50 ವರ್ಷಗಳ ನಂತರ ಸಾಧನೆ : ಚಂದ್ರಯಾನ 3 ರ ಸಮೀಪವೇ ಲ್ಯಾಂಡ್ ಆಯಿತು ಅಮೆರಿಕಾ ಬಾಹ್ಯಾಕಾಶ ನೌಕೆ

 Moon Landing By Private Company:ಭಾರತದ ಚಂದ್ರಯಾನ-3 ಚಂದ್ರನ ಮೇಲೆ ಕಾಲಿಟ್ಟ 6 ತಿಂಗಳ ನಂತರ ಅಮೆರಿಕ ಚಂದ್ರನ ಮೇಲೆ ಕಾಲಿಟ್ಟಿದೆ. ವಿಶೇಷವೆಂದರೆ ಮೊದಲ ಬಾರಿಗೆ ಕಮರ್ಷಿಯಲ್ ಮೂನ್ ಲ್ಯಾಂಡಿಂಗ್ ಮಾಡಲಾಗಿದೆ.  

Written by - Ranjitha R K | Last Updated : Feb 23, 2024, 12:19 PM IST
  • 50 ವರ್ಷಗಳ ನಂತರ ಅಮೆರಿಕ ತನ್ನ ಬಾಹ್ಯಾಕಾಶ ನೌಕೆಯನ್ನು ಚಂದ್ರನ ಮೇಲೆ ಇಳಿಸುವಲ್ಲಿ ಯಶಸ್ವಿ
  • 'ಚಂದ್ರಯಾನ-3'ಯಿಂದ ಸ್ವಲ್ಪ ದೂರದಲ್ಲಿ ಅಮೆರಿಕಾ ಬಾಹ್ಯಾಕಾಶ ನೌಕೆ ಲ್ಯಾಂಡ್
  • ಇದೇ ಮೊದಲ ಬಾರಿಗೆ ಖಾಸಗಿ ಕಂಪನಿಯೊಂದು ಮೂನ್ ಲ್ಯಾಂಡಿಂಗ್ ನಡೆಸಿದೆ.
50 ವರ್ಷಗಳ ನಂತರ ಸಾಧನೆ : ಚಂದ್ರಯಾನ 3 ರ ಸಮೀಪವೇ ಲ್ಯಾಂಡ್ ಆಯಿತು ಅಮೆರಿಕಾ ಬಾಹ್ಯಾಕಾಶ ನೌಕೆ title=

Moon Landing By Private Company : 50 ವರ್ಷಗಳ ನಂತರ ಅಮೆರಿಕ ತನ್ನ ಬಾಹ್ಯಾಕಾಶ ನೌಕೆಯನ್ನು ಚಂದ್ರನ ಮೇಲೆ ಇಳಿಸುವಲ್ಲಿ ಯಶಸ್ವಿಯಾಗಿದೆ. ಭಾರತದ 'ಚಂದ್ರಯಾನ-3'ಯಿಂದ ಸ್ವಲ್ಪ ದೂರದಲ್ಲಿ ಅಮೆರಿಕಾ ಬಾಹ್ಯಾಕಾಶ ನೌಕೆ ಲ್ಯಾಂಡ್ ಆಗಿದೆ.ರೋಬೋಟ್ ಲ್ಯಾಂಡರ್ ಒಡಿಸ್ಸಿಯಸ್ ಚಂದ್ರನ ದಕ್ಷಿಣ ಧ್ರುವದ ಬಳಿ ಸೇಫ್ ಲ್ಯಾಂಡ್ ಆಗಿದೆ. ಈ ಹಿಂದೆ 1972ರಲ್ಲಿ ಅಮೆರಿಕದ ಅಪೊಲೊ 17 ಬಾಹ್ಯಾಕಾಶ ನೌಕೆ ಚಂದ್ರನ ಮೇಲ್ಮೈ ತಲುಪಿತ್ತು. ಕೆಲವು ಗಂಟೆಗಳ ಹಿಂದೆ, ಬಾಹ್ಯಾಕಾಶ ನೌಕೆ ತಯಾರಿಕಾ ಕಂಪನಿ ಇಂಟ್ಯೂಟಿವ್ ಮೆಷಿನ್ಸ್ (Intuitive Machines) ಅನ್ನು ಟ್ಯಾಗ್ ಮಾಡುವ ಮೂಲಕ, ನಾಸಾ ಸಾಮಾಜಿಕ ಮಾಧ್ಯಮದಲ್ಲಿ 'ನಿಮ್ಮ ಆರ್ಡರ್ ಚಂದ್ರನನ್ನು ತಲುಪಿದೆ' ಎಂದು ಬರೆದುಕೊಂಡಿದೆ. 

