Realme 5G Smartphone ಸಿಗಲಿದೆ ಕೇವಲ 99 ರೂ. ಗಳಿಗೆ , ಇಲ್ಲಿದೆ ಜಬರ್ ದಸ್ತ್ ಆಫರ್

ಫ್ಲಿಪ್‌ಕಾರ್ಟ್‌ನಲ್ಲಿ ಮೊಬೈಲ್ ಬೊನಾಂಜಾ ಮಾರಾಟ ನಡೆಯುತ್ತಿದೆ.  ಈ ಸೇಲ್ ಕೇವಲ ಎರಡು ದಿನಗಳವರೆಗೆ ಮಾತ್ರ ಇರಲಿದೆ. ಸ್ಮಾರ್ಟ್‌ಫೋನ್‌ನಲ್ಲಿ ಚಾಲನೆಯಲ್ಲಿರುವ ಈ ಸೇಲ್ ಡಿಸೆಂಬರ್ 7 ರಿಂದ ಡಿಸೆಂಬರ್ 8 ರವರೆಗೆ ಇರಲಿದೆ.

Written by - Ranjitha R K | Last Updated : Dec 7, 2021, 04:40 PM IST
  • ಫ್ಲಿಪ್‌ಕಾರ್ಟ್‌ನಲ್ಲಿ ನಡೆಯುತ್ತಿದೆ ಮೊಬೈಲ್ ಬೊನಾಂಜಾ ಸೇಲ್ .
  • ಈ ಸೇಲ್ ಡಿಸೆಂಬರ್ 7 ರಿಂದ ಡಿಸೆಂಬರ್ 8 ರವರೆಗೆ ಮಾತ್ರ ಇರುತ್ತದೆ.
  • Realme Narzo 30 5G ಮೇಲೆ ಭಾರಿ ರಿಯಾಯಿತಿ
Realme 5G Smartphone ಸಿಗಲಿದೆ ಕೇವಲ 99 ರೂ. ಗಳಿಗೆ , ಇಲ್ಲಿದೆ ಜಬರ್ ದಸ್ತ್ ಆಫರ್  title=
ಫ್ಲಿಪ್‌ಕಾರ್ಟ್‌ನಲ್ಲಿ ನಡೆಯುತ್ತಿದೆ ಮೊಬೈಲ್ ಬೊನಾಂಜಾ ಸೇಲ್ . (file photo)

ನವದೆಹಲಿ : Flipkart Mobiles Bonanza Sale :  ಫ್ಲಿಪ್‌ಕಾರ್ಟ್‌ನಲ್ಲಿ ಮೊಬೈಲ್ ಬೊನಾಂಜಾ ಮಾರಾಟ ನಡೆಯುತ್ತಿದೆ.  ಈ ಸೇಲ್ ಕೇವಲ ಎರಡು ದಿನಗಳವರೆಗೆ ಮಾತ್ರ ಇರಲಿದೆ. ಸ್ಮಾರ್ಟ್‌ಫೋನ್‌ನಲ್ಲಿ (Smartphone) ಚಾಲನೆಯಲ್ಲಿರುವ ಈ ಸೇಲ್ ಡಿಸೆಂಬರ್ 7 ರಿಂದ ಡಿಸೆಂಬರ್ 8 ರವರೆಗೆ ಇರಲಿದೆ. ಮಾರಾಟದ ಸಮಯದಲ್ಲಿ, ಅತ್ಯಂತ ದುಬಾರಿ ಸ್ಮಾರ್ಟ್‌ಫೋನ್‌ಗಳು ಸಹ ತುಂಬಾ ಅಗ್ಗದ ಬೆಲೆಗೆ ಖರೀದಿಗೆ ಲಭ್ಯವಿರುತ್ತದೆ. ಈ ಎರಡು ದಿನಗಳ ಸೇಲ್ ನಲ್ಲಿ  5G ಸ್ಮಾರ್ಟ್‌ಫೋನ್‌ ಕೂಡಾ  ಲಭ್ಯವಿದೆ.  Apple, Samsung, Xiaomi, Oppo, Realme ನಂತಹ ಕಂಪನಿಗಳ ಫೋನ್‌ಗಳು ಅತ್ಯಂತ ಅಗ್ಗವಾಗಿ ಲಭ್ಯವಿವೆ. ಇನ್ನು Realme Narzo 30 5G ಫೋನ್ ಮೇಲೆ ಭಾರೀ ರಿಯಾಯಿತಿ ಇದೆ. 

