ಅಗ್ಗದ ದರದಲ್ಲಿ ವಿಮಾನಯಾನ .! ದೀಪಾವಳಿ ಹಿನ್ನೆಲೆಯಲ್ಲಿ ಟಿಕೆಟ್ ಬುಕಿಂಗ್ ಮೇಲೆ ಬಂಪರ್ ರಿಯಾಯಿತಿ..!

Cheapest Flight Tickets:ಇದೀಗ ಫ್ಲಿಪ್‌ಕಾರ್ಟ್ ಬಿಗ್ ದೀಪಾವಳಿ ಸೇಲ್‌  ನಡೆಯುತ್ತಿದೆ. ಈ ಸೇಲ್ ನಲ್ಲಿ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳು ಮತ್ತು ಇತರ ಸಾಮಗ್ರಿಗಳೊಂದಿಗೆ ವಿಮಾನ ಟಿಕೆಟ್‌ಗಳನ್ನು ಕೂಡಾ ಬುಕ್ ಮಾಡಬಹುದಾಗಿದೆ. 

Written by - Ranjitha R K | Last Updated : Oct 19, 2022, 02:47 PM IST
  • ದೀಪಾವಳಿಗೆ ಇನ್ನು ಕೇವಲ ನಾಲ್ಕು ದಿನಗಳಷ್ಟೇ ಬಾಕಿ
  • ಹಬ್ಬ ಸನಿಹದಲ್ಲಿಯೇ ಇರುವುದರಿಂದ ಟಿಕೆಟ್ ದರಗಳು ಕೂಡಾ ಗಗನಕ್ಕೇರಿವೆ
  • ಫ್ಲಿಪ್‌ಕಾರ್ಟ್ ಬಿಗ್ ದೀಪಾವಳಿ ಸೇಲ್‌ ನಡೆಯುತ್ತಿದೆ.
ಅಗ್ಗದ ದರದಲ್ಲಿ ವಿಮಾನಯಾನ .! ದೀಪಾವಳಿ ಹಿನ್ನೆಲೆಯಲ್ಲಿ ಟಿಕೆಟ್ ಬುಕಿಂಗ್ ಮೇಲೆ ಬಂಪರ್ ರಿಯಾಯಿತಿ..! title=
Cheapest Flight Tickets (file photo)

Cheapest Flight Tickets : ದೀಪಾವಳಿಗೆ ಇನ್ನು ಕೇವಲ ನಾಲ್ಕು ದಿನಗಳಷ್ಟೇ ಬಾಕಿ. ಬೇರೆ ಊರಿನಲ್ಲಿ ನೆಲೆಸಿರುವವರು, ತಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಬೆಳಕಿನ ಹಬ್ಬವನ್ನು ಆಚರಿಸುವ ಉದ್ದೇಶದಿಂದ ತಮ್ಮ ಊರಿಗೆ ಮರಳುತ್ತಿದ್ದಾರೆ. ಹಬ್ಬ ಸನಿಹದಲ್ಲಿಯೇ ಇರುವುದರಿಂದ ಟಿಕೆಟ್ ದರಗಳು ಕೂಡಾ ಗಗನಕ್ಕೇರಿವೆ.  ಆದರೆ, ಅತಿ ಕಡಿಮೆ ದರದಲ್ಲಿ ವಿಮಾನಯಾನ ಮಾಡುವ ಅವಕಾಶ ಈ ಹಬ್ಬದ ಸಂದರ್ಭದಲ್ಲಿ ಲಭಿಸಲಿದೆ. ಇದೀಗ ಫ್ಲಿಪ್‌ಕಾರ್ಟ್ ಬಿಗ್ ದೀಪಾವಳಿ ಸೇಲ್‌  ನಡೆಯುತ್ತಿದೆ. ಈ ಸೇಲ್ ನಲ್ಲಿ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳು ಮತ್ತು ಇತರ ಸಾಮಗ್ರಿಗಳೊಂದಿಗೆ ವಿಮಾನ ಟಿಕೆಟ್‌ಗಳನ್ನು ಕೂಡಾ ಬುಕ್ ಮಾಡಬಹುದಾಗಿದೆ. 

ಅಗ್ಗದ ದರದಲ್ಲಿ ವಿಮಾನ ಟಿಕೆಟ್ ಬುಕ್ ಮಾಡಿ : 
ಫ್ಲಿಪ್‌ಕಾರ್ಟ್ ಬಿಗ್ ದೀಪಾವಳಿ ಸೇಲ್ ಮೂಲಕ, ಕಡಿಮೆ ದರದಲ್ಲಿ ವಿಮಾನ ಟಿಕೆಟ್‌ಗಳನ್ನು ಬುಕ್ ಮಾಡಬಹುದು. ಈ ಸೇಲ್ ಇಂದಿನಿಂದ ಅಂದರೆ ಅಕ್ಟೋಬರ್ 19, ನಿಂದ ಪ್ರಾರಂಭವಾಗಿದ್ದು, ಅಕ್ಟೋಬರ್ 23 ರವರೆಗೆ ಇರುತ್ತದೆ. ಈ ಸೇಲ್ ನಲ್ಲಿ ಬೇರೆ ಬೇರೆ ಸ್ಥಳಗಳಿಗೆ ಕಡಿಮೆ ದರದಲ್ಲಿ ವಿಮಾನ ಟಿಕೆಟ್ ಗಳನ್ನು ಬುಕ್ ಮಾಡಬಹುದು.

