BSNL NEW PLAN: ಟೆಲಿಕಾಂ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಿದ BSNLನ ಹೊಸ ಯೋಜನೆ

BSNL NEW PLAN: BSNL ತನ್ನ ಪ್ರಿಪೇಯ್ಡ್ (Pre-Paid Users) ಬಳಕೆದಾರರಿಗಾಗಿ ಹೊಸ ಯೋಜನೆಯನ್ನು ಆರಂಭಿಸಿದೆ. ಪದೇ ಪದೇ ರೀಚಾರ್ಜ್ ಮಾಡದೇ ದೀರ್ಘಕಾಲ ಡೇಟಾವನ್ನು ಬಳಸಲು ಬಯಸುವವರಿಗೆ ಈ ಪ್ಲಾನ್ (BSNL Prepaid Plan) ಉಪಯುಕ್ತವಾಗಿದೆ. ಈ ಯೋಜನೆಯಲ್ಲಿ ಏನೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ತಿಳಿಯೋಣ ಬನ್ನಿ.

Written by - Nitin Tabib | Last Updated : Sep 1, 2021, 01:16 PM IST
  • BSNL ಭಾರತದಲ್ಲಿ ಹೊಸ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯನ್ನು ಆರಂಭಿಸಿದೆ.
  • BSNL ರೂ 1498 ರ ಪ್ರಿಪೇಯ್ಡ್ ಯೋಜನೆಯನ್ನು ಪರಿಚಯಿಸಿದೆ.
  • ಈ ಯೋಜನೆಯಲ್ಲಿ, ಬಳಕೆದಾರರು 365 ದಿನಗಳವರೆಗೆ ಪ್ರತಿದಿನ 2 GB ಡೇಟಾವನ್ನು ಪಡೆಯುತ್ತಾರೆ.
BSNL NEW PLAN: ಟೆಲಿಕಾಂ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಿದ BSNLನ  ಹೊಸ ಯೋಜನೆ title=
BSNL Recharge Plan(File Photo)

ನವದೆಹಲಿ: BSNL NEW PLAN - ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ತನ್ನ ಗ್ರಾಹಕರಿಗೆ ದೀರ್ಘಾವಧಿಯ ಸಿಂಧುತ್ವ ಹೊಂದಿರುವ ಮತ್ತು ಡೇಟಾ ಪ್ರಯೋಜನಗಳನ್ನು ನೀಡುವ ಹೊಸ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯನ್ನು ಆರಂಭಿಸಿದೆ. ಕಂಪನಿಯು 1498 ರೂಗಳ ಪ್ರಿಪೇಯ್ಡ್ ಯೋಜನೆಯನ್ನು (BSNL Rs 1498 Plan) ಪರಿಚಯಿಸಿದೆ, ಇದು ಪ್ಯಾನ್ ಇಂಡಿಯಾ ಆಧಾರದ ಮೇಲೆ 365 ದಿನಗಳ ಸಿಂಧುತ್ವವನ್ನು ಹೊಂದಿದೆ. ಬಳಕೆದಾರರಿಗೆ ಜಾರಿಗೊಳಿಸಲಾಗಿರುವ ಈ ಯೋಜನೆಯು ಯಾವ ಯಾವ ಪ್ರಯೋಜನಗಳನ್ನು  ಹೊಂದಿದೆ ನೋಡೋಣ ಬನ್ನಿ.

BSNLನ ರೂ.1498 ರ ಪ್ಲಾನ್
BSNL ನ ರೂ 1498 ರ ಹೊಸ ಡೇಟಾ STVಪ್ಲಾನ್,  2GB ಹೈಸ್ಪೀಡ್ ಡೈಲಿ ಡೇಟಾದೊಂದಿಗೆ ಬರುತ್ತದೆ, ಈ ಪ್ಲಾನ್ (Recharge Plan) ಸಿಂಧುತ್ವವು ಸಂಪೂರ್ಣ 365 ದಿನಗಳವರೆಗೆ ಇರಲಿದೆ. ಡೇಟಾ ಮಿತಿ ಮುಗಿದ ನಂತರ, ಬಳಕೆದಾರರು 40kbps ಕಡಿಮೆ ವೇಗದಲ್ಲಿ ಇಂಟರ್ನೆಟ್ ಅನ್ನು ಸರ್ಫ್ ಮಾಡಬಹುದು. ಈ ಯೋಜನೆಯು ಪ್ರಸ್ತುತ ಅಸ್ಸಾಂ, ಗುಜರಾತ್, ಯುಪಿ ಪೂರ್ವ ಮತ್ತು ಯುಪಿ ಪಶ್ಚಿಮ, ಕೋಲ್ಕತಾ, ತೆಲಂಗಾಣ ಮತ್ತು ಕರ್ನಾಟಕ ಸೇರಿದಂತೆ ಹೆಚ್ಚಿನ ಬಿಎಸ್‌ಎನ್‌ಎಲ್ ವಲಯಗಳಲ್ಲಿ ಲಭ್ಯವಿದೆ.

ಇದು ಕೇವಲ ಒಂದು ಡೇಟಾ ಪ್ಯಾಕ್ ಆಗಿದೆ (BSNL Annual Data Prepaid Plan)
ಪದೇ ಪದೇ ರೀಚಾರ್ಜ್ ಮಾಡದೇ ದೀರ್ಘಕಾಲ ಡೇಟಾವನ್ನು ಬಳಸಲು ಬಯಸುವವರಿಗೆ ಈ ಪ್ಲಾನ್ ಉಪಯುಕ್ತವಾಗಿದೆ. ಈ ಯೋಜನೆಯಲ್ಲಿ ಧ್ವನಿ ಕರೆ ಅಥವಾ SMS ಪ್ರಯೋಜನಗಳು ಲಭ್ಯವಿಲ್ಲ ಮತ್ತು ಇದು ಕೇವಲ ಡೇಟಾ ಪ್ಯಾಕ್ ಯೋಜನೆಯಾಗಿದೆ ಎಂಬುದು ಇಲ್ಲಿ ಗಮನಾರ್ಥ. ಕಂಪನಿಯ ಈ ಹೊಸ ಪ್ಲಾನ್ ಮೊದಲ ಬಾರಿಗೆ ಕೇರಳ ಟೆಲಿಕಾಂ ವಲಯದಲ್ಲಿ ನೋಟ್ ಮಾಡಲಾಗಿದೆ.

