Flipkart Mobile Bonanza Sale: ಅತ್ಯಂತ ಕಡಿಮೆ ಬೆಲೆಗೆ ಸಿಗಲಿದೆ iPhone 11 ಮತ್ತು iPhone 12

ಫ್ಲಿಪ್‌ಕಾರ್ಟ್‌ನಲ್ಲಿ  ಮೊಬೈಲ್ ಬೊನಾನ್ಜಾ ಸೇಲ್ ನಡೆಯುತ್ತಿದೆ. ಈ ಸೇಲ್ ನಲ್ಲಿ ಐಫೋನ್ 12 ಮಿನಿ ಅನ್ನು ಅಗ್ಗದ ಬೆಲೆಗೆ ಖರೀದಿಸಬಹುದು.

Written by - Ranjitha R K | Last Updated : Jun 23, 2021, 03:17 PM IST
  • ಫ್ಲಿಪ್‌ಕಾರ್ಟ್‌ನಲ್ಲಿ ಮೊಬೈಲ್ ಬೊನಾನ್ಜಾ ಸೇಲ್ ನಡೆಯುತ್ತಿದೆ
  • ಬೆಲೆಗೆ ಸಿಗಲಿದೆ ಐಫೋನ್ 12 ಮಿನಿ
  • ಐಫೋನ್ 11 ನಲ್ಲಿಯೂ ಸಿಗಲಿದೆ ಆಫರ್
Flipkart Mobile Bonanza Sale: ಅತ್ಯಂತ ಕಡಿಮೆ ಬೆಲೆಗೆ ಸಿಗಲಿದೆ iPhone 11 ಮತ್ತು iPhone 12 title=
ಅಗ್ಗದ ಬೆಲೆಗೆ ಸಿಗಲಿದೆ ಐಫೋನ್ (photo zee news)

ನವದೆಹಲಿ: ಫ್ಲಿಪ್‌ಕಾರ್ಟ್‌ನಲ್ಲಿ (Flipkart ) ಮೊಬೈಲ್ ಬೊನಾನ್ಜಾ ಸೇಲ್ (Mobile Bonanza Sale) ನಡೆಯುತ್ತಿದೆ. ಈ ಸೇಲ್ ನಲ್ಲಿ ಐಫೋನ್ 12 ಮಿನಿ ಅನ್ನು ಅಗ್ಗದ ಬೆಲೆಗೆ ಖರೀದಿಸಬಹುದು. ಫ್ಲಿಪ್‌ಕಾರ್ಟ್‌ನಲ್ಲಿ ನೀಡಿರುವ ಮಾಹಿತಿಯ ಪ್ರಕಾರ, ಐಫೋನ್ 12 ಮಿನಿ ಅನ್ನು 6 ಸಾವಿರ ರೂ.ಗಳ ರಿಯಾಯಿತಿಯಲ್ಲಿ ಖರೀದಿಸಬಹುದು. ಫೋನ್ ಅನ್ನು 66,900 ರೂಗಳ ಬದಲು 61,900 ರೂಗಳಿಗೆನಿಮ್ಮದಾಗಿಸಿಕೊಳ್ಳಬಹುದು.

ಐಫೋನ್ 12 ರ (iPhone 12) ವೈಶಿಷ್ಟ್ಯಗಳು :
ಐಫೋನ್ 12 ಮಿನಿ (iPhone 12) 5.4 ಇಂಚಿನ ಸ್ಕ್ರೀನ್ ಅನ್ನು ಹೊಂದಿದೆ. ಕಾಂಪ್ಯಾಕ್ಟ್ ಬಾಡಿಯೊಂದಿಗೆ,  ಈ ಐಫೋನ್ ಕೈಯಲ್ಲಿ ಹಿಡಿದಿಡಲು ಅತ್ಯಂತ ಆರಾಮದಾಯಕವಾಗಿದೆ. ಆದರೆ ನೀವು ಫೋನ್‌ನಲ್ಲಿ ಕಂಟೆಂಟ್ ಸ್ಟ್ರೀಮ್ ಮಾಡಲು ಬಯಸಿದರೆ, ಅನುಭವವು ಅಷ್ಟು ಉತ್ತಮವಾಗಿರಲಿಕ್ಕಿಲ್ಲ. iPhone 12 Mini ಯಲ್ಲಿ  ಎ 14 ಬಯೋನಿಕ್ ಚಿಪ್‌ಸೆಟ್ ಅನ್ನ ನೀಡಲಾಗಿದೆ. ಐಫೋನ್ 12 ಮಿನಿ 5.4 ಇಂಚಿನ ಸೂಪರ್ ರೆಟಿನಾ XDR  ಡಿಸ್ಪ್ಲೇ ಹೊಂದಿದೆ. 12 ಮೆಗಾಪಿಕ್ಸೆಲ್ ವೈಡ್ ಸೆನ್ಸಾರ್ ಹೊಂದಿರುವ ಫೋನ್‌ನಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ನೀಡಲಾಗಿದೆ. ಹ್ಯಾಂಡ್‌ಸೆಟ್ ನೈಟ್ ಮೋಡ್‌ನೊಂದಿಗೆ 12 ಮೆಗಾಪಿಕ್ಸೆಲ್ ಟ್ರೂಡೆಪ್ತ್ ಕ್ಯಾಮೆರಾ ವ್ಯವಸ್ಥೆಯನ್ನು ಹೊಂದಿದೆ.

