ಕೈಗೆಟುಕುವ ಬೆಲೆಯಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಮತ್ತೊಂದು ಎಲೆಕ್ಟ್ರಿಕ್ ಸ್ಕೂಟರ್

Bounce Infinity E1X E-Scooter Launch: ಇತ್ತೀಚೆಗೆಯಷ್ಟೆ ಮತ್ತೊಂದು ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಈ ಎಲೆಕ್ಟ್ರಿಕ್ ಸ್ಕೂಟರ್‌ನ ಬೆಲೆ ತುಂಬಾ ಕಡಿಮೆ ಇರಲಿದೆ ಎಂದು ಕಂಪನಿ ಹೇಳಿಕೊಂಡಿದೆ. 

Written by - Yashaswini V | Last Updated : May 30, 2024, 01:23 PM IST
  • ಕಂಪನಿ ನೀಡಿರುವ ಮಾಹಿತಿಯ ಪ್ರಕಾರ ಈ ಎಲೆಕ್ಟ್ರಿಕ್ ಸ್ಕೂಟರ್ ಒಂದೇ ಚಾರ್ಜ್‌ನಲ್ಲಿ
    65 ಕಿಮೀ ವರೆಗೆ ವ್ಯಾಪ್ತಿಯನ್ನು ನೀಡುತ್ತದೆ.
  • ಈ ಎಲೆಕ್ಟ್ರಿಕ್ ಸ್ಕೂಟರ್ ಮೂರು ಮೋಡ್‌ಗಳೊಂದಿಗೆ ಬರುತ್ತದೆ
  • ಇದರಲ್ಲಿ ಗ್ರಾಹಕರು ಇಕೋ, ಪವರ್ ಮತ್ತು ಟರ್ಬೊದಂತಹ ಮೋಡ್‌ಗಳನ್ನು ಪಡೆಯುತ್ತೀರಿ.
ಕೈಗೆಟುಕುವ ಬೆಲೆಯಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಮತ್ತೊಂದು ಎಲೆಕ್ಟ್ರಿಕ್ ಸ್ಕೂಟರ್ title=

Bounce Infinity E1X E-Scooter Launch: ಬೆಂಗಳೂರು ಮೂಲದ  ಎಲೆಕ್ಟ್ರಿಕ್ ವಾಹನ ತಯಾರಿಕಾ ಕಂಪನಿ ಬೌನ್ಸ್ ಇನ್ಫಿನಿಟಿ  ಕೈಗೆಟುಕುವ ಬೆಲೆಯಲ್ಲಿ ಮಾರುಕಟ್ಟೆಗೆ ಮತ್ತೊಂದು ಎಲೆಕ್ಟ್ರಿಕ್ ಸ್ಕೂಟರ್ (Electric Scooter) ಅನ್ನು ಪರಿಚಯಿಸಿದೆ. ಈ ಎಲೆಕ್ಟ್ರಿಕ್ ಸ್ಕೂಟರ್‌ಗೆ ಬೌನ್ಸ್ ಇನ್ಫಿನಿಟಿ ಇ1ಎಕ್ಸ್ ಇ-ಸ್ಕೂಟರ್ ಎಂದು ಹೆಸರಿಡಲಾಗಿದೆ. 

ಬೌನ್ಸ್ ಇನ್ಫಿನಿಟಿ ಇ1ಎಕ್ಸ್ ಇ-ಸ್ಕೂಟರ್ ಬೆಲೆ:  
ಬೌನ್ಸ್ ಇನ್ಫಿನಿಟಿ ಇ1ಎಕ್ಸ್ ಇ-ಸ್ಕೂಟರ್ನ (Bounce Infinity E1X E-Scooter) ಬೆಲೆ ಪೆಟ್ರೋಲ್‌ನಲ್ಲಿ ಚಲಿಸುವ ಸ್ಕೂಟರ್‌ನ ಬೆಲೆಯ ಅರ್ಧದಷ್ಟಿರಲಿದೆ ಎಂದು ಕಂಪನಿ ಹೇಳಿಕೊಂಡಿದೆ. ಈ ಸ್ಕೂಟರ್ 2 ರೂಪಾಂತರಗಳಲ್ಲಿ ಲಭ್ಯವಿದ್ದು ಸ್ಕೂಟರ್‌ನ ಆರಂಭಿಕ ಎಕ್ಸ್ ಶೋ ರೂಂ ಬೆಲೆ 55000 ರೂ. ಎಂದು ಕಂಪನಿ ತಿಳಿಸಿದೆ. ಹೈ ಟಾಪ್ ಸ್ಪೀಡ್ ರೂಪಾಂತರದ ಬೆಲೆ 59000 ರೂ. ಆಗಿದೆ. 
 