ಆಸಕ್ತ ಗ್ರಾಹಕರು ಬಿಎಸ್‌ಎನ್‌ಎಲ್ ವೆಬ್ ಪೋರ್ಟಲ್ ಅಥವಾ ಸೆಲ್ಫ್ ಕೇರ್ ಗ್ರಾಹಕ ಆರೈಕೆಯ ಮೂಲಕ ರೂ 1498 ರ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯನ್ನು ನೇರವಾಗಿ ಪಡೆಯಬಹುದು. ಬಳಕೆದಾರರು ಈ ಯೋಜನೆಯನ್ನು BSNL ನ ಅಧಿಕೃತ ತಾಣದಲ್ಲಿ ಅಥವಾ STVDATA1498 ಎಂದು 123ಗೆ SMS ಕಳುಹಿಸುವ ಮುಖಾಂತರ ಕೂಡ ಪಡೆಯಬಹುದು.

ಇದನ್ನೂ ಓದಿ-Jio ಈ 'ಸ್ಮಾಲ್' ರೀಚಾರ್ಜ್ ಮಾಡಿ ಪಡೆಯಿರಿ ಉಚಿತವಾಗಿ Disney+ Hotstar ಚಂದಾದಾರಿಕೆ! ಇಲ್ಲಿದೆ ಫುಲ್ ಡಿಟೈಲ್ಸ್!

ಇದರೊಂದಿಗೆ BSNL ಪ್ರಮೋಶನಲ್ ಕೊಡುಗೆಯೋನನ್ನು ಕೂಡ ತಂದಿದೆ
ಹೊಸ ರೂ 1,498 ಪ್ರಿಪೇಯ್ಡ್ ಪ್ಲಾನ್ ಜೊತೆಗೆ, BSNL ರೂ 2,399 ವೋಚರ್‌ಗಳೊಂದಿಗೆ ರೀಚಾರ್ಜ್ ಮಾಡುವ ಗ್ರಾಹಕರಿಗೆ ಪ್ರಮೋಶನಲ್ ಕೊಡುಗೆಯನ್ನು ಕೂಡ ಜಾರಿಗೆ ತಂದಿದೆ. ಈ ಗ್ರಾಹಕರು ರೂ .2,399 ಪ್ಲಾನ್ ರೀಚಾರ್ಜ್ ಮಾಡಿದರೆ,  90 ದಿನಗಳ ಹೆಚ್ಚುವರಿ ವ್ಯಾಲಿಡಿಟಿಯನ್ನು ಪಡೆಯಲಿದ್ದಾರೆ. ಈ ಯೋಜನೆ ಸಾಮಾನ್ಯವಾಗಿ 365 ದಿನಗಳ ಸಿಂಧುತ್ವ ಹೊಂದಿರುತ್ತದೆ. 

ಇದನ್ನೂ ಓದಿ-Airtel Recharge Plan : ಕೇವಲ 5 ರೂಪಾಯಿಗೆ ಸಿಗುತ್ತಿದೆ 1GB ಡಾಟಾ ಮತ್ತು ಅನ್ಲಿಮಿಟೆಡ್ ಕರೆಗಳ ಸೌಲಭ್ಯ

BSNLನ ರೂ. 447ರ ಪ್ಲಾನ್ (BSNL Prepaid Recharge)
ಇದಕ್ಕೂ ಮೊದಲು BSNL ರೂ. 447 ರೀಚಾರ್ಜ್ ಪ್ಲಾನ್ ಅನ್ನು 100GB ಡೇಟಾದೊಂದಿಗೆ ಬಿಡುಗಡೆ ಮಾಡಿತ್ತು. ಈ ಪ್ಲಾನ್ 60 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ ಮತ್ತು ಇದು ಯಾವುದೇ ದೈನಂದಿನ ಮಿತಿಯಿಲ್ಲದೆ ಒಟ್ಟು 100GB ಡೇಟಾವನ್ನು ನೀಡುತ್ತದೆ. ಇದರ ಹೊರತಾಗಿ, ಅನಿಯಮಿತ ಕರೆ ಮತ್ತು ದಿನಕ್ಕೆ 100 ಎಸ್‌ಎಂಎಸ್‌ಗಳು ಯಾವುದೇ ನೆಟ್‌ವರ್ಕ್‌ನಲ್ಲಿ ಲಭ್ಯವಿರಲಿವೆ. ಇದಲ್ಲದೇ ಉಚಿತ ಬಿಎಸ್‌ಎನ್‌ಎಲ್ ಟ್ಯೂನ್ಸ್ ಮತ್ತು ಎರೋಸ್ ನೌ ಮನರಂಜನಾ ಸೇವೆಗಳು ಕೂಡ ಯೋಜನೆಯೊಂದಿಗೆ ಸಿಗುತ್ತವೆ.

ಇದನ್ನೂ ಓದಿ-ನಿಮ್ಮ ಬಳಿಯೂ ಇದ್ದರೆ MIಯ ಈ ಫೋನ್ , ಕಂಪನಿ ವಾಪಸ್ ನೀಡಲಿದೆ ಫುಲ್ ಅಮೌಂಟ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News