Amazon Forest: ಈ ಕಾಡು ನಶಿಸಿ ಹೋದರೆ ಭೂಮಿಯ ಮೇಲೆ ಮಾನವನ ಅಸ್ತಿತ್ವವೆ ಉಳಿಯುವುದಿಲ್ಲ! ವಿಜ್ಞಾನಿಗಳು ಹೀಗೆ ಹೇಳಿದ್ಯಾಕೆ?

Amazon Forest: ವರ್ಷವಿಡೀ, ಅಮೆಜಾನ್ (Amazon) ಬಗ್ಗೆ ಜಗತ್ತಿನಲ್ಲಿ ಚರ್ಚೆ ನಡೆಯುತ್ತದೆ, ಈ ದಟ್ಟವಾದ ಕಾಡು ಜಗತ್ತಿಗೆ ಹೇಗೆ ಮುಖ್ಯವಾಗಿದೆ? ಎಂಬುದು ಚರ್ಚೆಯ ಕೇಂದ್ರಬಿಂದು. ಆದರೆ ಅಮೆಜಾನ್ ದಿನದಿಂದ ದಿನಕ್ಕೆ ಕುಗ್ಗುತ್ತಿದೆ ಎಂದು ವರದಿಗಾರರು ಹೇಳುತ್ತಾರೆ. ಎರಿಕಾ ಬೆರೆಂಗರ್ ಅವರು ಆಕ್ಸ್‌ಫರ್ಡ್ ಮತ್ತು ಲ್ಯಾಂಕಾಸ್ಟರ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಅವರು ಅಮೆಜಾನ್ ಅನ್ನು ಬಹಳ ಹತ್ತಿರದಿಂದ ನೋಡಿದ್ದಾರೆ.

Written by - Nitin Tabib | Last Updated : Nov 9, 2021, 10:24 PM IST
  • ವರ್ಷವಿಡೀ, ಅಮೆಜಾನ್ (Amazon) ಬಗ್ಗೆ ಜಗತ್ತಿನಲ್ಲಿ ಚರ್ಚೆ ನಡೆಯುತ್ತದೆ,
  • ಈ ದಟ್ಟವಾದ ಕಾಡು ಜಗತ್ತಿಗೆ ಹೇಗೆ ಮುಖ್ಯವಾಗಿದೆ? ಎಂಬುದು ಚರ್ಚೆಯ ಕೇಂದ್ರಬಿಂದು.
  • ಆದರೆ ಅಮೆಜಾನ್ ದಿನದಿಂದ ದಿನಕ್ಕೆ ಕುಗ್ಗುತ್ತಿದೆ ಎಂದು ವರದಿಗಾರರು ಹೇಳುತ್ತಾರೆ.
Amazon Forest: ಈ ಕಾಡು ನಶಿಸಿ ಹೋದರೆ ಭೂಮಿಯ ಮೇಲೆ ಮಾನವನ ಅಸ್ತಿತ್ವವೆ ಉಳಿಯುವುದಿಲ್ಲ! ವಿಜ್ಞಾನಿಗಳು ಹೀಗೆ ಹೇಳಿದ್ಯಾಕೆ? title=
Amazon Forest (File Photo)

