ಕೇವಲ 329 ರೂ.ಗಳಿಗೆ 1000ಜಿಬಿ ಡೇಟಾ ನೀಡುತ್ತೇ ಈ ಟೆಲಿಕಾಂ ಕಂಪನಿ!

Best Broadband Plan: ಬಿಎಸ್ಎನ್ಎಲ್ ಕಂಪನಿಯು ತನ್ನ ಬ್ರಾಡ್‌ಬ್ಯಾಂಡ್ ಪೋರ್ಟ್‌ಫೋಲಿಯೊದಲ್ಲಿ ಅನೇಕ 1000GB ಡೇಟಾ ಯೋಜನೆಗಳನ್ನು ನೀಡುತ್ತಿದೆ. ಈ ಯೋಜನೆಗಳ ಆರಂಭಿಕ ಬೆಲೆ ಕೇವಲ 329 ರೂ. (Technology News In Kannada)

Written by - Nitin Tabib | Last Updated : Nov 26, 2023, 05:38 PM IST
  • ರೂ 329 ಯೋಜನೆ- ಬಿಎಸ್ಎನ್ಎಲ್ ಕಂಪನಿಯ ಅಗ್ಗದ ಬ್ರಾಡ್‌ಬ್ಯಾಂಡ್ ಯೋಜನೆ ರೂ 329 ಗಳದ್ದಾಗಿದೆ.
  • ಈ ಯೋಜನೆಯು 1 ತಿಂಗಳ ಮಾನ್ಯತೆಯೊಂದಿಗೆ ಬರುತ್ತದೆ. ಪ್ರಯೋಜನಗಳ ಬಗ್ಗೆ ಹೇಳುವುದಾದರೆ,
  • ಕಂಪನಿಯು ಈ ಯೋಜನೆಯಲ್ಲಿ 20 Mbps ವೇಗದಲ್ಲಿ 1000GB ಡೇಟಾಗೆ ಪ್ರವೇಶವನ್ನು ನೀಡುತ್ತದೆ.
  • 1000GB ಡೇಟಾ ಖಾಲಿಯಾದ ನಂತರ ಇಂಟರ್ನೆಟ್ ವೇಗವು 4 Mbps ಗೆ ಕಡಿಮೆಯಾಗುತ್ತದೆ.
ಕೇವಲ 329 ರೂ.ಗಳಿಗೆ 1000ಜಿಬಿ ಡೇಟಾ ನೀಡುತ್ತೇ ಈ ಟೆಲಿಕಾಂ ಕಂಪನಿ! title=

ಬೆಂಗಳೂರು: ಬಿಎಸ್ಎನ್ಎಲ್ (ಭಾರತ್ ಸಂಚಾರ್ ನಿಗಮ್ ಲಿಮಿಟೆಡ್) ಕಂಪನಿಯು ತನ್ನ ಬಳಕೆದಾರರಿಗೆ ಕಡಿಮೆ ಬೆಲೆಯಲ್ಲಿ ಸಾಕಷ್ಟು ಪ್ರಯೋಜನಗಳೊಂದಿಗೆ ಹಲವು ಯೋಜನಗಳನ್ನು ನಡೆಸುತ್ತಿದೆ. ಪ್ರಿಪೇಯ್ಡ್ ಮತ್ತು ಪೋಸ್ಟ್‌ಪೇಯ್ಡ್ ಯೋಜನೆಗಳಂತೆ, ಸರ್ಕಾರಿ ಟೆಲಿಕಾಂ ಕಂಪನಿಯ ಬ್ರಾಡ್‌ಬ್ಯಾಂಡ್ ಪೋರ್ಟ್‌ಫೋಲಿಯೊ ಕೂಡ ಒಂದಕ್ಕಿಂತ ಹೆಚ್ಚು ಯೋಜನೆಗಳನ್ನು ಒಳಗೊಂಡಿದೆ. ಕಡಿಮೆ ವೆಚ್ಚದಲ್ಲಿ ನಿಮಗೆ ಹೆಚ್ಚಿನ ಡೇಟಾವನ್ನು ಒದಗಿಸುವ ಯೋಜನೆಯನ್ನು ನೀವು ಹುಡುಕುತ್ತಿದ್ದರೆ, ಈ ಲೇಖನ ನಿಮಗಾಗಿ. ಈ ಲೇಖನದಲ್ಲಿ ನಾವು ನಿಮಗೆ ಬಿಎಸ್ಎನ್ಎಲ್ ನ ಕೆಲ ಅಗ್ಗದ ಬ್ರಾಡ್‌ಬ್ಯಾಂಡ್ ಯೋಜನೆಗಳ ಬಗ್ಗೆ ಮಾಹಿತಿಯನ್ನು ನೀಡಲಿದ್ದೇವೆ, ಅವು ಒಂದೇ ರೀಚಾರ್ಜ್ ನಲ್ಲಿ ನಿಮಗೆ 1000GB ಡೇಟಾವನ್ನು ನೀಡುತ್ತವೆ. (Technology News In Kannada)

