ಈ ವೆಬ್ ಸೈಟ್ ನಲ್ಲಿ ಅರ್ಧಕ್ಕಿಂತ ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ ಸರಕುಗಳು, Flipkart, Amazonಗೆ ಭಾರೀ ಟಕ್ಕರ್

ನೀವು ಆನ್‌ಲೈನ್ ಶಾಪಿಂಗ್ ಅನ್ನು ಇಷ್ಟಪಡುತ್ತಿದ್ದರೆ, ಅಗ್ಗದ ಬೆಲೆಗೆ ವಸ್ತುಗಳನ್ನು ಖರೀದಿಸಬಹುದಾದ ಎರಡು ಆನ್‌ಲೈನ್ ಶಾಪಿಂಗ್ ವೆಬ್‌ಸೈಟ್‌ಗಳ ಬಗ್ಗೆ ಹೇಳಲಿದ್ದೇವೆ. ಅಲ್ಲಿ  Amazon ಮತ್ತು Flipkartಗಿಂತ ಅಗ್ಗದ ಬೆಲೆಯಲ್ಲಿ ಸರಕುಗಳನ್ನು ಪಡೆಯಬಹುದು. 

Written by - Ranjitha R K | Last Updated : Mar 5, 2022, 04:08 PM IST
  • flipkart amazonಗೆ ಭಾರೀ ಟಕ್ಕರ್
  • ಜನರನ್ನು ಆಕರ್ಷಿಸುತ್ತಿದೆ ಈ ವೆಬ್‌ಸೈಟ್‌ಗಳು
  • ಎಲ್ಲ ಸರಕುಗಳು ಅತ್ಯಂತ ಅಗ್ಗವಾಗಿ ದೊರೆಯುತ್ತಿವೆ
ಈ ವೆಬ್ ಸೈಟ್ ನಲ್ಲಿ ಅರ್ಧಕ್ಕಿಂತ ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ ಸರಕುಗಳು, Flipkart, Amazonಗೆ ಭಾರೀ ಟಕ್ಕರ್  title=
flipkart amazonಗೆ ಭಾರೀ ಟಕ್ಕರ್ (file photo)

ನವದೆಹಲಿ : ಇಂದಿನ ಕಾಲದಲ್ಲಿ, ನಮ್ಮ ಹೆಚ್ಚಿನ ಕೆಲಸಗಳು ಅಂದರೆ ಬ್ಯಾಂಕ್ ಕೆಲಸಗಳೇ ಆಗಲಿ,  ಶಾಪಿಂಗ್ ಆಗಿರಲಿ ಆನ್‌ಲೈನ್‌ನಲ್ಲಿಯೇ ನಡೆದು ಹೋಗುತ್ತದೆ. ಇತ್ತೀಚಿನ ದಿನಗಳಲ್ಲಿ ಜನರು ಜನರು ಆನ್‌ಲೈನ್ ಶಾಪಿಂಗ್‌ಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ (Online shopping). ಆನ್‌ಲೈನ್‌ ಸೈಟ್ ಗಳಲ್ಲಿ ತಮ್ಮ ನೆಚ್ಚಿನ ಉತ್ಪನ್ನಗಳನ್ನು ಕಡಿಮೆ ಬೆಲೆಗೆ ಖರೀದಿಸಬಹುದು. ಮಾತ್ರವಲ್ಲ ಇಲ್ಲಿ ಖರೀದಿ ಮಾಡುವ ಸರಕು ಮನೆ ಬಾಗಿಲಿಗೆ ಬರುತ್ತದೆ. ಅಮೆಜಾನ್ (Amazon)ಮತ್ತು ಫ್ಲಿಪ್‌ಕಾರ್ಟ್ (Flipkart)ಅನ್ನು ದೇಶದ ಪ್ರಮುಖ ಆನ್‌ಲೈನ್ ಶಾಪಿಂಗ್ ಸೈಟ್‌ಗಳು ಎನ್ನಲಾಗುತ್ತದೆ. ಆಫರ್‌, ಡಿಸ್ಕೌಂಟ್‌ಗಳ ವಿಷಯದಲ್ಲಿ ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್ ಅನ್ನು ಸೋಲಿಸಿದ  ಕೆಲವು ಶಾಪಿಂಗ್ ಸೈಟ್‌ಗಳಿವೆ.  