Amazon Forest: ವರ್ಷವಿಡೀ, ಅಮೆಜಾನ್ (Amazon) ಬಗ್ಗೆ ಜಗತ್ತಿನಲ್ಲಿ ಚರ್ಚೆ ನಡೆಯುತ್ತದೆ, ಈ ದಟ್ಟವಾದ ಕಾಡು ಜಗತ್ತಿಗೆ ಹೇಗೆ ಮುಖ್ಯವಾಗಿದೆ? ಎಂಬುದು ಚರ್ಚೆಯ ಕೇಂದ್ರಬಿಂದು. ಆದರೆ ಅಮೆಜಾನ್ ದಿನದಿಂದ ದಿನಕ್ಕೆ ಕುಗ್ಗುತ್ತಿದೆ ಎಂದು ವರದಿಗಾರರು ಹೇಳುತ್ತಾರೆ. ಎರಿಕಾ ಬೆರೆಂಗರ್ ಅವರು ಆಕ್ಸ್‌ಫರ್ಡ್ ಮತ್ತು ಲ್ಯಾಂಕಾಸ್ಟರ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಅವರು ಅಮೆಜಾನ್ ಅನ್ನು ಬಹಳ ಹತ್ತಿರದಿಂದ ನೋಡಿದ್ದಾರೆ. ಅವರು ಅಮೆಜಾನ್‌ನ ಪರಿಸ್ಥಿತಿ ವೀಕ್ಷಣೆಯಲ್ಲಿ ಪರಿಣಿತರು ಹೌದು. ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅವರು, ಅಮೆಜಾನ್ ಕುರಿತು ಹಲವು ಪ್ರಮುಖ ವಿಷಯಗಳನ್ನು ಹೇಳಿದ್ದಾರೆ.

2.5 ಡಿಗ್ರಿಯಷ್ಟು ತಾಪಮಾನ ಹೆಚ್ಚಾಗಿದೆ
ಪ್ರಸ್ತುತ ವಾತಾವರಣದಲ್ಲಿ (Environment) ಪರಿಸ್ಥಿತಿ ಹದಗೆಡುತ್ತಿದೆ ಎಂದು ಎರಿಕಾ ಹೇಳಿದ್ದಾರೆ. ಕಳೆದ 40 ವರ್ಷಗಳಲ್ಲಿ ಅಮೆಜಾನ್ (Amazon Forest) ಪ್ರದೇಶದ ತಾಪಮಾನವು 2.5 °C ಹೆಚ್ಚಾಗಿದೆ (Global Warming). ಇದು ವಿನಾಶದ ಕಡೆಗೆ ಸಂಕೇತಿಸುತ್ತದೆ ಎಂದು ಅವರು ಹೇಳಿದ್ದಾರೆ. ಪ್ಯಾರಿಸ್‌ನಂತಹ ಹವಾಮಾನ ಸಮ್ಮೇಳನಗಳಲ್ಲಿಯೂ ಸಹ ತಾಪಮಾನದಲ್ಲಿ 1.5 ಡಿಗ್ರಿ ಸೆಲ್ಸಿಯಸ್ ಇಳಿಕೆಯ ಬಗ್ಗೆ ಮಾತನಾಡುವ ಕಾರಣ ಜಗತ್ತು ಅದರ ಬಗ್ಗೆ ಯೋಚಿಸುತ್ತಿದೆ ಎಂದು ನಾನು ಭಾವಿಸುವುದಿಲ್ಲ ಎನ್ನುತ್ತಾರೆ ಎರಿಕಾ. ಎಲ್ಲಿಯೂ 2.5 °C ಆಗುವ ಮಾತು ಇಲ್ಲ.

ಅಮೆಜಾನ್ ಪ್ರದೇಶದಲ್ಲಿ ಆಗಸ್ಟ್ ಮತ್ತು ಅಕ್ಟೋಬರ್ ನಡುವೆ ಮಳೆಯ ಪ್ರಮಾಣವು ಶೇ. 34 ರಷ್ಟು ಕಡಿಮೆಯಾಗಿದೆ ಎಂದು ಅವರು ಹೇಳಿದ್ದಾರೆ. ಸರಳ ಭಾಷೆಯಲ್ಲಿ ಹೇಳುವುದಾದರೆ, ತಾಪಮಾನವು ಹೀಗೆ ಏರುತ್ತಲೇ ಇದ್ದರೆ ಮತ್ತು ಹವಾಮಾನವು ಬಿಸಿಯಗುತ್ತಲೇ ಹೋದರೆ ಕಾಡಿನಲ್ಲಿ ನಿರಂತರ ಕಾಡ್ಗಿಚ್ಚು (Forest Fire) ಇರಲಿದೆ ಎಂದು ಎರಿಕಾ ಹೇಳಿದ್ದಾರೆ.

