Bytedance Shutdown Operation In India: ಭಾರತದಲ್ಲಿ ಗಂಟುಮೂಟೆ ಕಟ್ಟಿದ TikTok, Helo! ತನ್ನ ಸಿಬ್ಬಂದಿಗಳಿಗೆ ಭಾವನಾತ್ಮಕ ಪತ್ರ ಬರೆದ Bytedance

Bytedance Shutdown Operation In India - ಕಳೆದ ವರ್ಷದ ಜೂನ್ ತಿಂಗಳಿನಲ್ಲಿ ಲಡಾಖ್ ನ ಗಲ್ವಾನ್ ಕಣಿವೆಯಲ್ಲಿ ಮೋಸದಿಂದ ಭಾರತೀಯ ಸೈನಿಕರ ಮೇಲೆ ಚೀನಾ ಸೈನಿಕರು ಹಲ್ಲೆ ನಡೆಸಿದ ನಂತರ ಕೇಂದ್ರ ಸರ್ಕಾರ ಹಲವು ಚೀನಾ ಮೊಬೈಲ್ ಆಪ್ ಗಳ ಮೇಲೆ ತಾತ್ಕಾಲಿಕ ನಿಷೇಧ ಹೇರಿತ್ತು.

Written by - Nitin Tabib | Last Updated : Jan 27, 2021, 02:02 PM IST
  • ಭಾರತದಲ್ಲಿ ತನ್ನ ವ್ಯವಹಾರವನ್ನು ಸಂಪೂರ್ಣ ಸ್ಥಗಿತಗೊಳಿಸಲು bytedance ನಿರ್ಧಾರ.
  • ಈ ಕುರಿತು ತನ್ನ ಭಾರತೀಯ ಸಿಬ್ಬಂದಿಗಳಿಗೆ ಭಾವನಾತ್ಮಕ ಪತ್ರ ಬರೆದ ಕಂಪನಿ.
  • ಜನವರಿ 23ರಂದು ಭಾರತ ಸರ್ಕಾರ TikTok ಸೇರಿದಂತೆ ಒಟ್ಟು 59 ಚೀನಾ ಆಪ್ಗಳ ಮೇಲೆ ಶಾಶ್ವತ ನಿರ್ಬಂಧ ವಿಧಿಸಿದೆ.
Bytedance Shutdown Operation In India: ಭಾರತದಲ್ಲಿ ಗಂಟುಮೂಟೆ ಕಟ್ಟಿದ TikTok, Helo! ತನ್ನ ಸಿಬ್ಬಂದಿಗಳಿಗೆ ಭಾವನಾತ್ಮಕ ಪತ್ರ ಬರೆದ Bytedance title=
Bytedance Shutdown Operation In India!(File Photo)

Bytedance Shutdown Operation In India - ನವದೆಹಲಿ: ಭಾರತದಲ್ಲಿ TikTok ಹಾಗೂ Helo ಗಳಂತಹ ಆಪ್ ಗಳನ್ನು ನಡೆಸುತ್ತಿದ್ದ ಚೀನಾ ಮೂಲದ Bytedance ಕಂಪನಿ, ಭಾರತದಲ್ಲಿ ತನ್ನ ವ್ಯಾಪಾರವನ್ನು ಸಂಪೂರ್ಣ ನಿಲ್ಲಿಸುವ ನಿಟ್ಟಿನಲ್ಲಿ ತನ್ನ ಕಂಪನಿಯ ನೌಕರರ ಸಂಖ್ಯೆಯನ್ನು ಕಡಿಮೆ ಮಾಡುವ ನಿರ್ಣಯ ಕೈಗೊಂಡಿದೆ. ಮೂಲಗಳ ಪ್ರಕಾರ Bytedance ಕಂಪನಿ ಈ ಕುರಿತು ತಮ್ಮ ಕಂಪನಿಯ ನೌಕರರಿಗೆ ಪತ್ರ ಬರೆದು, ವ್ಯಾಪಾರವನ್ನು ಕಡಿಮೆಗೊಳಿಸುವುದಾಗಿ ಮಾಹಿತಿ ನೀಡಿದೆ. ಇದಕ್ಕೂ ಮೊದಲು ಭಾರತ ಸರ್ಕಾರ Bytedance ಕಂಪನಿಯ TikTok ಹಾಗೂ Helo ಆಪ್ ಗಳ ಮೇಲೆ ತಾತ್ಕಾಲಿಕ ನಿರ್ಬಂಧ ಹೇರಿತ್ತು ಹಾಗೂ ಕಳೆದ ಸರ್ಕಾರ ತನ್ನ ನಿರ್ಣಯವನ್ನು ಮರುಪರಿಶೀಲಿಸಿದ್ದ ಸರ್ಕಾರ ಶಾಶ್ವತವಾಗಿ 59 ಚೀನೀ ಆಪ್ ಗಳ ಮೇಲೆ ನಿರ್ಬಂಧ ವಿಧಿಸಿದೆ. ಭಾರತ ಸರ್ಕಾರದ ಈ ಘೋಷಣೆಯ ಬಳಿಕ Bytedance ತನ್ನ ಸಿಬ್ಬಂದಿಗಳಿಗೆ ಪತ್ರ ಬರೆದು ಆಪರೇಷನ್ (Bytedance Operation In India) ಸ್ಥಗಿತಗೊಳಿಸುತ್ತಿರುವುದಾಗಿ ಮಾಹಿತಿ ನೀಡಿದೆ. Bytedance ನಲ್ಲಿ ಪ್ರಸ್ತುತ ಭಾರತದಲ್ಲಿ ಸುಮಾರು 2000 ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ.

