಬೈಲ್ ಕಂಪನಿಗಳು ಚಾರ್ಜಿಂಗ್ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬಹುದಾದರೆ, ಭಾರತದಲ್ಲಿ ಏಕೆ ಹಾಗೆ ಮಾಡಲು ಸಾಧ್ಯವಿಲ್ಲ ಎಂದು ಅಧಿಕಾರಿಯೊಬ್ಬರು ಪ್ರಶ್ನಿಸಿದ್ದಾರೆ. ಇದೇ ವೇಳೆ ಸ್ಮಾರ್ಟ್‌ಫೋನ್‌ಗಳು ಮತ್ತು ಟ್ಯಾಬ್ಲೆಟ್‌ಗಳಂತಹ ಪೋರ್ಟಬಲ್ ಎಲೆಕ್ಟ್ರಾನಿಕ್ ಸಾಧನಗಳು ಸಾಮಾನ್ಯ ಚಾರ್ಜರ್ ಅನ್ನು ಹೊಂದಿರಬೇಕು ಎಂದವರು ಅಭಿಪ್ರಾಯಪಟ್ಟಿದ್ದಾರೆ. 

ಇದನ್ನೂ ಓದಿ- Future Smartphone: ಮುಂಬರುವ ದಿನಗಳಲ್ಲಿ ಸ್ಮಾರ್ಟ್ ಫೋನ್ ಗಳು ಹೇಗಿರಲಿವೆ ಗೊತ್ತಾ? ವಿಡಿಯೋ ನೋಡಿ ಗೊತ್ತಾಗುತ್ತದೆ

ವಾಸ್ತವವಾಗಿ, 2024 ರ ವೇಳೆಗೆ ಯುಎಸ್‌ಬಿ-ಸಿ ಪೋರ್ಟ್‌ಗಳೊಂದಿಗೆ ಸಣ್ಣ ಎಲೆಕ್ಟ್ರಾನಿಕ್ ಸಾಧನಗಳಿಗೆ ಸಾಮಾನ್ಯ ಚಾರ್ಜಿಂಗ್ ಮಾನದಂಡದ ಅನುಷ್ಠಾನವನ್ನು ಯುರೋಪಿಯನ್ ಯೂನಿಯನ್ ಇತ್ತೀಚೆಗೆ ಘೋಷಿಸಿತು. ಅಮೆರಿಕದಲ್ಲೂ ಇಂತಹ ಬೇಡಿಕೆ ಹೆಚ್ಚುತ್ತಿದೆ. ಪ್ರಸ್ತುತ, ಯಾವುದೇ ಹೊಸ ಸ್ಮಾರ್ಟ್‌ಫೋನ್ ಅಥವಾ ಟ್ಯಾಬ್ಲೆಟ್ ಖರೀದಿಸುವ ಸಮಯದಲ್ಲಿ, ಗ್ರಾಹಕರು ಪ್ರತ್ಯೇಕ ಚಾರ್ಜರ್ ಅನ್ನು ಸಹ ಖರೀದಿಸಬೇಕಾಗುತ್ತದೆ. ಏಕೆಂದರೆ ಹಳೆಯ ಚಾರ್ಜರ್ ಹೊಸ ಸಾಧನದೊಂದಿಗೆ ಕಾರ್ಯನಿರ್ವಹಿಸದೇ ಇರಬಹುದು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News