ಇದನ್ನೂ ಓದಿ-Study: ತುಂಡುಡುಗೆಯಲ್ಲಿ ಯುವತಿಯರಿಗೆ ಚಳಿ ಯಾಕೆ ಹತ್ತಲ್ಲ? ಸಿಕ್ತು ಈ ಪ್ರಶ್ನೆಗೆ ಉತ್ತರ

ಅಮೆಜಾನ್ ಇಲ್ಲದೆ ನಾವು ಬದುಕಲು ಸಾಧ್ಯವಿಲ್ಲ 
ಅಮೆಜಾನ್‌ನ ಬದಲಾಗುತ್ತಿರುವ ಹವಾಮಾನವು ಅನೇಕ ಪ್ರಾಣಿಗಳ ಮೇಲೆ ಪರಿಣಾಮ ಬೀರುತ್ತಿದೆ ಎಂದು ಎರಿಕಾ ಹೇಳಿದ್ದಾರೆ. ನಾವು ಅದನ್ನು ಲಘುವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ. ಪ್ರಪಂಚದಾದ್ಯಂತ ಮಳೆಯ ಮಾದರಿಯಲ್ಲಿ ಬದಲಾವಣೆಗಳು ಕಂಡುಬರುತ್ತಿವೆ. ಮಳೆಯಿಲ್ಲದೆ ನಮಗೆ ಜಲವಿದ್ಯುತ್ ಇಲ್ಲ. ಇದರರ್ಥ ಬ್ರೆಜಿಲ್‌ನಲ್ಲಿ (Brazil) ಉದ್ಯಮ ನಾಶದ ಅಂಚಿನಲ್ಲಿದೆ. ನಾವು ಅಮೆಜಾನ್ ಇಲ್ಲದೆ ಬದುಕಲು ಸಾಧ್ಯವಿಲ್ಲ ಎಬುದನ್ನು ಒಪ್ಪಿಕೊಳ್ಳಬೇಕು ಎಂದು ಎರಿಕಾ ಹೇಳಿದ್ದಾರೆ.

ಇದನ್ನೂ ಓದಿ-#ClothesHaveNoGender: ಇನ್ಮುಂದೆ ವಿದ್ಯಾರ್ಥಿನಿಯರು ಅಷ್ಟೇ ಅಲ್ಲ ವಿದ್ಯಾರ್ಥಿಗಳು ಕೂಡ ಶಾಲೆಯಲ್ಲಿ ಸ್ಕರ್ಟ್ ಧರಿಸಬಹುದಂತೆ!

ಅಮೆಜಾನ್‌ಗಾಗಿ ಏನನ್ನಾದರೂ ಉತ್ತಮ ಕೆಲಸ ಮಾಡಲು, ನಮಗೆ ಹಲವು ಹಂತಗಳಲ್ಲಿ ಸಮನ್ವಯತೆಯ ಅಗತ್ಯವಿದೆ. ಪ್ರತಿಯೊಬ್ಬರೂ ಕಾರ್ಬನ್ ವೆಚ್ಚವನ್ನು ಕಡಿತಗೊಳಿಸಬೇಕು. ಇದನ್ನು ಹೇಗೆ ಕಡಿಮೆ ಮಾಡಬಹುದು ಎಂಬುದರ ಕುರಿತು ತೀವ್ರ ಸಂಶೋಧನೆಯ ಅಗತ್ಯವಿದೆ. ಇಂಗಾಲದ ಹೊರಸೂಸುವಿಕೆಯನ್ನು ಕಡಿತಗೊಳಿಸಲು ನಾವು ನಮ್ಮ ಸರ್ಕಾರಗಳ ಮೇಲೆ ಒತ್ತಡ ಹೇರಬೇಕಾಗಿದೆ ಎಂದು ಎರಿಕಾ ಹೇಳಿದ್ದಾರೆ. 

ಇದನ್ನೂ ಓದಿ-Viral News: 30 ವರ್ಷಗಳಿಂದ ಹೇರ್ ಕಟ್ ಮಾಡಿಲ್ಲ, ಈ ಮಹಿಳೆಗೆ ಏನಾಗಿದೆ ನೋಡಿ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News