Watch Video: ನೀರಿನಿಂದಲೂ ಬೈಕ್ ಓಡುತ್ತೆ... ನಂಬ್ತಿರಾ? ವಿಡಿಯೋ ನೋಡಿ

Bike Run On Water: ಪೆಟ್ರೋಲ್ ಜಾಗದಲ್ಲಿ ನೀರನ್ನು ಬಳಸಿದರೆ ದ್ವಿಚಕ್ರ ವಾಹನ ಓಡುವುದಿಲ್ಲ ಎಂಬುದು ಬಹುತೇಕರಿಗೆ ತಿಳಿದಿದೆ. ಆದರೆ ನೀರು  ಬಳಸಿಯೂ ಕೂಡ ವಾಹನ ಓಡಿಸಬಹುದು. ಎರಡೂ ಸಂಗತಿಗಳು ನಿಜವಾಗಲು ಹೇಗೆ ಸಾಧ್ಯ ಎಂದು ನೀವೂ ಯೋಚಿಸುತ್ತಿರಬಹುದಲ್ಲವೇ? ಬನ್ನಿ ಹೇಗೆ ತಿಳಿದುಕೊಳ್ಳೋಣ,   

Written by - Nitin Tabib | Last Updated : Dec 20, 2022, 07:49 PM IST
  • ನೀರಿನೊಂದಿಗೆ ಒಂದು ರೀತಿಯ ರಾಸಾಯನಿಕ ಪ್ರಕ್ರಿಯೆಯನ್ನು ಮಾಡುವ ಮೂಲಕ,
  • ಅಂತಹ ಫ್ಯುಯೆಲ್ ತಯಾರಿಸಬಹುದು ಮತ್ತು ಅದರಿಂದ ಬೈಕ್ ಎಂಜಿನ್ ಸ್ಟಾರ್ಟ್ ಆಗುತ್ತದೆ.
  • ಆದರೆ, ಇದು ಸಮರ್ಥನೀಯ ವಿಧಾನವಲ್ಲ,
Watch Video: ನೀರಿನಿಂದಲೂ ಬೈಕ್ ಓಡುತ್ತೆ... ನಂಬ್ತಿರಾ? ವಿಡಿಯೋ ನೋಡಿ title=
Bike Run By Water

Bike Run On Water Instead Of Petrol: ಪೆಟ್ರೋಲ್ ಬದಲಾಗಿ ನೀರನ್ನು ಬಳಸಿದರೆ ಬೈಕ್ ಓಡುವುದಿಲ್ಲ ಎಂಬ ಸಂಗತಿ ಬಹುತೇಕರಿಗೆ ತಿಳಿದಿದೆ ಮತ್ತು ಅದು ಸಂಪೂರ್ಣ ಸತ್ಯ ಕೂಡ ಹೌದು,  ಆದರೆ, ನೀರು ಬಳಸಿ ಬೈಕ್ ಓಡಿಸಬಹುದು ಎಂಬುದೂ ಕೂಡ ಸತ್ಯ. ಎರಡೂ ವಿಷಯಗಳು ನಿಜವಾಗಲು ಹೇಗೆ ಸಾಧ್ಯ ಅಂತಾ ನೀವೂ ಯೋಚಿಸುತ್ತಿರಬಹುದು. ವಾಸ್ತವದಲ್ಲಿ, ಬೈಕನ್ನು ಕೇವಲ ನೀರು ಬಳಸಿ ಓಡಿಸಲು ಸಾಧ್ಯವಿಲ್ಲ, ನೀರಿನೊಂದಿಗೆ ಒಂದು ರೀತಿಯ ರಾಸಾಯನಿಕ ಪ್ರಕ್ರಿಯೆಯನ್ನು ಮಾಡುವ ಮೂಲಕ, ಅಂತಹ ಫ್ಯುಯೆಲ್ ತಯಾರಿಸಬಹುದು ಮತ್ತು ಅದರಿಂದ ಬೈಕ್ ಎಂಜಿನ್ ಸ್ಟಾರ್ಟ್ ಆಗುತ್ತದೆ.  ಆದರೆ, ಇದು ಸಮರ್ಥನೀಯ ವಿಧಾನವಲ್ಲ,  ಇದನ್ನು ಪ್ರಯೋಗವಾಗಿ ಮಾಡಬಹುದು. ಇದಕ್ಕಾಗಿ ಸಾಕಷ್ಟು ಕಸರತ್ತು ಮಾಡಬೇಕಾಗುತ್ತದೆ, ಆಗ ಮಾತ್ರ ಬೈಕ್‌ನ ಎಂಜಿನ್ ಪೆಟ್ರೋಲ್ ಇಲ್ಲದೆ ಸ್ಟಾರ್ಟ್ ಆಗಲು ಸಾಧ್ಯವಾಗುತ್ತದೆ.

