ವಿದ್ಯುತ್ ಇಲ್ಲದೆ ತಂಪಾದ ಗಾಳಿ ನೀಡುತ್ತೆ ಈ ಫ್ಯಾನ್, ಬೆಲೆಯೂ ಕಡಿಮೆ

ಬೇಸಿಗೆ ಕಾಲದಲ್ಲಿ ಬಿಸಿಲಿನ ತಾಪ ಒಂದೆಡೆ ಆದರೆ ಪವರ್ ಕಟ್ಟಿಂಗ್ ಸಮಸ್ಯೆ ಮತ್ತೊಂದೆಡೆ. ಆದರೆ, ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಬಿರು ಬಿಸಿಲಿನ ತಾಪದಿಂದ ಮುಕ್ತಿ ಪಡೆಯಲು ಪೋರ್ಟಬಲ್ ಫೋಲ್ಡಿಂಗ್ ಫ್ಯಾನ್ ನಿಮಗೆ ಸಹಕಾರಿ ಆಗಲಿದೆ. ವಿಶೇಷವೆಂದರೆ ಈ ಫ್ಯಾನ್ ಚಲಾಯಿಸಲು ನಿಮಗೆ ವಿದ್ಯುತ್ ಕೂಡ ಅಗತ್ಯವಿಲ್ಲ. 

Written by - Yashaswini V | Last Updated : Mar 9, 2023, 07:37 AM IST
  • ಪೋರ್ಟಬಲ್ ಫೋಲ್ಡಿಂಗ್ ಫ್ಯಾನ್ ಹೆಸರೇ ಸೂಚಿಸುವಂತೆ ಇದು ಮಡಚಬಹುದಾದ ಫ್ಯಾನ್ ಆಗಿರುವುದರಿಂದ ಇದನ್ನು ಎಲ್ಲಿ ಬೇಕಾದರೂ ಸುಲಭವಾಗಿ ಸಾಗಿಸಬಹುದು.
  • ಈ ಫ್ಯಾನ್ 180 ಡಿಗ್ರಿಗಳವರೆಗೆ ತಿರುಗಬಹುದಾದ ಸಾಮರ್ಥ್ಯವನ್ನು ಹೊಂದಿದೆ.
  • ಆದರೂ, ಇದನ್ನು ಗೋಡೆಯ ಮೂಲೆಯಲ್ಲಿ ಅಳವಡಿಸಿದರೆ ಅದು ಇಡೀ ಕೋಣೆಗೆ ಗಾಳಿಯನ್ನು ಪೂರೈಸುತ್ತದೆ.
ವಿದ್ಯುತ್ ಇಲ್ಲದೆ ತಂಪಾದ ಗಾಳಿ ನೀಡುತ್ತೆ ಈ ಫ್ಯಾನ್, ಬೆಲೆಯೂ ಕಡಿಮೆ  title=
Portable Folding Fan

ಬೆಂಗಳೂರು: ಬೇಸಿಗೆ ಆರಂಭವಾಗುತ್ತಿದ್ದಂತೆ ಫ್ಯಾನ್, ಕೂಲರ್ ಮತ್ತು ಎಸಿಗಳ ಬೆಲೆಗಳು ದುಬಾರಿಯಾಗುತ್ತವೆ. ಬಿಸಿಲಿನ ಬೇಗೆಯಿಂದ ಪರಿಹಾರ ಪಡೆಯಲು ಎಷ್ಟೇ ದುಬಾರಿ ಆದರೂ ಪರವಾಗಿಲ್ಲ ಎಂದು ಈ ಸಾಧನಗಳನ್ನು ಮನೆಗೆ ತಂದರೂ ಸಹ ವಿದ್ಯುತ್ ಕಡಿತ ಸಮಸ್ಯೆಯಿಂದ ಅವುಗಳಲ್ಲಿ ಸರಿಯಾಗಿ ಬಳಸಲು ಕೂಡ ಸಾಧ್ಯವಾಗುವುದಿಲ್ಲ. ಇಂತಹ ಚಿಂತೆಯನ್ನು ನಿವಾರಿಸಲು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ವಿದ್ಯುತ್ ಇಲ್ಲದೆಯೂ ತಂಪಾದ ಗಾಳಿ ನೀಡಬಲ್ಲ ಪೋರ್ಟಬಲ್ ಫೋಲ್ಡಿಂಗ್ ಫ್ಯಾನ್. 

