BSNL Cheapest Offer: ಹಲವು ಅಗ್ಗದ ದರದ ರಿಚಾರ್ಜ್ ಯೋಜನೆಗಳ ಮೂಲಕ ಖಾಸಗಿ ಟೆಲಿಕಾಂ ಕಂಪನಿಗಳ ನಿದ್ದೆಗೆಡಿಸಿರುವ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್‌ಎನ್‌ಎಲ್) ಇದೀಗ ಮೊಬೈಲ್ ಡೇಟಾ ಜೊತೆ ಬ್ರಾಡ್‌ಬ್ಯಾಂಡ್ ಸೇವೆಯಲ್ಲೂ ಎದುರಾಳಿಗಳಿಗೆ ಟಕ್ಕರ್ ನೀಡಲು ಮುಂದಾಗಿದೆ.
ಅತ್ಯಂತ ಕಡಿಮೆ ಬೆಲೆಯಲ್ಲಿ ಮೊಬೈಲ್ ಡೇಟಾ ಜೊತೆ ಬ್ರಾಡ್‌ಬ್ಯಾಂಡ್ ಸೇವೆ ಒದಗಿಸುತ್ತಿರುವ ಸರ್ಕಾರಿ ಟೆಲಿಕಾಂ ಕಂಪನಿ ಬಿಎಸ್‌ಎನ್‌ಎಲ್ ಈ ಪ್ಲಾನ್‌ನಲ್ಲಿ ಬಳಕೆದಾರರಿಗೆ 200Mbps ಸ್ಪೀಡ್‌ನಲ್ಲಿ 5000GB ಡೇಟಾ ಜೊತೆಗೆ ಹಲವು ಸೌಲಭ್ಯಗಳನ್ನು ಒದಗಿಸುತ್ತಿದೆ. ಬಿಎಸ್‌ಎನ್‌ಎಲ್ ಬ್ರಾಡ್‌ಬ್ಯಾಂಡ್ ಪ್ಲಾನ್‌ನ ಬೆಲೆ ಮತ್ತು ಅದನ್ನು ಪಡೆಯುವ ಸುಲಭ ವಿಧಾನದ ಬಗ್ಗೆ ತಿಳಿಯೋಣ...
ಬಿಎಸ್‌ಎನ್‌ಎಲ್ ಬ್ರಾಡ್‌ಬ್ಯಾಂಡ್ ಪ್ಲಾನ್‌ನ ಬೆಲೆ (BSNL Broadband Plan Price):
ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ಪರಿಚಯಿಸುತ್ತಿರುವ ಈ ಬಿಎಸ್‌ಎನ್‌ಎಲ್ ಬ್ರಾಡ್‌ಬ್ಯಾಂಡ್ ಪ್ಲಾನ್‌ನ ಬೆಲೆ 999 ರೂ. ಗಳು (ಪ್ರತಿ ತಿಂಗಳಿಗೆ) ಮಾತ್ರ. ಯಾವುದೇ ಇನ್‌ಸ್ಟಾಲೇಷನ್ ಶುಲ್ಕವಿಲ್ಲದೆ ಗ್ರಾಹಕರು ಈ ಬಿಎಸ್‌ಎನ್‌ಎಲ್ ಭಾರತ್ ಫೈಬರ್ ಇಂಟರ್‌ನೆಟ್ ಅನ್ನು ಅಳವಡಿಸಬಹುದಾಗಿದೆ.
ಇದನ್ನೂ ಓದಿ- ಏರ್‌ಟೆಲ್ ಧಮಾಕಾ ಪ್ಲಾನ್ಸ್: ಕೇವಲ 7 ರೂ.ಗೆ ಸಿಗುತ್ತೆ 1 GB ಡೇಟಾ
ಬಿಎಸ್‌ಎನ್‌ಎಲ್ 999 ರೂಪಾಯಿ ರೀಚಾರ್ಜ್ ಪ್ಲಾನ್ ಪ್ರಯೋಜನ (BSNL Rs 999 Recharge Plan Benefit):
ಬಿಎಸ್‌ಎನ್‌ಎಲ್ ಪರಿಚಯಿಸಿರುವ ಈ 999 ರೂಪಾಯಿ ರೀಚಾರ್ಜ್ ಪ್ಲಾನ್‌ನಲ್ಲಿ ಗ್ರಾಹಕರು ತಿಂಗಳು ಪೂರ್ತಿ 200Mbps ಸ್ಪೀಡ್‌ನಲ್ಲಿ ಇಂಟರ್‌ನೆಟ್ ಅನ್ನು ಪಡೆಯಬಹುದು. ತಿಂಗಳಿಗೆ 5000GB ಡೇಟಾ ಸೌಲಭ್ಯ ಲಭ್ಯವಾಗಲಿದ್ದು, ಡೇಟಾ ಪ್ಯಾಕ್ ಖಾಲಿಯಾದ ಬಳಿಕ 10Mbps ಸ್ಪೀಡ್‌ನಲ್ಲಿ ಅನ್‌ಲಿಮಿಟೆಡ್ ಇಂಟರ್‌ನೆಟ್ ಸೇವೆಯನ್ನು ಮುಂದುವರೆಸಬಹುದಾಗಿದೆ.
