Amrut Bharat Trains: ದೇಶಾದ್ಯಂತದ ಕೋಟ್ಯಾಂತರ ರೈಲು ಪ್ರಯಾಣಿಕರಿಗೊಂದು ಸಂತಸದ ಸುದ್ದಿ!

Indian Railway Good News: ದೇಶಾದ್ಯಂತ ಇರುವ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗದವರನ್ನು ಗಮನದಲ್ಲಿಟ್ಟುಕೊಂಡು ಭಾರತ ಸರ್ಕಾರ ಅಮೃತ್ ಭಾರತ್ ರೈಲನ್ನು ಪ್ರಾರಂಭಿಸಿದೆ. ಇತ್ತೀಚೆಗೆ, ಡಿಸೆಂಬರ್ 30 ರಂದು, ಪ್ರಧಾನಿ ಮೋದಿ ಅವರು ಭಾರತದ ಎರಡು ಅಮೃತ್ ಭಾರತ್ ರೈಲುಗಳಿಗೆ ಹಸಿರು ನಿಶಾನೆ ತೋರಿದ್ದರು. ಅಂದಿನಿಂದ ಪ್ರಯಾಣಿಕರು ಈ ರೈಲನ್ನು ಹೆಚ್ಚು ಇಷ್ಟಪಡುತ್ತಿದ್ದಾರೆ. (Technology News In Kannada)  

Written by - Nitin Tabib | Last Updated : Feb 20, 2024, 05:40 PM IST
  • ಅಮೃತ್ ಭಾರತ್ ರೈಲು ಸೆಮಿ-ಕಪ್ಲರ್ ತಂತ್ರಜ್ಞಾನವನ್ನು ಆಧರಿಸಿದೆ. ರೈಲು ಪ್ರಾರಂಭವಾಗುವ ಮತ್ತು ನಿಲ್ಲಿಸುವ ಸಮಯದಲ್ಲಿ ಉಂಟಾಗುವ ಶಾಕ್ ಗಳ
  • ಪ್ರಭಾವವನ್ನು ಕಡಿಮೆ ಮಾಡಲು ಈ ತಂತ್ರಜ್ಞಾನವು ಸಹಾಯಕವಾಗಿದೆ.
  • ಅಮೃತ್ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ವಿವಿಧ ಸೌಲಭ್ಯಗಳನ್ನು ಒದಗಿಸಲಾಗಿದೆ.
Amrut Bharat Trains: ದೇಶಾದ್ಯಂತದ ಕೋಟ್ಯಾಂತರ ರೈಲು ಪ್ರಯಾಣಿಕರಿಗೊಂದು ಸಂತಸದ ಸುದ್ದಿ! title=

Indian Railways: ದೇಶಾದ್ಯಂತ ನಿತ್ಯ ಪ್ರಯಾಣಿಸುವ ಕೋಟ್ಯಾಂತರ ರೈಲು ಪ್ರಯಾಣಿಕರ ಅನುಕೂಲವನ್ನು ಗಮನದಲ್ಲಿಟ್ಟುಕೊಂಡು, ಭಾರತೀಯ ರೈಲ್ವೆ ಇತ್ತೀಚೆಗೆ ಎರಡು ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲುಗಳನ್ನು ಆರಂಭಿಸಿದೆ. ಇವುಗಳಲ್ಲಿ ಮೊದಲ ರೈಲು ದರ್ಭಾಂಗ-ಅಯೋಧ್ಯೆ-ಆನಂದ್ ವಿಹಾರ್ ಟರ್ಮಿನಲ್ ನಡುವೆ ಓಡಾಟ ಆರಂಭಿಸಿದೆ. ಎರಡನೇ ರೈಲು ಮಾಲ್ಡಾ ಟೌನ್-ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಸ್ (ಬೆಂಗಳೂರು) ನಡುವೆ ಓಡಾಟ ಆರಂಭಿಸಿದೆ. ಈ ಎರಡೂ ರೈಲುಗಳ ಯಶಸ್ವಿ ಓಡಾಟದ ಆರಂಭದ ಬಳಿಕ, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು 50 ಅಮೃತ್ ಭಾರತ್ ಎಕ್ಸ್‌ಪ್ರೆಸ್‌ ಓಡಾಟಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ ಎಂದು ತಿಳಿಸಿದ್ದಾರೆ. (Technology News In Kannada)

ಡಿಸೆಂಬರ್ 30 ರಂದು ಎರಡು ಹೊಸ ರೈಲುಗಳ ಓಡಾಟ ಆರಂಭ
ಈ ಕುರಿತು ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಎಕ್ಸ್ ನಲ್ಲಿ ಮಾಹಿತಿಯನ್ನು ಹಂಚಿಕೊಂಡ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು 50 ಹೊಸ ಅಮೃತ್ ಭಾರತ್ ರೈಲುಗಳ ಓಡಾಟಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ  ಎಂದು ಹೇಳಿದ್ದಾರೆ. ಡಿಸೆಂಬರ್ 30 ರಂದು ಪ್ರಧಾನಿ ಮೋದಿ ಅವರು ಚಾಲನೆ ನೀಡಿದ ಅಮೃತ್ ಭಾರತ್ ರೈಲುಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ. ಅಮೃತ್ ಭಾರತ್ ರೈಲನ್ನು 'ಮೇಕ್ ಇನ್ ಇಂಡಿಯಾ' ಅಡಿಯಲ್ಲಿ ಸರ್ಕಾರ ನಿರ್ಮಿಸಿದೆ. ಇದು ಭಾರತೀಯ ರೈಲ್ವೆಯ ಆಧುನಿಕ ರೈಲಾಗಿದ್ದು,  ಶ್ರೀಸಾಮಾನ್ಯನ ಅನುಕೂಲವನ್ನು ಗಮನದಲ್ಲಿಟ್ಟುಕೊಂಡು ಇತ್ತೀಚೆಗೆ ಈ ರೈಲುಗಳ ಓಡಾಟವನ್ನು ಆರಂಭಿಸಲಾಗಿದೆ. 