ಈ ಸಾಧನೆಯ ವಿಶೇಷ : 
- ಭಾರತದ ಚಂದ್ರಯಾನ-3 ಚಂದ್ರನ ಮೇಲೆ ಕಾಲಿಟ್ಟ 6 ತಿಂಗಳ ನಂತರ ಅಮೆರಿಕ ಚಂದ್ರನ ಮೇಲೆ ಕಾಲಿಟ್ಟಿದೆ. ವಿಶೇಷವೆಂದರೆ ಮೊದಲ ಬಾರಿಗೆ ಕಮರ್ಷಿಯಲ್ ಮೂನ್ ಲ್ಯಾಂಡಿಂಗ್ ಮಾಡಲಾಗಿದೆ.

- ಇದು ಖಾಸಗಿ ಮಿಷನ್ ಆಗಿತ್ತು. ಇದೇ ಮೊದಲ ಬಾರಿಗೆ ಖಾಸಗಿ ಕಂಪನಿಯೊಂದು ಮೂನ್ ಲ್ಯಾಂಡಿಂಗ್ ನಡೆಸಿದೆ. Intuitive Machine ನ  Odysseus lander ಕೆಲವು ಗಂಟೆಗಳ ಹಿಂದೆ ಚಂದ್ರನನ್ನು ಸ್ಪರ್ಶಿಸುವ ಮೂಲಕ ಇತಿಹಾಸವನ್ನು ಸೃಷ್ಟಿಸಿತು. ನಾಸಾ ಇದರಲ್ಲಿ ಪಾಲುದಾರಿಕೆ ಹೊಂದಿತ್ತು. 

ಇದನ್ನೂ ಓದಿ : YouTube Playlist: ಯೂಟ್ಯೂಬ್‌ನಲ್ಲಿ ನೆಚ್ಚಿನ ವಿಡಿಯೋಗಳ ಪ್ಲೇ ಲಿಸ್ಟ್ ರಚಿಸಲು ಇಲ್ಲಿದೆ ಸುಲಭ ಮಾರ್ಗ

- ಕಳೆದ ವಾರ, ಒಡಿಸ್ಸಿಯಸ್ ಅನ್ನು ಹೊತ್ತ ಫಾಲ್ಕನ್ 9 ರಾಕೆಟ್ ಅನ್ನು ಕೆನಡಿ ಬಾಹ್ಯಾಕಾಶ ಕೇಂದ್ರದಿಂದ  ನಭಕ್ಕೆ ಚಿಮ್ಮಿತ್ತು. ಇದೀಗ ಈ ಯಶಸ್ಸಿನಿಂದ ಅಮೆರಿಕದಲ್ಲಿ ಸಂಭ್ರಮದ ವಾತಾವರಣ ಮೂಡಿದೆ.ಇದಕ್ಕೂ ಮೊದಲು ಆಗಸ್ಟ್ 2023 ರಲ್ಲಿ, ಭಾರತದ ಚಂದ್ರಯಾನವು ಮೊದಲ ಬಾರಿಗೆ ದಕ್ಷಿಣ ಧ್ರುವದಲ್ಲಿ ಸೇಫ್ ಲ್ಯಾಂಡ್ ಮಾಡಿತ್ತು.  

- ಲ್ಯಾಂಡಿಂಗ್ ಮೊದಲು, ಅಮೆರಿಕನ್ ಬಾಹ್ಯಾಕಾಶ ನೌಕೆಯಲ್ಲಿ ಕೆಲವು ಸಮಸ್ಯೆ ಇತ್ತು.  ಆದರೆ ವಿಜ್ಞಾನಿಗಳು ಅದನ್ನು ಸರಿಪಡಿಸಿದರು.ಲ್ಯಾಂಡರ್‌ನೊಂದಿಗಿನ ಸಂವಹನದಲ್ಲಿ ಸ್ವಲ್ಪ ಸಮಯ ವಿಳಂಬವಾಗಿತ್ತು. ಸ್ವಲ್ಪ ಸಮಯದವರೆಗೆ ಅದರ ಸ್ಥಿತಿ ಮತ್ತು ಸ್ಥಾನದ ಬಗ್ಗೆ  ಮಾಹಿತಿ ಸಿಕ್ಕಿರಲಿಲ್ಲ. 

