BSNL offer : ಅತಿ ಕಡಿಮೆ ಬೆಲೆಗೆ ನಿತ್ಯ 2GB ಡೇಟಾ, ಮಾತ್ರವಲ್ಲ ಸಿಗಲಿದೆ ಇನ್ನಷ್ಟು ಲಾಭ

ಯೋಜನೆಯ ಮಾನ್ಯತೆ ಮತ್ತು ಡೇಟಾದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಈ ಯೋಜನೆಯು ಈಗ ಹಿಂದಿನ 24 ದಿನಗಳ ಬದಲಿಗೆ 28 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. 

Written by - Ranjitha R K | Last Updated : Nov 18, 2021, 03:35 PM IST
  • ತನ್ನ ಜನಪ್ರಿಯ ರೀಚಾರ್ಜ್ ಪ್ಲಾನ್ ಅನ್ನು ಪರಿಷ್ಕರಿಸಿದ ಬಿಎಸ್ ಎನ್ ಎಲ್
  • 187 ರೂ ಪ್ಲಾನ್ ಅನ್ನು ರಿಫ್ರೆಶ್ ಮಾಡಿದ ಕಂಪನಿ
  • ಈ ಪ್ಲಾನ್ ನಲ್ಲಿ ವ್ಯಾಲಿಡಿಟಿ ಹೆಚ್ಚಾಗಲಿದೆ
BSNL offer : ಅತಿ ಕಡಿಮೆ ಬೆಲೆಗೆ ನಿತ್ಯ 2GB ಡೇಟಾ, ಮಾತ್ರವಲ್ಲ ಸಿಗಲಿದೆ ಇನ್ನಷ್ಟು ಲಾಭ title=
187 ರೂ ಪ್ಲಾನ್ ಅನ್ನು ರಿಫ್ರೆಶ್ ಮಾಡಿದ ಕಂಪನಿ (file photo)

ನವದೆಹಲಿ : BSNL ತನ್ನ ಅತ್ಯಂತ ಜನಪ್ರಿಯ ಯೋಜನೆಗಳಲ್ಲಿ ಒಂದನ್ನು ಪರಿಷ್ಕರಿಸಿದೆ. BSNL 187 ರೂ . ಪ್ಲಾನ್ ಅನ್ನು ರಿಫ್ರೆಶ್ ಮಾಡಿದೆ ಮತ್ತು ಈ ಪ್ಲಾನ್ ನ ಪ್ರಯೋಜನಗಳನ್ನು ಹೆಚ್ಚಿಸಿದೆ. ಈ ಪರಿಷ್ಕರಣೆಯೊಂದಿಗೆ, BSNLನ  187 ರೂಪಾಯಿಯ ಪ್ಲಾನ್  ಇತರ ಕಂಪನಿಗಳ ರೀಚಾರ್ಜ್ ಪ್ಲಾನ್ ಗೆ (Recharge Plans) ಸ್ಪರ್ಧೆಯನ್ನು ನೀಡುತ್ತಿದೆ. BSNL ನ 187 ಯೋಜನೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದ್ದು, ಉಳಿದ ಪ್ರಯೋಜನಗಳು ಹಾಗೇ ಇರಲಿವೆ. ಯೋಜನೆಯು ಸ್ಥಳೀಯ/STD ಸಂಖ್ಯೆಗಳಿಗೆ ಅನಿಯಮಿತ ಕರೆ (unlimited calling) ಮತ್ತು MTNL ನೆಟ್‌ವರ್ಕ್‌ನಲ್ಲಿ ರಾಷ್ಟ್ರೀಯ ರೋಮಿಂಗ್ ನೀಡುವುದನ್ನು ಮುಂದುವರೆಸಿದೆ. ಅಲ್ಲದೆ, ಈ ಯೋಜನೆಯಲ್ಲಿ ದಿನಕ್ಕೆ 100 ಉಚಿತ SMS ಕೂಡಾ ಸಿಗಲಿದೆ. 