ಓಟಿಟಿ ಆಪ್ ಗಳಿಗೆ ಫ್ರೀ ಸಬ್‌ಸ್ಕ್ರಿಪ್ಷನ್ (Free subscription to OTT apps):
ಬಿಎಸ್‌ಎನ್‌ಎಲ್ ನ ಈ 999 ರೂ. ಬ್ರಾಡ್‌ಬ್ಯಾಂಡ್ ಪ್ಲಾನ್‌ನಲ್ಲಿ ಗ್ರಾಹಕರಿಗೆ Disney Plus Hotstar, Sony LIV, Zee5, YuppTV, Hungama ಸೇರಿಡಾಂಟೆ ಹಲವು ಓಟಿಟಿ ಪ್ಲಾಟ್ಫಾರ್ಮ್ ಗಳಿಗೆ ಉಚಿತ ಚಂದಾದಾರಿಕೆಯೂ ಲಭ್ಯವಾಗಲಿದೆ.
ಈ ಎಲ್ಲಾ ಪ್ರಯೋಜನಗಳ ಜೊತೆಗೆ ಗ್ರಾಹಕರು ಯಾವ ಬಿಎಸ್‌ಎನ್‌ಎಲ್ ನಂಬರ್ ನಿಂದ ಈ 999 ರೂ. ರಿಚಾರ್ಜ್ ಪ್ಲಾನ್ ಆಕ್ಟಿವೇಟ್ಮಾಡಿಕೊಳ್ಳುತ್ತಾರೆ ಆ ನಂಬರ್‌ಗೆ ಇಡೀ ದೇಶಾದ್ಯಂತ ಅನ್‌ಲಿಮಿಟೆಡ್ ಫ್ರೀ ಕಾಲಿಂಗ್ ಸೇವೆಯೂ ಲಭ್ಯವಿರುತ್ತದೆ.
Unlimited data, calling & fun, just in Rs 999/month !!!
Subscribe for #BSNL #BharatFibre #BookNow https://t.co/kqmAq7rbBn or Call or Say 'Hi' to 18004444 (WhatsApp)#Internet4All #FamilyWiFi #FTTH pic.twitter.com/PYXhmNH8iy— BSNL_RAJASTHAN (@BSNL_RJ) September 23, 2024
ಈ ಕುರಿತಂತೆ ತನ್ನ ಸಾಮಾಜಿಕ ಜಾಲತಾಣ ಖಾತೆ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಬಿಎಸ್‌ಎನ್‌ಎಲ್, ಅನಿಯಮಿತ ಡೇಟಾ, ಕರೆ ಮತ್ತು ಮೋಜು, ಕೇವಲ 999/ತಿಂಗಳಿಗೆ !!!
#BSNL #BharatFibre ಗೆ ಚಂದಾದಾರರಾಗಿ ಅಥವಾ ಈ ಬಗೆಗಿನ ಇನ್ನೂ ಹೆಚ್ಚಿನ ಮಾಹಿತಿಯನ್ನು ಪಡೆಯಲು #BookNow https://bookmyfiber.bsnl.co.in ಅಥವಾ 18004444 (WhatsApp) ಗೆ ಕರೆ ಮಾಡಿ ಅಥವಾ 'ಹಾಯ್' ಎಂದು ಮೆಸೇಜ್ ಮಾಡಿ ಅಥವಾ ಬಿಎಸ್‌ಎನ್ಎಲ್ ನೀಡಿರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಎಂದು ಬಿಎಸ್‌ಎಲ್‌ಎನ್ ತಿಳಿಸಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.