7 ದಿನಗಳ ಕಾಲ ಮಾತ್ರ ಚಂದ್ರನ ಮೇಲೆ ಕೆಲಸ :
ಬಾಹ್ಯಾಕಾಶ ನೌಕೆಯಲ್ಲಿ ಲೈವ್ ವಿಡಿಯೋ ಕಳುಹಿಸುವ ಸೌಲಭ್ಯವಿರಲಿಲ್ಲ. ಆದರೆ  ಯೋಜನೆಯ ಪ್ರಕಾರವೇ, ಬಾಹ್ಯಾಕಾಶ ನೌಕೆಯು ಮಲಾಪರ್ಟ್  ಕ್ರೆತರ್ ನಲ್ಲಿ ಇಳಿದಿದೆ. ಕುತೂಹಲಕಾರಿ ಸಂಗತಿಯೆಂದರೆ ಅಮೆರಿಕದ ಈ ಬಾಹ್ಯಾಕಾಶ ನೌಕೆಯನ್ನು ಸಹ ಏಳು ದಿನಗಳವರೆಗೆ ಸೌರಶಕ್ತಿಯಲ್ಲಿ ಕೆಲಸ ಮಾಡುವಂತೆ ವಿನ್ಯಾಸಗೊಳಿಸಲಾಗಿದೆ. ಚಂದ್ರನ ಆ ಪ್ರದೇಶದಲ್ಲಿ ಸೂರ್ಯ ಮುಳುಗಿದ ತಕ್ಷಣ, ಈ ಲ್ಯಾಂಡರ್‌ನ ಸೇವೆ ಕೊನೆಗೊಳ್ಳುತ್ತದೆ. 

ಇದನ್ನೂ ಓದಿ : Smartwatchನಲ್ಲಿರುವ ಬ್ಲಡ್ ಶುಗರ್ ಅಳೆಯುವ ವೈಶಿಷ್ಟ್ಯ ಬಲು ಅಪಾಯಕಾರಿಯಂತೆ : US ಹೆಲ್ತ್ ಅಥಾರಿಟಿ ನೀಡಿದೆ ಎಚ್ಚರಿಕೆ !

ಈ ವಾಹನವನ್ನು ಟೆಕ್ಸಾಸ್ ಕಂಪನಿ ಇಂಟ್ಯೂಟಿವ್ ಮೆಷಿನ್ಸ್ ತಯಾರಿಸಿದೆ. ಒಡಿಸ್ಸಿಯಸ್ ಲ್ಯಾಂಡರ್‌ನಲ್ಲಿ ಹಲವು ಉಪಕರಣಗಳನ್ನು ಅಳವಡಿಸಲಾಗಿದೆ.ಬಾಹ್ಯಾಕಾಶ ನೌಕೆಯಲ್ಲಿ ನಾಸಾದ ಪೇಲೋಡ್ ಚಂದ್ರನ ಮೇಲ್ಮೈಯಲ್ಲಿ ಹವಾಮಾನ ಮತ್ತು ಪರಿಸರಕ್ಕೆ ಸಂಬಂಧಿಸಿದ ಇತರ ಡೇಟಾವನ್ನು ಸಂಗ್ರಹಿಸುತ್ತದೆ.

ಬೇಸ್ ನಿರ್ಮಿಸುವ ತಯಾರಿಯಲ್ಲಿ ನಾಸಾ :
ಚಂದ್ರನ ಮೇಲೆ ಮಾನವರನ್ನು ಹಲವಾರು ಬಾರಿ ಕಳುಹಿಸಿದ ಏಕೈಕ ದೇಶ ಅಮೆರಿಕ.  ಅಪೊಲೊ 17 ಮಿಷನ್‌ನಲ್ಲಿ ಕೊನೆಯ ಬಾರಿಗೆ ಮಾನವನನ್ನು ಚಂದ್ರನಲ್ಲಿಗೆ ಕಳುಹಿಸಲಾಗಿತ್ತು. ಈಗ NASA ಚಂದ್ರನ ದಕ್ಷಿಣ ಧ್ರುವದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸುವತ್ತ ಗಮನ ಹರಿಸಿದೆ. ಈ ಮೂಲಕ ಭವಿಷ್ಯದಲ್ಲಿ ಗಗನಯಾತ್ರಿ ನೆಲೆಯನ್ನು ನಿರ್ಮಿಸಲು ಸ್ಥಳವನ್ನು ಕಂಡುಹಿಡಿಯುವ ತವಕದಲ್ಲಿದೆ ಅಮೆರಿಕಾ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News