Airtel: ಏರ್‌ಟೆಲ್‌ನ ಬ್ಲಾಕ್‌ಬಸ್ಟರ್ ಆಫರ್! ಈ ಯೋಜನೆಗಳ ರೀಚಾರ್ಜ್ ಮೇಲೆ ಸಿಗುತ್ತಿದೆ 50 ರೂ.ಗಳ ರಿಯಾಯಿತಿ

Airtel: ಏರ್‌ಟೆಲ್ ತನ್ನ ಕೆಲವು ಪ್ರಿಪೇಯ್ಡ್ ಯೋಜನೆಗಳ ಮೇಲೆ 50 ರೂಪಾಯಿಗಳ ರಿಯಾಯಿತಿಯನ್ನು ನೀಡುತ್ತಿದೆ. ಆದಾಗ್ಯೂ, ಈ ರಿಯಾಯಿತಿಯು ಏರ್‌ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್ ಬಳಕೆದಾರರಿಗೆ ಮಾತ್ರ ಲಭ್ಯವಿದೆ ಎಂಬುದನ್ನು ನೀವು ಗಮನಿಸಬೇಕು. ಅಪ್ಲಿಕೇಶನ್ ಮೂಲಕ ಯೋಜನೆಗಳಿಗೆ ಚಂದಾದಾರರಾಗಲು ಏರ್‌ಟೆಲ್ ಹೆಚ್ಚುವರಿ ಡೇಟಾ ಕೂಪನ್‌ಗಳನ್ನು ಸಹ ನೀಡುತ್ತದೆ.

Written by - Yashaswini V | Last Updated : Dec 30, 2021, 02:59 PM IST
  • ಏರ್‌ಟೆಲ್ ತನ್ನ ಕೆಲವು ಪ್ರಿಪೇಯ್ಡ್ ಯೋಜನೆಗಳ ಮೇಲೆ 50 ರೂಪಾಯಿಗಳ ರಿಯಾಯಿತಿಯನ್ನು ನೀಡುತ್ತಿದೆ
  • ಏರ್‌ಟೆಲ್ ಥ್ಯಾಂಕ್ಸ್ ಆಪ್ ಬಳಕೆದಾರರಿಗೆ ಮಾತ್ರ ಈ ರಿಯಾಯಿತಿ ಲಭ್ಯವಿದೆ
  • ಅಪ್ಲಿಕೇಶನ್ ಮೂಲಕ ಯೋಜನೆಗಳಿಗೆ ಚಂದಾದಾರರಾಗಲು ಏರ್‌ಟೆಲ್ ಹೆಚ್ಚುವರಿ ಡೇಟಾ ಕೂಪನ್‌ಗಳನ್ನು ಸಹ ನೀಡುತ್ತದೆ
Airtel: ಏರ್‌ಟೆಲ್‌ನ ಬ್ಲಾಕ್‌ಬಸ್ಟರ್ ಆಫರ್! ಈ ಯೋಜನೆಗಳ ರೀಚಾರ್ಜ್ ಮೇಲೆ ಸಿಗುತ್ತಿದೆ 50 ರೂ.ಗಳ ರಿಯಾಯಿತಿ  title=
Airtel Prepaid Plan

Airtel: ಏರ್‌ಟೆಲ್, ವೊಡಾಫೋನ್-ಐಡಿಯಾ ಮತ್ತು ಜಿಯೋ ಕಳೆದ ತಿಂಗಳು ತಮ್ಮ ಯೋಜನೆಗಳ ಬೆಲೆಯನ್ನು ಹೆಚ್ಚಿಸಿವೆ. ಅಂತಹ ಸಮಯದಲ್ಲಿ, ಕಂಪನಿಗಳು ಹೊಸ ದುಬಾರಿ ಯೋಜನೆಗಳೊಂದಿಗೆ ಹೆಣಗಾಡುತ್ತಿರುವ ಬಳಕೆದಾರರಿಗೆ ರಿಯಾಯಿತಿ ಪ್ರಯೋಜನಗಳನ್ನು ನೀಡುತ್ತಿವೆ. ಏರ್‌ಟೆಲ್ ತನ್ನ ಕೆಲವು ಪ್ರಿಪೇಯ್ಡ್ ಯೋಜನೆಗಳ ಮೇಲೆ 50 ರೂಪಾಯಿಗಳ ರಿಯಾಯಿತಿಯನ್ನು ನೀಡುತ್ತಿದೆ. ಆದಾಗ್ಯೂ, ಈ ರಿಯಾಯಿತಿಯು ಏರ್‌ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್ ಬಳಕೆದಾರರಿಗೆ ಮಾತ್ರ ಲಭ್ಯವಿದೆ ಎಂಬುದನ್ನು ನೀವು ಗಮನಿಸಬೇಕು. ಅಪ್ಲಿಕೇಶನ್ ಮೂಲಕ ಯೋಜನೆಗಳಿಗೆ ಚಂದಾದಾರರಾಗಲು ಏರ್‌ಟೆಲ್ ಹೆಚ್ಚುವರಿ ಡೇಟಾ ಕೂಪನ್‌ಗಳನ್ನು ಸಹ ನೀಡುತ್ತದೆ.