ಪೋರ್ಟಬಲ್ ಫೋಲ್ಡಿಂಗ್ ಫ್ಯಾನ್ ವಿಶೇಷತೆಗಳು:
ವಾಸ್ತವವಾಗಿ, ಮಾರುಕಟ್ಟೆಯಲ್ಲಿ ಹಲವು ಬಗೆಯ ಪೋರ್ಟಬಲ್ ಫೋಲ್ಡಿಂಗ್ ಫ್ಯಾನ್ ಗಳು ಲಭ್ಯವಿವೆ. ಇವುಗಳು ಚಲಿಸಲು ವಿದ್ಯುತ್ ಅಗತ್ಯವಿಲ್ಲ, ಬದಲಿಗೆ ಇವುಗಳನ್ನು ಯುಎಸ್ಬಿ ಚಾರ್ಜರ್ ಮೂಲಕ ಚಾರ್ಜ್ ಮಾಡಬಹುದು, ಇಲ್ಲವೇ ಅವುಗಳಿಗೆ ಬ್ಯಾಟರಿಯನ್ನು ಅಳವಡಿಸಿ ತಂಪಾದ ಗಾಳಿಯನ್ನು ಪಡೆಯಬಹುದಾಗಿದೆ. ಇದರ ಮತ್ತೊಂದು ವೈಶಿಷ್ಟ್ಯವೆಂದರೆ ಇದರಲ್ಲಿ ಎಲ್ಇಡಿ ಲೈಟ್ ಕೂಡ ಲಭ್ಯವಿದೆ. ರಾತ್ರಿ ಹೊತ್ತು ಪವರ್ ಕಟ್ ಆದಾಗ ಈ ಎಲ್ಇಡಿ ಲೈಟ್ ಅನ್ನು ಎಮರ್ಜೆನ್ಸಿ ಲೈಟ್ ಆಗಿ ಬಳಸಬಹುದು. 

ಇದನ್ನೂ ಓದಿ- ಸಿಲಿಂಡರ್ ಬ್ಲಾಸ್ಟ್ ನಂತಹ ದುರ್ಘಟನೆ ತಪ್ಪಿಸಲು ಇಂದೇ ಮನೆಗೆ ತನ್ನಿ ಎಲ್ಪಿಜಿ ಗ್ಯಾಸ್ ಡಿಟೆಕ್ಟರ್

ಪೋರ್ಟಬಲ್ ಫೋಲ್ಡಿಂಗ್ ಫ್ಯಾನ್ ಹೆಸರೇ ಸೂಚಿಸುವಂತೆ ಇದು ಮಡಚಬಹುದಾದ ಫ್ಯಾನ್ ಆಗಿರುವುದರಿಂದ ಇದನ್ನು ಎಲ್ಲಿ ಬೇಕಾದರೂ ಸುಲಭವಾಗಿ ಸಾಗಿಸಬಹುದು. ಈ ಫ್ಯಾನ್ 180 ಡಿಗ್ರಿಗಳವರೆಗೆ ತಿರುಗಬಹುದಾದ ಸಾಮರ್ಥ್ಯವನ್ನು ಹೊಂದಿದೆ. ಆದರೂ, ಇದನ್ನು ಗೋಡೆಯ ಮೂಲೆಯಲ್ಲಿ ಅಳವಡಿಸಿದರೆ ಅದು ಇಡೀ ಕೋಣೆಗೆ ಗಾಳಿಯನ್ನು ಪೂರೈಸುತ್ತದೆ. ಸಂಪೂರ್ಣವಾಗಿ ಪ್ಲಾಸ್ಟಿಕ್‌ನಿಂದ ಮಾಡಲ್ಪಟ್ಟಿರುವ ಈ ಫ್ಯಾನ್ ನಲ್ಲಿ ಹವಾ ನಿಯಂತ್ರಣಕ್ಕಾಗಿ ಗುಂಡಿಗಳನ್ನು ಸಹ ನೀಡಲಾಗಿದೆ.

ಇದನ್ನೂ ಓದಿ- 40KM ವರೆಗೆ ಮೈಲೇಜ್ ನೀಡಬಲ್ಲ ಮಾರುತಿಯ ಸ್ಟ್ರಾಂಗ್ ಹೈಬ್ರಿಡ್ ಕಾರುಗಳಿವು

ಪೋರ್ಟಬಲ್ ಫೋಲ್ಡಿಂಗ್ ಫ್ಯಾನ್ ಬೆಲೆ:
ಮೊದಲೇ ತಿಳಿಸಿದಂತೆ ಮಾರುಕಟ್ಟೆಯಲ್ಲಿ ಹಲವು ಬಗೆಯ ಫೋಲ್ಡಿಂಗ್ ಫ್ಯಾನ್‌ಗಳು ಲಭ್ಯವಿದ್ದು, ಇವುಗಳ ಬೆಲೆ ಸುಮಾರು 1500 ರೂ.ನಿಂದ 3000 ರೂ. ವರೆಗೆ ಇರಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News