ಫ್ಲಿಪ್‌ಕಾರ್ಟ್ ಮೊಬೈಲ್‌ಗಳ ಬೊನಾಂಜಾ ಮಾರಾಟ:
Realme Narzo 30 5G ಕೊಡುಗೆಗಳು ಮತ್ತು ರಿಯಾಯಿತಿಗಳು :
Realme Narzo 30 5G ಯ ​​ಲಾಂಚಿಂಗ್ ಬೆಲೆ 17,999 ರೂ.  ಆಗಿದೆ. ಆದರೆ ಈ ಸೇಲ್ ನಲ್ಲಿ ಈ ಸ್ಮಾರ್ಟ್‌ಫೋನ್ (Smartphone) 16,999 ರೂ.ಗೆ ಲಭ್ಯವಿದೆ. ಅಂದರೆ ಫೋನ್ ಮೇಲೆ ಸಾವಿರ ರೂಪಾಯಿ ರಿಯಾಯಿತಿ ನೀಡಲಾಗುತ್ತಿದೆ. ಆದರೆ, ಈ ಫೋನ್ ಅನ್ನು ಇನ್ನೂ ಕಡಿಮೆ ಬೆಲೆಗೆ ಖರೀದಿಸಬಹುದು. 

ಇದನ್ನೂ ಓದಿ : Zoom App ಬಳಕೆದಾರರಿಗೊಂದು Good News! ನಿಮಗೂ ಕಂಪನಿಯಿಂದ ರೂ.1884 ಸಿಗಲಿದೆ, ಹೇಗೆ?

Realme Narzo 30 5G ನಲ್ಲಿ ಬ್ಯಾಂಕ್ ಕೊಡುಗೆಗಳು :
Flipkart Axis ಬ್ಯಾಂಕ್ ಕ್ರೆಡಿಟ್ ಕಾರ್ಡ್  Realme Narzo 30 5G ಮೇಲೆ  5% ರಿಯಾಯಿತಿಯನ್ನು ನೀಡುತ್ತಿದೆ. ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನೊಂದಿಗೆ (credit card) ಪಾವತಿಸಿದರೆ, 850 ರೂ ರಿಯಾಯಿತಿ ಸಿಗುತ್ತದೆ. ಅಂದರೆ, ಫೋನ್ ಬೆಲೆ 16,149 ರೂ. ಆಗಲಿದೆ. ಇನ್ನು ಈ ಫೋನ್ ಮೇಲೆ ವಿನಿಮಯ ಕೊಡುಗೆಯೂ (exchange offer) ಇದೆ. 

Realme Narzo 30 5G ನಲ್ಲಿ ವಿನಿಮಯ ಕೊಡುಗೆ :
Realme Narzo 30 5G ನಲ್ಲಿ 16,050 ರೂಪಾಯಿಗಳ ವಿನಿಮಯ ಕೊಡುಗೆ (exchange offer) ಲಭ್ಯವಿದೆ. ಹಳೆಯ ಸ್ಮಾರ್ಟ್‌ಫೋನ್ ಅನ್ನು ವಿನಿಮಯ ಮಾಡಿಕೊಂಡರೆ, ಇಷ್ಟು ರಿಯಾಯಿತಿ ಪಡೆಯಬಹುದು. ನಿಮ್ಮ ಫೋನ್ ಉತ್ತಮ ಸ್ಥಿತಿಯಲ್ಲಿದ್ದರೆ ಮತ್ತು ಮಾಡೆಲ್ ಇತ್ತೀಚಿನದಾಗಿದ್ದರೆ ಮಾತ್ರ 16,050 ರೂಪಾಯಿಗಳ ವಿನಿಮಯ ಲಭ್ಯವಿರುತ್ತದೆ. ಹೀಗೆ ಎಲ್ಲಾ ರಿಯಾಯಿತಿಗಳನ್ನು ಸೇರಿಸಿದರೆ ಫೋನ್ ಅನ್ನು ಕೇವಲ 99 ರೂ.ಗೆ ಖರೀದಿಸಬಹುದು.

ಇದನ್ನೂ ಓದಿ : Reliance Jio: ಅಗ್ಗದ ದರದಲ್ಲಿ ಪ್ರತಿದಿನ 1GB ಡೇಟಾ ಜೊತೆಗೆ ಜಿಯೋ ನೀಡುತ್ತಿದೆ ಹಲವು ಪ್ರಯೋಜನ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News