359 ರೂ. ಪ್ಲಾನ್ 309ರೂ.ಗೆ ಲಭ್ಯವಿರುತ್ತದೆ:
ಈಗ, ಏರ್‌ಟೆಲ್‌ನ ರೂ. 359 ಪ್ರಿಪೇಯ್ಡ್ ಯೋಜನೆಯಲ್ಲಿ (Airtel Prepaid Plans) 2GB ದೈನಂದಿನ ಡೇಟಾ ಜೊತೆಗೆ ಅನಿಯಮಿತ ಕರೆಗಳು ಮತ್ತು ದಿನಕ್ಕೆ 100 SMS ಅನ್ನು ನೀಡುವ ಮೂಲ ಪ್ರಿಪೇಯ್ಡ್ ಯೋಜನೆ ಎಂದು ಪರಿಗಣಿಸಬಹುದು. ಏರ್‌ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್ ಮೂಲಕ ರೀಚಾರ್ಜ್ ಮಾಡಿದಾಗ, ಈ ಪ್ಲಾನ್ 309 ರೂ. ಗಳಿಗೆ ಲಭ್ಯವಿದೆ. ಇದು ಹೆಚ್ಚುವರಿ 2GB ಡೇಟಾದೊಂದಿಗೆ ಬರುತ್ತದೆ, ಬಳಕೆದಾರರು ತಮ್ಮ ಮಾನ್ಯತೆಯ ಸಮಯದಲ್ಲಿ  ಇದನ್ನು ರಿಡೀಮ್ ಮಾಡಬಹುದು. 

ಇದನ್ನೂ ಓದಿ- ಎಚ್ಚರ! ನಕಲಿ WhatsApp, Facebook, Instagram ವೆಬ್‌ಸೈಟ್‌ಗಳಿಗೆ ಲಾಗಿನ್ ಆಗಿದ್ದೀರಾ? ಈಗಲೇ ಪರಿಶೀಲಿಸಿ

ರೂ. 599 ಪ್ಲಾನ್‌ನಲ್ಲಿ ರೂ. 50 ರಿಯಾಯಿತಿ:
ಏರ್‌ಟೆಲ್‌ನ ಮತ್ತೊಂದು ಪ್ರಿಪೇಯ್ಡ್ ಯೋಜನೆಯು (Prepaid Plans) ರೂ. 50 ರ ರಿಯಾಯಿತಿ ಕೊಡುಗೆಯೊಂದಿಗೆ ಬರುತ್ತದೆ. ರೂ. 599 ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯು ಡಿಸ್ನಿ + ಹಾಟ್‌ಸ್ಟಾರ್ ಮೊಬೈಲ್‌ಗೆ ಪ್ರವೇಶದೊಂದಿಗೆ ಬರುತ್ತದೆ. ಇದು ಅನಿಯಮಿತ ಕರೆಗಳೊಂದಿಗೆ ದಿನಕ್ಕೆ 3GB ಡೇಟಾವನ್ನು ನೀಡುತ್ತದೆ ಮತ್ತು 28 ದಿನಗಳ ಮಾನ್ಯತೆಯನ್ನು ಹೊಂದಿದೆ. ರಿಯಾಯಿತಿ ಕೂಪನ್ ಅನ್ನು ಅನ್ವಯಿಸಿದಾಗ ಯೋಜನೆಯು ರೂ. 549 ಕ್ಕೆ ಲಭ್ಯವಿದೆ.

ಇದನ್ನೂ ಓದಿ- ಕೇವಲ 625 ರೂ.ಗೆ ಖರೀದಿಸಿ, ಮೂರು ದಿನಗಳವರೆಗೆ ಚಾರ್ಜ್ ಉಳಿಯುವ ಈ ಫೋನ್

ಏರ್‌ಟೆಲ್ ಪ್ರತ್ಯೇಕವಾಗಿ ರೂ. 549 ರ ಪ್ರಿಪೇಯ್ಡ್ ಯೋಜನೆಯನ್ನು ನೀಡುತ್ತಿದೆ. ಇದು 2GB ದೈನಂದಿನ ಡೇಟಾವನ್ನು ನೀಡುತ್ತದೆ ಮತ್ತು 56 ದಿನಗಳ ಮಾನ್ಯತೆಯನ್ನು ಹೊಂದಿದೆ. ಈ ಯೋಜನೆಯಲ್ಲಿ ಅನಿಯಮಿತ ಕರೆಗಳು ಮತ್ತು ದಿನಕ್ಕೆ 100 SMS ಸಹ ಲಭ್ಯವಿದೆ. ಇದು 4GB ಡೇಟಾ ಕೂಪನ್‌ಗೆ ಪ್ರವೇಶವನ್ನು ನೀಡುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News