ಕಳೆದ ವರ್ಷದ ಜೂನ್ ತಿಂಗಳಿನಲ್ಲಿ ಲಡಾಖ್ ನ ಗಲ್ವಾನ್ ಕಣಿವೆಯಲ್ಲಿ ಮೋಸದಿಂದ ಭಾರತೀಯ ಸೈನಿಕರ ಮೇಲೆ ಚೀನಾ ಸೈನಿಕರು ಹಲ್ಲೆ ನಡೆಸಿದ ನಂತರ ಕೇಂದ್ರ ಸರ್ಕಾರ ಹಲವು ಚೀನಾ ಮೊಬೈಲ್ ಆಪ್ ಗಳ ಮೇಲೆ ತಾತ್ಕಾಲಿಕ ನಿಷೇಧ ಹೇರಿತ್ತು ಮತ್ತು ನಂತರದ ದಿನಗಳಲ್ಲಿ  ಶಾಶ್ವತ ನಿರ್ಬಂಧ ವಿಧಿಸಿದೆ.

ಈ ಕುರಿತು ತನ್ನ ನೌಕರರಿಗೆ ಬರೆದಿರುವ ಪತ್ರದಲ್ಲಿ Bytedance, ಕಂಪನಿಗೆ ಭಾರತದಲ್ಲಿ ತನ್ನ ತಂಡದ ಸೈಜ್ ಕಡಿತಗೊಳಿಸುವ ಅನಿವಾರ್ಯತೆ ಎದುರಾಗಿದೆ ಎಂದು ಹೇಳಿದೆ. ಆದರೆ, ಎಷ್ಟು ನೌಕರರನ್ನು ಕೆಲಸದಿಂದ ಕೈಬಿಡಲಾಗುವುದು ಎಂಬುದರ ಕುರಿತು ಕಂಪನಿ ಯಾವುದೇ ಮಾಹಿತಿ ನೀಡಿಲ್ಲ. ಭಾರತದಲ್ಲಿ ಪುನಃ ವ್ಯಾಪಾರ ಯಾವಾಗ ಆರಂಭ ಎಂಬುದರ ಕುರಿತು ಖಚಿತವಾಗಿ ಯಾವುದೇ ಮಾಹಿತಿ ತಮ್ಮ ಬಳಿ ಇಲ್ಲ ಎಂದು ಕಂಪನಿ ತನ್ನ ನೌಕರರಿಗೆ ಸ್ಪಷ್ಟಪಡಿಸಿದೆ ಎನ್ನಲಾಗಿದೆ.

ಇದನ್ನುಓದಿ-TikTok ಬಳಿಕ ಇದೀಗ Alibaba ಮೇಲೆ ತೂಗುಗತ್ತಿ! ಬಿಜಿಂಗ್ ಹೃದಯ ಬಡಿತ ಹೆಚ್ಚಿಸಿದ ಟ್ರಂಪ್ ಹೇಳಿಕೆ