ಇದನ್ನೂ ಓದಿ : PM Kisan Scheme Mobile App: ಪಿಎಂ ಕಿಸಾನ್ ಸ್ಟೇಟಸ್ ಅನ್ನು ಈ ರೀತಿ ಪರಿಶೀಲಿಸಬಹುದು

ಐಫೋನ್ 11 ನಲ್ಲಿಯೂ ಸಿಗಲಿದೆ ಆಫರ್ :
Flipkart Mobile Bonanza Sale  ಅಡಿಯಲ್ಲಿ, ಐಫೋನ್ 11 ರ 64GB  ಸ್ಟೋರೇಜ್ ಮಾಡೆಲ್ 14,999 ರೂಗಳಿಗೆ ಲಭ್ಯವಿದೆ. ಗ್ರಾಹಕರು ಇದರೊಂದಿಗಿರುವ ಆಫರ್ ಗಳ ಲಾಭ ಪಡೆದುಕೊಳ್ಳುವ ಮೂಲಕ ಅತೀ ಕಡಿಮೆ ಬೆಲೆಗೆ ಈ ಫೋನ್ ಅನ್ನು ಖರೀದಿಸಬಹುದು.  ಐಫೋನ್ 11 ಖರೀದಿಸಲು ನೀವು ಎಚ್‌ಡಿಎಫ್‌ಸಿ ಬ್ಯಾಂಕ್ (HDFC) ಕಾರ್ಡ್ ಬಳಸಿದರೆ, 10 ಪ್ರತಿಶತದಷ್ಟು ರಿಯಾಯಿತಿ ಪಡೆಯಬಹುದು. ಇದಲ್ಲದೆ, ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳಲ್ಲಿ (Credit card) 5 ಪ್ರತಿಶತ ಕ್ಯಾಶ್‌ಬ್ಯಾಕ್ ಸಹ ನೀಡಲಾಗುತ್ತಿದೆ. ಇದು ಮಾತ್ರವಲ್ಲ, ಎಕ್ಸ್ಚೇಂಜ್ ರ್ ನೊಂದಿಗೆ iphone 11 ಅನ್ನು 14,000 ರೂಗಳಿಗೂ ಖರೀದಿಸಬಹುದು. ಆದರೆ ನೆನಪಿರಲಿ, ಎಕ್ಸ್ ಚೇಂಜ್ ಆಫರ್ ನ ಬೆಲೆ ಹಳೆಯ ಡಿವೈಸ್ ನ ಮಾದರಿ ಸಂಖ್ಯೆಯನ್ನು ಅವಲಂಬಿಸಿರುತ್ತದೆ.  ಇದಲ್ಲದೆ, ನೀವು ನೋ ಕಾಸ್ಟ್ ಇಎಂಐನಲ್ಲಿ (No cost EMI) ಕೂಡಾ ಫೋನ್ ಅನ್ನು ಖರೀದಿಸಬಹುದು.

ಇದನ್ನೂ ಓದಿ : WhatsApp: ಏಕಕಾಲದಲ್ಲಿ ನಾಲ್ಕು ಸಾಧನಗಳಲ್ಲಿ ಕಾರ್ಯನಿರ್ವಹಿಸುತ್ತೆ ವಾಟ್ಸಾಪ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News