ಫ್ಲಿಪ್‌ಕಾರ್ಟ್ , ಅಮೆಜಾನ್‌ಗಿಂತ ಅಗ್ಗದ ಬೆಲೆಯಲ್ಲಿ ಮಾರಾಟ : 
ಫ್ಲಿಪ್‌ಕಾರ್ಟ್ (Flipkart) ಮತ್ತು ಅಮೆಜಾನ್ (Amzon)ಆನ್‌ಲೈನ್ ಶಾಪಿಂಗ್ ವಿಷಯದಲ್ಲಿ ತುಂಬಾ ಜನಪ್ರಿಯವಾಗಿವೆ . ಏಕೆಂದರೆ ಇಲ್ಲಿ ತಮ್ಮ ಬಳಕೆದಾರರಿಗೆ ಕಾಲಕಾಲಕ್ಕೆ ಹಲವಾರು ಅದ್ಭುತ ಕೊಡುಗೆಗಳು ಮತ್ತು ರಿಯಾಯಿತಿಗಳನ್ನು ನೀಡಲಾಗುತ್ತದೆ (Discount on online shopping). ಅಲ್ಲದೆ, ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಮನೆಯಲ್ಲಿ ಕುಳಿತು ಖರೀದಿಸಬಹುದು. ಆದರೆ 'Meesho' ಮತ್ತು GeM, ಅಂತಹ ಎರಡು ವೆಬ್‌ಸೈಟ್‌ಗಳಲ್ಲಿ, ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ಗಿಂತ ಅಗ್ಗವಾಗಿ ಸರಕುಗಳನ್ನು ಮಾರಾಟ ಮಾಡಲಾಗುತ್ತದೆ. ಮತ್ತು ಉತ್ಪನ್ನಗಳ ಗುಣಮಟ್ಟದಲ್ಲಿಯೂ ಯಾವುದೇ ವ್ಯತ್ಯಾಸ ಇರುವುದಿಲ್ಲ. 

ಇದನ್ನೂ ಓದಿ : Googleನಲ್ಲಿ ಅಂತಿಂಥ ಸಂಗತಿಗಳನ್ನು ಸರ್ಚ್ ಮಾಡುವ ಮೊದಲು ಈ ಟ್ರಿಕ್ ತಿಳಿದುಕೊಳ್ಳಿ

ಮೀಶೋನಿಂದ ಬಟ್ಟೆಗಳನ್ನು ಖರೀದಿಸಿ :
ಮೀಶೋ ಕೂಡಾ ಇತ್ತೀಚೀನ ದಿನಗಳಲ್ಲಿ ಬಹಳ ಜನಪ್ರಿಯವಾಗುತ್ತಿದೆ (Meesho offers). ಇಲ್ಲಿ ಕೈಗೆಟುಕುವ ದರದಲ್ಲಿ ಸರಕುಗಳನ್ನು ಮಾರಾಟಮಾಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಬಳಕೆದಾರರು ನಿರಂತರವಾಗಿ ಈ ವೆಬ್‌ಸೈಟ್‌ನತ್ತ ಆಕರ್ಷಿತರಾಗುತ್ತಿದ್ದಾರೆ. ಮಾರುಕಟ್ಟೆಯಿಂದ 500 ರಿಂದ 600 ರೂ.ಗೆ ಖರೀದಿಸುವ ಬಟ್ಟೆಗಳನ್ನು ಮೀಶೋ ವೆಬ್ ಸೈಟ್ ನಲ್ಲಿ ಕೇವಲ 100-200 ರೂಗಳಿಗೆ ಖರೀದಿಸಬಹುದು.  ಈ ವೆಬ್‌ಸೈಟ್ ನಲ್ಲಿ ಅಗ್ಗದ ಸರಕುಗಳನ್ನು ಮಾರಾಟ ಮಾಡುವುದಲ್ಲದೆ, ಫ್ರೀ ಡೆಲಿವರಿ ಆಯ್ಕೆಯನ್ನು ಸಹ ನೀಡಲಾಗಿದೆ.  

GeM ನಲ್ಲಿಯೂ ಅಗ್ಗದ ಬೆಲೆಯಲ್ಲಿ ಖರೀದಿಸಬಹುದು : 
GeM, ಅಂದರೆ ಸರ್ಕಾರಿ ಇ- ಮಾರ್ಕೆಟ್ ಪ್ಲೇಸ್  (Emarket place) ಆಗಿದೆ. ಅಲ್ಲಿ ನೀವು ಇಷ್ಟಪಡುವ ಮತ್ತು ಅಗತ್ಯವಿರುವ ಎಲ್ಲಾ ವಸ್ತುಗಳನ್ನು ಅತ್ಯಂತ ಅಗ್ಗದ ದರದಲ್ಲಿ ಖರೀದಿಸಬಹುದು.  ಇಲ್ಲಿ ಸಿಗುವ   ಸರಕುಗಳ ಬೆಲೆ ಮಾರುಕಟ್ಟೆ ಬೆಲೆಗಿಂತ ತುಂಬಾ ಕಡಿಮೆಯಾಗಿರುತ್ತದೆ. ಇದು ಹಳೆಯ ವೆಬ್‌ಸೈಟ್ ಆದರೆ ಹೆಚ್ಚಿನ ಜನರಿಗೆ ಇದರ ಬಗ್ಗೆ ತಿಳಿದಿಲ್ಲ. ಈ ಸರ್ಕಾರಿ ವೆಬ್‌ಸೈಟ್‌ನಿಂದ ಶಾಪಿಂಗ್ ಮಾಡುವ ಮೂಲಕ  ಅಪಾರ ಹಣವನ್ನು ಉಳಿಸಬಹುದು.

ಇದನ್ನೂ ಓದಿ : Vodafone Idea Plan: ವೊಡಾಫೋನ್ ಐಡಿಯಾದಲ್ಲಿ ಕೇವಲ 19 ರೂ.ಗೆ ಸಿಗಲಿದೆ 1GB ಡೇಟಾ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News