ಇದನ್ನೂ ಓದಿ-WhatsAppನ 'Hi Mum' ಸಂದೇಶ ಇದುವರೆಗೆ ಜನರಿಂದ 57 ಕೋಟಿ ರೂ.ಗಳನ್ನು ದೋಚಿದೆಯಂತೆ, ಈ ತಪ್ಪು ಮಾಡ್ಬೇಡಿ

ಕ್ಯಾಲ್ಸಿಯಂ ಕಾರ್ಬೈಡ್ ಅನ್ನು ನೀರಿನೊಂದಿಗೆ ಬೆರೆಸಿದಾಗ ಉಂಟಾಗುವ ರಾಸಾಯನಿಕ ಕ್ರಿಯೆಯು ಅಸಿಟಿಲೀನ್ ಅನಿಲವನ್ನು ಬಿಡುಗಡೆ ಮಾಡುತ್ತದೆ ಎಂದು ಯೂಟ್ಯೂಬ್ ವೀಡಿಯೊದಲ್ಲಿ ತೋರಿಸಲಾಗಿದೆ. ಅಸಿಟಿಲೀನ್ ಅನಿಲವು ಬೆಂಕಿಯ ಸಂಪರ್ಕಕ್ಕೆ ಬಂದಾಗ ವೇಗವಾಗಿ ಉರಿಯುತ್ತದೆ. ಇದರ ಲಾಭ ಪಡೆದು ಬೈಕ್‌ನ ಇಂಜಿನ್‌ ಸ್ಟಾರ್ಟ್‌ ಮಾಡಬಹುದು. ವೀಡಿಯೊದ ಹೋಸ್ಟ್ ಕುಕ್ಕರ್ ತೆಗೆದುಕೊಂಡು ಅದರಲ್ಲಿ ಸ್ವಲ್ಪ ಕ್ಯಾಲ್ಸಿಯಂ ಕಾರ್ಬೈಡ್ ಅನ್ನು ಹಾಕಿದ್ದಾರೆ. ನಂತರ ಏಕಕಾಲಕ್ಕೆ ಕುಕ್ಕರ್‌ಗೆ ನೀರು ಸುರಿದು ಅದನ್ನು ಮುಚ್ಚಿದ್ದಾರೆ. ಗ್ಯಾಸ್ ಹೊರಬರುವ ಕುಕ್ಕರ್‌ನ ಮೇಲ್ಭಾಗದಲ್ಲಿ IV ಸೆಟ್ ಅನ್ನು ಸ್ಥಾಪಿಸಲಾಗಿದೆ. ಇದರ ನಂತರ, IV ಸೆಟ್‌ನ ಇನ್ನೊಂದು ತುದಿಯಲ್ಲಿರುವ ಪಿನ್ ಪೈಪ್ ಅನ್ನು ಬೈಕು ಎಂಜಿನ್‌ ಗೆ ಗಾಳಿ ಸೇರಿಸುವ ಪೈಪ್‌ಗೆ ಜೋಡಿಸಲಾಗಿದೆ.

ಇದನ್ನೂ ಓದಿ-IDF: ದೇಶದ ಕೋಟ್ಯಾಂತರ ಮಹಿಳೆಯರಿಗೆ ಭಾರಿ ಸಂತಸದ ಸುದ್ದಿ ಪ್ರಕಟಿಸಿದ ಗೂಗಲ್

ಈ ಸಂಪೂರ್ಣ ಸೆಟಪ್ ಅನ್ನು ಇನ್ಸ್ಟಾಲ್ ಮಾಡಿದ ಬಳಿಕ, ಬೈಕ್ ಅನ್ನು ಸ್ಟಾರ್ಟ್ ಮಾಡಲು ಯತ್ನಿಸಲಾಗಿದೆ. ಆದರೆ ಬೈಕ್ ಸ್ಟಾರ್ಟ್ ಆಗಲಿಲ್ಲ. ಇದಾದ ಬಳಿಕ ಕುಕ್ಕರ್ ನೀರಿನಲ್ಲಿ ಕ್ಯಾಲ್ಸಿಯಂ ಕಾರ್ಬೈಡ್ ಪ್ರಮಾಣ ಹೆಚ್ಚಿಸಿ ಮತ್ತೆ ಬೈಕ್ ಸ್ಟಾರ್ಟ್ ಮಾಡಲಾಗಿದೆ. ಈಗ ಬೈಕು ಮೊದಲಿಗಿಂತ ಸುಲಭವಾಗಿ ಸ್ಟಾರ್ ಆಗಿದೆ ಮತ್ತು ಬೈಕ್ ಮೆಲ್ಲಗೆ ಚಲಿಸತೊಡಗಿದೆ. ಆದರೆ, ಪೆಟ್ರೋಲ್ ಬೈಕ್ ನಲ್ಲಿ ಸಿಗುವ ಓಡಾಟದ ಸ್ಮೂತ್ನೆಸ್ ಈ ಬೈಕ್ ಗೆ ಇರಲಿಲ್ಲ. ಈ ಸಂಪೂರ್ಣ ವಿಡಿಯೋವನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ. ಆದರೆ ನೀವು ಖುದ್ದಾಗಿ ಅಥವಾ ತಜ್ಞರ ಅನುಪಸ್ಥಿತಿಯಲ್ಲಿ ಇಂತಹ ಯಾವುದೇ ಪ್ರಯತ್ನವನ್ನು ಮಾಡಬೇಡಿ. ಇದು ನಮ್ಮ ಕಳಕಳಿಯ ವಿನಂತಿ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News