ಇದನ್ನೂ ಓದಿ- ಈ ತಂತ್ರಜ್ಞಾನದಿಂದ ಫೋನ್ 1 ನಿಮಿಷಕ್ಕೆ, ಕಾರ್ 10 ನಿಮಿಷದಲ್ಲಿ ಫುಲ್ ಚಾರ್ಜ್ ಆಗುತ್ತಂತೆ!

ಬುಕಿಂಗ್ ವಿಧಾನ ಮತ್ತು ಲಭ್ಯತೆ: 
ಕಂಪನಿ ನೀಡಿರುವ ಮಾಹಿತಿಯ ಪ್ರಕಾರ, ಕಂಪನಿಯ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ನೀವು ಕೇವಲ 499 ರೂ. ಪಾವತಿಸಿ ಬೌನ್ಸ್ ಇನ್ಫಿನಿಟಿ ಇ1ಎಕ್ಸ್ ಇ-ಸ್ಕೂಟರ್  ಬುಕ್ ಮಾಡಬಹುದು. ಇದರ ವಿತರಣೆ ಜೂನ್ 2024ರಿಂದ ಪ್ರಾರಂಭವಾಗಲಿದೆ ಎಂದು ಕಂಪನಿ ಮಾಹಿತಿ ನೀಡಿದೆ. 

ಬೌನ್ಸ್ ಇನ್ಫಿನಿಟಿ ಇ1ಎಕ್ಸ್ ಇ-ಸ್ಕೂಟರ್ ವಿಶೇಷತೆ: 
ಬೌನ್ಸ್ ಇನ್ಫಿನಿಟಿ ಇ1ಎಕ್ಸ್ ಇ-ಸ್ಕೂಟರ್‌ನ ವಿಶೇಷ ವೈಶಿಷ್ಟ್ಯವೆಂದರೆ ಸ್ವಾಪ್ ಮಾಡಬಹುದಾದ ಬ್ಯಾಟರಿ, ಇದನ್ನು ದೇಶಾದ್ಯಂತ ಹರಡಿರುವ ಸ್ವಾಪ್ ಮಾಡಬಹುದಾದ ನೆಟ್‌ವರ್ಕ್ ಮೂಲಕ ಬಳಸಬಹುದಾಗಿದೆ. 

ಇದನ್ನೂ ಓದಿ- Fast charging : 1 ನಿಮಿಷದಲ್ಲಿ ಫೋನ್, 10 ನಿಮಿಷದಲ್ಲಿ ಕಾರ್ ಬ್ಯಾಟರಿ ಚಾರ್ಜ್ ಮಾಡುತ್ತೆ ಈ ಸೂಪರ್‌ ಚಾರ್ಜರ್!

ಎರಡು ರೂಪಾಂತರಗಳಲ್ಲಿ ಲಭ್ಯ: 
ಬೌನ್ಸ್ ಇನ್ಫಿನಿಟಿ ಕಂಪನಿಯು ಇ1ಎಕ್ಸ್ ಇ-ಸ್ಕೂಟರ್‌ ಅನ್ನು 2 ಸ್ಪೀಡ್ ರೂಪಾಂತರಗಳಲ್ಲಿ ಪರಿಚಯಿಸಿದೆ. ಮೂಲ ರೂಪಾಂತರದ ಮೂಲ ವೇಗವು 55 kmph ಆಗಿದೆ ಮತ್ತು ಉನ್ನತ ರೂಪಾಂತರದ ವೇಗವು 65 kmph ಆಗಿದೆ. ಈ ಸ್ಕೂಟರ್ ಬಹು ಬ್ಯಾಟರಿ ಸ್ವ್ಯಾಪಿಂಗ್ ನೆಟ್‌ವರ್ಕ್‌ಗಳೊಂದಿಗೆ ಬರುತ್ತದೆ ಮತ್ತು ಏಕೀಕರಣಕ್ಕೆ ಕಡಿಮೆ ಬದಲಾವಣೆಗಳ ಅಗತ್ಯವಿದೆ. ಆದಾಗ್ಯೂ, ಕಂಪನಿಯು 92 kmph ವೇಗದ ಎಲೆಕ್ಟ್ರಿಕ್ ಸ್ಕೂಟರ್‌ಗಳತ್ತ ಗಮನ ಹರಿಸುತ್ತಿದೆ ಎಂದು ಹೇಳಿಕೊಂಡಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News