ಭಾವನಾತ್ಮಕ್ ಪತ್ರ ಬರೆದ ಕಂಪನಿ
ತನ್ನ ಸಿಬ್ಬಂದಿಗಳಿಗೆ ಬರೆದ ಭಾವನಾತ್ಮಕ ಪತ್ರದಲ್ಲಿ ಕಂಪನಿ, ಈ ಕಠಿಣ ನಿರ್ಣಯ ನಿಮ್ಮೆಲ್ಲರಿಗೂ ತಿಳಿಸಲು ದುಃಖವಾಗುತ್ತಿದೆ ಎಂದಿದೆ. ಈ ಪತ್ರದಿಂದ ನಿಮಗಾಗುವ ದುಃಖ ಹಾಗೂ ನೋವಿನ ಅರಿವು ನಮಗಿದೆ. 2020ರಲ್ಲಿ ಭಾರತ ಸರ್ಕಾರ ನಮ್ಮ ಕಂಪನಿಯ ಮೇಲೆ ವಿಧಿಸಿದ್ದ ತಾತ್ಕಾಲಿಕ ನಿಷೇದದ ಬಳಿಕ ಕಂಪನಿ ಬಲವಂತವಾಗಿ ತನ್ನ ವ್ಯವಹಾರ ಸ್ಥಗಿತಗೊಳಿಸಬೇಕಾದ ಪ್ರಸಂಗ ಬಂದೊದಗಿತ್ತು. ಇದಾದ ಬಳಿಕ ನಾವು ದೀರ್ಘಕಾಲದಿಂದ ಭಾರತ ಸರ್ಕಾರ ವಿಧಿಸಿರುವ ಮಾರ್ಗಸೂಚಿಗಳನ್ನು ಹಾಗೂ ಕಾನೂನುಗಳ ಅನುರೂಪ ಸರ್ಕಾರದ ಚಿಂತೆಗಳನ್ನು ದೂರಗೊಳಿಸಲು ಪ್ರಯತ್ನಿಸಿದ್ದೇವೆ. ಆದರೆ, ನಮ್ಮ ವ್ಯವಹಾರ ಭಾರತದಲ್ಲಿ ಪುನಃ ಆರಂಭವಾಗುವುದಿಲ್ಲ ಎಂಬುದರ ಖೇದ ನಮಗೂ ಇದೆ. ಭಾರತ ಸರ್ಕಾರ (Modi Government) ಸ್ಪಷ್ಟ ರೂಪದಲ್ಲಿ ಈ ಕುರಿತು ಯಾವುದೇ ಮಾಹಿತಿ ನೀಡದ ಕಾರಣ ನಾವು ಬಲವಂತವಾಗಿ ನಮ್ಮ ವ್ಯವಹಾರವನ್ನು ದೇಶದಲ್ಲಿ ಸ್ಥಗಿತಗೊಳಿಸುವ (Bytedance Shutdown Operation India) ಅನಿವಾರ್ಯತೆ ಎದುರಾಗಿದೆ. ಇದರಿಂದ ಭಾರತದಲ್ಲಿ ನಾವು ನಮ್ಮ ಕಂಪನಿಯ ಆಕಾರವನ್ನು ಕಡಿಮೆ ಮಾಡುತ್ತಿದ್ದೇವೆ ಹಾಗೂ ಯಾವುದೇ ಭೇದ-ಭಾವವಿಲ್ಲದೆ ಈ ಕಡಿತ ಮಾಡುತ್ತಿದ್ದೇವೆ ಎಂದು ಹೇಳಿದೆ.

ಇದನ್ನು ಓದಿ- 'ದೃಢವಾದ ಸಾಕ್ಷ್ಯ' ನೀಡುವುದಾಗಿ ಟ್ರಂಪ್ ಹೇಳಿಕೆ: ಮತ್ತೆ ಸಂಕಷ್ಟದ ಸುಳಿಯಲ್ಲಿ ಟಿಕ್‌ಟಾಕ್‌

ಜನವರಿ 23 ರಂದು ಶಾಶ್ವತ ನಿರ್ಬಂಧವಿಧಿಸಿತ್ತು ಭಾರತ ಸರ್ಕಾರ
ಜನವರಿ 19ರಂದು ಲಡಾಖ್ ನಲ್ಲಿ ಪುನಃ ಚೀನಾ ಹಾಗೂ ಭಾರತೀಯ ಸೈನಿಕರ ನಡುವೆ ನಡೆದ ಘರ್ಷಣೆಯ ಹಿನ್ನೆಲೆ, ಜನವರಿ 23ರಂದು TikTok ಸೇರಿದಂತೆ ಒಟ್ಟು 59 ಚೀನಾ ಆಪ್ ಗಳ ವಿರುದ್ಧ ನೋಟೀಸ್ ಜಾರಿಗೊಳಿಸಿ, ಅವುಗಳನ್ನು ಶಾಶ್ವತವಾಗಿ ನಿರ್ಬಂಧಿಸಿದೆ. ಕೇಂದ್ರ ಸರ್ಕಾರದ ಇಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯ ಪತ್ರ ಬರೆದು ಈ ಎಲ್ಲಾ ಆಪ್ ಗಳಿಗೆ ಮಾಹಿತಿ ನೀಡಿದೆ. ಇದರಿಂದ ಭಾರತದಲ್ಲಿ ಈ ಆಪ್ ಗಳ ಪುನರಾರಂಭದ ಕುರಿತಾದ ಊಹಾಪೋಹಗಳಿಗೆ ಶಾಶ್ವತ ತೆರೆಬಿದ್ದಂತಾಗಿದೆ.

ಇದನ್ನು ಓದಿ-ಅಮೆರಿಕಾದಲ್ಲಿನ TikTok ಕಾರ್ಯಾಚರಣೆಯ ಸ್ವಾಧೀನಕ್ಕೆ ಮುಂದಾದ Twitter

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News