ಇದನ್ನೂ ಓದಿ : ಫ್ಲಿಪ್‌ಕಾರ್ಟ್‌ನಲ್ಲಿ 42-ಇಂಚಿನ ಸ್ಮಾರ್ಟ್ ಟಿವಿ ಕೇವಲ 2,499 ರೂ.ಗೆ ಖರೀದಿಸಿ

ಟಿಕೆಟ್‌ ಬುಕಿಂಗ್ ಮೇಲೆ ಬಂಪರ್ ರಿಯಾಯಿತಿ : 
ಫ್ಲಿಪ್‌ಕಾರ್ಟ್ ದೀಪಾವಳಿ ಸೇಲ್‌ನಿಂದ ಫ್ಲೈಟ್ ಟಿಕೆಟ್‌ಗಳನ್ನು ಬುಕ್ ಮಾಡುವ ಮೂಲಕ ಬಹಳಷ್ಟು ಪ್ರಯೋಜನಗಳನ್ನೂ ಪಡೆಯಬಹುದು. ಏರ್ ಇಂಡಿಯಾ, ವಿಸ್ತಾರಾ, ಏರ್ ಏಷ್ಯಾ ಮತ್ತು ಸ್ಪೈಸ್ ಜೆಟ್‌ನಂತಹ ವಿಮಾನಯಾನ ಸಂಸ್ಥೆಗಳ ಟಿಕೆಟ್ ಅನ್ನು 15 ರಿಂದ 30% ರಷ್ಟು ಬಂಪರ್ ರಿಯಾಯಿತಿಯಲ್ಲಿ  ಖರೀದಿಸಬಹುದು. ಇದಕ್ಕಾಗಿ  ನೀವು ವಿಶೇಷ ಕಾರ್ಡ್ ಅನ್ನು ಬಳಸಬೇಕಾಗುತ್ತದೆ.

ಟಿಕೆಟ್ ಬುಕಿಂಗ್‌ಗಾಗಿ ಈ ಸುಲಭ ಹಂತಗಳನ್ನು ಅನುಸರಿಸಿ :
ಅಗ್ಗದ ದರದಲ್ಲಿ ವಿಮಾನ ಟಿಕೆಟ್‌ಗಳನ್ನು ಬುಕ್ ಮಾಡಬೇಕಾದರೆ 
-ಮೊದಲು ನಿಮ್ಮ ಸ್ಮಾರ್ಟ್‌ಫೋನ್ ಅಥವಾ ಲ್ಯಾಪ್‌ಟಾಪ್‌ನಲ್ಲಿ ಫ್ಲಿಪ್‌ಕಾರ್ಟ್‌ನ ಮೊಬೈಲ್ ಅಪ್ಲಿಕೇಶನ್ ಅಥವಾ ವೆಬ್‌ಸೈಟ್ ಓಪನ್ ಮಾಡಿ. 
-ನಂತರ, ಮುಖಪುಟದಲ್ಲಿ ಗೋಚರಿಸುವ  ವಿಭಾಗಗಳಲ್ಲಿ, 'ಫ್ಲೈಟ್ಸ್' ಹೆಸರಿನ ವಿಭಾಗ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ. 
-ಇಲ್ಲಿ ಅನೇಕ ಆಫರ್ ಗಳು ಕಾಣಿಸುತ್ತದೆ 
- ಇಲ್ಲಿ ಪ್ರಯಾಣದ ವಿವರಗಳನ್ನು ನಮೂದಿಸಿ, ಬೆಸ್ಟ್ ಆಫರ್ ಯಾವುದು ಎನ್ನುವುದನ್ನು ಖಚಿತಪಡಿಸಿಕೊಳ್ಳಿ 
- ನಂತರ ರಿಯಾಯಿತಿಗಾಗಿ 'FLYBDS'ಕೋಡ್ ಬಳಸಿ.

ಇದನ್ನೂ ಓದಿ :  Electric Water Heater: ಚಳಿಗಾಲದಲ್ಲಿ ಬಿಸಿ ನೀರಿಗಾಗಿ ಟ್ಯಾಪ್‌ನೊಂದಿಗೆ ಫಿಟ್ ಮಾಡಿ ಈ ಎಲೆಕ್ಟ್ರಿಕ್ ವಾಟರ್ ಹೀಟರ್

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News