BSNL ನಿಂದ 187 ರೂ.ಗಳ ಪರಿಷ್ಕೃತ ಯೋಜನೆ :
ಯೋಜನೆಯ ಮಾನ್ಯತೆ ಮತ್ತು ಡೇಟಾದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಈ ಯೋಜನೆಯು ಈಗ ಹಿಂದಿನ 24 ದಿನಗಳ ಬದಲಿಗೆ 28 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಅಲ್ಲದೆ, ಡೇಟಾ ಪ್ರಯೋಜನಗಳನ್ನು (data benefits) ದಿನಕ್ಕೆ 2GB ಗೆ ಹೆಚ್ಚಿಸಲಾಗಿದೆ. 

ಇದನ್ನೂ ಓದಿ : Malware: ಸ್ಮಾರ್ಟ್‌ಫೋನ್ ಬಳಕೆದಾರರೇ ಎಚ್ಚರ! ಈ 23 ಆಪ್‌ಗಳು ನಿಮ್ಮ ಫೋನಿನಲ್ಲಿದ್ದರೆ ಈಗಲೇ ಈ ಕೆಲಸ ಮಾಡಿ

ಏರ್‌ಟೆಲ್‌ನ 187 ರೂ ಪ್ಲಾನ್ :
BSNL ನ ಈ ಯೋಜನೆಯು ಜಿಯೋ (Jio), ಏರ್‌ಟೆಲ್ ಮತ್ತು ವೊಡಾಫೋನ್-ಐಡಿಯಾದ (Vi) 200 ರೂ.ಗಳ ಯೋಜನೆಗಳೊಂದಿಗೆ ಸ್ಪರ್ಧಿಸುತ್ತದೆ. ಏರ್‌ಟೆಲ್ 187 ರೂಗಳ ಯೋಜನೆಯನ್ನು ಸಹ ಹೊಂದಿದೆ. ಇದು 24 ದಿನಗಳ ಮಾನ್ಯತೆಯನ್ನು ನೀಡುತ್ತದೆ ಮತ್ತು ದಿನಕ್ಕೆ 1GB ಡೇಟಾ, ಅನಿಯಮಿತ ಕರೆ, ದಿನಕ್ಕೆ 100 SMS ನೀಡುತ್ತದೆ. ಇದರೊಂದಿಗೆ, ಏರ್‌ಟೆಲ್ Amazon Prime Video, Airtel Xstream, Wink Music ಮತ್ತು Hello Tunes ಗೆ 30 ದಿನಗಳ ಚಂದಾದಾರಿಕೆಯನ್ನು ನೀಡುತ್ತಿದೆ.

ಜಿಯೋ ರೂ 199 ಯೋಜನೆ :
ಜಿಯೋ (Jio) ರೂ 199 ಪ್ಯಾಕ್‌ ನಲ್ಲಿ ದಿನಕ್ಕೆ 1.5GB ಡೇಟಾ, ಅನಿಯಮಿತ ಕರೆಗಳೊಂದಿಗೆ 24 ದಿನಗಳ ಮಾನ್ಯತೆ ಸಿಗಲಿದೆ. ಅಲ್ಲದೆ, ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ನ್ಯೂಸ್, ಜಿಯೋ ಸೆಕ್ಯುರಿಟಿ ಮತ್ತು ಜಿಯೋ ಕ್ಲೌಡ್‌ಗೆ ಚಂದಾದಾರಿಕೆಯನ್ನು ನೀಡುತ್ತದೆ. 

ಇದನ್ನೂ ಓದಿ : Airtel ಮತ್ತು Vi ನಿಂದ ಬಂಪರ್ ರಿಚಾರ್ಜ್ ಪ್ಲಾನ್ : 730GB ಡೇಟಾ ಜೊತೆಗೆ ಉಚಿತ OTT ಚಂದಾದಾರಿಕೆ ಲಭ್ಯ!

Vi ನ 187 ರೂ. ಪ್ಲಾನ್ :
Vodafone Idea (Vi) 1GB ಡೇಟಾ, ಅನಿಯಮಿತ ಕರೆಗಳು, ದಿನಕ್ಕೆ 100 SMS ಮತ್ತು ಅದೇ ಬೆಲೆಯಲ್ಲಿ Vi Movies ಗೆ ಅಕ್ಸೆಸ್ ನೀಡುತ್ತದೆ.
ತಿಳಿದಿರಲಿ ಈ ಯೋಜನೆಯು ಕೇರಳದ ಗ್ರಾಹಕರಿಗೆ ಮಾತ್ರ ಲಭ್ಯವಿರುತ್ತದೆ.  

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News