 ಬಿಎಸ್ಎನ್ಎಲ್ ನ ಬ್ರಾಡ್‌ಬ್ಯಾಂಡ್ ಪೋರ್ಟ್‌ಫೋಲಿಯೋ ಅನೇಕ ಅಗ್ಗದ ಯೋಜನೆಗಳು ಒಳಗೊಂಡಿವೆ. ಇಂದು ನಾವು ನಿಮಗೆ ಬಿಎಸ್ಎನ್ಎಲ್ ನ ಕೆಲ  ಬ್ರಾಡ್‌ಬ್ಯಾಂಡ್ ಯೋಜನೆಗಳ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದು, ಅವು ನಿಮಗೆ ಕಡಿಮೆ ಬೆಲೆಯಲ್ಲಿ 1000GB ವರೆಗೆ ಡೇಟಾ ಪ್ರವೇಶವನ್ನು ನೀಡುತ್ತವೆ. ವಿಶೇಷವೆಂದರೆ ಈ ಪಟ್ಟಿಯಲ್ಲಿರುವ ಅಗ್ಗದ ಪ್ಲಾನ್ ಕೇವಲ 329 ರೂ.ಗಲದ್ದಾಗಿದೆ.  ಎಲ್ಲಾ ಯೋಜನೆಗಳ ಬೆಲೆ ಮತ್ತು ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

1000GB ನೀಡುವ ಬಿಎಸ್ಎನ್ಎಲ್ ನ ಅಗ್ಗದ ಯೋಜನೆಗಳು
ರೂ 329 ಯೋಜನೆ-
ಬಿಎಸ್ಎನ್ಎಲ್ ಕಂಪನಿಯ ಅಗ್ಗದ ಬ್ರಾಡ್‌ಬ್ಯಾಂಡ್ ಯೋಜನೆ ರೂ 329 ಗಳದ್ದಾಗಿದೆ. ಈ ಯೋಜನೆಯು 1 ತಿಂಗಳ ಮಾನ್ಯತೆಯೊಂದಿಗೆ ಬರುತ್ತದೆ. ಪ್ರಯೋಜನಗಳ ಬಗ್ಗೆ ಹೇಳುವುದಾದರೆ, ಕಂಪನಿಯು ಈ ಯೋಜನೆಯಲ್ಲಿ 20 Mbps ವೇಗದಲ್ಲಿ 1000GB ಡೇಟಾಗೆ ಪ್ರವೇಶವನ್ನು ನೀಡುತ್ತದೆ. 1000GB ಡೇಟಾ ಖಾಲಿಯಾದ ನಂತರ ಇಂಟರ್ನೆಟ್ ವೇಗವು 4 Mbps ಗೆ ಕಡಿಮೆಯಾಗುತ್ತದೆ.

ಇದನ್ನೂ ಓದಿ-ಯುಟ್ಯೂಬ್ ಸಹಾಯದಿಂದ ತಿಂಗಳಿಗೆ 1 ಲಕ್ಷ ಸುಲಭವಾಗಿ ಸಂಪಾದಿಸಿ, ಮನೆಯಿಂದಲೂ ಕೆಲಸ ಮಾಡಬಹುದು!

ರೂ 399 ಯೋಜನೆ- ಈ ಪಟ್ಟಿಯಲ್ಲಿನ ಮುಂದಿನ ಯೋಜನೆ ರೂ 399 ಗಳದ್ದಾಗಿದೆ. ಈ ಯೋಜನೆಯು 1 ತಿಂಗಳ ಮಾನ್ಯತೆಯೊಂದಿಗೆ ಬರುತ್ತದೆ, ಇದು ಬಳಕೆದಾರರಿಗೆ 1000GB ವರೆಗೆ ಅನಿಯಮಿತ ಡೇಟಾ ಪ್ರವೇಶವನ್ನು ನೀಡುತ್ತದೆ. ಇದರಲ್ಲಿ ಇಂಟರ್ನೆಟ್‌ನ ವೇಗವು 30 Mbps ವರೆಗೆ ಇರುತ್ತದೆ. 1000GB ಡೇಟಾ ಕೋಟಾ ಮುಗಿದ ನಂತರ ಇಂಟರ್ನೆಟ್ ವೇಗವು 30 Mbps ಗೆ ಕಡಿಮೆಯಾಗುತ್ತದೆ.

ಇದನ್ನೂ ಓದಿ-ಡಿಸೆಂಬರ್ 1 ರಿಂದ ಸ್ಥಗಿತಗೊಳ್ಳಲಿವೆ ಈ ಜೀಮೇಲ್ ಖಾತೆಗಳು! ಇಂದೇ ನಿಮ್ಮ ಪ್ರಮುಖ ಡೇಟಾ ಉಳಿಸಿಕೊಳ್ಳಿ!

ರೂ 799 ಯೋಜನೆ- ಈ ಪಟ್ಟಿಯಲ್ಲಿನ ಮುಂದಿನ ಯೋಜನೆ ರೂ 799 ಆಗಿದೆ. ಈ ಯೋಜನೆಯು 1 ತಿಂಗಳ ಮಾನ್ಯತೆಯೊಂದಿಗೆ ಬರುತ್ತದೆ. ಈ ಯೋಜನೆಯಲ್ಲಿ, ಬಳಕೆದಾರರು 100 Mbps ವೇಗದಲ್ಲಿ 1000GB ವರೆಗೆ ಡೇಟಾ ಪ್ರವೇಶವನ್ನು ಪಡೆಯುತ್ತಾರೆ. ಇದರ ನಂತರ ಇಂಟರ್ನೆಟ್ ವೇಗವು 5 Mbps ಗೆ ಕಡಿಮೆಯಾಗುತ್ತದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News