ಇದನ್ನೂ ಓದಿ-Jio New Feature Phone: ಶೀಘ್ರದಲ್ಲೇ ಯುಪಿಐ ಪೆಮೆಂಟ್ ವೈಶಿಷ್ಟ್ಯದೊಂದಿಗೆ ಜಿಯೋ ಭಾರತ್ ಬಿ2 ಫೋನ್ ಗಳ ಬಿಡುಗಡೆ!

ಅಮೃತ್ ಭಾರತ್ ರೈಲಿನ ವಿಶಿಷ್ಟತೆಗಳೇನು?
ಅಮೃತ್ ಭಾರತ್ ರೈಲು ಒಂದು ನಾನ್-ಎಸಿ ರೈಲಾಗಿದ್ದು, ಎರಡನೇ ದರ್ಜೆಯ ಕಾಯ್ದಿರಿಸದ ಮತ್ತು ಸ್ಲೀಪರ್ ಕೋಚ್‌ಗಳನ್ನು ಹೊಂದಿದೆ. ಎರಡೂ ತುದಿಗಳಲ್ಲಿ 6,000 ಹೆಚ್ಪಿ ಡಬಲ್ಯುಎಪಿ‌5 ಇಂಜಿನ್‌ಗಳೊಂದಿಗೆ, ರೈಲು 130 kmph ವೇಗದಲ್ಲಿ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ರೈಲಿನಲ್ಲಿ ಎರಡು ಇಂಜಿನ್‌ಗಳನ್ನು ಅಳವಡಿಸಲಾಗಿದೆ ಏಕೆಂದರೆ ಇದು ಲಿಂಕ್ ಹಾಫ್‌ಮನ್ ಬುಷ್ (ಎಲ್ಹೆಚ್ಬಿ) ಪುಶ್-ಪುಲ್ ವಿನ್ಯಾಸದೊಂದಿಗೆ ಹೈ ಸ್ಪೀಡ್ ರೈಲಾಗಿದೆ. ರೈಲಿನ ಮುಂಭಾಗದಲ್ಲಿ ಅಳವಡಿಸಲಾಗಿರುವ ಎಂಜಿನ್ ರೈಲನ್ನು ಮುಂದಕ್ಕೆ ಎಳೆಯುತ್ತದೆ. ಹಿಂದಿನ ಎಂಜಿನ್ ರೈಲನ್ನು ಮುಂದಕ್ಕೆ ಚಲಿಸಲು ಸಹಾಯ ಮಾಡುತ್ತದೆ. ಪುಷ್-ಪುಲ್ ಸೆಟಪ್‌ನ ಪ್ರಯೋಜನಗಳನ್ನು ವಿವರಿಸಿದ ಕೇಂದ್ರ ರೇಲ್ವೆ ಸಚಿವ, ಅಶ್ವಿನಿ ವೈಷ್ಣವ್ ಪುಲ್ ಮತ್ತು ಟರ್ನ್‌ನಲ್ಲಿ ಎರಡು ಎಂಜಿನ್‌ಗಳನ್ನು ಹೊಂದಲು ಅನುಕೂಲವಾಗುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ-ISRO Yuvika 2024:ನಿಮ್ಮ ಮಗುವನ್ನು ವಿಜ್ಞಾನಿಯಾಗಿಸಬೇಕೆ? ISRO ನ ಈ ಕಾರ್ಯಕ್ರಮಕ್ಕೆ ನೋಂದಣಿ ಆರಂಭಗೊಂಡಿದೆ, ಇಲ್ಲಿದೆ ಡೀಟೈಲ್ಸ್!

ಅಮೃತ್ ಭಾರತ್ ಪಯಣ ಶಾಕ್ ಫ್ರೀ ಪ್ರಯಾಣ
ಅಮೃತ್ ಭಾರತ್ ರೈಲು ಸೆಮಿ-ಕಪ್ಲರ್ ತಂತ್ರಜ್ಞಾನವನ್ನು ಆಧರಿಸಿದೆ. ರೈಲು ಪ್ರಾರಂಭವಾಗುವ ಮತ್ತು ನಿಲ್ಲಿಸುವ ಸಮಯದಲ್ಲಿ ಉಂಟಾಗುವ ಶಾಕ್ ಗಳ ಪ್ರಭಾವವನ್ನು ಕಡಿಮೆ ಮಾಡಲು ಈ ತಂತ್ರಜ್ಞಾನವು ಸಹಾಯಕವಾಗಿದೆ. ಅಮೃತ್ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ವಿವಿಧ ಸೌಲಭ್ಯಗಳನ್ನು ಒದಗಿಸಲಾಗಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News